ಯಾವಾಗಲೂ ಸ್ಟ್ರೆಸ್ ಅನ್ನೋರ ಗಮನಕ್ಕೆ, ಆಯುರ್ದವೇದದಲ್ಲಿದೆ ಸಿಂಪಲ್ ಮದ್ದು

By Suvarna NewsFirst Published Nov 7, 2022, 5:12 PM IST
Highlights

ಆತಂಕದಲ್ಲಿರುವಾಗ ಮನಸ್ಸಿಗೆ ಏನೊಂದೂ ರುಚಿಸುವುದಿಲ್ಲ. ಜೀವನವೇ ದುಗುಡದಿಂದ ಕೂಡಿರುವಂತೆ ಭಾಸವಾಗುತ್ತದೆ. ಈ ಮನಸ್ಥಿತಿಯಿಂದ ಹೊರಬರಲು ಅನೇಕ ಆಯುರ್ವೇದ ಪದಾರ್ಥಗಳು ಸಹಕಾರಿ. ಇವುಗಳ ನಿಯಮಿತ ಬಳಕೆಯಿಂದ ಆತಂಕದಿಂದ ಸುಲಭವಾಗಿ ಹೊರಬರಲು ಸಾಧ್ಯ.
 

ಸದಾಕಾಲ ಏನೋ ಒಂದು ರೀತಿಯ ಹಿಂಸೆ. ಖುಷಿಯಾಗಿರಲು ಸಾಧ್ಯವಾಗದ ಚಡಪಡಿಕೆ. ಏನೋ ದುಗುಡ, ಖುಷಿಯಾಗಿ ಇರಲು ಸಾಧ್ಯವಾಗದ ಕಿರಿಕಿರಿ. ಒತ್ತಡಕ್ಕೆ ಒಳಗಾದ ಭಾವನೆ. ಸರಿಯಾಗಿ ನೋಡಿದರೆ ದಿನದಲ್ಲಿ ಹೆಚ್ಚು ಕೆಲಸ ಮಾಡಿಲ್ಲವೆಂದಾದರೂ ಅತಿಯಾಗಿ ಕೆಲಸ ಮಾಡಿ ಸುಸ್ತಾದ ಭಾವನೆ... ಇವೆಲ್ಲ ಎಲ್ಲರಿಗೂ ಒಂದಲ್ಲ ಒಮ್ಮೆ ಸಹಜವಾದ ಭಾವನಾತ್ಮಕ ಏರಿಳಿತಗಳು. ಅದರಲ್ಲೂ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮೀಪಿಸುತ್ತಿರುವ ಹಾಗೆ ಇಂಥವೆಲ್ಲ ಮನೋಸ್ಥಿತಿ ಉಂಟಾಗುವುದು ಅತ್ಯಂತ ಸಹಜ. ಇದಕ್ಕೆ ಹಾರ್ಮೋನ್ ಸ್ರವಿಕೆಯಲ್ಲಾಗುವ ವ್ಯತ್ಯಾಸವೇ ಪ್ರಮುಖ ಕಾರಣ. ಆದರೆ, ನಿರಂತರವಾಗಿ ಇಂಥದ್ದೇ ಮನಸ್ಥಿತಿ ಇದ್ದರೆ ವ್ಯಕ್ತಿ ಸಂತಸದಿಂದ ಇರಲು ಸಾಧ್ಯವೇ ಆಗುವುದಿಲ್ಲ. ಇದನ್ನೇ ಆತಂಕದ ಮನೋಸ್ಥಿತಿ ಎಂದು ಕರೆಯಲಾಗಿದೆ. ಈ ಸ್ಥಿತಿಯಲ್ಲಿ ನಿರ್ದಿಷ್ಟ ಕಾರಣವೇ ಇಲ್ಲದೆ ದುಗುಡವಾಗುತ್ತಿರುತ್ತದೆ. ಚಿಕ್ಕಪುಟ್ಟದಕ್ಕೆಲ್ಲ ತಲೆ ಹೋಗುವ ಭಾವನೆ ಬರುತ್ತದೆ. ಮಿದುಳು ಈ ಸಮಯದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸೆರಟೋನಿನ್ ಹಾರ್ಮೋನ್ ಮಟ್ಟವನ್ನು ಹೊಂದಿರುತ್ತದೆ. ಒತ್ತಡಕ್ಕೆ ಮಿದುಳು ಸ್ಪಂದಿಸುವ ರೀತಿ ಇದು. ಕಾರಣವೇನೇ ಇರಲಿ, ಆತಂಕದ ಮನೋಭಾವ ಯಾರಿಗೂ ಸಂತಸ, ನೆಮ್ಮದಿ ನೀಡುವುದಿಲ್ಲ. 

ಭಾರತದ ಪುರಾತನ ಜೀವನವಿಧಾನವಾಗಿರುವ ಆಯುರ್ವೇದದಲ್ಲಿ (Ayurveda) ಆತಂಕದ (Anxiety) ಮನಸ್ಥಿತಿಗೆ ಉತ್ತಮ ಪರಿಹಾರಗಳಿವೆ. ದೈಹಿಕ ಅನಾರೋಗ್ಯ ಮಾತ್ರವಲ್ಲ, ಹಲವು ರೀತಿಯ ಮಾನಸಿಕ ಸಮಸ್ಯೆಗಳಿಗೂ (Mental Problem) ಆಯುರ್ವೇದಲ್ಲಿ ಪರಿಹಾರಗಳು (Remedies) ಲಭ್ಯ. ಜೀವನವಿಧಾನವನ್ನು ಬದಲಿಸಿಕೊಳ್ಳುವ ಜತೆಗೆ ಆಹಾರದಲ್ಲೇ ಅನಾರೋಗ್ಯವನ್ನು ಮಟ್ಟಿ ನಿಲ್ಲುವ ಮಾರ್ಗಗಳು ಆಯುರ್ವೇದಲ್ಲಿ ಸಾಕಷ್ಟಿವೆ. ಇತ್ತೀಚೆಗೆ, ಆಯುರ್ವೇದ ತಜ್ಞೆ ಡಿಂಪಲ್ ಜಂಗ್ದಾ ಎನ್ನುವವರು ಆತಂಕಕ್ಕೆ ಆಯುರ್ವೇದದ ಪರಿಹಾರಗಳನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದು ಗಮನ ಸೆಳೆಯುತ್ತದೆ. ಆತಂಕದ ಗುಣಲಕ್ಷಣಗಳನ್ನು ಮೆಟ್ಟಿನಿಲ್ಲಲು ಹಲವು ರೀತಿಯ ಮಾರ್ಗೋಪಾಯಗಳನ್ನು ಅವರು ತಿಳಿಸಿದ್ದಾರೆ. 

Strict Parenting Style: ಮಕ್ಕಳಲ್ಲಿ ಖಿನ್ನತೆಗೂ ಕಾರಣವಾಗ್ಬೋದು !

•    ತೈಲ (Oil)
ಕೆಲವು ರೀತಿಯ ತೈಲಗಳು ಆತಂಕ ಉಂಟಾಗದಂತೆ ನೋಡಿಕೊಳ್ಳುತ್ತವೆ. ಸಾರಭೂತ ತೈಲಗಳ ಬಳಕೆಯಿಂದ ಮನಸ್ಸಿಗೆ ಆಹ್ಲಾದ (Happy) ಉಂಟಾಗಿ ಆತಂಕ ದೂರವಾಗುವುದು ಸಾಬೀತಾಗಿದೆ. ಲ್ಯಾವೆಂಡರ್ ಸೇರಿದಂತೆ ಹಲವು ರೀತಿಯ ತೈಲಗಳು ಇಲ್ಲಿ ಪ್ರಯೋಜನಕಾರಿ. ಜತೆಗೆ, ತೆಂಗಿನ ಎಣ್ಣೆಯಿಂದ (Coconut Oil) ತಲೆಗೆ ಮಸಾಜ್ ಮಾಡುವುದು ಸಹ ಅತ್ಯುತ್ತಮ ಕ್ರಿಯೆ. ಹಿಂದೆಲ್ಲ ದಿನವೂ ಸಂಜೆ ತಲೆಗೆ ಎಣ್ಣೆ ಹಾಕಿ ತಟ್ಟುವ ಪದ್ಧತಿ ಇತ್ತು, ಇದು ಆತಂಕವನ್ನು ಕಡಿಮೆ ಮಾಡುತ್ತಿತ್ತು. 

•    ಅಶ್ವಗಂಧ (Ashwagandha) 
ಆಯುರ್ವೇದದ ಹಲವು ಔಷಧಗಳಲ್ಲಿ ಬಳಕೆಯಲ್ಲಿರುವ ಅತ್ಯುತ್ತಮ ಅಂಶ ಅಶ್ವಗಂಧ. ಇದು ಖಿನ್ನತೆ (Depression), ಒತ್ತಡ (Stress), ಆತಂಕವನ್ನು ದೂರ ಮಾಡುತ್ತದೆ. ನಿದ್ರಾಹೀನತೆ (Sleep Disorder) ಹೋಗಿಸಿ, ದೇಹದ ಉರಿಯೂತ, ಉಷ್ಣತೆ ಕಡಿಮೆ ಮಾಡಿ ಹಿತ ನೀಡುತ್ತದೆ. 

•    ಬ್ರಾಹ್ಮಿ (Brahmi)
ಬ್ರಾಹ್ಮಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ದಿನವೂ ಸ್ವಲ್ಪ ಬ್ರಾಹ್ಮಿ ರಸ ಸೇವಿಸುವ ಪದ್ಧತಿ ಬಹಳ ಹಿಂದಿನಿಂದಲೂ ಇರುವಂಥದ್ದು. ಇದು ಆತಂಕ, ಚಡಪಡಿಕೆ, ದುಗುಡವನ್ನು ಕಡಿಮೆ ಮಾಡುತ್ತದೆ. ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಹಾರ್ಮೋನ್ (Cortisol Hormone) ಪ್ರಮಾಣದ ಸ್ರವಿಕೆಗೆ ಕಡಿವಾಣ ಹಾಕುತ್ತದೆ. ಮಿದುಳಿನ ಕೋಶಗಳಿಗೆ ಶಕ್ತಿ ತುಂಬುತ್ತದೆ, ಏಕಾಗ್ರತೆ (Concentration) ಹೆಚ್ಚಿಸುತ್ತದೆ. 

Mental Health: ಈ ಕೆಲ ಅಭ್ಯಾಸ ಬಿಡದೇ ಇದ್ರೆ ನೀವೂ ಮಾನಸಿಕ ರೋಗಿ ಆಗ್ತೀರಿ, ಜೋಕೆ

•    ಉಷ್ಟ್ರಾಸನ (Camel Pose)
ಒಂಟೆ ಭಂಗಿಯಲ್ಲಿ ಕುಳಿತುಕೊಳ್ಳುವುದು ಆತಂಕ ನಿವಾರಣೆಗೆ ಸಹಕಾರಿ. ಇದನ್ನು ಒಬ್ಬರೇ ಅಭ್ಯಾಸ ಮಾಡುವುದಕ್ಕಿಂತ ತಜ್ಞರ ಸಲಹೆ ಪಡೆದುಕೊಂಡು ಮುಂದುವರಿಯುವುದು ಉತ್ತಮ.
ಒಂದೆಲಗ, ಜ್ಯೇಷ್ಠಮಧು, ನೆಲ್ಲಿಕಾಯಿ (Amla) ಮುಂತಾದವು ಸಹ ದೇಹ ಮತ್ತು ಮನಸ್ಸಿನ ಒತ್ತಡವನ್ನು ಶಮನಗೊಳಿಸುವ ಗುಣ ಹೊಂದಿವೆ. ಇಷ್ಟೇ ಅಲ್ಲ, ಕ್ಷೀರಬಲ ತೈಲದಂತಹ ವಿವಿಧ ಆಯುರ್ವೇದ ಔಷಧಗಳು ಹಲವು ರೀತಿಯ ಮಾನಸಿಕ ಸಮಸ್ಯೆಗೆ ಪರಿಣಾಮಕಾರಿ ಎನಿಸಿವೆ. 
 

click me!