ಒಳ ಉಡುಪಿನ ಸ್ವಚ್ಛತೆ ಬಹಳ ಮುಖ್ಯ. ಅದನ್ನು ಪ್ರತಿ ದಿನ ತೊಳೆದು ಬಿಸಿಲಿನಲ್ಲಿ ಆರಿಸಿ ಹಾಕಿಕೊಳ್ಳಬೇಕು ಅನ್ನೋದನ್ನು ನೀವು ಕೇಳಿರ್ತೀರಿ. ಆದ್ರೆ ಕೆಲವರು ಪ್ರತಿ ದಿನ ಇದನ್ನು ಚೇಂಜ್ ಮಾಡಲ್ಲ. ಅದ್ರಿಂದ ದೊಡ್ಡ ಹಾನಿಯಿಲ್ಲದಿದ್ರೂ ಎಚ್ಚರಿಕೆ ಮುಖ್ಯ.
ನಾವಂತು ದಿನಾ ಸ್ನಾನ ಮಾಡ್ತಿವಪ್ಪ, ದಿನಾ ಒಳ ಉಡುಪು ಚೇಂಜ್ ಮಾಡ್ತೇವೆ ಅಂತಾ ನೀವು ಹೇಳ್ಬಹುದು. ಆದ್ರೆ ನಿಮಗೊಂದು ಅಚ್ಚರಿಯ ಸಂಗತಿ ಇದೆ. ನೀವಂದುಕೊಂಡ ಹಾಗೆ ಎಲ್ಲರೂ ಪ್ರತಿ ದಿನ ಒಳ ಉಡುಪನ್ನು ಬದಲಾಯಿಸೋದಿಲ್ಲ. ಹಾ..! ಅಂತಾ ಅಚ್ಚರಿಯಾಗ್ಬೇಡಿ. ಇದು ಸತ್ಯ. ಪ್ರತಿ ದಿನ ಒಳ ಉಡುಪು ಬದಲಾಯಿಸಿದ ಜನರ ಸಂಖ್ಯೆ ಪ್ರಪಂಚದಾದ್ಯಂತ ಸಾಕಷ್ಟಿದೆ.
ಬರೀ ಒಂದೋ ಎರಡೋ ದಿನವಲ್ಲ, ತುಂಬಾ ದಿನ ಒಂದೇ ಒಳ ಉಡುಪಿ (Undergarment) ನಲ್ಲಿ ಇರುವ ಜನರಿದ್ದಾರೆ. ಅಮೆರಿಕ (America) ದಲ್ಲಿ ಇತ್ತೀಚಿಗೆ ಈ ಬಗ್ಗೆ ಸಮೀಕ್ಷೆ ನಡೆದಿದೆ. ಅದ್ರ ಪ್ರಕಾರ ಶೇಕಡಾ 45ರಷ್ಟು ಮಹಿಳೆಯರು ಮತ್ತು ಪುರುಷರು ಒಂದೇ ಒಳಉಡುಪುಗಳನ್ನು ಹಲವು ದಿನಗಳವರೆಗೆ ಧರಿಸುತ್ತಾರೆ ಎಂಬುದು ಗೊತ್ತಾಗಿದೆ. ಅವರು ಒಳ ಉಡುಪಿನ ಬಗ್ಗೆ ಚಿಂತೆ ಮಾಡೋದಿಲ್ಲ. ಅದನ್ನು ಬದಲಿಸುವ ಬಗ್ಗೆ ಆಲೋಚಿಸೋದಿಲ್ಲ ಎಂದು ಸಮೀಕ್ಷೆ (Survey) ವರದಿ ಹೇಳಿದೆ. ಈ ಬಗ್ಗೆ ನಡೆದ ಸಮೀಕ್ಷೆ ವರದಿ ವಿವರ ಇಲ್ಲಿದೆ.
ಸಮೀಕ್ಷೆ ವರದಿಯಲ್ಲಿ ಏನಿದೆ? : ಬಟ್ಟೆಗಳ ಚಿಲ್ಲರೆ ವ್ಯಾಪಾರ ನಡೆಸುವ ಟಾಮಿ ಜಾನ್ ಸಮೀಕ್ಷೆ ನಡೆದಿದೆ. ಒಳ ಉಡುಪುಗಳನ್ನು ಬದಲಾಯಿಸುವ ಅಭ್ಯಾಸದ ಬಗ್ಗೆ 2000 ಅಮೆರಿಕನ್ ಪುರುಷರು ಮತ್ತು ಮಹಿಳೆಯರಿಗೆ ಪ್ರಶ್ನೆ ಕೇಳಲಾಗಿದೆ. ಇದ್ರಲ್ಲಿ ಸುಮಾರು ಶೇಕಡಾ 45 ರಷ್ಟು ಮಹಿಳೆಯರು ಮತ್ತು ಪುರುಷರು, ಎರಡು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಂದೇ ಒಳ ಉಡುಪುಗಳನ್ನು ಧರಿಸುವುದಾಗಿ ಒಪ್ಪಿಕೊಂಡಿದ್ದಾರೆ.
Healthy Food : ಹಳಸಿದ ರೊಟ್ಟಿ ಎಸೆಯುವ ಮುನ್ನ ಇದನ್ನೊಮ್ಮೆ ಓದಿ
ಒಳ ಉಡುಪು ಬದಲಿಸದೆ ಇರೋದು ಕೆಟ್ಟದ್ದಲ್ಲ..! : ಪ್ರತಿ ನಿತ್ಯ ಒಳ ಉಡುಪು ಬದಲಿಸಬೇಕು, ಇದು ನೈರ್ಮಲ್ಯದ ಪ್ರಶ್ನೆ ಅಂತಾ ನೀವು ಹೇಳ್ಬಹುದು. ಆದ್ರೆ ಯಾರ್ಕ್ ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ಮತ್ತು ಪೆಥಾಲಜಿಯ ಕ್ಲಿನಿಕಲ್ ಪ್ರೊಫೆಸರ್ ಫಿಲಿಪ್ ಎಂ ಟಿಯೆರ್ನೊ, ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಅವರ ಪ್ರಕಾರ, ಒಂದಕ್ಕಿಂತ ಹೆಚ್ಚು ದಿನ ಒಂದೇ ಒಳ ಉಡುಪು ಧರಿಸಿದ್ರೆ ನೀವು ಆಲೋಚನೆ ಮಾಡುವಷ್ಟು ಸಮಸ್ಯೆ ಆಗೋದಿಲ್ಲ ಎನ್ನುತ್ತಾರೆ. ಆದ್ರೆ ನೈರ್ಮಲ್ಯ ನಿಮ್ಮ ಪ್ರತಿಷ್ಠೆಗೆ ಹಾನಿಯುಂಟು ಮಾಡುತ್ತದೆ ಎನ್ನುತ್ತಾರೆ ಟಿಯೆರ್ನೊ.
ಒಂದೇ ಒಳ ಉಡುಪು ಧರಿಸಿದ್ರೆ ಏನಾಗುತ್ತೆ? : ಟಿಯೆರ್ನೊ ಪ್ರಕಾರ, ನಮ್ಮ ದೇಹದಲ್ಲೂ ಕೆಲ ಸೂಕ್ಷ್ಮಾಣುಗಳಿವೆ. ಬಟ್ಟೆಯನ್ನು ನಾವು ದೀರ್ಘಕಾಲ ಧರಿಸಿದಾಗ ಈ ಸೂಕ್ಷ್ಮಾಣುಗಳಿಂದ ಬಟ್ಟೆ ವಾಸನೆ ಬರಲು ಶುರುವಾಗುತ್ತದೆ. ನಮ್ಮ ದೇಹದಲ್ಲಿ ಯಾವುದೇ ಗಾಯವಿಲ್ಲದೆ ಹೋದ್ರೆ ಈ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶ ಮಾಡಿ ನಮಗೆ ಹಾನಿ ಮಾಡೋದಿಲ್ಲ. ಗಾಯವಿದ್ರೆ ಹಾನಿ ಸಾಧ್ಯತೆ ಹೆಚ್ಚಿರುತ್ತದೆ.
ಬ್ಯಾಕ್ಟೀರಿಯಾ ಬೆಳವಣಿಗೆ : ನಮ್ಮ ಇತರ ಬಟ್ಟೆಯಂತೆ ಒಳ ಉಡುಪು ಕೂಡ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ನಾವು ಮೇಲಿನ ಬಟ್ಟೆ ಅಥವಾ ಒಳ ಉಡುಪನ್ನು ತುಂಬಾ ಸಮಯ ಧರಿಸಿದ್ರೆ ಅದ್ರಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಈ ಬ್ಯಾಕ್ಟೀರಿಯಾ ಬೆಳವಣಿಗೆ ಪ್ರತಿಯೊಬ್ಬರಿಗೂ ಒಂದೇ ರೀತಿ ಇರೋದಿಲ್ಲ. ಹೆಚ್ಚು ಬೆವರಿದಾಗ, ಬೇಸಿಗೆಯಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಬೆಳೆದ್ರೆ ಚಳಿಗಾಲದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ನಿಧಾನವಾಗಿರುತ್ತದೆ.
ಮರೆವು ಹೆಚ್ಚಾಗ್ತಾ ಇದೆಯಾ? ಡೆಮೆನ್ಷಿಯಾ ಬಗ್ಗೆ ಹೊಸ ಸ್ಟಡಿ ಏನನ್ನುತ್ತೆ?
ಒಳ ಉಡುಪು ಬದಲಿಸೋದು ಅನಿವಾರ್ಯವೇ? : ಒಳ ಉಡುಪಿಗೆ ಮಲ ಅಥವಾ ಮೂತ್ರ ಸೋಕಿಲ್ಲವೆಂದಾದ್ರೆ ನೀವು ಅದನ್ನು ದೀರ್ಘಕಾಲ ಬಳಸಬಹುದು. ಆದ್ರೆ ಮಲ ಅಥವಾ ಮೂತ್ರ ತಾಗಿದ್ದು, ಇಲ್ಲವೆ ಒಳ ಉಡುಪು ಬೇರೆ ಕಾರಣದಿಂದ ಕೊಳಕಾಗಿದ್ದರೆ ಅದನ್ನು ತಕ್ಷಣ ಬದಲಿಸಬೇಕು. ಇದು ದೇಹಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ಟಿಯೆರ್ನೊ.