ನಂ.2 ಆದ್ಮೇಲಾದ್ರೂ ಕೈ ತೊಳೆಯೋ ಅಭ್ಯಾಸ ಇದೆಯೋ ಇಲ್ಲವೋ? ಮತ್ಯಾವಾಗ ಕೈ ತೊಳಯಬೇಕು?

By Suvarna NewsFirst Published Oct 14, 2023, 3:01 PM IST
Highlights

ಕೈ ಎಷ್ಟು ಕ್ಲೀನ್ ಇದೆ ನೋಡು.. ಮತ್ತ್ಯಾಕೆ ಕೈ ತೊಳೆಯಬೇಕು ಅಂತಾ ಮಕ್ಕಳು ಹೇಳ್ತಿರುತ್ತಾರೆ. ಕೈನಲ್ಲಿರೋ ಬ್ಯಾಕ್ಟೀರಿಯಾ ಕಣ್ಣಿಗೆ ಕಾಣೋದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿಲ್ಲ. ಬರೀ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅಂದ್ರೆ ನಂಬ್ತೀರಾ?
 

ಅಕ್ಟೋಬರ್ ೧೫ರಂದು ಗ್ಲೋ ಬಲ್ ಹ್ಯಾಂಡ್ ವಾಷಿಂಗ್ ದಿನವನ್ನು  ಆಚರಿಸಲಾಗುತ್ತದೆ. ಕೈ ತೊಳೆಯೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ಸಂಗತಿ ಕೊರೊನಾ ಸಮಯದಲ್ಲಿ ಜನರಿಗೆ ಸರಿಯಾಗಿ ಅರ್ಥವಾಗಿದೆ. ಯಾವುದೇ ಆಹಾರ ಸೇವನೆ ಮಾಡುವ ಮೊದಲು ಹಾಗೂ ಆಹಾರ ಸೇವನೆ ಮಾಡಿದ ನಂತ್ರ ಕೈ ತೊಳೆಯಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಹಿಂದಿನ ಕಾಲದಿಂದಲೂ ಇದನ್ನು ಒಳ್ಳೆ ಅಭ್ಯಾಸವೆಂದೇ ಪಾಲಿಸಿಕೊಂಡು ಬರಲಾಗ್ತಿದೆ. 

ಮಕ್ಕಳಿಗೆ ಆರಂಭದಲ್ಲಿಯೇ ಈ ಅಭ್ಯಾಸ (Practice) ರೂಢಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಕೊರೊನಾ ಸಮಯದಲ್ಲಂತೂ ಕೈ ತೊಳೆಯಲು ಹೆಚ್ಚಿನ ಮಹತ್ವ ನೀಡಲಾಗಿತ್ತು. ಹ್ಯಾಂಡ್ ವಾಶ್ (Hand Wash), ಹ್ಯಾಂಡ್ ಸ್ಯಾನಿಟೈಜರನ್ನು ಬ್ಯಾಗ್ ನಲ್ಲಿಟ್ಟು ಓಡಾಡುವಂತೆ ಸೂಚನೆ ನೀಡಲಾಗ್ತಿತ್ತು. ಅದೇನೇ ವಸ್ತು ಮುಟ್ಟಿದ್ರೂ ಕೈ ತೊಳೆಯುವಂತೆ ಸಲಹೆ ನೀಡಲಾಗ್ತಿತ್ತು. ಕೈ ತೊಳೆಯುವುದು ಬಹಳ ಒಳ್ಳೆಯದು. ಆದ್ರೆ ಯಾವಾಗ ಮತ್ತೆ ಹೇಗೆ ಕೈತೊಳೆಯಬೇಕು ಎಂಬುದು ಜನರಿಗೆ ತಿಳಿದಿರಬೇಕು.  

ರಾಕುಲ್ ಪ್ರೀತ್ ಹೊಟ್ಟೆಗೇನು ತಿಂದು, ಇಷ್ಟು ಚೆಂದ ಇರೋದು?

ಯಾವ್ ಯಾವಾಗ ಕೈ ತೊಳೆಯಬೇಕು? : ಅರೇ ಇದು ನಮಗೆ ಗೊತ್ತಿಲ್ವಾ ಅಂತಾ ನೀವು ಕೇಳ್ಬಹುದು. ಕೆಲವರಿಗೆ ಇದ್ರ ಬಗ್ಗೆ ಸರಿಯಾದ ಜ್ಞಾನ ಇರೋದಿಲ್ಲ. ತಿನ್ನೋವಾಗ ಯಾಕೆ ಕೈ ತೊಳೆಯಬೇಕು, ಕೈ ಕ್ಲೀನ್ ಆಗೆ ಇದೆ ಎನ್ನುತ್ತಾರೆ. ಕೈನಲ್ಲಿರುವ ಸೂಕ್ಷ್ಮ ಜೀವಿಗಳು ನಮಗೆ ಕಾಣೋದಿಲ್ಲ. ಹಾಗಾಗಿ ಕೈ ತೊಳೆಯೋದು ಬಹಳ ಮುಖ್ಯ. ಊಟ (Meal) ಮಾಡುವಾಗ ಕೈ ತೊಳೆಯೋದು ಬಹಳ ಮುಖ್ಯ. ಇದು ಎಲ್ಲರಿಗೂ ಗೊತ್ತು. ಇದಲ್ಲದೆ ಶೌಚಾಲಯಕ್ಕೆ ಹೋದಾಗ ನೀವು ಕೈ ತೊಳೆಯೋದು ಬಹಳ ಮುಖ್ಯ. ನೀವು ಮೂತ್ರ ವಿಸರ್ಜನೆ ಮಾಡಲು ಹೋಗಿ ಇಲ್ಲವೇ ಮಲ ವಿಸರ್ಜನೆ. ಶೌಚಾಲಯಕ್ಕೆ ಹೋದಾಗ ಪ್ರತಿ ಬಾರಿ ನೀವು ಕೈತೊಳೆಯಲು ಮರೆಯಬೇಡಿ. ಶೌಚಾಲಯದ ಎಲ್ಲ ವಸ್ತುಗಳ ಮೇಲೆ ಬ್ಯಾಕ್ಟೀರಿಯಾ ಇರುತ್ತದೆ. ನೀವು ಬರೀ ಮಲ ವಿಸರ್ಜನೆ ಮಾಡಿದಾಗ ಮಾತ್ರವಲ್ಲ ಮೂತ್ರ ವಿಸರ್ಜನೆ ಮಾಡಿದಾಗ್ಲೂ ಕೈ ತೊಳೆಯಬೇಕು.

ಈ ಎರಡು ಬ್ಲಡ್ ಗ್ರೂಪಿನವರಿಗೆ ಹೃದ್ರೋಗ ಸಮಸ್ಯೆ ಹೆಚ್ಚಂತೆ, ನಿಮ್ಮದು ಯಾವ ಗುಂಪು?

ಇಷ್ಟೇ ಅಲ್ಲ, ಸೀನುವಾಗ ಹಾಗೂ ಕೆಮ್ಮುದಾಗ ಕೂಡ ನೀವು ಕೈತೊಳೆಯಬೇಕು. ಸೀನುವಾಗ ಹಾಗೂ ಕೆಮ್ಮುವಾಗ ನಾವು ಕೈಯನ್ನು ಬಾಯಿ ಬಳಿ ಇಟ್ಟುಕೊಳ್ತೇವೆ. ಬ್ಯಾಕ್ಟೀರಿಯಾ ನಮ್ಮ ಕೈಗೆ ಅಂಟಿಕೊಂಡಿರುತ್ತದೆ. ಅದೇ ಕೈನಲ್ಲಿ ಆಹಾರ ಸೇವನೆ ಮಾಡಿದಾಗ ಅಥವಾ ನಿಮ್ಮ ಕಣ್ಣುಗಳನ್ನು ಟಚ್ ಮಾಡಿದಾಗ ಬ್ಯಾಕ್ಟೀರಿಯಾ ಅಲ್ಲಿಗೆ ಹೋಗುವ ಅಪಾಯವಿರುತ್ತದೆ. ಸಾರ್ವಜನಿಕ ಪ್ರದೇಶಗಳನ್ನು ಅನಾವಶ್ಯಕ ಟಚ್ ಮಾಡಬೇಡಿ. ಒಂದ್ವೇಳೆ ಟಚ್ ಮಾಡಿದ್ರೆ ಅದೇ ಕೈನಲ್ಲಿ ಆಹಾರ ಸೇವನೆ ಮಾಡ್ಬೇಡಿ. ಕೈಯನ್ನು ತೊಳೆದು ನಂತ್ರವೇ ಆಹಾರ ತಿನ್ನಿ. ಬಾಗಿಲು, ಮೆಟ್ಟಿಲ ಹಿಡಿಕೆ, ಟಿಕೆಟ್ ಕೌಂಟರ್ ನಲ್ಲೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಇರುತ್ತದೆ ಎಂಬುದು ನೆನಪಿನಲ್ಲಿರಲಿ.

ಕೈ ತೊಳೆಯೋದು ಹೇಗೆ? : ಶುದ್ಧವಾದ ನೀರಿನಲ್ಲಿ ನೀವು ಕೈಗಳನ್ನು ತೊಳೆಯಬೇಕು. ಹರಿಯುವ ನೀರು ಅತ್ಯುತ್ತಮ. ನೀವು ಅದಕ್ಕೆ ಬೆಚ್ಚಗಿನ ನೀರು ಅಥವಾ ತಣ್ಣನೆ ನೀರು ಯಾವುದನ್ನಾದರೂ ಬಳಸಬಹುದು. ನೀರು ಶುದ್ದವಾಗಿರೋದು ಮುಖ್ಯವಾಗುತ್ತದೆ.  ಕೈ ತೊಳೆಯಲು ಹ್ಯಾಂಡ್ ವಾಶ್ ಬಳಸುವುದು ಒಳ್ಳೆಯದು. ಮೊದಲು ಕೈಯನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು, ಹ್ಯಾಂಡ್ ವಾಶ್ ಹಚ್ಚಿ, ಕೈಗಳನ್ನು ಉಜ್ಜಬೇಕು. ಕನಿಷ್ಠ 20 ಸೆಕೆಂಡು ಕೈ ಉಜ್ಜಬೇಕು. ಬೆರಳು, ಸಂದಿಗಳನ್ನು ಕ್ಲೀನ್ ಮಾಡ್ಬೇಕು. ಸೋಪ್ ಗಿಂತ ಹ್ಯಾಂಡ್ ವಾಶ್ ಅಥವಾ ಸ್ಯಾನಿಟೈಸರ್ ಬಳಕೆ ಮಾಡಿದ್ರೆ ಒಬ್ಬರ ಕೈನಲ್ಲಿರುವ ಬ್ಯಾಕ್ಟೀರಿಯಾ ಇನ್ನೊಬ್ಬರ ಕೈಗೆ ಹೋಗುವ ಅಪಾಯದಿಂದಲೂ ರಕ್ಷಿಸಬಹುದು. ಸಾರ್ವಜನಿಕ ಪ್ರದೇಶದಲ್ಲಿರುವ ಸೋಪ್ ಬಳಕೆ ಮಾಡಬೇಡಿ. ನಿಮ್ಮ ಬಳಿ ಸದಾ ಹ್ಯಾಂಡ್ ಸ್ಯಾನಿಟೈಸರ್ ಇಟ್ಕೊಳ್ಳಲು ಮರೆಯಬೇಡಿ.  
 

click me!