Medical Technology: ಗರ್ಭಾಶಯದ ಫೈಬ್ರಾಯ್ಡ್‌ ತೆಗೆಯಲು ಸರ್ಜರಿಗಿಂತ ಕೀಹೋಲ್‌ ಉತ್ತಮ: ಡಾ. ವಿದ್ಯಾ

Kannadaprabha News   | Asianet News
Published : Mar 04, 2022, 11:09 AM IST
Medical Technology: ಗರ್ಭಾಶಯದ ಫೈಬ್ರಾಯ್ಡ್‌ ತೆಗೆಯಲು ಸರ್ಜರಿಗಿಂತ ಕೀಹೋಲ್‌ ಉತ್ತಮ: ಡಾ. ವಿದ್ಯಾ

ಸಾರಾಂಶ

*  ಲ್ಯಾಪ್ರೋಸ್ಕೋಪಿಕ್‌ ಸರ್ಜರಿ ಆಯೋಜನೆ *  3 ಸಾವಿರ ಸರ್ಜನ್‌ ಭಾಗಿ *  ಶಸ್ತ್ರಚಿಕಿತ್ಸೆಗಳ ವಿಧಾನಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು   

ಬೆಂಗಳೂರು(ಮಾ.04):  ಬೆಂಗಳೂರಿನ ರಾಧಾಕೃಷ್ಣ ಮಲ್ಪಿಸ್ಟೆಷಾಲಿಟಿ ಹಾಸ್ಟಿಟಲ್‌ನಲ್ಲಿ(Radhakrishna Multispeciality Hospital) ಮಾರ್ಚ್‌ 6ರಂದು ಮಹಿಳಾ ರೋಗಿಗಳಿಗೆ ಗರ್ಭಾಶಯದ ಲ್ಯಾಪ್ರೊಸ್ಕೋಪಿಕ್‌ (Key Hole) ಸರ್ಜರಿ ಏರ್ಪಡಿಸಿದ್ದು, ದೇಶದ ವಿವಿಧ ಭಾಗಗಳಿಂದ ಮೂರು ಸಾವಿರಕ್ಕೂ ಹೆಚ್ಚು ಸರ್ಜನ್‌ಗಳು(Surgeons) ವೀಕ್ಷಣೆ ಮಾಡಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಿದ್ಯಾ ವಿ.ಭಟ್‌(Dr Vidya Bhat) ಹೇಳಿದ್ದಾರೆ.

ಗುರುವಾರ ವರ್ಚುವಲ್‌ ಮೂಲಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ರೋಗಿಗಳಲ್ಲಿನ(Women Patients) ಗರ್ಭಾಶಯ(Uterus) ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಲು ಲ್ಯಾಪ್ರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ(Surgery) ನಡೆಸಲು ಸರ್ಜನ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಾವು ಈ ತಿಳುವಳಿಕೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಝೈಡಸ್‌ ನ್ಯೂಟ್ರಿವಾ ಸಂಸ್ಥೆ ಸಹಯೋಗ ನೀಡಲಿದೆ ಎಂದು ತಿಳಿಸಿದರು.

ಬಂಜೆತನಕ್ಕೆ ಕಾರಣ ವಯಸ್ಸೊಂದೇಯಲ್ಲ, ಇವೂ ಆಗಬಹುದು ಕಾರಣ!

ವೈದ್ಯಕೀಯ ತಂತ್ರಜ್ಞಾನದಲ್ಲಿನ(Medical Technology) ಪ್ರಗತಿಯೊಂದಿಗೆ ಗರ್ಭಾಶಯ ಮತ್ತು ಗರ್ಭಾಶಯದಲ್ಲಿ ಬೆಳೆಯುವ ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಲು ಓಪನ್‌ ಸರ್ಜರಿಗಳಿಗಿಂತ ಲ್ಯಾಪ್ರೊಸ್ಕೋಪಿಕ್‌ (ಕೀಹೋಲ್‌) ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಲ್ಯಾಪ್ರೊಸ್ಕೋಪಿಯನ್ನು ರೂಢಿ ಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಚಿಕಿತ್ಸೆಯಿಂದ ರೋಗಿಗೆ ಕಡಿಮೆ ನೋವು, ಹೆದರಿಕೆ ಹಾಗೂ ಗಾಯದ ಸಮಸ್ಯೆಗಳು ಕಡಿಮೆ ಇರುತ್ತವೆ. ಚರ್ಮ ಮತ್ತು ಅಂಗಾಂಶಗಳನ್ನು ಕತ್ತರಿಸುವ ಪ್ರಮಾಣವು ಕಡಿಮೆ ಇರುತ್ತದೆ. ಆದೇ ರೀತಿ, ಶಸ್ತ್ರಚಿಕಿತ್ಸೆ ನಂತರ ರೋಗಿಯು ಬೇಗನೆ ಗುಣಮುಖರಾಗುವುದರಿಂದ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವ ಅವಧಿ ಕಡಿಮೆಯಾಗುತ್ತದೆ ಹಾಗೂ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ವಿವರಿಸಿದರು.

ಕೀ ಹೋಲ್‌ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ರಂಧ್ರ ಮಾಡುವ ಮೂಲಕ ಉಪಕರಣಗಳನ್ನು ಸೇರಿಸಲಾಗುತ್ತದೆ. ಇಂತಹ ಅತ್ಯಾಧುನಿಕ ಕಾರ್ಯವಿಧಾನಗಳ ಯಶಸ್ಸು ಸರ್ಜನ್‌ಗಳ ಅನುಭವ ಮತ್ತು ಪರಿಣತಿಯನ್ನು ಅವಲಂಬಿಸಿರುತ್ತದೆ. ಈ ಶಸ್ತ್ರಚಿಕಿತ್ಸೆಗಳು ಸರ್ಜನ್‌ಗಳ ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೆ ಪರ್ಯಾಯವಾಗಿ ಲ್ಯಾಪ್ರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿವೆ, ವೈದ್ಯರು ತಾವಿರುವ ಕಡೆಯಿಂದಲೇ ಈ ಶಸ್ತ್ರಚಿಕಿತ್ಸೆಗಳ ವಿಧಾನಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.

ಗರ್ಭಾಶಯವನ್ನು ಆರೋಗ್ಯಕರವಾಗಿಸಲು ಮಹಿಳೆಯರು ಏನು ತಿನ್ನಬೇಕು ?

ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

ವಾಷಿಂಗ್‌ಟನ್: ವೈದ್ಯಕೀಯ ಲೋಕದಲ್ಲಿ ಮೊದಲ ಪ್ರಯತ್ನವಾಗಿ  ವೈದ್ಯರು ಮನುಷ್ಯನಿಗೆ ಹಂದಿ ಹೃದಯ ಕಸಿ ಮಾಡಿ (Pig Heart) ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಘಟನೆ ಜ. 11 ರಂದು ನಡೆದಿತ್ತು. ಅಮೆರಿಕಾದ ಶಸ್ತ್ರಚಿಕಿತ್ಸಕರು 57 ವರ್ಷ ವಯಸ್ಸಿನ ವ್ಯಕ್ತಿಗೆ ತಳೀಯವಾಗಿ ಮಾರ್ಪಡಿಸಿದ (Genetically Modified) ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಇದು ವೈದ್ಯಕೀಯ ಲೋಕದ ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು  ಸಹಾಯ ಮಾಡಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು.

ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ಶುಕ್ರವಾರ ನಡೆಯಿತು ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ರೋಗಿಯ ಸಂಪೂರ್ಣ ಚೇತರಿಕೆಯ ಖಚಿತವಾಗಿಲ್ಲದಿದ್ದರೂ, ಇದು ಪ್ರಾಣಿಗಳಿಂದ ಮಾನವನ ಕಸಿ ಮಾಡುವಿಕೆಗೆ ಪ್ರಮುಖ ಮೈಲುಗಲ್ಲು ಆಗಿತ್ತು.. ರೋಗಿ ಡೇವಿಡ್ ಬೆನೆಟ್ (David Bennett) ಅವರಿಗೆ  ಮಾನವ ಅಂಗಾಂಗ ಕಸಿ ಮಾಡಲು ಅನರ್ಹ ಎಂದು ಪರಿಗಣಿಸಲಾಗಿತ್ತು.  ಅಂಗಾಂಗ ಸ್ವೀಕರಿಸಿವವರು ತುಂಬಾ ಕಳಪೆ ಆರೋಗ್ಯವನ್ನು ಹೊಂದಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಡೇವಿಡ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ನಾನ ಮಾಡುವಾಗ ದೇಹದ ಯಾವ ಭಾಗಕ್ಕೆ ಮೊದಲು ನೀರು ಸುರಿಯಬಾರದು ಯಾಕೆ?
ಹೆಚ್ಚಾಗ್ತಿರೋ ಹಾರ್ಟ್ ಅಟ್ಯಾಕ್, ಜಿಮ್ ಸೇರುವ ಮುನ್ನ ಈ ಟೆಸ್ಟ್ ಅಗತ್ಯ