ಕೋಮಾ ಸ್ಥಿತಿಗೆ ತಲುಪಿಯೂ ಬದುಕುಳಿದ ವ್ಯಕ್ತಿ!

By Kannadaprabha News  |  First Published Nov 7, 2022, 11:42 AM IST
  • ಕೋಮಾ ಸ್ಥಿತಿಗೆ ತಲುಪಿಯೂ ಬದುಕುಳಿದ ವ್ಯಕ್ತಿ!
  • ಫಲ ನೀಡಿದ ಭದ್ರಾವತಿ ಸರ್ಕಾರಿ ಆಸ್ಪತ್ರೆ ವೈದ್ಯರ ಚಿಕಿತ್ಸೆ
  • ಕುಟುಂಬಸ್ಥರಿಂದ ಕೃತಜ್ಞತೆ

ಭದ್ರಾವತಿ (ನ.7) : ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರ ಚಿಕಿತ್ಸೆಯೆಂದರೆ ಮೂಗು ಮುರಿಯುವವರೇ ಬಹಳಷ್ಟುಮಂದಿ. ಅಂಥವರಿಗೆ ಇಲ್ಲೊಂದು ಘಟನೆ ತಕ್ಕ ಉತ್ತರ ನೀಡುವಂತಿದೆ. ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ನೀಡಿದ ಚಿಕಿತ್ಸೆಯ ಪರಿಣಾಮ ಆತ ಪ್ರಾಣಾಪಾಯದಿಂದ ಪಾರಾಗಿರುವುದು ವಿಶೇಷ. ಇಲ್ಲಿಯ ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಗಳ ಮೇಲೆ ಹೊಂದಿರುವ ಒಳ್ಳೆಯ ಕಾಳಜಿ ಹಾಗೂ ಚಿಕಿತ್ಸೆಯ ಗುಣಮಟ್ಟಕ್ಕೆ ಸಾಕ್ಷಿಯೂ ಆಗಿದೆ.

ದೇಶದಲ್ಲೇ ಮೊದಲು ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ : ಮಂಗಳೂರು ವೈದ್ಯರ ಸಾಧನೆ

Latest Videos

undefined

ಮೂಲತಃ ತಾಲೂಕಿನ ಗೌರಾಪುರ ಶಿವನಿ ಕ್ರಾಸ್‌ ನಿವಾಸಿ ವಾಸುದೇವ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ತಮ್ಮ ಬಳಿ ಇದ್ದ ಹಣ, ಜಮೀನು ಸೇರಿದಂತೆ ಎಲ್ಲವನ್ನು ಮಾರಾಟ ಮಾಡಿದ್ದರು. ಸುಮಾರು .10 ಲಕ್ಷಕ್ಕೂ ಅಧಿಕ ಹಣ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿತ್ತು. ಆದರೂ ಗುಣಮುಖರಾಗಿರಲಿಲ್ಲ. ಬದಲಿಗೆ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಈಗ ಪವಾಡವೆಂಬಂತೆ ಯುವಕನೊಬ್ಬನ ಹೊಸ ಬದುಕಿಗೆ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗಿದೆ.

ಆಗಿದ್ದೇನು?:

23 ವರ್ಷದ ಶಿವನಿ ಕ್ರಾಸ್‌ ನಿವಾಸಿ ವಾಸುದೇವ (ಗುರು) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದಾರೆ. 8 ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ತಿಂಗಳು ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಅನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಯೂ ಯಾವುದೇ ರೀತಿ ಗುಣಮುಖ ಕಾಣದೇ ಕೋಮಾಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬದುಕುವುದು ಕಷ್ಟಎಂದು ಕೈ ಚೆಲ್ಲಿದ್ದರು. ದಿಕ್ಕು ತೋಚದೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.

ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ..!

ಸಾರ್ವಜನಿಕ ಆಸ್ಪತ್ರೆಗೆ ದಾಖಲು:

ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ.ಗಣೇಶ್‌ ರಾವ್‌ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು, ವೈದ್ಯರಿಗೆ ಕುಟುಂಬಸ್ಥರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಬಳಿಕ ಕೋಮಾಸ್ಥಿತಿಯಲ್ಲಿದ್ದ ವಾಸುದೇವನಿಗೆ ಹಳೇ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಆಸ್ಪತ್ರೆ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಉದರ ತಜ್ಞ ಡಾ. ಡಿ.ಎಸ್‌. ಶಿವಪ್ರಕಾಶ್‌, ಡಾ.ಮಂಜುನಾಥ್‌ ಮತ್ತು ಡಾ. ಕವಿತಾ ಅವರನ್ನು ಒಳಗೊಂಡ ವೈದ್ಯರ ತಂಡ 1 ತಿಂಗಳು 10 ದಿನಗಳವರೆಗೆ ನಿರಂತರವಾಗಿ ಚಿಕಿತ್ಸೆ ನೀಡಿದರು. ಈ ಮಧ್ಯೆ ಆಶ್ಚರ್ಯವೆಂಬಂತೆ ವಾಸುದೇವ ಅವರು ಕೋಮಾಸ್ಥಿತಿಯಿಂದ ಮರಳಿ ಸಂಪೂರ್ಣ ಚೇತರಿಕೆ ಹಂತಕ್ಕೆ ಬಂದರು. ಇದರಿಂದಾಗಿ ಕುಟುಂಬಸ್ಥರು ಮಾತ್ರವಲ್ಲ, ಇತರರು ಸಹ ಇಲ್ಲಿಯ ವೈದ್ಯರ ಕಾಳಜಿ ಹಾಗೂ ಚಿಕಿತ್ಸೆ ಪರಿಗೆ ಬೆರಗಾಗಿದ್ದಾರೆ. ಇದರಿಂದ ಸಂತಸ ಗೊಂಡಿರುವ ಕುಟುಂಬಸ್ಥರು ನೆರವಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

click me!