ಅಬ್ಬಬ್ಬಾ..ತಿಂದಿದ್ದೆಲ್ಲಾ ಎಲ್ ಹೋಗುತ್ತಪ್ಪಾ, ಈತ ಬರೋಬ್ಬರಿ 32 ವರ್ಷದಿಂದ ಶೌಚಾನೇ ಮಾಡಿಲ್ವಂತೆ!

Published : Jun 07, 2023, 04:57 PM ISTUpdated : Jun 07, 2023, 05:06 PM IST
ಅಬ್ಬಬ್ಬಾ..ತಿಂದಿದ್ದೆಲ್ಲಾ ಎಲ್ ಹೋಗುತ್ತಪ್ಪಾ, ಈತ ಬರೋಬ್ಬರಿ 32 ವರ್ಷದಿಂದ ಶೌಚಾನೇ ಮಾಡಿಲ್ವಂತೆ!

ಸಾರಾಂಶ

ಮನುಷ್ಯನಾದವನು ಆಹಾರ ತಿನ್ನೋದು, ಶೌಚಕ್ಕೆ ಹೋಗೋದು ಸಾಮಾನ್ಯವಾಗಿ ಮಾಡುತ್ತಾನೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ  32 ವರ್ಷದಿಂದ ಶೌಚಾನೇ ಮಾಡಿಲ್ವಂತೆ. ನಂಬೋಕೆ ಕಷ್ಟನಾದ್ರೂ ಇದು ನಿಜ. 

ಮನುಷ್ಯನ ದೇಹ ರಚನೆ ಆತ ಆರೋಗ್ಯವಾಗಿರಲು ಪೂರಕವಾಗಿರುವಂತಿದೆ. ಎಲ್ಲಾ ಅಂಗಾಂಗಗಳು ನಿರ್ಧಿಷ್ಟ ಚಟುವಟಿಕೆಯನ್ನು ಹೊಂದಿವೆ. ಉಸಿರಾಡಲು ಮೂಗು, ಕೇಳಲು ಕಿವಿ, ತಿನ್ನಲು ಬಾಯಿ, ರುಚಿ ನೋಡಲು ನಾಲಿಗೆ ಹೀಗೆ ದೇಹದ ಒಂದೊಂದು ಅಂಗಾಂಗಗಳು ಒಂದೊಂದು ಕಾರ್ಯವನ್ನು ನಿರ್ವಹಿಸುತ್ತವೆ. ದೇಹದ ಕಲ್ಮಶವನ್ನು ಹೊರಹಾಕಲು ಸಹ ಸ್ವತಃ ದೇಹವೇ ಕಾರ್ಯ ನಿರ್ವಹಿಸುತ್ತದೆ. ಮೂತ್ರ, ಶೌಚದ ಮೂಲಕ ದೇಹದ ಕೆಟ್ಟ ಅಂಶ ಹೊರ ಹೋಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ  32 ವರ್ಷದಿಂದ ಶೌಚಾನೇ ಮಾಡಿಲ್ವಂತೆ. ನಂಬೋಕೆ ಕಷ್ಟನಾದ್ರೂ ಇದು ನಿಜ. 

'ಆಸ್ಕ್ ಮಿ ಎನಿಥಿಂಗ್' ಸೆಷನ್‌ನಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬ ತನ್ನ ಜೀವನದ ಅನುಭವವವನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿಕೊಂಡಿದ್ದಾನೆ. ಇದರಲ್ಲಿ 'ನಾನು ಕಳೆದ  32 ವರ್ಷದಿಂದ ಟಾಯ್ಲೆಟ್‌ಗೆ ಹೋಗಿಲ್ಲ. ಶೌಚ ಮಾಡುವ ಅಭ್ಯಾಸವನ್ನು (Habit) ಮಿಸ್ ಮಾಡಿಕೊಳ್ಳುತ್ತಿದ್ದಾನೆ' ಎಂಬುದಾಗಿ ತಿಳಿಸಿದ್ದಾನೆ. '1991ರಲ್ಲಿ, ನಾನು ನನ್ನ ಸಂಪೂರ್ಣ ದೊಡ್ಡ ಕರುಳನ್ನು (Gut) ತೆಗೆದುಹಾಕಿದ್ದೇನೆ. ಅಂದಿನಿಂದ ನಾನು ಆಸ್ಟೋಮಿ ಚೀಲವನ್ನು ಧರಿಸಿದ್ದೇನೆ. ಈ ಮೂಲಕ ಮಲ ದೇಹ (Body)ದಿಂದ ಹೊರ ಹೋಗುತ್ತದೆ. ಆಸ್ಟೋಮಿ ಎಂಬುದು ಮಲವನ್ನು ಸಂಗ್ರಹಿಸುವ ಚೀಲವಾಗಿದೆ' ಎಂದು ತಿಳಿಸಿದ್ದಾನೆ.

ಈ ಶೌಚಾಲಯದಲ್ಲಿ ನೀರೇ ಇರಲ್ಲ... 'ಮಲ' ಮಾಡಿದ್ರೆ ಕ್ಷಣದಲ್ಲಿ ಬೂದಿಯಾಗುತ್ತೆ..!

ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರೋ ವ್ಯಕ್ತಿ
1990ರಲ್ಲಿ ವ್ಯಕ್ತಿ ವಿಚಿತ್ರವಾದ ಕಾಯಿಲೆಯಾದ ಅಲ್ಸರೇಟಿವ್ ಕೊಲೈಟಿಸ್‌ನಿಂದ ಬಳಲುತ್ತಿದ್ದಾಗಿ ಬಹಿರಂಗಪಡಿಸಿದರು, ಇದು ತುಂಬಾ ರಕ್ತಸ್ರಾವವನ್ನು (Bleeding) ಉಂಟುಮಾಡಿತು. ವೈದ್ಯರು ಅವನ ದೊಡ್ಡ ಕರುಳನ್ನು ತೆಗೆದುಹಾಕುವುದು ಏಕೈಕ ಪರಿಹಾರವೆಂದು ಸೂಚಿಸಿದರು. ಅಂದಿನಿಂದ ಶೌಚ ಮಾಡುತ್ತಿಲ್ಲವೆಂದು ವ್ಯಕ್ತಿ ಹೇಳಿಕೊಂಡಿದ್ದಾನೆ. 1991ರಿಂದ 'ಬಟ್‌ಹೋಲ್ ಫ್ರೀ' ಆಗಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ನನಗೆ ಗುದದ್ವಾರ ಎಂಬುದುನ್ನು ನೆನಪಿಸಲು ಅಲ್ಲಿ ಒಂದು ಮಾರ್ಕ್ ಮಾತ್ರ ಇದೆ ಎಂದು ವ್ಯಕ್ತಿ ಹೇಳುತ್ತಾರೆ.

ವ್ಯಕ್ಯಿ ತಮ್ಮ ಕೊಲೊಸ್ಟೊಮಿ ಚೀಲವನ್ನು ಹೇಗೆ ಖಾಲಿ ಮಾಡುತ್ತಾರೆ ಎಂದು ಕೇಳಿದಾಗ ವಿವರಿಸಿದರು: 'ಟಾಯ್ಲೆಟ್‌ನಲ್ಲಿ ಕುಳಿತುಕೊಳ್ಳುವುದಕ್ಕಿಂತ ಇದು ಭಿನ್ನವಾಗಿದೆ. ಕಾಲುಗಳ ನಡುವೆ ಬರಿದಾಗಲು ಸೂಕ್ತವಾದ ಉದ್ದನೆಯ ಚೀಲವನ್ನು ಧರಿಸಿ ಆರಾಮದಾಯಕವಾಗಿರುವ ಕೆಲವು ಆಸ್ಟೋಮೇಟ್‌ಗಳನ್ನು ನಾನು ಬಳಸುತ್ತಿದ್ದೇನೆ. ಎಲ್ಲಾ ರೀತಿಯಲ್ಲಿ ಆರಾಮದಾಯಕವಾಗಿದ್ದರೂ, ಈ ಚೀಲಗಳು ಸಕ್ರಿಯ ಜೀವನಶೈಲಿಗೆ ಸ್ವಲ್ಪ ಕಠಿಣವಾಗಿವೆ' ಎಂದು ತಿಳಿಸಿದ್ದಾರೆ. 

ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...

ಮಲ ವಿಸರ್ಜನೆಯ ಅನುಭವ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ವ್ಯಕ್ತಿ
'ನಾನು ನಿಜವಾಗಿಯೂ ಮಲವಿಸರ್ಜನೆಯ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವಿಶೇಷವಾಗಿ ನಾನು ಬೇರೊಬ್ಬರ ಮನೆಯಲ್ಲಿದ್ದಾಗ ಮತ್ತು ಜನರು ಈ ಸಮಯವನ್ನು ಚೆನ್ನಾಗಿ ಬಳಸುತ್ತಾರೆ ಎಂದು ತಿಳಿದಾಗ ಬೇಸರವಾಗುತ್ತದೆ. ಜನರು ಶೌಚಾಲಯದಲ್ಲಿ ಮ್ಯಾಗಝೀನ್, ಪುಸ್ತಕ ಓದು ಬರುತ್ತಾರೆ' ಎಂದಿದ್ದಾರೆ. 'ಆದರೆ  ನಮ್ಮಲ್ಲಿ ಹೆಚ್ಚಿನವರು ಮಾಡುವ ಪ್ರವೃತ್ತಿಯಂತೆ ನಾನು ಟಾಯ್ಲೆಟ್‌ನಲ್ಲಿ ಫೋನ್‌ನಲ್ಲಿ ಸಮಯ ಕಳೆಯಲು ಬಯಸುವುದಿಲ್ಲ' ಎಂದು ತಿಳಿಸಿದ್ದಾರೆ.

'ನಾನು ವರ್ಷಗಳಲ್ಲಿ ಕೆಲವು ಉದ್ಯೋಗ (Job)ಗಳನ್ನು ಹೊಂದಿದ್ದೇನೆ, ಅಲ್ಲಿ ನಾನು ಕೆಲವು ಖಾಸಗಿ ಕ್ಷಣಗಳಿಗಾಗಿ ಕುಳಿತು ಓದಲು ಸಾರ್ವಜನಿಕ ಸ್ಟಾಲ್‌ಗೆ ಹೋಗಿದ್ದೇನೆ. ಆದರೆ ನಾನು ಮಲ ವಿಸರ್ಜಿಸುತ್ತಿಲ್ಲ ಎಂದು ತಿಳಿದಾಗ ಜನರು ಅಚ್ಚರಿ ಪಡುತ್ತಾರೆ' ಎಂದು ವ್ಯಕ್ತಿ ತಿಳಿಸಿದ್ದಾರೆ. ವ್ಯಕ್ತಿ ತನ್ನ ಜೀವನದ ಬಗ್ಗೆ ಎಲ್ಲಾ ವಿಷಯವನ್ನು ಓಪನ್ ಆಗಿ ಹೇಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೂ ವ್ಯಕ್ತಿ ಶೌಚಾನೇ ಮಾಡ್ತಿಲ್ಲ ಅನ್ನೋ ವಿಚಾರ ಎಲ್ಲರನ್ನೂ ನಿಬ್ಬೆರಗಾಗಿಸಿರುವುದಂತೂ ಸುಳ್ಳಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದಲ್ಲಿ ಲಭ್ಯವಿರುವ ತೂಕ ಇಳಿಸುವ ಔಷಧಿಗಳು ಯಾವುವು? ಇದರ ಬೆಲೆ ಎಷ್ಟು, ಯಾರೆಲ್ಲಾ ಬಳಸಬಹುದು?
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips