ಜನರಿಗೆ ನಾನಾ ವಿಷ್ಯದ ಮೇಲೆ ಭಯವಿರುತ್ತದೆ. ಆದ್ರೆ ಅದನ್ನು ಬಹುತೇಕರು ಗುರುತಿಸೋದಿಲ್ಲ. ಅದೊಂದು ಮಾನಸಿಕ ಖಾಯಿಲೆ ಎಂದೇ ಪರಿಗಣಿಸೋದಿಲ್ಲ. ಅದನ್ನು ನಿರ್ಲಕ್ಷ್ಯ ಮಾಡ್ತಾ ಬಂದ್ರೆ ಪರಿಸ್ಥಿತಿ ಗಂಭೀರವಾಗುತ್ತೆ.
ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ಕೆಲವರು ೧೦ಕ್ಕಿಂತ ಹೆಚ್ಚು ಮದುವೆಯಾದವರಿದ್ದಾರೆ, ಮತ್ತೆ ಕೆಲವರಿಗೆ ೨೦- ೨೫ ಮಕ್ಕಳಿವೆ. ಒಂದೇ ಬಾರಿ ಎರಡು ಹುಡುಗಿಯರನ್ನು ಮದುವೆಯಾದ ಜನರೂ ಇದ್ದಾರೆ. ಇನ್ನು ಕೆಲವರು ಹುಡುಗಿಯರಿಂದ ದೂರವಿರ್ತಾರೆ. ಮದುವೆ ಸಹವಾಸವೇ ಬೇಡ ಅಂತ ಹುಡುಗಿಯರ ಸುದ್ದಿಗೆ ಹೋಗಲ್ಲ. ಹಾಗಂತ ಹುಡುಗಿರ ಜೊತೆ ಮಾತನಾಡಲು ಹಿಂಜರಿಯೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಹುಡುಗಿ ಎಷ್ಟು ದೂರವೆಂದ್ರೆ ಮದುವೆಯಾಗೋದಿರಲಿ, ಹುಡುಗಿರ ನೆರಳು ತಾಗದಷ್ಟು ದೂರ ವಾಸವಾಗಿದ್ದಾನೆ.
ವ್ಯಕ್ತಿ ಕಳೆದ 55 ವರ್ಷಗಳಿಂದ ಮಹಿಳೆ (Woman) ಯರಿಂದ ಅಂತರ ಕಾಯ್ದುಕೊಂಡಿದ್ದಾನೆ. ಈತ ಹೆಣ್ಮಕ್ಕಳನ್ನು ಕಂಡ್ರೆ ಸಿಕ್ಕಾಪಟ್ಟೆ ಹೆದರುತ್ತಾನೆ. 71 ವರ್ಷದ ಈ ವ್ಯಕ್ತಿ ಮಹಿಳೆಯರಿಂದ ದೂರವಿರಲು ತನ್ನ ಮನೆಯ ಹೊರಗೆ 15 ಅಡಿ ಗಡಿ ಗೋಡೆಯನ್ನು ನಿರ್ಮಿಸಿದ್ದಾನೆ. ಇದಕ್ಕೆ ಕಾರಣ ಕೂಡ ವಿಚಿತ್ರವಾಗಿದೆ. ವರದಿ ಪ್ರಕಾರ, ಕ್ಯಾಲಿಟ್ಸ್ ನಜಂವಿತಾ ಎಂಬ ಈ ವ್ಯಕ್ತಿಯೇ ಹೆಣ್ಣುಮಕ್ಕಳಿಂದ ದೂರವಿರುವ ವ್ಯಕ್ತಿ. ಆತ ಮಹಿಳೆಯರಿಗೆ ಕಾಣಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಬರಲ್ಲ. ಈತ ಮನೆಗೆ ಗೋಡೆ (Wall) ಕಟ್ಟಿದ ನಂತ್ರ ಆತನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ವಿಚಿತ್ರವೆಂದ್ರೆ ಹುಡುಗಿಯರಿಗೆ ಹೆದರುತ್ತಿದ್ದರೂ ಮಹಿಳೆಯರಿಂದಲೇ ಈತ ಬದುಕುತ್ತಿದ್ದಾನೆ.
undefined
ಅಧಿಕ ತೂಕದಿಂದ ಟೀಕೆಗೆ ಒಳಗಾಗಿದ್ದ ಬಿಗ್‌ಬಾಸ್ ಸ್ಪರ್ಧಿ ಈಗ ಸ್ಲಿಮ್ ಬ್ಯೂಟಿ, ಆರೇ ತಿಂಗಳಲ್ಲಿ 12 ಕೆಜಿ ತೂಕ ಇಳಿಕೆ!
ಕ್ಯಾಲಿಟ್ಸ್ ನಜಂವಿತಾ ಮನೆಯಿಂದ ಹೊರಗೆ ಹೋಗೋದಿಲ್ಲ. ಹಾಗಾಗಿ ಅವನಿಗೆ ಅಡುಗೆಗೆ ಬೇಕಾದ ಸಾಮಾನುಗಳನ್ನು ತರಲು ಸಾಧ್ಯವಿಲ್ಲ. ಅವನ ಈ ಸ್ಥಿತಿಯನ್ನು ಅರಿತಿರುವ ಊರಿನ ಮಹಿಳೆಯರು ಈತನ ಸಹಾಯಕ್ಕೆ ನಿಂತಿದ್ದಾರೆ. ಅಡುಗೆ ಮಾಡಿ ಕ್ಯಾಲಿಟ್ಸ್ ನಜಂವಿತಾ ಮನೆ ಮುಂದೆ ತಂದಿಟ್ಟು ಹೋಗ್ತಾರೆ. ಅವರು ನೀಡುವ ಆಹಾರದಿಂದಲೇ ಕ್ಯಾಲಿಟ್ಸ್ ನಜಂವಿತಾ ಇಷ್ಟು ವರ್ಷ ಜೀವಂತವಾಗಿದ್ದಾನೆ. ಯಾವುದೇ ಮಹಿಳೆ ತನ್ನ ಬಳಿ ಬರದೆ ಇರಲಿ ಎನ್ನುವ ಕಾರಣಕ್ಕೇ ನಾನು ಮನೆಗೆ ಗೋಡೆ ಕಟ್ಟಿದ್ದೇನೆ. ಮನೆಯಿಂದ ಹೊರಗೆ ಬರೋದಿಲ್ಲ ಎಂದು ಕ್ಯಾಲಿಟ್ಸ್ ನಜಂವಿತಾ ಹೇಳಿದ್ದಾರೆ. ಆತನಿಗೆ ಮಹಿಳೆಯರನ್ನು ಕಂಡ್ರೆ ಭಯವಿದೆ ಎಂಬುದು ನಮಗೆ ಗೊತ್ತು. ಆದ್ರೂ ನಾವು ಅವನಿಗೆ ಸಹಾಯ ಮಾಡುತ್ತೇವೆ. ಅವನ ಮನೆ ಬಳಿ ಆಹಾರ ವಸ್ತುಗಳನ್ನು ಇಟ್ಟು ಬರ್ತೇವೆ. ಇದಲ್ಲದೆ ಅವನಿಗೆ ಅಗತ್ಯವಾದ ವಸ್ತುಗಳನ್ನು ನಾವೇ ಕೊಡ್ತೇವೆ ಎನ್ನುತ್ತಾಳೆ ಆ ಊರಿನ ಮಹಿಳೆ.
ಈ ಸಮಸ್ಯೆಯಿಂದ ಬಳಲ್ತಿದ್ದಾರೆ ವ್ಯಕ್ತಿ : ಕ್ಯಾಲಿಟ್ಸ್ ನಜಂವಿತಾ ಗೈನೋಫೋಬಿ (Gynophobia) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗೈನೋಫೋಬಿಯಿಂದ ಬಳಲುವ ಜನರಿಗೆ ಮಹಿಳೆಯರ ಮೇಲೆ ಭಯವಿರುತ್ತದೆ. ಈ ಫೋಬಿಯಾವನ್ನು ತಪ್ಪು ತಿಳುವಳಿಕೆ, ದ್ವೇಷ ಮತ್ತು ಮಹಿಳೆಯರ ವಿರುದ್ಧದ ಪೂರ್ವಾಗ್ರಹದೊಂದಿಗೆ ಗೊಂದಲಗೊಳಿಸುತ್ತದೆ. ಗೈನೋಫೋಬಿಯಾವನ್ನು ಸಾಮಾನ್ಯವಾಗಿ ಮಹಿಳೆಯರಿಂದ ಅವಮಾನಕ್ಕೊಳಗಾಗುವ ಪುರುಷರ ಭಯ ಎಂದು ವ್ಯಾಖ್ಯಾನಿಸಲಾಗಿದೆ.
ಸೀತಾರಾಮ ಸೀರಿಯಲ್ ಸೀತಾ ರಾತ್ರಿ ಸ್ಕಿನ್ ಕೇರ್ ಹೇಗೆ ಮಾಡ್ತಾರೆ? ತ್ಚಚೆಗೆ ಟಿಪ್ಸ್ ನೀಡಿದ ನಟಿ
ಗೈನೋಫೋಬಿಯಾ ಲಕ್ಷಣ : ಗೈನೋಫೋಬಿಯಾದಿಂದ ಬಳಲುವ ಜನರು ಮಹಿಳೆಯರ ಬಳಿ ಇರಲು ಭಯಪಡುತ್ತಾರೆ. ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ಭಾವನೆಯನ್ನು ಎದುರಿಸುತ್ತಾರೆ. ಗಮನವನ್ನು ಕೇಂದ್ರೀಕರಿಸಲು ತೊಂದರೆ ಅನೂಭವಿಸುತ್ತಾರೆ. ತಲೆತಿರುಗುವಿಕೆ, ಸುಸ್ತನ್ನು ಅವರು ಅನುಭವಿಸುತ್ತಾರೆ. ಮಹಿಳೆಯರು ಹತ್ತಿರ ಬಂದಾಗ ವಿಪರೀತ ಬೆವರುತ್ತಾರೆ. ಎದೆಯ ಬಿಗಿತ, ತ್ವರಿತ ಹೃದಯ ಬಡಿತ ಮತ್ತು ಉಸಿರಾಟದ ತೊಂದರೆಯನ್ನು ಅವರು ಅನುಭವಿಸುತ್ತಾರೆ.
ಗೈನೋಫೋಬಿಯಾಕ್ಕೆ ಕಾರಣ : ಗೈನೋಫೋಬಿಯಾಕ್ಕೆ ನಿಖರವಾದ ಕಾರಣವನ್ನು ಪತ್ತೆ ಹಚ್ಚೋದು ಕಷ್ಟ. ಮಹಿಳೆಯ ಬಗ್ಗೆ ಒಳಗೊಂಡ ಯಾವುದೇ ನಕಾರಾತ್ಮಕ ಅಥವಾ ಆಘಾತಕಾರಿ ಅನುಭವವು ಈ ಫೋಬಿಯಾಕ್ಕೆ ಕಾರಣವಾಗಿರುತ್ತದೆ. ಮಹಿಳೆಯರಿಂದ ಯಾವುದೇ ರೀತಿಯ ಮಾನಸಿಕ, ಲೈಂಗಿಕ ಅಥವಾ ದೈಹಿಕ ಕಿರುಕುಳಕ್ಕೆ ಒಳಗಾಗಿದ್ದವರಿಗೆ ಕೂಡ ಈ ಸಮಸ್ಯೆ ಕಾಡುತ್ತದೆ.