ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ

By Sathish Kumar KH  |  First Published Nov 27, 2023, 1:42 PM IST

ಕೋವಿಡ್ ಮಾದರಿಯಲ್ಲಿಯೇ ಮತ್ತೊಂದು ಮಾರಕ ವೈರಸ್ ಚೀನಾದಲ್ಲಿ ಪತ್ತೆಯಾಗಿರುವ ಬೆನ್ನಲ್ಲಿಯೇ ರಾಜ್ಯದಲ್ಲಿಯೂ ಡೆಡ್ಲಿ ವೈರಸ್‌ ತಡೆಗೆ ಸಿದ್ಧತೆಗಾಗಿ ತಜ್ಞರ ಸಭೆಯನ್ನು ಕರೆಯಲಾಗಿದೆ.


ಬೆಂಗಳೂರು (ನ.27): ಈಗಾಗಲೇ ಕಳೆದ ನಾಲ್ಕು ವರ್ಷಗಳಲ್ಲಿ ಇಡೀ ಜಗತ್ತೇ ಮಾರಕ ಕೊರೊನಾ ವೈರಸ್‌ನಿಂದಾಗಿ ಸಾಕಷ್ಟು ಸಾವು- ನೋವುಗಳನ್ನು ಅನುಭವಿಸಿದೆ. ಈಗ ಇದೇ ಮಾದರಿಯಲ್ಲಿ ಮತ್ತೊಂದು ಮಾರಕ ವೈರಸ್ ಚೀನಾದಲ್ಲಿ ಪತ್ತೆಯಾಗಿದೆ. ಹೀಗಾಗಿ, ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಜಹೊರಡಿಸಲಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ಚೀನಾ ವೈರಸ್‌ನಿಂದಾಗುವ ರೋಗವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ತಜ್ಞರ ನೇತೃತ್ವದಲ್ಲಿ ಸಭೆ ನಡೆಸಲು ಮುಂದಾಗಿದೆ.

ರಾಜ್ಯಕ್ಕೆ ಮತ್ತೆ ಚೀನಾ ಸೋಂಕಿನ ಆತಂಕ ಶುರುವಾಗಿದೆ. ಚೀನಾ ನಿಗೂಢ ವೈರಸ್ ಬೆನ್ನಲ್ಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ರಾಜ್ಯದಲ್ಲಿ ಆಸ್ಪತ್ರೆಗಳನ್ನ ಸನ್ನದ್ಧವಾಗಿಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಸ್ಪತ್ರೆಗಳಲ್ಲಿ ,ಜ್ವರಕ್ಕೆ ಸಂಬಂಧಿಸಿದ ಔಷಧ, ಲಸಿಕೆ, ಆಕ್ಸಿಜನ್, ಆ್ಯಂಟಿಬಯೋಟಿಕ್, ಪಿಪಿಇ ಕಿಟ್ ಹಾಗೂ ವೈರಸ್ ಟೆಸ್ಟ್ ಕಿಟ್ ಸಜ್ಜಾಗಿಡಲು ಸೂಚನೆ ನೀಡಲಾಗಿದೆ. ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಸೋಂಕು ಹೆಚ್ಚಳವಾಗಿದೆ. ಚೀನಾದಲ್ಲಿ ಎಲ್ಲ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿರುವ ಬೆನ್ನಲ್ಲಿಯೇ, ನಮ್ಮ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. 

Tap to resize

Latest Videos

ಅಮೇರಿಕಾದಲ್ಲಿ ಡೇಂಜರಸ್ ವಾಂಪೈರ್ ವೈರಸ್ ಪತ್ತೆ; ಇದ್ರಿಂದ ತಿನ್ನೋಕೆ ಆಹಾರಾನೇ ಸಿಗದಂತೆ ಆಗ್ಬೋದು!

ಈಗ ಪತ್ತೆಯಾಗಿರುವ ಮಾರಕ ವೈರಸ್‌ ಇನ್ ಫ್ಲುಯೆಂಜಾ ಮಾದರಿ ಜ್ವರ ಹಾಗೂ ಗಂಭಿರ ಸ್ವರೂಪದ ಉಸಿರಾಟತೊಂದರೆಯನ್ನು ಉಂಟುಮಾಡಲಿದೆ. ಆದ್ದರಿಂದ ದೀರ್ಘಕಾಲಿಕ ರೋಗಗಳಿಂದ ಬಳಲುವವರ (ಕೋಮಾರ್ಬಿಟೀಸ್) ಪ್ರಕರಣಗಳ ಮೇಲೆ‌ ಹೆಚ್ಚು ನಿಗಾವಹಿಸಲು ಸರ್ಕಾರ ಸೂಚನೆ ನೀಡಿದೆ. ಈ ವೈರಸ್‌ ಕೂಡ ಕೊರೊನಾ ವೈರಸ್‌ನ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನು ಸಜ್ಜಾಗುವಂತೆ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲನೆಗೆ ಸೂಚಿಸಲಾಗಿದೆ.

ಹೊಸ ಸೋಂಕಿನ ನಿಯಂತ್ರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಸಭೆ: ರಾಜ್ಯದಲ್ಲಿ ಚೀನಾದ ಹೊಸ ಸೋಂಕಿನ ಆತಂಕ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ವೈರಾಣು ತಜ್ಞ ಡಾ.ರವಿ ನೇತೃತ್ವದಲ್ಲಿ ಇಂದು ಸಂಜೆ ವರ್ಚುವಲ್ ಮೂಲಕ ಇಂದು ತಾಂತ್ರಿಕ ಸಲಹಾ ಸಮಿತಿಯನ್ನು ಕರೆಯಲಾಗಿದೆ. ವೈರಸ್ ಭೀತಿ ಹಿನ್ನಲೆ ರಾಜ್ಯದಲ್ಲಿ ಹೊಸ ಗೈಡ್ ಲೈನ್ಸ್ ಬಿಡುಗಡೆ ಸಾಧ್ಯತೆಯಿದೆ. ರಾಜ್ಯದಲ್ಲಿಯೂ ಹೆಚ್ಚಾಗಿರುವ ಉಸಿರಾಟದ ತೊಂದರೆ, ಜ್ವರ, ಕೆಮ್ಮು ಸೇರಿದಂತೆ ಸಾಂಕ್ರಾಮಿಕ ಖಾಯಿಲೆ ನಿಯಂತ್ರಣಕ್ಕೆ ಸಭೆ ಮಾಡಲಾಗುತ್ತಿದೆ.

ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?

ಇಂದು ಸಂಜೆ 4 ಗಂಟೆಗೆ ಆರೋಗ್ಯ ಸೌಧದಲ್ಲಿ ಸಭೆಯನ್ನು ಮಾಡಲಾಗುತ್ತದೆ. ಈ ಸಭೆಯ ಬಳಿಕ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಠಿಯಿಂದ ಮಾರ್ಗಸೂಚಿ ಬಿಡುಗಡೆ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ ಎಚ್ಚರಿಕೆಯ ನೀಡಲಾಗಿದೆ. ಸೂಕ್ತ ಮುನ್ನೇಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿಯಿಂದ ಮಹತ್ವದ ಸಭೆ ಮಾಡಲಾಗುತ್ತಿದೆ.

click me!