
ಕೊರೋನಾ ವೈರಸ್ ಕಾಲಘಟ್ಟದಿಂದ ಜನರು ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿನ ಬಳಿಕ ಆರೋಗ್ಯ ಸಮಸ್ಯೆಯೂ ಹೆಚ್ಚಾಗ್ತಿರೋ ಕಾರಣ ವ್ಯಾಯಾಮ, ಯೋಗ, ಧ್ಯಾನ, ಡಯೆಟ್ ಹೀಗೆ ಒಂದಲ್ಲಾ ಒಂದು ಆರೋಗ್ಯಕರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ನಿಯಮಿತವಾಗಿ ವಾಕಿಂಗ್ ಅಥವಾ ಜಾಗಿಂಗ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೊರಾಂಗಣದ ಎಕ್ಸರ್‌ಸೈಸ್ ಮಾಡಲು ಇಷ್ಟಪಡದವರು ಮನೆಯಲ್ಲೇ ಟ್ರೆಡ್‌ಮಿಲ್ ಬಳಸುತ್ತಾರೆ.
ಫಿಟ್ನೆಸ್ ಫ್ರೀಕ್ ಆಗಿದ್ದೀರಾ? ನಿಮ್ಮ ಆರೋಗ್ಯದ ಬಗ್ಗೆ ನೀವು ಗಂಭೀರವಾಗಿ ಕಾಳಜಿವಹಿಸುತ್ತಿದ್ದರೆ, ನಿಯಮಿತವಾಗಿ ನಡೆಯುವುದು ನಿಮ್ಮ ವ್ಯಾಯಾಮದ ಪಟ್ಟಿಯಲ್ಲಿರಬೇಕು. ನಡಿಗೆಯಿಂದ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿವೆ ಮತ್ತು ತೆರೆದ ವಾತಾವರಣದಲ್ಲಿ ನಡೆಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಆದರೂ, ಅನೇಕ ಜನರು ವಾಕಿಂಗ್‌ಗೆ ನಿರ್ದಿಷ್ಟ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲ. ಇಂಥವರು ಮನೆಯಲ್ಲಿದ್ದುಕೊಂಡೇ ಟ್ರೆಡ್‌ಮಿಲ್ ಬಳಸುತ್ತಾರೆ.
Health Tips : ದಿನಕ್ಕೆ 10 ಸಾವಿರ ಸ್ಟೆಪ್ಸ್ ನಡೆಯೋದು ಕಷ್ಟವೇನಲ್ಲ! ಇಷ್ಟ್ ಮಾಡಿ ಸಾಕು
ಆದರೆ ಟ್ರೆಡ್‌ಮಿಲ್ ಬಳಸುವಾಗ ಶಿಸ್ತಾಗಿ ರನ್ನಿಂಗ್ ಮಾಡುವುದು ವಾಡಿಕೆ. ನಡಿಗೆಯ ಹೊರತಾಗಿ, ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಸಾಧಿಸಲು ಫಿಟ್‌ನೆಸ್ ಫ್ರೀಕ್ ನಿರ್ದಿಷ್ಟ ಆಹಾರವನ್ನು ಅನುಸರಿಸಬೇಕಾಗುತ್ತದೆ. ಆದರೆ, ಟ್ರೆಡ್‌ಮಿಲ್‌ನಲ್ಲೇ ಸ್ನ್ಯಾಕ್ಸ್, ಅಲ್ಕೋಹಾಲ್ ಮೆಲ್ಲೋ ವ್ಯಕ್ತಿಯನ್ನು ನೀವು ನೋಡಿದ್ದೀರಾ?
ನಂಬಲು ಕಷ್ಟವಾದರೂ ಇದು ನಿಜ. ವ್ಯಕ್ತಿಯೊಬ್ಬ ಟ್ರೆಡ್‌ಮಿಲ್‌ನಲ್ಲಿದ್ದುಕೊಂಡೇ ಅಲ್ಕೋಹಾಲ್ ಮತ್ತು ತಿಂಡಿಗಳನ್ನು ಸೇವಿಸುತ್ತಾನೆ. ವೀಡಿಯೊದಲ್ಲಿ, ವ್ಯಕ್ತಿ ಕುರ್ಚಿಯ ಮೇಲೆ ಕುಳಿತಿರುವಾಗ ಅವನ ಕಾಲುಗಳು ಟ್ರೆಡ್‌ಮಿಲ್‌ನಲ್ಲಿರುವುದನ್ನು ನೋಡಬಹುದು. ಜೊತೆಗೆ ಪಕ್ಕದ ಚಿಕ್ಕ ಬೆಂಚಿನ ಮೇಲೆ ಮದ್ಯದ ಬಾಟಲ್, ಗ್ಲಾಸ್ ಮತ್ತು ತಿಂಡಿಗಳನ್ನೂ ಇಟ್ಟುಕೊಂಡಿದ್ದಾನೆ. ಮನುಷ್ಯನು ತನ್ನ ಕಾಲುಗಳನ್ನು ನಡಿಗೆಯ ಕ್ರಿಯೆಯಂತೆ ಸರಳವಾಗಿ ಚಲಿಸುತ್ತಿರುವಾಗ, ತನ್ನ ಬಾಯಿಗೆ ಕೆಲವು ತಿಂಡಿಗಳನ್ನು ಹಾಕುತ್ತಾನೆ ಮತ್ತು ಟವೆಲ್ ಸಹಾಯದಿಂದ ತನ್ನ ಬೆವರುವ ಮುಖವನ್ನು ಒರೆಸುತ್ತಾನೆ. ಮುಂದೆ, ಅವನು ಗಾಜಿನಿಂದ ಪಾನೀಯವನ್ನು ಖಾಲಿ ಮಾಡುತ್ತಾನೆ. ಒಂದು ಕ್ಷಣವೂ ಟ್ರೆಡ್‌ಮಿಲ್‌ನಿಂದ ತನ್ನ ಕಾಲುಗಳನ್ನು ನಿಲ್ಲಿಸದೆ ಇದೆಲ್ಲವನ್ನೂ ಮಾಡುತ್ತಾನೆ.
Health Tips : ಎರಡು ಮೆಟ್ಟಿಲು ಹತ್ತಿದ್ರೂ ಉಬ್ಬರ ಬರುತ್ತಾ? ಈ ಟಿಪ್ಸ್ ಫಾಲೋ ಮಾಡಿ
ದಿ ಕೂಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರು ಈ ವೀಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು 'ಇದು ಯಾವ ರೀತಿಯ ವ್ಯಾಯಾಮ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ಸೋಮಾರಿ ಫಿಟ್‌ನೆಸ್ ಫ್ರೀಕ್' ಎಂದು ಕಾಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು 'ಆರೋಗ್ಯದ ಬಗ್ಗೆ ಇಷ್ಟು ಉದಾಸೀನ ಸರಿಯಲ್ಲ' ಎಂದು ತಿಳಿಸಿದ್ದಾರೆ.
ಟ್ರೆಡ್ ಮಿಲ್ ಮೇಲೆ ಓಡುವ ಮುನ್ನ ಇದನ್ನು ತಿಳ್ಕೊಂಡಿರಿ!
ವೈರಲ್ ವಿಡಿಯೋ ಇಲ್ಲಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.