
ವಯೋಸಹಜ ಬದಲಾವಣೆಗಳು ಸಾಮಾನ್ಯ. ವಯಸ್ಸು ನಲವತ್ತರ ಹತ್ತಿರಕ್ಕೆ ಬರ್ತಿದ್ದಂತೆ ತಲೆ ಮೇಲಿನ ಕೂದಲು ಒಂದೊಂದಾಗಿ ಬೆಳ್ಳಗಾಗಲು ಶುರುವಾಗುತ್ತದೆ. ಮಹಿಳೆಯರಿಗೆ ಪಿರಿಯಡ್ಸ್ ನಲ್ಲಿ ಏರುಪೇರು ಶುರುವಾಗಿ ನಲವತ್ತೈದರಿಂದ ಐವತ್ತು ವಯಸ್ಸಿನಲ್ಲಿ ಪಿರಿಯಡ್ಸ್ ನಿಲ್ಲುತ್ತದೆ. ಇದೇ ರೀತಿ ಪ್ಯುಬಿಕ್ ಹೇರ್ ಬಣ್ಣ ಕೂಡ ಒಂದು ವಯಸ್ಸಿಗೆ ಬಂದಂತೆ ಬದಲಾಗಲು ಶುರುವಾಗುತ್ತದೆ. ಕಪ್ಪಗಿದ್ದ ಕೂದಲಿನ ಬಣ್ಣ ಬಿಳಿಯಾಗಲು ಶುರುವಾಗುತ್ತದೆ. ವಯಸ್ಸು ನಲವತ್ತರ ಗಡಿದಾಟಿದ ಮೇಲೆ ಕೂದಲಿನ ಬಣ್ಣ ಬದಲಾದರೆ ಅದಕ್ಕೆ ಹಚ್ಚು ಚಿಂತಿಸುವ ಅಗತ್ಯವಿಲ್ಲ. ಆದ್ರೆ ಇಪ್ಪತ್ತು, ಮೂವತ್ತು ವರ್ಷ ವಯಸ್ಸಿನಲ್ಲಿಯೇ ಪ್ಯುಬ್ಲಿಕ್ ಹೇರ್ ಬಣ್ಣ ಬಿಳಿಯಾದ್ರೆ ನೀವು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ಯುಬಿಕ್ ಕೂದಲಿನ ಬಣ್ಣ ಬಿಳಿಯಾಗಲು ನಾನಾ ಕಾರಣವಿದೆ. ಇದು ನಿಮ್ಮ ಆರೋಗ್ಯದಲ್ಲಾದ ಏರುಪೇರನ್ನು ತೋರಿಸುತ್ತದೆ. ನಾವಿಂದು ಪ್ಯುಬಿಕ್ ಕೂದಲಿನ ಬಣ್ಣ ಬೇಗ ಬಿಳಿಯಾಗಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ.
ಪ್ಯುಬಿಕ್ (Pubic) ಕೂದಲಿನ ಬಣ್ಣ ಅತಿ ಬೇಗ ಬಿಳಿಯಾಗಲು ಇವು ಕಾರಣ :
ವಿಟಮಿನ್ ಬಿ-12 ಕೊರತೆ : ನಿಮ್ಮ ದೇಹ ಚೆನ್ನಾಗಿ ಕೆಲಸ ಮಾಡಬೇಕು, ಆರೋಗ್ಯ (Health) ವಾಗಿರಬೇಕು ಅಂದ್ರೆ ನೀವು ಏನು ತಿನ್ನುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಬಿ -12 ಕಡಿಮೆಯಾದಾಗ ದೇಹ ಅಗತ್ಯವಿರುವಷ್ಟು ಕೆಂಪು ರಕ್ತ (Blood) ಕಣಗಳನ್ನು ಉತ್ಪಾದಿಸುವುದಿಲ್ಲ. ಇದು ಕೂದಲಿನ ಬಣ್ಣ ಬದಲಾಗಲು ಕಾರಣವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಟಮಿನ್ ಬಿ12 ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಬೇಕು. ಸಸ್ಯಹಾರಿಗಳು ಇದಕ್ಕೆ ಹೆಚ್ಚಿನ ಗಮನ ನೀಡಬೇಕು. ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಲು ಮುಖ್ಯಕಾರಣ ಪೋಷಕಾಂಶದ ಕೊರತೆ.
ಮಂಗನ ತರ ನಿಮ್ಮ ಮೆದುಳು ಯೋಚಿಸ್ತಾ ಇದ್ಯಾ? ಮಂಕಿ ಮೈಂಡಿಗೆ ಇಲ್ಲಿದೆ ಪರಿಹಾರ!
ಒತ್ತಡ (Stress) : ನಿಮಗೆ ಅಚ್ಚರಿ ಎನ್ನಿಸಬಹುದು, ನಿಮ್ಮ ದೀರ್ಘಕಾಲದ ಒತ್ತಡ ನಿಮ್ಮ ದೇಹದಲ್ಲಿ ನಾನಾ ಬದಲಾವಣೆ ತರುತ್ತದೆ. ಅದ್ರಲ್ಲಿ ಕೂದಲಿನ ಬಣ್ಣ ಬದಲಾಗುವುದು ಸೇರಿದೆ. ಒತ್ತಡದಲ್ಲಿರುವ ವ್ಯಕ್ತಿಯ ಕೂದಲಿನ ಕಿರುಚೀಲಗಳ ಅಡಿಯಲ್ಲಿ ಕೋಶ ಕಡಿಮೆಯಾಗುತ್ತದೆ. ಇದು ತಲೆ ಕೂದಲು ಹಾಗೂ ಪ್ಯುಬಿಕ್ ಕೂದಲಿನ ಬಣ್ಣವನ್ನು ಬದಲಿಸುತ್ತದೆ.
ರಾಸಾಯನಿಕ ಉತ್ಪನ್ನ ಬಳಕೆ (Usage of Chemicals) : ಖಾಸಗಿ ಅಂಗದ ಸ್ವಚ್ಛತೆ ವೇಳೆ ಯಾವ ಉತ್ಪನ್ನ ಬಳಕೆ ಮಾಡುತ್ತಿದ್ದೀರಿ ಎಂಬುದನ್ನು ಗಮನಿಸಬೇಕು. ಹೆಚ್ಚು ರಾಸಾಯನಿಕವಿರುವ ಉತ್ಪನ್ನ ಪ್ಯುಬಿಕ್ ಹೇರ್ ಬಣ್ಣವನ್ನು ಬದಲಿಸುತ್ತದೆ. ಅದು ಬೇಗ ಬೆಳ್ಳಗಾಗಲು ಕಾರಣವಾಗುತ್ತದೆ. ಕೃತಕ ಸುಗಂಧ ದ್ರವ್ಯ ಹೊಂದಿರುವ ಡಿಟರ್ಜೆಂಟ್‌ಗಳು ಅಥವಾ ಸಾಬೂನು ಮೆಲನಿನ್ ಉತ್ಪಾದಿಸುವ ಕೋಶಗಳನ್ನು ಹಾನಿಗೊಳಿಸುತ್ತವೆ. ಇದ್ರಿಂದ ನಿಮಗೆ ಸಮಸ್ಯೆ ಕಾಡುತ್ತದೆ.
ವಿಟಲಿಗೊ : ಇದೊಂದು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದು ಪೋಷಕರಿಂದ ಮಕ್ಕಳಿಗೆ ಹರಡುವ ಸಾಧ್ಯತೆ ಇರುತ್ತದೆ. ಇದು ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದ್ರಿಂದ ಚರ್ಮ ಹಾಗೂ ಕೂದಲಿನ ಬಣ್ಣ ಬದಲಾಗುತ್ತದೆ. ನಿಮಗೆ ವಿಟಲಿಗೊ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್ ಟಿಪ್ಸ್...
ಹಾರ್ಮೋನ್ ಏರುಪೇರು : ಮಹಿಳೆಯರಿಗೆ ಹಾರ್ಮೋನ್ ಏರುಪೇರು ಸಾಮಾನ್ಯ ಸಮಸ್ಯೆಯಾಗಿದೆ. ಅವರ ಹಾರ್ಮೋನ್ ನಲ್ಲಿ ಬದಲಾವಣೆ ಆದಾಗ ಕೆಲವು ಬಾರಿ ಪ್ಯುಬಿಕ್ ಹೇರ್ ಬಣ್ಣ ಬದಲಾಗುತ್ತದೆ. ಹೈಪರ್ ಥೈರಾಯ್ಡಿಸಮ್ ಹೊಂದಿರುವ ಜನರಿಗೆ ಇದು ಕಾಡುವುದು ಹೆಚ್ಚು.
ಜೆನೆಟಿಕ್ಸ್ (Genetics) : ಬರೀ ಇದಷ್ಟೆ ಅಲ್ಲ ನಿಮ್ಮ ಪ್ಯುಬಿಕ್ ಹೇರ್ ಬಣ್ಣ ಚಿಕ್ಕ ವಯಸ್ಸಿನಲ್ಲೇ ಬಿಳಿಯಾಗಿದೆ ಅಂದಾದ್ರೆ ಅದಕ್ಕೆ ಜೆನೆಟಿಕ್ಸ್ ಕಾರಣವೂ ಇರಬಹುದು. ಪಾಲಕರಲ್ಲಿ ಯಾರಾದ್ರೂ ಬೇಗ ಈ ಸಮಸ್ಯೆ ಎದುರಿಸಿದ್ದರೆ ಅದು ಮಕ್ಕಳಿಗೆ ಬರುತ್ತದೆ. ಮೊದಲು ನಿಮ್ಮ ಕೂದಲು ಬೆಳ್ಳಗಾಗುತ್ತದೆ. ನಂತ್ರ ಪ್ಯುಬಿಕ್ ಕೂದಲು ಬಿಳಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.