ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಎಲ್ಲರಲ್ಲೂ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಹೀಗಾಗಿಯೇ ಫಿಟ್ ಆಂಡ್ ಫೈನ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಹೀಗಾಗಿ ಡೈಲಿ ಎಕ್ಸರ್‌ಸೈಸ್ ಮಾಡ್ಬೇಕು ಅಂದ್‌ಕೊಳ್ತಾರೆ. ಆದ್ರೆ ಅಂದುಕೊಳ್ಳೋದಷ್ಟೇ, ಹೆಚ್ಚಿನವರು ಇದನ್ನು ಕರೆಕ್ಟಾಗಿ ಫಾಲೋ ಮಾಡೋದಿಲ್ಲ. ಎರಡು ದಿನ ವ್ಯಾಯಾಮ ಮಾಡಿದರೆ, ಮತ್ತೆರಡು ದಿನ ಉದಾಸೀನದಿಂದ ಸುಮ್ಮನಾಗುತ್ತಾರೆ. ಹೀಗಾಗದಂತೆ ಏನು ಮಾಡ್ಬೋದು.
ಬೆಳಗ್ಗೆದ್ದು ವಾಕಿಂಗ್ ಮಾಡ್ಬೇಕು, ಜಿಮ್‌ಗೆ ಹೋಗ್ಬೇಕು ಅಂತ ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದ್ರೆ ಲೇಟಾಗಿ ಎದ್ದಿದ್ದು, ಟೈಮ್ ಇಲ್ಲ, ನಾಳೆ ಹೋದರಾಯ್ತು ಹೀಗೆ ನಾನಾ ನೆಪವನ್ನೊಡ್ಡಿ ವರ್ಕೌಟ್ ಮಾಡೋದನ್ನು ಮುಂದೂಡ್ತಾರೆ. ಹೀಗೆ ಮಾಡೋದ್ರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. ನೀವು ಸಹ ವರ್ಕೌಟ್ ಮಾಡೋದನ್ನು ಸ್ಕಿಪ್ ಮಾಡಿದ್ದೀರಾ ? ತಾಲೀಮು ಮಾಡಲು ಪ್ರೇರಣೆ ಕಳೆದುಕೊಂಡಿದ್ದೀರಾ? ನಿಯಮಿತವಾಗಿ ಕೆಲಸ ಮಾಡುವುದನ್ನು ಪುನರಾರಂಭಿಸುವುದು ಹೇಗೆ ಎಂದು ತಿಳಿಯಿರಿ. ಫೋರ್ಟಿಸ್ ಹೆಲ್ತ್‌ಕೇರ್‌ನಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಮಾನಸಿಕ ಆರೋಗ್ಯ ಮತ್ತು ವರ್ತನೆಯ ವಿಜ್ಞಾನಗಳ ಮುಖ್ಯಸ್ಥರಾದ ಡಾ.ಕಾಮ್ನಾ ಛಿಬ್ಬರ್ ವರ್ಕೌಟ್ ಮಾಡಲು ಪ್ರೇರಣೆಯಾಗುವ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿದ್ದಾರೆ.
ವ್ಯಾಯಾಮ ಮಾಡೋಕೆ ಉತ್ಸಾಹ ಹೆಚ್ಚಾಗಲು ಈ ವಿಷಯಗಳನ್ನು ನೆನಪಲ್ಲಿಡಿ
1. ಮನಸ್ಥಿತಿ ಬದಲಾವಣೆಯನ್ನು ಮಾಡಿ: ನಾವೆಲ್ಲರೂ ಒಂದು ಕಾರಣಕ್ಕಾಗಿ ತಾಲೀಮು (Exercise) ಮಾಡುತ್ತೇವೆ, ಹೆಚ್ಚಾಗಿ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿಟ್ಟುಕೊಳ್ಳುವುದು ಮುಖ್ಯ ಕಾರಣವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕಾದರೂ ತಾಲೀಮನ್ನು ಮುಂದೂಡಬೇಡಿ. ನಿಯಮಿತವಾಗಿ ವರ್ಕೌಟ್ ಮಾಡುವುದು ನಿಮ್ಮನ್ನು ಸದೃಢಗೊಳಿಸುತ್ತದೆ. ನಿಮ್ಮ ಜೀವನಕ್ಕೆ (Life) ಮೌಲ್ಯವನ್ನು ಸೇರಿಸುತ್ತದೆ. ಹೀಗಾಗಿ ಜೀವನದೆಡೆಗಿನ ನಿಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಿ.
ವರ್ಕ್‌ಔಟ್ ಮಾಡಿಯಾದ ಮೇಲೆ ಅಪ್ಪಿತಪ್ಪಿಯೂ ಇಂಥಾ ತಪ್ಪು ಮಾಡ್ಲೇಬೇಡಿ
2. ವೈಯಕ್ತಿಕ ಗುರಿಗಳನ್ನು ಮರೆಯಬೇಡಿ: ಯಾವುದೇ ಕೆಲಸವನ್ನು ಆರಂಭಿಸುವಾಗ ನಾವು ಕೆಲವೊಂದು ನಿರ್ಧಿಷ್ಟ ಗುರಿ (Aim)ಯನ್ನು ಹೊಂದಿರುತ್ತೇವೆ. ಆರೋಗ್ಯಯುತವಾಗಿರುವುದು, ತೂಕ (Weight)ವನ್ನು ಕಳೆದುಕೊಳ್ಳಬಹುದು ಇಂಥಾ ಯಾವುದೇ ಕಾರಣಗಳಿರಬಹುದು. ವರ್ಕೌಟ್ ಮಾಡುವಾಗ ಆರಂಭದಲ್ಲಿ ಈ ಎಲ್ಲಾ ಉದ್ದೇಶಗಳು ನೆನಪಿರುತ್ತವೆ. ಹಾಗೆಯೇ ನಂತರದ ದಿನಗಳಲ್ಲೂ ಈ ಉದ್ದೇಶವನ್ನು ಮರೆಯಬೇಡಿ. ಜಿಮ್ ಸೆಷನ್ ಸಮಯ ಬಂದಾಗ ನೀವು ಸೋಮಾರಿತನದಿಂದ (Laziness) ವರ್ಕೌಟ್ ತಪ್ಪಿಸಲು ಕಾರಣವನ್ನು ಹುಡುಕಿಕೊಂಡರೆ ನಮ್ಮ ವೈಯಕ್ತಿಕ ಗುರಿಗಳನ್ನು ನೆನಪಿಸಿಕೊಳ್ಳಬೇಕು.
3. ಆರಂಭದಲ್ಲಿ ಸಣ್ಣ ಗುರಿಯನ್ನು ಇಟ್ಟುಕೊಳ್ಳಿ: ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವುದು ನೀವು ವ್ಯಾಯಾಮದಿಂದ ವಿಮುಖರಾಗುವಂತೆ ಮಾಡುತ್ತದೆ ಹೀಗಾಗಿ ಯಾವಾಗಲೂ ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ. ಯಾವಾಗಲೂ ಚಿಕ್ಕದಾದ, ಸಾಧಿಸಬಹುದಾದ ಗುರಿಗಳನ್ನು ಹೊಂದಿಸಿ ಮತ್ತು ನಂತರ ದೊಡ್ಡ ಗುರಿಯನ್ನು ಸಾಧಿಸುವತ್ತ ಮುಂದುವರಿಯಿರಿ. ತಾಲೀಮುಗೆ ನೀವು ಸಾಧಿಸಬಹುದಾದ ಗುರಿಗಳನ್ನು ನೀಡುವ ಮೂಲಕ ಸಣ್ಣ ಹಂತಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸಲು ತಜ್ಞರು ಸಲಹೆ ನೀಡುತ್ತಾರೆ.
ಎಷ್ಟು ಜಿಮ್ ಮಾಡಿದ್ರು ಸಿಕ್ಸ್‌ಪ್ಯಾಕ್ ಆಗ್ತಿಲ್ವಾ: ಹಾಗಿದ್ರೆ ಇದ್ನ ನೀವು ಓದ್ಲೇಬೇಕು
4. ಸಣ್ಣ ಗೆಲುವುಗಳನ್ನು ಸಹ ಆಚರಿಸಿ: ನಿಯಮಿತವಾಗಿ ಒಂದು ರೊಟೀನ್ ಫಾಲೋ ಮಾಡುವುದು ಸುಲಭದ ಕೆಲಸವಲ್ಲ. ಎಲ್ಲರಿಂದಲೂ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ಅದನ್ನು ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮನ್ನು ನೀವು ಪ್ರಶಂಸಿಕೊಳ್ಳಬೇಕು. ನೀವು ಯೋಜಿಸಿದ ರೀತಿಯಲ್ಲಿ ವ್ಯಾಯಾಮವನ್ನು ಮಾಡಿದ್ದಕ್ಕಾಗಿ ನಿಮ್ಮನ್ನು ಪ್ರಶಂಸಿಸುವುದು ಮತ್ತು ಆಚರಿಸುವುದು ಮುಂದಿನ ಬಾರಿ ಉತ್ತಮವಾಗಿ ಮಾಡಲು ನಿಮಗೆ ಬಲವನ್ನು (Strength) ನೀಡುತ್ತದೆ.
5. ಸ್ನೇಹಿತರ ಜೊತೆ ತಾಲೀಮು ಹೋಗುವುದನ್ನು ಪ್ರಯತ್ನಿಸಿ: ಜಿಮ್‌ಗೆ ಏಕಾಂಗಿ (Alone)ಯಾಗಿ ಹೋಗುವುದು ಖುಷಿಯನ್ನು ನೀಡದಿರಬಹುದು. ಜೊತೆಯಲ್ಲಿ ಯಾರೂ ಇಲ್ಲದೆ, ನೀವು ನಿರುತ್ಸಾಹದ ಭಾವನೆಗೆ ಜಾರಬಹುದು. ಆ ಸಂದರ್ಭದಲ್ಲಿ, ನಿಮ್ಮ ಸ್ನೇಹಿತರಲ್ಲಿ (Friends) ಒಬ್ಬರನ್ನು ನಿಮ್ಮೊಂದಿಗೆ ಸೇರಲು ನೀವು ಕೇಳಬಹುದು ಮತ್ತು ದಿನಚರಿಯನ್ನು ಮುಂದುವರಿಸಲು ನಿಮ್ಮನ್ನು ಪ್ರೇರೇಪಿಸಲು ನೀವು ಬೆಂಬಲವನ್ನು ಬಳಸಬಹುದು. ಹೀಗೆ ಮಾಡುವುದರಿಂದ ನೀವು ಹೆಚ್ಚು ಪ್ರೇರಣೆ ಪಡೆದುಕೊಳ್ಳುತ್ತೀರಿ.