Health Tips : ಮದುವೆಯಲ್ಲಿ ಹೊಟ್ಟೆತುಂಬ ಊಟ ಮಾಡುವಾಗ ಇದು ನೆನಪಿರಲಿ

Suvarna News   | Asianet News
Published : Mar 03, 2022, 06:11 PM IST
Health  Tips : ಮದುವೆಯಲ್ಲಿ ಹೊಟ್ಟೆತುಂಬ ಊಟ ಮಾಡುವಾಗ ಇದು ನೆನಪಿರಲಿ

ಸಾರಾಂಶ

ಮದುವೆ ಅಂದ್ಮೇಲೆ ಏಳೆಂಟು ವೆರೈಟಿ ತಿಂಡಿ ಇರ್ಲೇಬೇಕು. ರುಚಿ ರುಚಿ ಅಡುಗೆ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ಆರು ತಿಂಗಳ ಡಯಟನ್ನು ಒಂದು ಮದುವೆ ಊಟ ಹಾಳು ಮಾಡಿರುತ್ತೆ. ಸಿಕ್ಕಿದ್ದೆಲ್ಲ ತಿಂದು ಆಮೇಲೆ ಹೊಟ್ಟೆ ಹಿಡಿದುಕೊಳ್ಳುವವರು ಜಾಸ್ತಿ. ತಿಂದಾದ್ಮೇಲೆ ವೇಟ್ ನೋಡುವ ಬದಲು ಮದುವೆ ಊಟವನ್ನು ಎಚ್ಚರಿಕೆಯಿಂದ ಮಾಡಿದ್ರೆ ಸಮಸ್ಯೆ ಇರೋದಿಲ್ಲ.  

ಮದುವೆ (Marriage)ಯ ಸೀಸನ್ (Season) ಶುರುವಾಗ್ತಿದೆ. ಒಂದಾದ್ಮೇಲೆ ಒಂದರಂತೆ ಮದುವೆ ಆಮಂತ್ರಣ (Invitation) ನಿಮಗೆ ಬರುತ್ತೆ. ಹತ್ತಿರದ ಸಂಬಂಧಿ,ಸ್ನೇಹಿತರು,ದೂರದ ನೆಂಟರು ಹೀಗೆ ಅನೇಕ ಕಾರಣಗಳಿಗೆ ಈ ಮದುವೆ ಸಮಾರಂಭವನ್ನು ತಪ್ಪಿಸಿಕೊಳ್ಳಲು ನಿಮಗಾಗುವುದಿಲ್ಲ. ಕೆಲವರು ಮದುವೆ ಊಟ ಮಾಡಿದ್ರೆ ಹೊಟ್ಟೆ ಕೆಡುತ್ತೆ,ಆರೋಗ್ಯ ಹದಗೆಡುತ್ತೆ ಎನ್ನುವ ನೆಪ ಹೇಳಿ ಮದುವೆಗೆ ಹೋಗುವುದಿಲ್ಲ. ಆದ್ರೆ ಎಲ್ಲ ಮದುವೆ ಸಮಾರಂಭವನ್ನು ಈ ಕಾರಣ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮದುವೆ-ಪಾರ್ಟಿಯಲ್ಲಿ ಬಫೆ ಕಾಮನ್. ಹಿಂದಿನ ಕಾಲದಲ್ಲಿ ಮದುವೆಯೆಂದ್ರೆ ಕೆಲವೇ ಕೆಲವು ತಿಂಡಿಗಳಿರುತ್ತಿದ್ದವು. ಈಗ ಹಾಗಲ್ಲ. ಮಸಾಲೆ ಪುರಿಯಿಂದ ಹಿಡಿದು ಬಗೆ ಬಗೆಯ ಸಿಹಿತಿಂಡಿ,ಕೊನೆಯಲ್ಲಿ ಐಸ್ ಕ್ರೀಂ ಕೂಡ ಸಿಗುತ್ತದೆ.  ಸ್ವಲ್ಪ ಹಸಿವು ಹೆಚ್ಚಾಗಿದ್ದರೆ ನಮಗೆ ತಿಳಿಯದೆ ಹೊಟ್ಟೆಗೆ ಎಲ್ಲವೂ ಸೇರಿರುತ್ತದೆ. ಅಪರೂಪಕ್ಕೆ ಹೀಗೆ ಸಿಕ್ಕಾಪಟ್ಟೆ ತಿಂದ್ರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ.

ಒಂದು ದಿನ ಮದುವೆ ಊಟ ಮಾಡಿ, ನಾಲ್ಕೈದು ದಿನ ಒದ್ದಾಡಬೇಕು. ಜೊತೆಗೆ ತೂಕ ಇಳಿಸಿಕೊಳ್ಳಲು ಹೆಚ್ಚಿನ ವ್ಯಾಯಾಮ ಮಾಡ್ಬೇಕು. ಜೀರ್ಣಾಂಗ ವ್ಯವಸ್ಥೆ ಹಾಳಾಗದಂತೆ,ತೂಕ ಹೆಚ್ಚಾಗದಂತೆ ಮದುವೆ ಊಟ ಸೇವನೆ ಮಾಡುವಾಗ ಎಚ್ಚರಿಕೆ ವಹಿಸ್ಬೇಕು. ಮದುವೆಗೆ ಹೋದಾಗ ಕೆಲವೊಂದು ಸರಳ ಟ್ರಿಕ್ಸ್ ಉಪಯೋಗಿಸಿ ಹಿತಮಿತವಾಗಿ ಆಹಾರ ಸೇವನೆ ಮಾಡ್ಬೇಕು. ಆಗ ಆರೋಗ್ಯ ಸರಿಯಾಗಿರುವ ಜೊತೆಗೆ ತೂಕ ಏರುವುದಿಲ್ಲ. ಹಾಗಿದ್ರೆ ಮದುವೆ ಮನೆಯಲ್ಲಿ ನಿಮ್ಮ ಊಟ ಹೇಗಿರಬೇಕು ಎಂಬುದನ್ನು ನಾವು ಹೇಳ್ತೇವೆ.

ಊಟಕ್ಕೆ ಬಳಸುವ ಪ್ಲೇಟ್ : ನಿಮಗೆ ವಿಚಿತ್ರವೆನ್ನಿಬಹುದು. ಪ್ಲೇಟ್ ಗೂ ಊಟಕ್ಕೂ ಏನು ಸಂಬಂಧವೆಂದು. ನೀವು ಚಿಕ್ಕ ಪ್ಲೇಟ್ ಬಳಸಿದ್ರೆ ಆಹಾರವನ್ನು ಸ್ವಲ್ಪ ಹಾಕಿಸಿಕೊಳ್ತೀರಿ. ಮತ್ತೆ ಹೋಗಿ ಆಹಾರ ಹಾಕಿಸಿಕೊಳ್ಳಲು ಸೋಮಾರಿತನ ಬರುತ್ತದೆ. ಆಗ ಅಷ್ಟಕ್ಕೆ ಊಟ ಮುಗಿಸ್ತೇವೆ. ಪ್ಲೇಟ್ ದೊಡ್ಡದಾಗಿದ್ದರೆ ಪ್ಲೇಟ್ ನಲ್ಲಿ ಹಿಡಿಯುವಷ್ಟು ಆಹಾರವನ್ನು ತುಂಬಿಸಿಕೊಂಡು ಬರ್ತೇವೆ. ಹಾಗೆಯೇ ಆಹಾರವನ್ನು ಗಡಿಬಿಡಿಯಲ್ಲಿ ಸೇವನೆ ಮಾಡ್ಬಾರದು. ನಿಧಾನವಾಗಿ ಅಗೆದು ಸೇವಿಸಬೇಕು. ಇದು ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ಮದುವೆ ಊಟ ನಿಮಗೆ ಹೆವಿ ಎನ್ನಿಸುವುದಿಲ್ಲ.

WORLD HEARING DAY: ಯಾವಾಗ್ಲೂ ಇಯರ್ ಫೋನ್ ಹಾಕ್ಕೊಳ್ತೀರಾ ? ಕಿವಿಯೇ ಕೇಳಲ್ಲ ಹುಷಾರ್..!

ಊಟಕ್ಕೆ ಮೊದಲು ಸಲಾಡ್  : ಒಂದು ದಿನದ ಊಟ ಕೂಡ ನಿಮ್ಮ ತೂಕದ ಮೇಲೆ ಪ್ರಭಾವ ಬೀರುತ್ತದೆ. ತೂಕ ನಿಯಂತ್ರಣದಲ್ಲಿರಬೇಕೆಂದ್ರೆ ಊಟಕ್ಕೆ ಮೊದಲು ಸಲಾಡ್ ಅಥವಾ ಸೂಪ್ ಕುಡಿಯಬೇಕು. ಊಟಕ್ಕೂ ಮುನ್ನ ಸಲಾಡ್ ತಿಂದರೆ ಹೊಟ್ಟೆ ತುಂಬಿ ಆಹಾರ ಸೇವನೆ ಕಡಿಮೆಯಾಗುತ್ತದೆ.

ನೀರಿನ ಜೊತೆ ನಿಂಬು ಹಾಗೂ ಜೇನುತುಪ್ಪ : ಮದುವೆ ಊಟ ಮಾಡಿ ಮಾಡಿ ತೂಕ ಹೆಚ್ಚಾಗ್ತಿದೆ ಎಂದಾದ್ರೆ ಅಥವಾ ಮುಂದೆ ಸಾಕಷ್ಟು ಮದುವೆ ಮನೆಗಳಿಗೆ ಹೋಗೋದಿದೆ ಎನ್ನುವವರು ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬು ರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದು ಹೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆ ಸುಲಭವಾಗುತ್ತದೆ.ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ   ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.  

ಬಿಸಿ ನೀರಿನ ಸೇವನೆ : ಮದುವೆಯ ಆಮಂತ್ರಣ ಬರ್ತಿದ್ದು, ಸಮಾರಂಭಕ್ಕೆ ಹೋಗುವುದು ಅನಿವಾರ್ಯವಾಗಿದ್ದರೆ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ. ದೇಹವನ್ನು ಹೈಡ್ರೇಟ್ ಆಗಿಡಲು  ಪ್ರಯತ್ನಿಸಿ. ದಿನವಿಡೀ ಬೆಚ್ಚಗಿನ ನೀರು ಅಥವಾ ಒಣಗಿದ ಶುಂಠಿಯೊಂದಿಗೆ ಬೇಯಿಸಿದ ನೀರನ್ನು ಕುಡಿಯಿರಿ.

Benefits Of Crying: ನೀವೇಕೆ ಒಮ್ಮೆ ಮನಸ್ಸು ಬಿಚ್ಚಿ ಅಳಬಾರದು? ಅಳೋದಿಕ್ಕೆ ಐದು ಟಿಪ್ಸ್

ಮನಸ್ಸು ಮುಖ್ಯ: ಆಹಾರ ಸೇವನೆ ಮಾಡುವಾಗ ನಿಮ್ಮ ಮನಸ್ಸು ಕೂಡ ಮಹತ್ವದ ಪಾತ್ರವಹಿಸುತ್ತದೆ. ಗಿಲ್ಟ್ ನಲ್ಲಿ ಎಂದೂ ಆಹಾರ ಸೇವನೆ ಮಾಡಬಾರದು. ಕೃತಜ್ಞತೆಯೊಂದಿಗೆ ಆಹಾರ ಸೇವನೆ ಮಾಡ್ಬೇಕು. ನವವಧುವಿಗೆ ಆಶೀರ್ವಾದವನ್ನು ನೀಡಿ, ಯಾವುದೇ ಕಾರಣಕ್ಕೂ ಕ್ಯಾಲೋರಿ ಲೆಕ್ಕ ಹಾಕುತ್ತ ಆಹಾರ ಸೇವನೆ ಮಾಡ್ಬೇಡಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಿನ ಈ 7 ಅಭ್ಯಾಸಗಳು ವಯಸ್ಸಾಗೋದನ್ನ ನಿಧಾನಗೊಳಿಸುತ್ತೆ!
ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್