ಒಂದೇ ವ್ಯಕ್ತಿಯಲ್ಲಿ ಹತ್ತು ವ್ಯಕ್ತಿತ್ವ, ನಿಮಿಷಕ್ಕೊಮ್ಮೆ ವ್ಯಕ್ತಿಯೇ ಬದಲಾಗುತ್ತಾನೆ, ಇದೆಂಥಾ ವಿಚಿತ್ರ ಕಾಯಿಲೆ !

Published : Jun 03, 2022, 12:18 PM ISTUpdated : Jun 03, 2022, 12:20 PM IST
ಒಂದೇ ವ್ಯಕ್ತಿಯಲ್ಲಿ ಹತ್ತು ವ್ಯಕ್ತಿತ್ವ, ನಿಮಿಷಕ್ಕೊಮ್ಮೆ ವ್ಯಕ್ತಿಯೇ ಬದಲಾಗುತ್ತಾನೆ, ಇದೆಂಥಾ ವಿಚಿತ್ರ ಕಾಯಿಲೆ !

ಸಾರಾಂಶ

ಆತನ ವ್ಯಕ್ತಿತ್ವ (Personality) ಒಂದೊಂದು ನಿಮಿಷಕ್ಕೂ ಬದಲಾಗುತ್ತಿರುತ್ತದೆ. ಒಂದು ನಿಮಿಷದ ಹಿಂದೆಯಿದ್ದ ವ್ಯಕ್ತಿ (Person) ಮತ್ತೆರಡು ಗಂಟೆಗಳ ಕಾಲ ಇರುವುದೇ ಇಲ್ಲ. ಇಂಥಾ ಒಂದು ಅಪರೂಪದ ಮೆಂಟಲ್‌ ಡಿಸಾರ್ಡರ್‌ (Mental disorder)ನಿಂದ ವ್ಯಕ್ತಿಯೊಬ್ಬ ಬಳಲ್ತಿದ್ದಾನೆ. ಏನಿದು ಸಮಸ್ಯೆ ? ಇಲ್ಲಿದೆ ಕಂಪ್ಲೀಂಟ್ ಸ್ಟೋರಿ.

ಸಾಮಾನ್ಯವಾಗಿ ಬೈಪೋಲಾರ್ ಡಿಸಾರ್ಡರ್ (Bipolar disorder) ಬಗ್ಗೆ ಎಲ್ಲರಿಗೂ ಗೊತ್ತಿರುತ್ತೆ. ಇದು ಒಂದು ರೀತಿಯ ಮಾನಸಿಕ ಕಾಯಿ (Mental Disease)ಯಾಗಿದ್ದು, ಅಸಾಮಾನ್ಯ ಮನಸ್ಥಿತಿಗಳಿಂದ ಕೂಡಿದೆ. ಬೈಪೋಲಾರ್ ಕಾಯಿಲೆ ಅಥವಾ ಉನ್ಮಾದ ಖಿನ್ನತೆ ಎಂದೂ ಕರೆಯಲ್ಪಡುವ ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ಖಿನ್ನತೆಯ ಪ್ರಸಂಗಗಳನ್ನು ಪ್ರಚೋದಿಸುತ್ತದೆ. ಬೈಪೋಲಾರ್‌ ಡಿಸಾರ್ಡರ್‌ನಲ್ಲಿ ವ್ಯಕ್ತಿ ಡ್ಯುಯಲ್ ಪರ್ಸನಾಲಿಟಿ ಅಥವಾ ಇಬ್ಬರ ವ್ಯಕ್ತಿತ್ವವನ್ನು ತೋರಿಸುತ್ತಾನೆ. ಆದ್ರೆ ಈ ವ್ಯಕ್ತಿಗಿರುವ ಸಮಸ್ಯೆ ಹಾಗಲ್ಲ. ಈತನಿಗಿರುವುದು ಎರಡು ಪರ್ಸನಾಲಿಟಿಯಲ್ಲ, ಮೂರು, ನಾಲ್ಕು ಸಹ ಅಲ್ಲ. ಈತ ಬರೋಬ್ಬರಿ 10 ವ್ಯಕ್ತಿತ್ವವನ್ನು ಹೊಂದಿದ್ದಾನೆ. ಈತನ ಮೆಂಟಲ್‌ ಡಿಸಾರ್ಡರ್‌ನಿಂದಾಗಿ ಈತ ಮನೆಯಿಂದ ಹೊರಗಡೆ ಒಬ್ಬನೇ ಹೋಗುವುದೇ ಇಲ್ಲ.

ವ್ಯಕ್ತಿಯೊಬ್ಬ ಭಿನ್ನ-ವಿಭಿನ್ನವಾದ ಪ್ರತ್ಯೇಕ 10 ವ್ಯಕ್ತಿತ್ವ (Personality)ಗಳನ್ನು ಹೊಂದಿದ್ದಾನೆ. ಒಂದೊಂದು ನಿಮಿಷದಲ್ಲೂ ಆತ ಒಬ್ಬೊಬ್ಬ ವ್ಯಕ್ತಿಯಾಗಿರುತ್ತಾನೆ. ಈ ಮೆಂಟಲ್ ಡಿಸಾರ್ಡರ್‌ನಿಂದಾಗಿ ಈತ ಮನೆಯಿಂದ ಒಬ್ಬನೇ ಹೊರ ಬರುವುದೇ ಇಲ್ಲ. ಜರ್ಮನಿಯ ಮ್ಯೂನಿಚ್‌ನಲ್ಲಿ ವಾಸಿಸುವ ಲಿಯೊನಾರ್ಡ್ ಸ್ಟಾಕ್ಲ್ ಬಹು ವ್ಯಕ್ತಿತ್ವದ ಸಮಸ್ಯೆಯಿಂದ ಬಳಲುತ್ತಿದ್ದಾನೆ. 

ಲಿಯೊನಾರ್ಡ್ ಡಿಸೋಸಿಯೇಟ್ ಐಡೆಂಟಿಟಿ ಡಿಸಾರ್ಡರ್ (ಡಿಐಡಿ) ಅನ್ನು ಹೊಂದಿದ್ದಾನೆ. ಇದು ಅಪರೂಪದ ಮನೋವೈದ್ಯಕೀಯ ಸ್ಥಿತಿಯಾಗಿದೆ, ಇದು ತೀವ್ರ ಆಘಾತದ ಪರಿಣಾಮವಾಗಿ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. 

ಬೈಪೋಲಾರ್ ಡಿಸಾರ್ಡರ್ ... ಈ ಮಾನಸಿಕ ಕಾಯಿಲೆ ಬಗ್ಗೆ ಇಲ್ಲಿದೆ ಮಾಹಿತಿ

ಚಿಕ್ಕಂದಿನಿಂದಲೇ ಈ ವ್ಯಕ್ತಿ ಈ ರೀತಿಯ ಸಾಮಾಹಿಕ ವ್ಯಕ್ತಿತ್ವದ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಈತನಲ್ಲಿರುವ ವ್ಯಕ್ತಿತ್ವ ಬದಲಾವಣೆಯಲ್ಲಿ ಪ್ರತಿಯೊಂದ ಪರ್ಸನಾಲಿಟಿಯೂ ವಿಭಿನ್ನವಾಗಿದೆ. ಮತ್ತು ಪ್ರತ್ಯೇಕ ರೀತಿಯಲ್ಲಿ ವರ್ತಿಸುತ್ತದೆ. ಲಿಯೊನಾರ್ಡ್ ಸ್ಟಾಕ್ಲ್ ತಮ್ಮ ಹದಿಹರೆಯದ ವರ್ಷಗಳಲ್ಲಿ ಸ್ಥಿತಿಯನ್ನು ನಿರ್ವಹಿಸಲು ಸಮರ್ಥರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ಅಗಾಧವಾಗಿದೆ. ನಿಮಿಷಕ್ಕೊಮ್ಮೆ ವ್ಯಕ್ತಿತ್ವ ಬದಲಾವಣೆಯಾಗುತ್ತದೆ ಎಂದು ತಿಳಿದುಬಂದಿದೆ. 

ಹಲವು ವ್ಯಕ್ತಿತ್ವಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹೆಚ್ಚು ಜನರ ಮಧ್ಯೆ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಲಿಯೊನಾರ್ಡ್ ಸ್ಟಾಕ್ಲ್ ಹೇಳುತ್ತಾನೆ. ಎಲ್ಲಾ ವ್ಯಕ್ತಿತ್ವಗಳು ಬೇರೆ ಬೇರೆ ವಿಷಯಗಳ ಬಗ್ಗೆ ತಮ್ಮದೇ ಆದ ಬಲವಾದ ಮತ್ತು ಸ್ವಂತ ಅಭಿಪ್ರಾಯವನ್ನು ಹೊಂದಿರುವುದರಿಂದ ಅವರ ವ್ಯವಸ್ಥೆಯು ತನ್ನ ಪಾಲುದಾರ ಮಾಸ್ಸಿಮೊ ಅವರೊಂದಿಗಿನ ಸಂಬಂಧದ ಮೇಲೆ ಸಂಕೀರ್ಣವಾದ ಪ್ರಭಾವವನ್ನು ಹೊಂದಿದೆ ಎಂದು ಅವರು ಹೇಳಿದ್ದಾನೆ.

ತಮ್ಮ ಪರ್ಸನಾಲಿಟಿಯ ಲಿಯಾನಾರ್ಡೊ ವಿವರಿಸುತ್ತಾನೆ. ಅನಾ ಅನೋರೆಕ್ಸಿಯಾದಿಂದ ಬಳಲುತ್ತಿದ್ದಾರೆ, ಅದು ಅವಳ ಮುಂದೆ ಬರಲು ಕಷ್ಟವಾಗುತ್ತದೆ. ಕಾಸ್ಮೊ ಒಬ್ಬ ರೌಡಿ, ಸ್ವಲ್ಪ ಚೆಲ್ಲಾಟವಾಡುವ ಹದಿಹರೆಯದವಳು, ಅದು ಸುಲಭವಾಗಿ ತೊಂದರೆಗೆ ಸಿಲುಕುತ್ತದೆ. ಬೂದಿ ಸ್ವಲ್ಪ ಬಿಸಿಲು, ಅವರು ರಜೆಯ ಮೇಲೆ ಹೋಗಲು ಮತ್ತು ಜಗತ್ತನ್ನು ಅನ್ವೇಷಿಸಲು ಇಷ್ಟಪಡುತ್ತಾನೆ. ಜೆಸ್ಸಿ ಶಾಂತ ಆದರೆ ತುಂಬಾ ಕರುಣಾಮಯಿ, ಅತಿ ಮತ್ತು ಗೌರವಾನ್ವಿತ. ಅವಳು ಆಗಾಗ್ಗೆ ದೇಹವನ್ನು ನೋಡಿಕೊಳ್ಳುತ್ತಾಳೆ ಎಂದು ವಿವರಿಸುತ್ತಾನೆ.

ನಿದ್ರೆಯಲ್ಲಿ ನಡೆಯೋದೊಂದು ಸಮಸ್ಯೆ, ಕೆಲವರೇಕೆ ಹಿಂಗಾಡ್ತಾರೆ?

ಒಂದು ವ್ಯಕ್ತಿತ್ವ ಹೊರಗೆ ಇರುವಾಗ ಉಳಿದ ವ್ಯಕ್ತಿತ್ವಗಳು ಗಮನಕ್ಕೆ ಬರುವುದಿಲ್ಲ. ಆದರೆ ಅವರು ಯಾರಿಗೂ ಹಾನಿ ಮಾಡುವುದಿಲ್ಲ. ಎಂದು ತಿಳಿಸುತ್ತಾನೆ. ಆದ್ರೆ ಲಿಯೋ ಏಕಾಂಗಿಯಾಗಿ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಏಕೆಂದರೆ ಫ್ಲ್ಯಾಷ್‌ಬ್ಯಾಕ್‌ಗಳನ್ನು ಉಂಟುಮಾಡುವ ಪ್ರಚೋದಕಗಳು ಮತ್ತು ವಿಘಟಿತ ಪರಿವರ್ತನೆಯ ಅಸ್ವಸ್ಥತೆಯಿಂದ ಉಂಟಾಗುವ ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳು ಸಹ ಉಂಟಾಗಬಹುದು ಎಂದು ಹೇಳಲಾಗಿದೆ.

ಹತ್ತು ಪರ್ಸನಾಲಿಟಿಯಿಂದ ಬದುಕುವುದು ನನಗೆ ಕಷ್ಟಕರವಾಗಿಲ್ಲ. ಬದಲಾವಣೆಯಿಂದ ಬದುಕಬೇಕು ಎಂದು ನಾನು ಬಯಸುವುದಿಲ್ಲ. ನನ್ನ ಕುಟುಂಬ, ನನ್ನ ಉತ್ತಮ ಸ್ನೇಹಿತರು, ನನ್ನ ತಂಡ ಅವರಿಲ್ಲದೆ ನಾನು ಬದುಕಲು ಸಾಧ್ಯವಾಗುವುದಿಲ್ಲ ಎಂದು ಲಿಯೋ ಹೇಳಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ