ದೊಡ್ಡವರು ಕಾಫಿ, ಟೀ ಕುಡಿಯುವಾಗ ಅದ್ರ ಸುವಾಸನೆ ಮಕ್ಕಳ ಮೂಗಿಗೆ ಬಿಡಿಯುತ್ತೆ. ಆಗಾಗ ಒಂದೊಂದು ಸಿಪ್ ಹೀರುವ ಮಕ್ಕಳಿಗೆ ಕೊನೆಯಲ್ಲಿ ಅದೇ ಅಭ್ಯಾಸವಾಗುತ್ತದೆ. ಟೀ – ಕಾಫಿ ಸೇವನೆ ಮಾಡುವ ಸಣ್ಣ ಮಕ್ಕಳ ಸಂಖ್ಯೆ ಸಾಕಷ್ಟಿದೆ. ನಿಮ್ಮ ಮಕ್ಕಳೂ ಟೀ, ಕಾಫಿ ಕುಡಿಯುತ್ತಿದ್ರೆ ಇಂದೇ ಈ ಚಟ ಬಿಡಿಸಿ. ಯಾಕೆ ಅಂತೀರಾ?
ಬಹತೇಕ ಭಾರತೀಯರ ದಿನ ಆರಂಭವಾಗುವುದೇ ಟೀ, ಕಾಫಿಯಿಂದ ಎಂದರೆ ತಪ್ಪಾಗದು. ಬೆಳಿಗ್ಗೆ ಎದ್ದೊಡನೆ ಬೆಡ್ ಕಾಫಿ, ಟೀ ಕುಡಿಯುವವರು ಕೆಲವರಾದರೆ, ಇನ್ಕೆಲವರು ತಿಂಡಿಯ ಜೊತೆಗೆ ಕುಡಿಯುತ್ತಾರೆ. ಇನ್ನು ಕಚೇರಿಗೆ ಹೋಗುವವರು ವಿರಾಮದ ವೇಳೆಯಲ್ಲೆಲ್ಲಾ ಟೀ, ಕಾಫಿ ಸೇವನೆ ಮಾಡುತ್ತಲೇ ಇರುತ್ತಾರೆ.
ಮನೆಯಲ್ಲಿ ಹಿರಿಯರ ಅಭ್ಯಾಸ (Practice) ಮಕ್ಕಳಿಗೂ ಸಹಜವಾಗಿ ಬರುತ್ತದೆ. ಮಕ್ಕಳು ಹಿರಿಯರನ್ನು ಅನುಸರಿಸುತ್ತಾರೆ. ಮನೆಯಲ್ಲಿ ಎಲ್ಲರಿಗೂ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದಾಗ ಮಕ್ಕಳಿಗೂ ತಾವು ಅದನ್ನು ಕುಡಿಯಬೇಕು. ಅದರ ಟೇಸ್ಟ್ (Taste) ಹೇಗಿರುತ್ತದೆ ಎಂದು ನೋಡಬೇಕು ಎನ್ನುವ ಆಸೆ ಮೂಡುತ್ತದೆ. ನಂತರ ಮಕ್ಕಳೂ ನಿಧಾನವಾಗಿ ಟೀ (Tea) ಕುಡಿಯಲು ಆರಂಭಿಸುತ್ತಾರೆ. ಕೆಲವು ಪಾಲಕರೇ ಮಕ್ಕಳಿಗೆ ಟೀ, ಕಾಫಿಯ ಅಭ್ಯಾಸ ಮಾಡಿಸುವುದೂ ಉಂಟು. ಹೀಗೆ ಮಕ್ಕಳು ಟೀ, ಕಾಫಿ ಸೇವನೆ ಮಾಡುವುದು ಅವರ ಆರೋಗ್ಯಕ್ಕೆ ಹಾನಿಕರ. ಏಕೆಂದರೆ ಇವುಗಳಲ್ಲಿರುವ ಟ್ಯಾನಿನ್ ಅಂಶವು ಮಕ್ಕಳ ಶರೀರ ಕ್ಯಾಲ್ಶಿಯಮ್ ಮತ್ತು ಐರನ್ ಹೀರಿಕೊಳ್ಳುವುದನ್ನು ತಡೆಯುತ್ತದೆ.
undefined
ಕರುಳು ಆರೋಗ್ಯ ಆಗಿರಬೇಕಂದ್ರೆ ಈ ಆಹಾರವನ್ನೆಲ್ಲಾ ತಿನ್ಲೇ ಬೇಡಿ!
ಕಾಫಿ ಮತ್ತು ಟೀ ಕುಡಿಯುವದರಿಂದ ಉಂಟಾಗುವ ನಷ್ಟಗಳು :
ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತೆ : ಮಕ್ಕಳು ಆರೋಗ್ಯವಂತರಾಗಿರಬೇಕೆಂದರೆ ಅವರಿಗೆ ರೋಗದ ವಿರುದ್ಧ ಹೋರಾಡುವ ಶಕ್ತಿ ಇರಬೇಕು. ಅನೇಕ ಪೌಷ್ಠಿಕ ಆಹಾರಗಳಿಂದ ಇಂತಹ ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ಮಕ್ಕಳು ಟೀ, ಕಾಫಿ ಸೇವನೆ ಮಾಡಿದಾಗ ಅವರಲ್ಲಿನ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದರಿಂದ ಜೀರ್ಣಕ್ರಿಯೆಯ ಮೇಲೂ ದುಷ್ಟರಿಣಾಮ ಬೀರುತ್ತದೆ. ಈ ಪಾನೀಯಗಳು ಮಕ್ಕಳ ಶರೀರವನ್ನು ಒಳಗಿನಿಂದಲೇ ಹಾಳುಮಾಡುತ್ತವೆ.
ಕ್ಯಾಲ್ಶಿಯಮ್, ಕಬ್ಬಿಣದ ಕೊರತೆ : ಟೀ ಕಾಫಿಯಲ್ಲಿರುವ ಟ್ಯಾನಿನ್ ಎಂಬ ಸಂಯುಕ್ತವು ಮಕ್ಕಳ ಶರೀರ ಕ್ಯಾಲ್ಶಿಯಮ್ ಮತ್ತು ಐರನ್ ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ. ಇದರಿಂದ ಮಕ್ಕಳಲ್ಲಿ ಕ್ಯಾಲ್ಶಿಯಮ್ ಮತ್ತು ಐರನ್ ಕೊರತೆ ಉಂಟಾಗುತ್ತದೆ. ಇದರಿಂದ ಮಕ್ಕಳ ದೇಹದಲ್ಲಿ ರಕ್ತವೂ ಕಡಿಮೆಯಾಗುತ್ತದೆ. ಮೂಳೆಗಳು ದುರ್ಬಲವಾಗಿ ಅಕಾಲಿಕ ಕೀಲು ನೋವು, ಸಂದುನೋವು ಮುಂತಾದವು ಕಾಣಿಸಿಕೊಳ್ಳುತ್ತವೆ.
ಆಲ್ಕೋಹಾಲ್ ಜೊತೆ ಸೋಡಾ, ಕೋಲ್ಡ್ ಡ್ರಿಂಕ್ಸ್ ಮಿಕ್ಸ್ ಮಾಡ್ತೀರಾ? ತಪ್ಪು ತಪ್ಪು
ಮೆದುಳಿನ ಆರೋಗ್ಯ ಹದಗೆಡುತ್ತೆ : ಟೀ, ಕಾಫಿಯನ್ನು ಹೆಚ್ಚು ಸೇವಿಸುವುದರಿಂದ ಮೆದುಳಿನ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಟೀ, ಕಾಫಿಗಳಲ್ಲಿ ಕೆಫೇನ್ ಇರುತ್ತದೆ. ಇದು ನಮ್ಮನ್ನು ಹೆಚ್ಚು ಸಮಯ ಕ್ರಿಯಾಶೀಲರಾಗಿರಲು ಸಹಾಯಮಾಡುತ್ತದೆ. ಈ ಕಾರಣದಿಂದಲೇ ನಿದ್ದೆಗೆಟ್ಟು ಕೆಲಸ ಮಾಡಬೇಕೆನ್ನುವವರು ಇದನ್ನು ಕುಡಿಯುತ್ತಾರೆ. ಟೀ, ಕಾಫಿಯಲ್ಲಿರುವ ಕೆಫೇನ್ ಮಕ್ಕಳ ಆರೋಗ್ಯವನ್ನು ಹದಗೆಡಿಸುತ್ತದೆ. ಮಕ್ಕಳು ಇದನ್ನು ಕುಡಿದಾಗ ಅವರಿಗೆ ನಿದ್ರೆಯ ತೊಂದರೆ, ಅವರ ವರ್ತನೆಯಲ್ಲಿ ಬದಲಾವಣೆ, ನಿದ್ರೆಯ ಕೊರತೆಯ ಕಾರಣದಿಂದ ಕಿರಿಕಿರಿ ಹಾಗೂ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಟೀ, ಕಾಫಿ ಸೇವನೆಯಿಂದ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.
ಎಸಿಡಿಟಿ ಸಮಸ್ಯೆ : ಮಿತಿಮೀರಿದ ಟೀ ಕಾಫಿ ಸೇವನೆಯಿಂದ ಕ್ಯಾವಿಟಿ ಮತ್ತು ಹೊಟ್ಟೆಯ ಸಮಸ್ಯೆಗಳು ಆರಂಭವಾಗುತ್ತವೆ. ಟೀ ಕಾಫಿಯಿಂದ ಉಂಟಾಗುವ ಹಸಿವಿನ ಕೊರತೆಯಿಂದ ಎಸಿಡಿಟಿ ಸಮಸ್ಯೆ ತಲೆದೋರುತ್ತದೆ. ಹಸಿವಾಗದೇ ಇರುವ ಮಕ್ಕಳು ಆಹಾರವನ್ನು ಕೂಡ ಸರಿಯಾಗಿ ಸೇವಿಸುವುದಿಲ್ಲ. ಇದರಿಂದ ಮಕ್ಕಳಿಗೆ ಸರಿಯಾದ ಪೋಷಕಾಂಶಗಳು ಸಿಗದೇ ಅವರ ಬೆಳವಣಿಗೆ ಕುಂಠಿತವಾಗುತ್ತದೆ.
ಕಾಫಿ, ಟೀ ಸೇವನೆ ಮಿತವಾಗಿರಲಿ : ಯಾವುದೇ ಆಹಾರವನ್ನಾದರೂ ನಾವು ಮಿತವಾಗಿ ಸೇವಿಸಿದರೆ ಅದರಿಂದ ನಮ್ಮ ಶರೀರಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗುವುದಿಲ್ಲ. ಅದೇ ರೀತಿ ಟೀ, ಕಾಫಿಯನ್ನು ಕೂಡ ಮಿತವಾಗಿ ಸೇವಿಸದರೆ ಅದರಿಂದ ಯಾವುದೇ ಅಪಾಯವಿಲ್ಲ. ಮಕ್ಕಳಿಗೆ ಒಂದು ವಾರಕ್ಕೆ 2 ಕಪ್ ಗೂ ಮೀರಿ ಟೀ, ಕಾಫಿಯನ್ನು ಕೊಡಬಾರದು. ಹಾಗೆಯೇ ಟೀ ಆಗಿರಲಿ ಅಥವಾ ಕಾಫಿಯಾಗಿರಲಿ, ಮಕ್ಕಳಿಗೆ ಅದನ್ನು ಕೊಡುವಾಗ ಅವು ಬಹಳ ಲೈಟ್ ಆಗಿರಲಿ. ಸ್ಟ್ರಾಂಗ್ ಆಗಿರುವ ಟೀ, ಕಾಫಿಯನ್ನು ಮಕ್ಕಳಿಗೆ ನೀಡಬೇಡಿ.