ಮಂಗನ ತರ ನಿಮ್ಮ ಮೆದುಳು ಯೋಚಿಸ್ತಾ ಇದ್ಯಾ? ಮಂಕಿ ಮೈಂಡಿಗೆ ಇಲ್ಲಿದೆ ಪರಿಹಾರ!

By Suvarna News  |  First Published Mar 4, 2024, 11:32 AM IST

ಕೋತಿ ತರ ಆಡ್ಬೇಡ ಅಂತಾ ಆಗಾಗ ನಾವು ನೀವೆಲ್ಲ ಹೇಳ್ತಿರುತ್ತೇವೆ. ಇದು ತಮಾಷೆಗೇ ಇರ್ಬಹುದು. ಆದ್ರೆ ಕೆಲವರು ಮೆದುಳು ನಿಜವಾಗ್ಲೂ ಮಂಕಿ ಮೆದುಳಿನಂತೆ ವರ್ತಿಸುತ್ತೆ. ಅದ್ರಿಂದಾಗೋ ನಷ್ಟವೇನು ಗೊತ್ತಾ? 
 


ಮಂಗನಿಂದ ಮಾನವ ಎನ್ನುವ ಮಾತಿದೆ. ಅನೇಕ ಬಾರಿ ಮನುಷ್ಯನನ್ನು ಮಂಗನಿಗೆ ಹೋಲಿಕೆ ಮಾಡಲಾಗುತ್ತದೆ. ಕೋತಿಂತೆ ಆಡ್ಬೇಡ, ಸುಮ್ಮನೆ ಕುಳಿತು ಕೋ ಅಂತಾ ಮಕ್ಕಳಿಗೆ ದೊಡ್ಡವರು ಹೇಳ್ತಿರುತ್ತಾರೆ. ಮಂಗ ಒಂದು ಕಡೆ ಎಂದೂ ಕುಳಿತುಕೊಳ್ಳೋದಿಲ್ಲ. ಒಂದೈದು ನಿಮಿಷ ಅದಕ್ಕೆ ಒಂದು ಸ್ಥಳದಲ್ಲಿ ಅಥವಾ ಒಂದೇ ಭಂಗಿಯಲ್ಲಿ ಇರಲು ಸಾಧ್ಯವಿಲ್ಲ. ಸದಾ ಅತ್ತಿಂದಿತ್ತ ಓಡಾಡುವ ಮಂಗ ಏನಾದ್ರೂ ಕೆಲಸ ಮಾಡ್ತನೆ ಇರುತ್ತೆ. ಕೆಲ ಮನುಷ್ಯರ ಮನಸ್ಸು ಕೂಡ ಹೀಗೆ. ಕೋತಿಯಂತೆ ಅವರ ಮೆದುಳು ಆಡ್ತಿರುತ್ತದೆ. ಒಂದು ನಿಮಿಷ ಒಂದು ವಿಷ್ಯದ ಬಗ್ಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ಇಂಥ ಮೆದುಳಿಗೆ ಮಂಕಿ ಮೆದುಳು ಎಂದು ಕರೆಯಲಾಗುತ್ತದೆ. ಮಂಕಿ ಮೆದುಳು ಎಂದ್ರೇನು, ಅದ್ರ ಅನಾನುಕೂಲತೆ ಏನು ಅನ್ನೋದನ್ನು ನಾವಿಂದು ಹೇಳ್ತೇವೆ.

ಮಂಕಿ (Monkey) ಮೆದುಳು ಎಂದರೇನು? : ಕೋತಿಯಂತೆ ನಾವು ಹಾಗೂ ನಮ್ಮ ಮೆದುಳು (Brain) ಅಲ್ಲಿ ಇಲ್ಲಿ ಓಡಾಡುತ್ತಿದ್ದರೆ ಅದಕ್ಕೆ ಮಂಕಿ ಮೆದುಳು ಎನ್ನಲಾಗುತ್ತದೆ. ಇಂಥವರಿಗೆ ಮನಸ್ಸನ್ನು ಒಂದು ವಿಷ್ಯದ ಮೇಲೆ ಕೇಂದ್ರೀಕರಿಸಲು ಸಾಧ್ಯವೇ ಆಗೋದಿಲ್ಲ. ಒಂದು ವಿಷ್ಯದ ಬಗ್ಗೆ ಗಂಭೀರ ಆಲೋಚನೆ (Thinking) ನಡೆಯುತ್ತಿದ್ದು, ಅದಕ್ಕೆ ಪರಿಹಾರ ಸಿಗುವ ಮೊದಲೇ ಮನಸ್ಸು ಬೇರೆ ವಿಷ್ಯದ ಬಗ್ಗೆ ಆಲೋಚನೆ ಮಾಡಿರುತ್ತದೆ. ಏಕಕಾದಲ್ಲಿಯೇ ನಾಲ್ಕೈದು ವಿಷ್ಯಗಳ ಬಗ್ಗೆ ಆಲೋಚನೆ ಮಾಡ್ತಾ, ಗೊಂದಲಕ್ಕೆ ಸಿಕ್ಕಿಬೀಳುತ್ತದೆ. ಇಂಥ ವ್ಯಕ್ತಿಗಳಿಗೆ ಏಕಾಗ್ರತೆ ಕೊರತೆ ಕಾಡುತ್ತದೆ. ಯಶಸ್ಸು ಸಾಧಿಸಲು ಅಗತ್ಯವಿರುವ ಏಕಾಗ್ರತೆ ಇವರಲ್ಲಿ ಇರೋದುಲ್ಲ. ಇಂಥ ವ್ಯಕ್ತಿಗಳು ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದಿಲ್ಲ. ಅದನ್ನು ಅರ್ಧ ಮಾಡಿ ಇನ್ನೊಂದು ಕೆಲಸಕ್ಕೆ ಹೋಗಿರ್ತಾರೆ. ಆ ಕೆಲಸವನ್ನೂ ಪೂರ್ಣಗೊಳಿಸಲು ಅವರಿಂದ ಆಗೋದಿಲ್ಲ. 

Latest Videos

ಗುಜರಾತ್‌ನ 3 ಅಡಿ ಎತ್ತರದ ವೈದ್ಯ ಈಗ ವಿಶ್ವದ ಅತ್ಯಂತ ಕುಳ್ಳ ಡಾಕ್ಟರ್‌!

ಮಂಕಿ ಮೆದುಳಿನಿಂದ ಆಗುವ ತೊಂದರೆಗಳು : ಯಶಸ್ವಿಯಾಗಲು ಏಕಾಗ್ರತೆ, ಗಮನ ಕೇಂದ್ರೀಕರಣ ಬಹಳ ಮುಖ್ಯ. ಇವೆರಡೂ ಸಾಧ್ಯವಾಗದೆ ಹೋದಾಗ ವ್ಯಕ್ತಿಗೆ ಯಶಸ್ಸು ದೂರದ ಮಾತಾಗುತ್ತದೆ. ಮಂಕಿ ಮೆದುಳು ಹೊಂದಿರುವ ವ್ಯಕ್ತಿಗೆ ಸಂದಿಗ್ಧತೆ ಉಂಟಾಗುತ್ತದೆ. ಇಂಥ ವ್ಯಕ್ತಿಗಳು ಹೆಚ್ಚು ಆತಂಕಕ್ಕೆ ಒಳಗಾಗ್ತಾರೆ. ಒಂದೇ ಬಾರಿ ಮೂರ್ನಾಲ್ಕು ಕೆಲಸ ಮಾಡುವ ಕಾರಣ ಅವರ ಮೆದುಳು ಆಯಾಸಗೊಳ್ಳುತ್ತದೆ. ಕೆಲಸದ ಒತ್ತಡ ಹೆಚ್ಚಾಗುತ್ತದೆ. ಇದು ಅವರ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಯಾವುದೇ ಕೆಲಸ ಪೂರ್ಣಗೊಳ್ಳದ ಕಾರಣ ಇಡೀ ದಿನ ಅವರು ಒತ್ತಡದಲ್ಲಿ ಕಳೆಯುವಂತಾಗುತ್ತದೆ. ಕೆಲಸವನ್ನು ಮುಂದೂಡುವ ಕಾರಣ ಎಲ್ಲ ಕೆಲಸ ಒಂದೇ ಬಾರಿ ಮೈಮೇಲೆ ಬರುವುದಿದೆ.  ಸದಾ ಒಂದಿಲ್ಲೊಂದು ವಿಷ್ಯದ ಬಗ್ಗೆ ಇವರು ಆಲೋಚನೆ ಮಾಡುವ ಕಾರಣ ನಿದ್ರೆಯ ಸಮಸ್ಯೆ ಇವರನ್ನು ಕಾಡುತ್ತದೆ. ನಿದ್ರೆ ಸರಿಯಾಗಿ ಆಗದ ಕಾರಣ ಕೆಲ ರೋಗ ಮುತ್ತಿಕೊಳ್ಳುತ್ತದೆ. ಅಲ್ಲದೆ ಕಿರಿಕಿರಿ, ಸುಸ್ತು ಇವರನ್ನು ಕಾಡುತ್ತದೆ. 

ಹೆಚ್ತಿದೆ ಡೇಂಜರಸ್‌ ದಡಾರ ಕಾಯಿಲೆ, MMR ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ WHO

ಮಂಕಿ ಮೆದುಳಿನ ನಿಯಂತ್ರಣ ಹೇಗೆ? : ಮಂಕಿ ಮೆದುಳಿಗೆ ಯಾವುದೇ ಚಿಕಿತ್ಸೆ ಸಾಧ್ಯವಿಲ್ಲ. ಔಷಧಿ, ಮಾತ್ರೆಯಿಲ್ಲ. ನಿಮ್ಮನ್ನು ನೀವು ಸರಿಪಡಿಸಿಕೊಳ್ಳಬೇಕಾಗುತ್ತದೆ. ಕೆಲ ಚಟುವಟಿಕೆಗಳು ನಿಮ್ಮ ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ನೀವು ಫಜಲ್ ಆಟ ಆಡುವುದು ಅಥವಾ ಮೆದುಳಿಗೆ ಕೆಲಸ ನೀಡುವ ಆಟಗಳನ್ನು ಒಂದೇ ಸ್ಥಳದಲ್ಲಿ ಕುಳಿತು ಆಡ್ತಾ ಬಂದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಇದಕ್ಕಾಗಿ ನಿಮ್ಮಿಷ್ಟದ ಹವ್ಯಾಸದ ನೆರವು ಪಡೆಯಬಹುದು. ಮೆದುಳಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಏಕಾಗ್ರತೆಗೆ ಸಂಬಂಧಿಸಿದ ವ್ಯಾಯಾಮ ಮಾಡಬೇಕು. ಧ್ಯಾನ ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಧ್ಯಾನ, ಸರಿಯಾದ ನಿದ್ರೆ, ಉತ್ತಮ ಆಹಾರ ಸೇವನೆ ನಿಮ್ಮ ಮಂಕಿ ಮೆದುಳನ್ನು ಸರಿದಾರಿಗೆ ತರಲು ನೆರವಾಗುತ್ತದೆ. 
 

click me!