Navratri 2023: ಈ ನವರಾತ್ರೀಲಿ ಮನಬಿಚ್ಚಿ ಕುಣಿರಿ..ಮನಸ್ಸಿನ ಜೊತೆ ದೇಹಕ್ಕೂ ಒಳ್ಳೇದು ದಾಂಡಿಯಾ

Published : Oct 14, 2023, 12:58 PM ISTUpdated : Oct 16, 2023, 11:49 AM IST
Navratri 2023: ಈ ನವರಾತ್ರೀಲಿ ಮನಬಿಚ್ಚಿ ಕುಣಿರಿ..ಮನಸ್ಸಿನ ಜೊತೆ ದೇಹಕ್ಕೂ ಒಳ್ಳೇದು ದಾಂಡಿಯಾ

ಸಾರಾಂಶ

ನವರಾತ್ರಿ ಬಂದಿದೆ. ದುರ್ಗೆ ಆರಾಧನೆಗೆ ತಯಾರಿ ನಡೆದಿದೆ. ಇದ್ರ ಜೊತೆ ಬಣ್ಣ ಬಣ್ಣದ ಡ್ರೆಸ್ ನಲ್ಲಿ ಕೋಲು ಹಿಡಿದು ಕುಣಿಯೋರು ಸಿದ್ಧವಾಗಿದ್ದಾರೆ. ದಾಂಡಿಯಾ ಮೋಜು ನೀಡೋದಲ್ಲದೆ ಆರೋಗ್ಯವನ್ನೂ ನೀಡುತ್ತೆ ಗೊತ್ತಾ?  

ನವರಾತ್ರಿಯ ರಂಗು ದೇಶದಾದ್ಯಂತ ಮನೆ ಮಾಡ್ತಿದೆ. ಭಾನುವಾದಿಂದ ಒಂಭತ್ತು ದಿನ ದುರ್ಗೆ ಪೂಜೆ ನಡೆಯಲಿದೆ. ದುರ್ಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹವನ, ಹೋಮಗಳನ್ನು ಏರ್ಪಡಿಸಲಾಗುತ್ತದೆ. ಇದರ ಜೊತೆಗೆ ನವರಾತ್ರಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅದ್ರಲ್ಲಿ ದಾಂಡಿಯಾ ಹಾಗೂ ಗರ್ಬಾ ವಿಶೇಷ ಮಹತ್ವ ಪಡೆದಿದೆ. 

ನವರಾತ್ರಿ (Navratri) ಬಂತೆಂದ್ರೆ ದಾಂಡಿಯಾ (Dandiya) ಹಾಗೂ ಗರ್ಬಾ (Garba) ನೃತ್ಯ ಮಾಡಲು ಜನರು ಉತ್ಸಾಹ ತೋರುತ್ತಾರೆ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈ ನೃತ್ಯಗಳನ್ನು ಈಗ ದೇಶದಾದ್ಯಂತ ಆಯೋಜನೆ ಮಾಡಲಾಗುತ್ತದೆ.  

Mental Health : ಯುವಕರಲ್ಲಿ ಹೆಚ್ಚಾಗ್ತಿದೆ ಉದ್ಯೋಗ ಹುಡುಕಾಟದ ಖಿನ್ನತೆ

ಗರ್ಬಾ ಮತ್ತು ದಾಂಡಿಯಾ ಇತಿಹಾಸವು ಗುಜರಾತ್‌ಗೆ ಸಂಬಂಧಿಸಿದೆ.   ಈ ನೃತ್ಯಗಳನ್ನು ನವರಾತ್ರಿಯ ಸಮಯದಲ್ಲಿ ಮಾತ್ರ ಪ್ರದರ್ಶಿಸಲಾಗುತ್ತದೆ. ಈ ನೃತ್ಯವು ದುರ್ಗಾ ದೇವಿ ಮತ್ತು ರಾಕ್ಷಸ ಮಹಿಷಾಸುರನ ನಡುವಿನ ಒಂಬತ್ತು ದಿನಗಳ ಯುದ್ಧದ ವಿಜಯವನ್ನು ಪ್ರತಿನಿಧಿಸುತ್ತದೆ ಮತ್ತು ಸಂಕೇತಿಸುತ್ತದೆ ಎಂದು ಪರಿಗಣಿಸಲಾಗಿದೆ.  

ದಾಂಡಿಯಾ ರಾಸ್ ಎಂಬುದು ಒಂದು ನೃತ್ಯ. ಇದರಲ್ಲಿ ಭಕ್ತರು ದೇವಿಯನ್ನು ಪೂಜಿಸುವಾಗ ಕೈಯಲ್ಲಿ ದಾಂಡಿಯಾ ಕೋಲು ಹಿಡಿದು ಗರ್ಬಾ  ನೃತ್ಯ ಮಾಡುತ್ತಾರೆ. ಹಾಗೆ ನೋಡಿದರೆ ದಾಂಡಿಯಾ ನೃತ್ಯ ಮನಸ್ಸಿಗೆ ಎಷ್ಟು ಉಲ್ಲಾಸ ನೀಡುತ್ತದೆಯೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ದಾಂಡಿಯಾ ರಾಸ್ ಮಾಡುವುದರಿಂದ ತೂಕವನ್ನು ನಿಯಂತ್ರಿಸುವುದರ ಜೊತೆಗೆ ಇತರ ಹಲವು ಪ್ರಯೋಜನಗಳನ್ನು ನಾವು ಪಡೆಯಬಹುದು. ನಾವಿಂದು ದಾಂಡಿಯಾ ರಾಸ್ ನಿಂದಾಗುವ ಪ್ರಯೋಜನ ಏನು ಎಂಬುದನ್ನು ನಿಮಗೆ ಹೇಳ್ತೇವೆ.

ತೂಕ ಇಳಿಯುತ್ತೆ, ಕೊಬ್ಬು ಕರಗುತ್ತೆ ಅಂತ ಏನೋನೇ ತಿನ್ನೋ ಮುನ್ನ ಚಾಣಕ್ಯ ಹೇಳೋದ ಕೇಳಿ!

ದಾಂಡಿಯಾ ನೃತ್ಯದಿಂದಾಗುವ ಆರೋಗ್ಯ ಪ್ರಯೋಜನಗಳು : ಎರಡು ಕೋಲುಗಳನ್ನು ಹಿಡಿದು ಕುಣಿಯುವ ಈ ದಾಂಡಿಯಾ ನೋಡ್ತಿದ್ದರೆ ಎಂಥವರಿಗೂ ನೃತ್ಯ ಮಾಡ್ಬೇಕು ಎನ್ನಿಸುತ್ತದೆ. ಆದ್ರೆ ದಾಂಡಿಯಾ ಮಾಡಲು ಸ್ವಲ್ಪ ಹೆಚ್ಚಿನ ಶಕ್ತಿ ಅಗತ್ಯವಿದೆ. ಭರ್ಜರಿ ಸಾಂಗ್ ಮತ್ತು ಡ್ರಮ್ ಬೀಟ್‌ ನೊಂದಿಗೆ ಈ ದಾಂಡಿಯಾ ನೃತ್ಯ ಮಾಡಲಾಗುತ್ತದೆ. ದಾಂಡಿಯಾ ನೃತ್ಯ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ನೀವು ವ್ಯಾಯಾಮ ಮಾಡಿದಾಗ ನಿಮ್ಮ ಇಡೀ ದೇಹ ಕ್ರಿಯಾಶೀಲವಾದಂತೆ ದಾಂಡಿಯಾ ಮಾಡಿದಾಗ್ಲೂ ಇಡೀ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಕೋಲನ್ನು ಹಿಡಿದು ಹಿಂದೆ, ಮುಂದೆ ಚಲಿಸ್ತಿದ್ದರೆ ಇಡಿ ದೇಹ ಸಡಿಲಗೊಳ್ಳುತ್ತದೆ. ಇದ್ರಿಂದ ದೇಹದ ತೂಕ ಇಳಿಯುತ್ತದೆ. ನೀವು ಒಂದು ಗಂಟೆ ದಾಂಡಿಯಾ ಮಾಡಿದ್ರೆ ಅದು ಅರ್ಥ ಗಂಟೆ ಸ್ವಿಮ್ಮಿಂಗ್ ಮಾಡಿದಷ್ಟು ಕ್ಯಾಲೋರಿ ಬರ್ನ್ ಮಾಡುತ್ತದೆ ಎನ್ನುತ್ತಾರೆ ತಜ್ಷರು.

ಫೆಕ್ಸಿಬಿಲಿಟಿ (Flexibility) ಹೆಚ್ಚಾಗುತ್ತೆ : ದಾಂಡಿಯಾ ಕೋಲು ಹಿಡಿದು ನೀವು ಎಲ್ಲ ದಿಕ್ಕಿನಲ್ಲೂ ಹೆಜ್ಜೆ ಹಾಕ್ತಿರಿ. ಜೊತೆಗೆ ಕೈಯನ್ನು ಮೇಲೆ – ಕೆಳಗೆ ತಿರುಗಿಸ್ತೀರಿ. ದಾಂಡಿಯಾ ಕೋಲನ್ನು ಕೈನಲ್ಲೇ ನೀವು ಹಿಡಿದಿಟ್ಟುಕೊಳ್ಳಬೇಕಾಗಿದ್ದರಿಂದ ನಿಮ್ಮ ಸ್ನಾಯುಗಳು ಬಲಪಡೆಯುತ್ತವೆ. ಅಲ್ಲದೆ ದೇಹ ಫೆಕ್ಸಿಬಲ್ ಆಗುತ್ತದೆ.

ಬಲಪಡೆಯುವ ಹೃದಯ (Strong Heart) : ದಾಂಡಿಯಾದಲ್ಲಿ ನಿರಂತರವಾಗಿ ಡಾನ್ಸ್ ಮಾಡ್ತಿರುತ್ತೇವೆ. ಇಡೀ ದೇಹ ಚಟುವಟಿಕೆಯಿಂದ ಇರುತ್ತದೆ. ಆಗ ನಮ್ಮ ಶ್ವಾಸಕೋಶಗಳು ಹೆಚ್ಚು ಕೆಲಸ ಮಾಡುತ್ತವೆ. ಇದರಿಂದ ಉಸಿರಾಟದ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಹೃದಯ ಬಲಪಡೆಯುತ್ತದೆ. 

ಗಮನ ಒಂದೇ ಕಡೆ ಕೇಂದ್ರೀಕರಿಸಲು ಸಹಕಾರಿ : ದಾಂಡಿಯಾದಲ್ಲಿ ಒಂದು ಗುಂಪು ಅಥವಾ ಸಂಗಾತಿ ಜೊತೆ ಡಾನ್ಸ್ ಮಾಡ್ತಿರುತ್ತೇವೆ. ಈ ವೇಳೆ ಅವರ ಹೆಜ್ಜೆ ಹಾಗೂ ತಾಳದ ಬಗ್ಗೆ ಗಮನವಿಟ್ಟುಕೊಂಡು ನಾವು ಹೆಜ್ಜೆ ಹಾಕ್ಬೇಕಾಗುತ್ತದೆ. ಅವರ ಹೆಜ್ಜೆಗೆ ನಮ್ಮ ಹೆಜ್ಜೆ ಹೊಂದಿಸಲು ನಾವು ಪ್ರಯತ್ನಿಸೋದ್ರಿಂದ ನಮ್ಮ ಗಮನ ಬೇರೆಡೆ ಹೋಗೋದಿಲ್ಲ. ನಮ್ಮ ಗಮನ ಶಕ್ತಿಯನ್ನು ಹೆಚ್ಚಿಸಲು ದಾಂಡಿಯ ಸಹಕಾರಿ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ