ಹಾಲು ಆರೋಗ್ಯಕ್ಕೆ ಒಳ್ಳೆಯದು ನಿಜ, ಆದ್ರೆ ಸಿಂಹಿಣಿ ಹಾಲು ಕುಡಿದ್ರೆ ಏನಾಗುತ್ತೆ?

By Roopa Hegde  |  First Published Apr 11, 2024, 3:50 PM IST

ಹಾಲು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಹಾಲು ಒಳ್ಳೇದು ಎನ್ನುವ ಕಾರಣಕ್ಕೆ ಸಿಂಹಿಣಿ ಹಾಲು ಕುಡಿದ್ರೆ ಏನಾಗುತ್ತೆ? ಸಿಂಹಿಣಿ ಹಾಲು ಆರೋಗ್ಯಕ್ಕೆ ಒಳ್ಳೆಯದಾ? ಇದ್ರಿಂದ ಲಾಭವೆಷ್ಟು, ನಷ್ಟವೆಷ್ಟು ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
 


ಹಾಲು ಆರೋಗ್ಯಕ್ಕೆ ಒಳ್ಳೆಯದು. ಚಿಕ್ಕ ಮಕ್ಕಳಿಂದ ಹಿಡಿಉದ ದೊಡ್ಡವರವರೆಗೆ ಎಲ್ಲರೂ ಹಾಲು ಸೇವನೆ ಮಾಡ್ತಾರೆ. ಭಾರತದಲ್ಲಿ ಆಕಳು, ಎಮ್ಮೆ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಹಾಲು ಕುಡಿಯೋದ್ರಿಂದ ಕ್ಯಾಲ್ಸಿಯಂ ಹೆಚ್ಚಾಗುವುದಲ್ಲದೆ ದೇಹಕ್ಕೆ ಶಕ್ತಿ ಬರುತ್ತದೆ ಎಂದು ಜನರು ನಂಬಿದ್ದಾರೆ. ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವರು ಹಾಲಿನ ಜೊತೆ ಬೇರೆ ವಿಶೇಷ ಪೌಷ್ಠಿಕ ಪಾನೀಯ ಸೇವನೆ ಮಾಡ್ತಾರೆ. ಎಷ್ಟು ಕಟುಮಸ್ತಾಗಿದೆ ದೇಹ ಅಂತಾ ನೀವು ಯಾರನ್ನಾದ್ರೂ ಹೊಗಳಿದ್ರೆ ನಾನು ಎಮ್ಮೆ ಹಾಲು ಕುಡಿದಿಲ್ಲ, ಸಿಂಹಿಣಿ ಹಾಲು ಕುಡಿದಿದ್ದೇನೆ. ಹಾಗಾಗಿಯೇ ಸಿಂಹದಂತ ಶಕ್ತಿ ಇದೆ ಅಂತ ತಮಾಷೆ ಮಾಡೋದನ್ನು ನೀವು ನೋಡ್ಬಹುದು. ವಾಸ್ತವವಾಗಿ ಅವರ್ಯಾರು ಸಿಂಹಿಣಿ ಹಾಲು ಕುಡಿದಿರೋದಿಲ್ಲ. 

ಸಿಂಹ – ಸಿಂಹಿಣಿ (Lioness) ಶಕ್ತಿಶಾಲಿ ಆಗಿರುವ ಕಾರಣ ಅವರ ಹಾಲು ನಮಗೆ ಶಕ್ತಿ ನೀಡುತ್ತದೆ ಅಂತಾ ನಾವು ಭಾವಿಸಿದ್ದೇವೆ. ಆದ್ರೆ ವಿಜ್ಞಾನ (Science) ದಲ್ಲಿ ಈ ಬಗ್ಗೆ ಯಾವುದೇ ದಾಖಲೆ ಇಲ್ಲ. ಸಿಂಹಿಣಿ ಹಾಲು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ ಎಂಬುದನ್ನು ವಿಜ್ಞಾನ ಒಪ್ಪುವುದಿಲ್ಲ. ಜನರು ಸುಮ್ಮನೆ ಹೇಳ್ತಾರೆಯೇ ವಿನಃ ಅವರು ನಿಜವಾಗಿಯೂ ಸಿಂಹಿಣಿ ಹಾಲನ್ನು ಕುಡಿದಿರೋದಿಲ್ಲ. ಸಿಂಹಿಣಿ ಹಾಲು (Milk) ಸೇವನೆ ಮಾಡೋದ್ರಿಂದ ಯಾವುದೇ ಆರೋಗ್ಯಕರ ಲಾಭವಿಲ್ಲ.

Latest Videos

undefined

ಮೂವತ್ತರ ವಯಸ್ಸಿನಲ್ಲಿ ಯುವಕರನ್ನು ಕಾಡೋ ಈ ಡೇಂಜರಸ್ ಕಾಯಿಲೆಗಳ ಬಗ್ಗೆ ಗೊತ್ತಿರಲಿ 

ವಿಜ್ಞಾನಿಗಳ ಪ್ರಕಾರ, ಸಿಂಹಿಣಿ ಮಾತ್ರವಲ್ಲ ಯಾವುದೇ ಪ್ರಾಣಿಯ ಕಚ್ಚಾ ಹಾಲನ್ನು, ಪಾಶ್ಚರೀಕರಿಸಿದ ಹಾಲನ್ನು ಕುಡಿಯೋದು ಯೋಗ್ಯವಲ್ಲ. ದನ, ಎಮ್ಮೆಯ ಕಚ್ಚಾ ಹಾಲನ್ನು ಕೂಡ ಕುಡಿಯಬಾರದು. 

ಸಿಂಹಿಣಿ ಹಾಲನ್ನು ನಿಜವಾಗಿ ಕುಡಿದಿರುವವರು ಸಿಗಲಿಕ್ಕಿಲ್ಲ. ಅದು ಕಾಡು ಪ್ರಾಣಿ. ಮಾಂಸಹಾರಿ ಪ್ರಾಣಿ. ಅದರ ಹಾಲು ಮನುಷ್ಯನಿಗೆ ಯೋಗ್ಯವಾಗಿರಲು ಸಾಧ್ಯವಿಲ್ಲ. ಸಿಂಹಿಣಿ ಹಾಲಿನಲ್ಲಿ ನಿಮಗೆ ಕೊಬ್ಬಿನಾಂಶ ಸಿಗೋದಿಲ್ಲ. ಪಾಲ್ಮಿಟಿಕ್, ಸ್ಟಿಯರಿಕ್, ಮೊನೊಸಾಚುರೇಟೆಡ್, ಪಾಲ್ಮಿಟಿಕ್, ಒಲೀಕ್ ಮತ್ತು ಕೊಬ್ಬಿನಾಮ್ಲ ಈ ಹಾಲಿನಲ್ಲಿ ಕಂಡು ಬರುತ್ತದೆ. 

ಸಿಂಹಿಣಿ ಹಾಲನ್ನು ಮನುಷ್ಯ ಸೇವನೆ ಮಾಡಿದ್ರೆ ಏನಾಗುತ್ತೆ? : 

ಹುಚ್ಚು : ಸಿಂಹಿಣಿ ಹಾಲನ್ನು ಯಾವುದೇ ವ್ಯಕ್ತಿ ಸೇವನೆ ಮಾಡಬಹುದು. ಸೇವನೆ ಮಾಡುವುದಕ್ಕಿಂತ ಮೊದಲು ಇರುವ ಒಂದೇ ಷರತ್ತೆಂದ್ರೆ ಆತನಿಗೆ ಸಿಂಹದ ಯಕೃತ್ತಿರಬೇಕು. ಸಿಂಹದ ಹಾಲು ಹೊಟ್ಟೆಯಲ್ಲಿ ಹೆಚ್ಚಿನ ಶಾಖವನ್ನು ಉತ್ಪತ್ತಿ ಮಾಡುತ್ತದೆ. ನೀವು ಒಂದು ಇಲ್ಲವೆ ಎರಡು ಚಮಚ ಹಾಲು ಸೇವನೆ ಮಾಡಿದ್ರೆ ಯಾವುದೇ ಅಪಾಯವಿಲ್ಲ. ಆದ್ರೆ ಅದಕ್ಕಿಂತ ಹೆಚ್ಚು ಹಾಲು ಸೇವನೆ ಮಾಡಿದಾಗ ಹೊಟ್ಟೆಯಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆ ವ್ಯಕ್ತಿ ಹುಚ್ಚನಾಗುವ ಅಪಾಯವಿರುತ್ತದೆ. ಅರ್ಧ ಚಮಚ ಸಿಂಹಿಣಿ ಹಾಲು ಸೇವನೆ ಮಾಡಿದ್ರೆ ಶಕ್ತಿ ಬರುತ್ತೆ ಎನ್ನುವ ಮಾತೂ ಇದೆ. ಎರಡಕ್ಕಿಂತ ಹೆಚ್ಚು ಹಾಲನ್ನು ಸೇವನೆ ಮಾಡಿದ್ರೆ ಜೀರ್ಣಿಸಿಕೊಳ್ಳೋದು ಕಷ್ಟ. ಸರಿಯಾಗಿ ಜೀರ್ಣವಾಗದೆ ವ್ಯಕ್ತಿ ಸಾಯುವ ಅಪಾಯವೂ ಇದೆ. 

ಇಲ್ಲಿ ಹಾಲನ್ನು ಸಂಗ್ರಹಿಸಿ : ಸಿಂಹಿಣಿ ಹಾಲಿನ ಬಗ್ಗೆ ಕೆಲ ಮೂಢ ನಂಬಿಕೆಯಿದೆ. ಸಿಂಹಿಣಿ ಹಾಲನ್ನು ಚಿನ್ನದ ಪಾತ್ರೆಯಲ್ಲಿ ಮಾತ್ರ ಇಡಬೇಕು ಎಂದು ಜನರು ನಂಬಿದ್ದಾರೆ. ಬೇರೆ ಲೋಹದ ಪಾತ್ರೆಯಲ್ಲಿಟ್ಟರೆ ಪಾತ್ರೆ ಒಡೆಯುತ್ತದೆ. ಅನೇಕ ರಾಜರು ಈ ಬಗ್ಗೆ ಪ್ರಯೋಗ ಮಾಡಿದ್ದಾರೆ. 

ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಇಂಥಾ ಆಹಾರ ತಿನ್ನೋಕೆ ಹೋಗ್ಬೇಡಿ!

ಸಿಂಹಿಣಿ ಮರಿಗಳಿಗೂ ಇದೆ ನಿಯಮ : ಸಿಂಹಿಣಿ ಹಾಲನ್ನು ಮರಿಗಳು ಕೂಡ ಮಿತಿಮೀರಿ ಸೇವನೆ ಮಾಡೋದಿಲ್ಲ. ಮರಿಗಳಿಗೆ ಹಲ್ಲು ಬರುವವರೆಗೆ ಅವು ಬೇಟೆಯಾಡುವವರೆಗೆ ಮಾತ್ರ ಸಿಂಹಿಣಿ ಹಾಲು ನೀಡುತ್ತದೆ. ಆ ನಂತ್ರ ಹಾಲು ನೀಡೋದನ್ನು ನಿಲ್ಲಿಸುತ್ತದೆ. ಸುಮಾರು ಏಳು ತಿಂಗಳು ಮಾತ್ರ ಸಿಂಹಿಣಿ ತನ್ನ ಮಗುವಿಗೆ ಹಾಲುಣಿಸುತ್ತದೆ. 

click me!