Bone Health: ಮೂಳೆಗಳ ವೀಕ್ ನೆಸ್ಸಾ? ಕೆಲವು ಲಕ್ಷಣಗಳಿಂದ ತಿಳ್ಕೊಳಿ

By Suvarna NewsFirst Published Oct 25, 2022, 3:16 PM IST
Highlights

ಮೂಳೆಗಳ ಸದೃಢತೆಯಿಂದ ದೇಹಾರೋಗ್ಯ ಚೆನ್ನಾಗಿರುತ್ತದೆ. ಮೂಳೆಗಳಲ್ಲಿ ದೌರ್ಬಲ್ಯವುಂಟಾದರೆ ದೇಹದಲ್ಲಿ ನೋವು ಸ್ಥಿರವಾಗುತ್ತದೆ. ಹೀಗಾಗಿ, ಮೂಳೆಗಳ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮೂಳೆಗಳ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು.

 

ದೇಹದಲ್ಲಿ ಮೂಳೆಗಳು ಸದೃಢವಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತವೆ. ಮೂಳೆಗಳು ದುರ್ಬಲವಾದರೆ ದೈನಂದಿನ ಕೆಲಸಕಾರ್ಯಗಳನ್ನು ಪೂರೈಸಿಕೊಳ್ಳುವುದೂ ಕಷ್ಟವಾಗುತ್ತದೆ. ಮೂಳೆಗಳ ದೌರ್ಬಲ್ಯ ಉಳ್ಳವರಿಗೆ ಆಸ್ಟಿಯೋಪೊರೊಸಿಸ್ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೋಪೊರೊಸಿಸ್ ಕಾರಣದಿಂದ ಸ್ವಲ್ಪ ಒತ್ತಡವುಂಟಾದರೂ ಸುಲಭವಾಗಿ  ಹಿಂಭಾಗ, ಮಣಿಕಟ್ಟುಗಳಲ್ಲಿ ಮುರಿತ ಉಂಟಾಗುತ್ತದೆ. ಹಿಂಭಾಗದಲ್ಲಿ ನೋವು ಕಂಡುಬರುತ್ತದೆ. ನಿಮಗೆ ಗೊತ್ತೇ? ನಮ್ಮ ದೇಹದ ಮೂಳೆ ಎಂದರೆ ಅದೊಂದು ಜೀವಂತ ಕೋಶವಿದ್ದ ಹಾಗೆ. ಅದು ಒಮ್ಮೆ ದುರ್ಬಲವಾಗುತ್ತದೆ, ಮುರಿದುಹೋಗುತ್ತದೆ, ಹಾಗೆಯೇ ಮತ್ತೆ ದೃಢವಾಗುತ್ತದೆ, ಗಟ್ಟಿಯಾಗುತ್ತದೆ. ಒಮ್ಮೆ ಮುರಿತಕ್ಕೆ ಒಳಗಾದ ಮೂಳೆ ಮತ್ತೆ ಸೇರದೆ ಇರುವ ಸ್ಥಿತಿ ಉಂಟಾಗುವ ಸ್ಥಿತಿ ನಿರ್ಮಾಣವಾದಾಗ ಆಸ್ಟಿಯೋಪೊರೊಸಿಸ್ ಉಂಟಾಗುತ್ತದೆ. ಹೀಗಾಗಿ, ಮೂಳೆಗಳ ಆರೋಗ್ಯದ ಬಗ್ಗೆ ಸದಾ ಗಮನ ಹರಿಸಬೇಕು. ಇಂದಿನ ಒತ್ತಡ ಜೀವನ ಹಾಗೂ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆ, ಆಹಾರ-ವಿಹಾರಗಳಲ್ಲಿ ಕಂಡುಬರುವ ನಿರ್ಲಕ್ಷ್ಯದಿಂದಾಗಿ ಮೂಳೆಗಳು ದುರ್ಬಲವಾಗುವ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಕ್ಯಾಲ್ಸಿಯಂ ಕೊರತೆ ಉಂಟಾಗುವುದು ಒಂದು ಮುಖ್ಯ ಕಾರಣ. ಯುವ ಜನರಲ್ಲೂ ಮೂಳೆಗಳ ಸಮಸ್ಯೆ ಹಾಗೂ ಮಾಂಸಖಂಡಗಳಲ್ಲಿ ನೋವು ಇದೇ ಕಾರಣಕ್ಕೆ ಉಂಟಾಗಬಲ್ಲದು ಹಾಗೂ ನಡೆಯುವಾಗ ಮಂಡಿಗಳಲ್ಲಿ ಚರಚರ ಎನ್ನುವ ಸದ್ದು ಕೇಳಿಬರಬಹುದು. ಇನ್ನೂ ಕೆಲವು ಲಕ್ಷಣಗಳ ಮೂಲಕ ಮೂಳೆಗಳು ದುರ್ಬಲವಾಗುತ್ತಿವೆ ಎನ್ನುವುದನ್ನು ತಿಳಿಯಬಹುದು.

•    ಒಸಡುಗಳ ದುರ್ಬಲತೆ (Gum Weakness)
ಮೂಳೆಗಳ (Bones) ದೌರ್ಬಲ್ಯ ಒಸಡುಗಳಲ್ಲಿ ತಿಳಿದುಬರುತ್ತದೆ. ದವಡೆಯ ಮೂಳೆ ಹಲ್ಲುಗಳನ್ನು ಹಿಡಿದಿಟ್ಟುಕೊಂಡಿರುತ್ತದೆ. ಮೂಳೆ ದುರ್ಬಲವಾದರೆ ಒಸಡುಗಳಿಂದ ಹಲ್ಲುಗಳು (Teeth) ಹೊರಬರಲು ಶುರುವಾಗುತ್ತವೆ. ಅಲ್ಲದೆ ಹಲ್ಲುಗಳಲ್ಲಿ ಸಮಸ್ಯೆ ಆರಂಭವಾಗಬಹುದು.

World Spine Day: ಬೆನ್ನು ನೋವಿನಿಂದ ಕಂಗೆಟ್ಟಿದ್ದೀರಾ ? ಸರಳ ಯೋಗಾಸನ ಮಾಡಿ ಸಾಕು

•    ಹಸ್ತ (Palm) ಮತ್ತು ಮಣಿಕಟ್ಟು 
ನಮ್ಮ ಹಸ್ತ, ಮಣಿಕಟ್ಟುಗಳಿಗೆ ಅಪಾರ ಶಕ್ತಿಯಿದೆ. ನಾವು ಎಲ್ಲ ಕೆಲಸಕಾರ್ಯ ಮಾಡುವುದೇ ಇವುಗಳ ಮೂಲಕ. ಒಂದೊಮ್ಮೆ ಮೂಳೆಗಳ ಸಾಂದ್ರತೆ (Density) ಕಡಿಮೆ ಆದಾಗ ಹಿಡಿತದ ಮೇಲೆ ಪರಿಣಾಮ ಕಂಡುಬರುತ್ತದೆ. ಹಸ್ತ, ಮಣಿಮಟ್ಟು ಮತ್ತು ಬೆನ್ನು ಮೂಳೆಯ (Spine) ನಡುವೆ ಸಂಬಂಧ ಇರುತ್ತದೆ. ಮೂಳೆಗಳ ಸದೃಢತೆ (Strong) ಅರಿಯಲು ಹಸ್ತಗಳ ಹಿಡಿತದ ಪರೀಕ್ಷೆ ಮಾಡುವುದು ಅತ್ಯುತ್ತಮ ವಿಧಾನ ಎಂದು ಅಧ್ಯಯನಗಳು ಹೇಳಿವೆ. 

•    ಉಗುರುಗಳಲ್ಲಿ (Nail) ಸಮಸ್ಯೆ
ಉಗುರು ಪದೇ ಪದೆ ಮುರಿದುಹೋಗುತ್ತಿದ್ದರೆ ದೇಹದಲ್ಲಿ ಕ್ಯಾಲ್ಸಿಯಂ (Calcium) ಮತ್ತು ಕೊಲೆಜನ್ ಕೊರತೆ ಇದೆ ಎಂದರ್ಥ.  ಇವೆರಡೂ ಪೋಷಕ ತತ್ವಗಳು ದೃಢವಾದ ಮೂಳೆಗಳಿಗೆ ಅಗತ್ಯ. ದುರ್ಬಲವಾದ ಉಗುರು ತೀರ ಆರಂಭಿಕ ಲಕ್ಷಣ ಎನ್ನಬಹುದು. ಇದರಿಂದ ದೇಹಕ್ಕೆ ಕ್ಯಾಲ್ಸಿಯಂ ಮತ್ತು ಕೊಲೆಜನ್ ಅಂಶಗಳ ಅಗತ್ಯವಿದೆ ಎಂದು ತಿಳಿಯಬಹುದು.

•    ಮಾಂಸಖಂಡಗಳ ನೋವು (Pain in Muscles) 
ವಿಟಮಿನ್ ಡಿ, ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಪೊಟ್ಯಾಶಿಯಂ ಹಾಗೂ ಇನ್ನಿತರ ಅಂಶಗಳು ಮೂಳೆಗಳ ಆರೋಗ್ಯಕ್ಕೆ ಅಗತ್ಯ. ಇವುಗಳ ಕೊರತೆಯಿಂದ (Shortage) ಸೆಳೆತ, ಮಾಂಸಖಂಡಗಳ ನೋವು ಉಂಟಾಗುತ್ತದೆ. ಈ ಕೊರತೆ ದೀರ್ಘಕಾಲ ಮುಂದುವರಿದರೆ ಮೂಳೆಗಳು ದುರ್ಬಲವಾಗುತ್ತವೆ. 

2 ರಿಂದ 4 ವರ್ಷದ ಮಕ್ಕಳಿಗೆ ಈ ಆಹಾರ ನೀಡಿದ್ರೆ ಮೂಳೆ, ಹಲ್ಲು ಸ್ಟ್ರಾಂಗ್ ಆಗುತ್ತೆ!

•    ದೇಹ (Body) ಮುಂದಕ್ಕೆ ಬಾಗುವುದು
ಮೂಳೆಗಳ ದೌರ್ಬಲ್ಯವಿದ್ದಾಗ ದೇಹ ಮುಂದಕ್ಕೆ ಬಾಗಲು ಆರಂಭವಾಗುತ್ತದೆ. ಇದು ಸಹ ಆರಂಭಿಕ ಲಕ್ಷಣ. ಹೆಚ್ಚು ಭಾರ ಹೊರದೆ ಇದ್ದಾಗಲೂ ಬೆನ್ನು ಮೂಳೆ ಮುಂದಕ್ಕೆ ಬಾಗುತ್ತಿದ್ದರೆ  ಎಚ್ಚೆತ್ತುಕೊಳ್ಳಬೇಕು. 

•    ದೈಹಿಕ ಕ್ಷಮತೆ (Shortage of Fitness) ಇಲ್ಲದಿರುವುದು
ದೈಹಿಕ ಕ್ಷಮತೆ ಹಾಗೂ ಚಟುವಟಿಕೆ ಇಲ್ಲದ ಜೀವನಶೈಲಿಯಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಅಧ್ಯಯನಗಳ ಪ್ರಕಾರ, ತೂಕ (Weight) ಇಳಿಸಿಕೊಳ್ಳಲು ಮಾಡುವ ವ್ಯಾಯಾಮಗಳಿಂದ (Exercise) ಮೂಳೆಗಳನ್ನು ನಿರ್ಮಿಸುವ ಕೋಶಗಳು (Cells) ಸದೃಢಗೊಳ್ಳುತ್ತವೆ.

•    ಹೃದಯದ ಬಡಿತ (Heart Rate) ಹೆಚ್ಚುವುದು
ಸಾಮಾನ್ಯ ಹೃದಯ ನಿಮಿಷಕ್ಕೆ 60-100ರ ನಡುವೆ ಬಡಿತ ಹೊಂದಿರುತ್ತದೆ. ಆದರೆ, ಇದು 80ಕ್ಕಿಂತ ಹೆಚ್ಚಾಗಿದ್ದರೆ ಹಿಪ್ಸ್ ಮತ್ತು ಬೆನ್ನುಮೂಳೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೃದಯದ ಬಡಿತ ಫಿಟ್ ನೆಸ್ ಮಟ್ಟವನ್ನು ಸೂಚಿಸುತ್ತದೆ. 

click me!