ದೈನಂದಿನ ಜೀವನದಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡ್ತೆವೆ. ಇದ್ರಿಂದ ಕಾಲು ನೋವು, ಬೆನ್ನು ನೋವು ಸೇರಿದಂತೆ ಅನೇಕ ನೋವುಗಳು ನಮ್ಮನ್ನು ಕಾಡುತ್ತವೆ. ಈ ನೋವಿನಿಂದ ಪರಿಹಾರ ಸಿಗ್ಬೇಕು ಅಂದ್ರೆ ಜೀವನಶೈಲಿ ಬದಲಿಸಿಕೊಳ್ಳಬೇಕು.
ಈ ದಿನಗಳಲ್ಲಿ ಕೀಲು ನೋವು ಪ್ರತಿಯೊಬ್ಬ ಯುವಕರನ್ನು ಕಾಡುತ್ತಿದೆ. ವೃದ್ಧಾಪ್ಯದಲ್ಲಿ ದೇಹವು ಹೆಚ್ಚಾಗಿ ದುರ್ಬಲವಾಗುವುದರಿಂದ ಕೀಲು ನೋವು ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಯೌವನದಲ್ಲಿಯೂ ಕೀಲು ನೋವು ಹೆಚ್ಚಾಗ್ತಿದೆ. ಕೆಲವು ತಪ್ಪು ಅಭ್ಯಾಸಗಳಿಂದ ಕೀಲು ನೋವು ಕಾಡುತ್ತದೆ. ಜೀವನಶೈಲಿಯನ್ನು ಸುಧಾರಿಸಿಕೊಂಡರೆ ಈ ಸಮಸ್ಯೆಯಿಂದ ಪಾರಾಗಬಹುದು. ನಾವಿಂದು ಕೀಲು ನೋವಿಗೆ ಕಾರಣವಾಗುವ ಕೆಲ ಅಭ್ಯಾಸಗಳು ಯಾವುವು ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.
ಈ ಅಭ್ಯಾಸ (Practice) ದಿಂದ ಕಾಡುತ್ತೆ ಕೀಲು (Joint) ನೋವು (Pain) :
ಮೊಬೈಲ್ (Mobile) ಫೋನ್ ಬಳಕೆ : ಕೀಲು ನೋವಿಗೆ ಮೊಬೈಲ್ ಫೋನ್ ಬಹುದೊಡ್ಡ ಕಾರಣ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಂದ ಮೇಲೆ ಈ ಸಮಸ್ಯೆ ಹೆಚ್ಚಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದರಿಂದ ಮಣಿಕಟ್ಟಿನ ಕೀಲು ನೋವು, ಬೆರಳಿನ ಕೀಲು ನೋವು, ಕುತ್ತಿಗೆ ನೋವು ಮುಂತಾದ ಸಮಸ್ಯೆಗಳು ಕಾಡುತ್ತವೆ. ಕೀಲು ನೋವಿನಿಂದ ಹೊರ ಬರಬೇಕು ಎಂದಾದ್ರೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಕಡಿಮೆ ಟೈಪಿಂಗ್ ಮಾಡಲು ಪ್ರಯತ್ನಿಸಿ. ಕುತ್ತಿಗೆ ಬಗ್ಗಿಸಿ ಅನೇಕ ಸಮಯ ಕೆಲಸ ಮಾಡುವುದ್ರಿಂದ ಬೆನ್ನು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕುತ್ತಿಗೆ ನೋವಿನ ಸಮಸ್ಯೆ ಉಂಟುಮಾಡುತ್ತದೆ. ಸರ್ವಿಕಲ್ ಸ್ಪಾಂಡಿಲೈಟಿಸ್ ನಂತಹ ಸಮಸ್ಯೆ ಎದುರಾಗಬಹುದು. ಹಾಗಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ದಿನದಲ್ಲಿ ಕೆಲವೇ ಸಮಯ ಮೊಬೈಲ್ ಬಳಸುವ ಅಭ್ಯಾಸ ರೂಢಿಸಿಕೊಳ್ಳಿ.
Weight Gain: ಚಳಿಯಲ್ಲೇ ತೂಕ ಹೆಚ್ಚೋದೇಕೆ ಹೇಳಿ?
undefined
ಸೂರ್ಯ (Sun ) ನ ಬೆಳಕಿಗೆ ಮೈ ಒಡ್ಡಬೇಕು : ಸೂರ್ಯನ ಬೆಳಕು ನಮ್ಮ ಆರೋಗ್ಯ (Health) ಕ್ಕೆ ಎಷ್ಟು ಮುಖ್ಯ ಎಂದು ತಿಳಿದಿದ್ದರೂ ಸೂರ್ಯನ ಬೆಳಕಿನಿಂದ ದೂರವಿರುವವರು ಹೆಚ್ಚು. ಸೂರ್ಯನ ಬೆಳಕಿಗೆ ಮೈ ಒಡ್ಡದೆ ಹೋದ್ರೆ ಕೀಲು ನೋವು ಕಾರಣವಾಗುತ್ತದೆ. ಬಿಸಿಲಿನಲ್ಲಿ ಕುಳಿತುಕೊಳ್ಳದೆ ಇದ್ದರೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಇದರಿಂದ ನಮ್ಮ ಮೂಳೆಗಳು ಮತ್ತು ಕೀಲುಗಳು ದುರ್ಬಲವಾಗುತ್ತವೆ. ಅಸ್ಥಿಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿದಿನ 20 ನಿಮಿಷಗಳ ಕಾಲ ಸೂರ್ಯನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಬೇಕು.
ವ್ಯಾಯಾಮ ಮಾಡದಿರುವುದು : ಎದ್ದ ನಂತರ ಸ್ವಲ್ಪ ಯೋಗ ಅಥವಾ ವ್ಯಾಯಾಮ ಮಾಡಬೇಕು. ಇದರಿಂದ ನಮ್ಮ ಸ್ನಾಯುಗಳು ಮತ್ತು ಕೀಲುಗಳು ಸರಿಯಾದ ಸ್ಥಾನಕ್ಕೆ ಬಂದು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತವೆ. ಆದರೆ ವ್ಯಾಯಾಮ ಮಾಡದಿರುವುದರಿಂದ ಕೀಲು ತಪ್ಪಾದ ಸ್ಥಿತಿಯಲ್ಲಿ ಉಳಿಯಲು ಪ್ರಾರಂಭಿಸುತ್ತದೆ. ಇದರಿಂದ ನೋವು ಪ್ರಾರಂಭವಾಗುತ್ತದೆ. ಬೆನ್ನುಮೂಳೆ ಮತ್ತು ಇತರ ಕೀಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಕೀಲುಗಳು ಮತ್ತು ಸ್ನಾಯುಗಳನ್ನು ಹೊಂದಿಕೊಳ್ಳುವಂತೆ ಮಾಡಲು ಪ್ರತಿದಿನ ಯೋಗ ಮಾಡಬೇಕು.
ಕುರ್ಚಿಯ ಮೇಲೆ ತಪ್ಪಾಗಿ ಕುಳಿತುಕೊಳ್ಳುವುದು : ಕಚೇರಿಯಲ್ಲಿ ಹಲವಾರು ಗಂಟೆಗಳ ಕಾಲ ಕುರ್ಚಿಯ ಮೇಲೆ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ರಾಂತಿ ಪಡೆಯಲು ವಿವಿಧ ಭಂಗಿಗಳಲ್ಲಿ ಕುಳಿತುಕೊಳ್ಳುತ್ತೇವೆ. ಇದು ನಮ್ಮ ಬೆನ್ನುಮೂಳೆಯ ಮೇಲೆ ತಪ್ಪು ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಕುತ್ತಿಗೆ, ಭುಜಗಳು, ಕೈಗಳು, ಸೊಂಟ ಮತ್ತು ಬೆರಳುಗಳಲ್ಲಿ ನೋವು ಕಾಡುತ್ತದೆ. ಕೆಲಸದ ಮಧ್ಯೆ ವಿಶ್ರಾಂತಿ ಮಾಡುವುದು ಬಹಳ ಮುಖ್ಯ. ಕುತ್ತಿಗೆ ವ್ಯಾಯಾಮ ಮಾಡಬೇಕು.
Winter Food: ಚಳಿಗಾಲದಲ್ಲಿ ಹೃದಯಾಘಾತ ಅಪಾಯ ತಪ್ಪಿಸಲು ಮೊಟ್ಟೆ ತಿನ್ನಿ
ತಪ್ಪಾದ ಬೂಟ್ ಧರಿಸಬೇಡಿ : ಎತ್ತರದ ಹಿಮ್ಮಡಿಯ ಬೂಟುಗಳು ಅಥವಾ ಸ್ಯಾಂಡಲ್ ಗಳನ್ನು ಧರಿಸುವುದರಿಂದ ಪಾದದ, ಮೊಣಕಾಲು ಮತ್ತು ಸೊಂಟದ ಕೀಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ದೀರ್ಘಕಾಲದವರೆಗೆ ಅಂತಹ ಬೂಟುಗಳನ್ನು ಧರಿಸಿದಾಗ ಹಾನಿಯಾಗುತ್ತದೆ. ಹಾಗಾಗಿ ಪ್ರತಿ ದಿನ ಆರಾಮದಾಯಕ ಬೂಟುಗಳನ್ನು ಧರಿಸಿ.