ಉಸಿರಾಡೋಕೆ ಕಷ್ಟವಾಗ್ತಿದ್ಯಾ ? ಟೆಸ್ಟ್ ಮಾಡ್ಕೊಳ್ಳಿ, ಪಲ್ಮನರಿ ಎಡಿಮಾ ಕಾಯಿಲೆಯೂ ಆಗಿರ್ಬೋದು

By Suvarna News  |  First Published Oct 6, 2022, 12:42 PM IST

ಓಡಾಡುವಾಗ, ನಿದ್ದೆ ಮಾಡುವಾಗ, ಕೆಲಸ ಮಾಡುವಾಗ ಕೆಲವೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಇದು ಸಾಮಾನ್ಯ ಸಮಸ್ಯೆಯೆಂದು ಹೆಚ್ಚಿನವರು ಸುಮ್ಮನಾಗಿ ಬಿಡುತ್ತಾರೆ. ಆದ್ರೆ ಆಗಾಗ ಈ ರೀತಿಯ ಉಸಿರಾಟದ ಸಮಸ್ಯೆ ಕಾಡ್ತಿದ್ರೆ ಇದು ಕಾಯಿಲೆನೂ ಆಗಿರ್ಬೋದು ಟೆಸ್ಟ್ ಮಾಡಿಸ್ಕೊಳ್ಳಿ.


ಇತ್ತೀಚಿಗೆ ಬದಲಾದ ಜೀವನಶೈಲಿಯಿಂದ ಹಲವಾರು ಹೊಸ ಹೊಸ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿಯೇ ಹೆಚ್ಚಿನವ್ರು ವಾಕಿಂಗ್‌ , ಜಾಗಿಂಗ್‌ ಮೊದಲಾದ ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೆ ಕೆಲವೊಬ್ಬರಿಗೆ ನಡೆಯುವಾಗಲೂ ಉಸಿರುಗಟ್ಟಿದಂತಾಗುತ್ತದೆ. ಉಸಿರಾಟದ ತೊಂದರೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರಿಗೆ ಹೆಚ್ಚು ಕೆಮ್ಮುವಾಗ, ಇನ್ನು ಕೆಲವೊಬ್ಬರಿಗೆ ನಡೆಯುವಾಗ, ಮತ್ತೆ ಹಲವರಿಗೆ ಓಡುವಾಗ, ಅಳುವಾಗ ಉಸಿರಾಡಲು ಕಷ್ಟವಾಗುತ್ತದೆ. ಉಸಿರು ಮೇಲಕ್ಕೆ ಹೋದಾಗ ಸಾಮಾನ್ಯವಾಗಿ ಒಮ್ಮೆಗೇ ಗಾಬರಿಯಾಗುವುದು ಸಹಜ. ನಮ್ಮಲ್ಲಿ ಹಲವರು ಉಸಿರಾಟದ ತೊಂದರೆ ಅನುಭವಿಸಿದಾಗ ವೈದ್ಯರನ್ನು ಸಂಪರ್ಕಿಸದೆಯೇ ಮನೆಮದ್ದುಗಳನ್ನು ಪ್ರಾರಂಭಿಸುತ್ತಾರೆ. ಆದರೆ ಈ ರೀತಿ ಮಾಡಲು ಹೋಗಬೇಡಿ. ಉಸಿರಾಟದ ತೊಂದರೆ ಕೆಲವೊಮ್ಮೆ ಜೀವಕ್ಕೇ ಸಂಚಕಾರವಾಗಬಹುದು. 

ಉಸಿರಾಟದ ತೊಂದರೆ (Breathe problem) ಹಲವಾರು ಕಾರಣಗಳಿಂದ ಉಂಟಾಗಬಹುದು. ಅದರ ಹಿಂದಿನ ಸರಿಯಾದ ಕಾರಣವನ್ನು ನಿರ್ಣಯಿಸಲು, ಒಬ್ಬರು ಅದರ ಸಂಭವಿಸುವಿಕೆಯನ್ನು ಮತ್ತು ಅದನ್ನು ಪ್ರಚೋದಿಸುವ ಚಟುವಟಿಕೆಗಳನ್ನು ಗಮನಿಸಬೇಕು. ಶ್ವಾಸಕೋಶದಲ್ಲಿ (Lungs) ನೀರು ತುಂಬಿಕೊಂಡಾಗಲೂ ಕೆಲವೊಮ್ಮೆ ಉಸಿರಾಡುವುದು ಕಷ್ಟವಾಗುತ್ತದೆ.

Tap to resize

Latest Videos

ನಡೆಯುವಾಗ ಉಸಿರಾಡೋಕೆ ಕಷ್ಟವಾಗುತ್ತದಾ ? ಏನ್ ಸಮಸ್ಯೆ ತಿಳ್ಕೊಳ್ಳಿ

ಶ್ವಾಸಕೋಶಗಳು ನಮ್ಮ ದೇಹದ (Body) ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ತುಂಬಾ ಸೂಕ್ಷ್ಮವಾದ ಭಾಗವೂ ಆಗಿದೆ. ನ್ಯುಮೋನಿಯಾ, ನೆಗಡಿ ಮತ್ತು ವಿಷದಂತಹ ಸಮಸ್ಯೆಗಳು ಶ್ವಾಸಕೋಶದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಕೆಲವರ ಶ್ವಾಸಕೋಶದಲ್ಲಿ ನೀರು ತುಂಬಿರುತ್ತದೆ. ಆದರೆ ಇದು ಅವರಿಗೆ ತಿಳಿದಿಲ್ಲ. ಶ್ವಾಸಕೋಶದಲ್ಲಿ ನೀರು (Water in Lungs) ತುಂಬುವುದನ್ನು ಪಲ್ಮನರಿ ಎಡಿಮಾ ಎಂದು ಕರೆಯಲಾಗುತ್ತದೆ. ಇದು ಅಪಾಯಕಾರಿ ರೋಗ. ಶ್ವಾಸಕೋಶದಲ್ಲಿ ನೀರು ತುಂಬಿರುವುದರ ಲಕ್ಷಣಗಳು ಯಾವುವು? ಇದಕ್ಕಾಗಿ ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ತಿಳಿಯೋಣ..

ಪಲ್ಮನರಿ ಎಡಿಮಾದ ಲಕ್ಷಣಗಳು
ಶ್ವಾಸಕೋಶದಲ್ಲಿ ನೀರು ತುಂಬಿಕೊಂಡರೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಪಲ್ಮನರಿ ಎಡಿಮಾದಿಂದ ಬಳಲುತ್ತಿದ್ದರೆ ವ್ಯಕ್ತಿ ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಎದೆಯಲ್ಲಿ ನೋವು (Chest pain) ಕಾಣಿಸಿಕೊಳ್ಳುತ್ತದೆ. ಚಡಪಡಿಕೆ, ಆತಂಕ, ಅತಿಯಾದ ಬೆವರುವಿಕೆ, ಕೆಮ್ಮು, ಹೆಚ್ಚಿದ ಹೃದಯ ಬಡಿತ (Heartbeat), ಉಸಿರಾಟದ ಸಮಯದಲ್ಲಿ ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆ ಹೆಚ್ಚಾದರೆ ಕಾಲುಗಳಲ್ಲಿ ಊತ ಸಹ ಕಾಣಿಸಿಕೊಳ್ಳುತ್ತದೆ.

ಯಾವ ರೀತಿಯ ಆಹಾರ ಸೇವಿಸಬೇಕು?
ಪಲ್ಮನರಿ ಎಡಿಮಾ ಸಮಸ್ಯೆ ಇದ್ದರೆ ಆರೋಗ್ಯಕರ ಆಹಾರ (Healthy food) ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ನಿರ್ದಿಷ್ಟವಾಗಿ ಹೇಳುವುದಾದರೆ, ಅವರ ಆಹಾರದಲ್ಲಿ ದಿನವಿಡೀ ಪೋಷಕಾಂಶಗಳಿವೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಹಸಿರು ತರಕಾರಿಗಳು (Vegetables), ತಾಜಾ ಹಣ್ಣುಗಳು, ಕಾಳುಗಳು, ಮೀನು, ಕೋಳಿ, ಮೊಟ್ಟೆ ಮತ್ತು ಒಣ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ನಿಂಬೆ, ಕರಿಮೆಣಸು ಮತ್ತು ಬೆಳ್ಳುಳ್ಳಿಯಂತಹ ಮಸಾಲೆಗಳನ್ನು ಸಹ ತೆಗೆದುಕೊಳ್ಳಬೇಕು.

ಕಲ್ಲು ಸಕ್ಕರೆ ಕೊಳ್ಳೀರೋ ನೀವೆಲ್ಲರೂ, ಉತ್ತಮ ಆರೋಗ್ಯಕ್ಕಾಗಿ!
 
ಯಾವ ರೀತಿಯ ಆಹಾರ ತಿನ್ನಬಾರದು
ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗುವುದರಿಂದ ಉಸಿರಾಟ ಕಷ್ಟವಾಗುತ್ತದೆ. ಈ ಸಮಯದಲ್ಲಿ ಉಪ್ಪು (Salt) ಸೇವನೆಯನ್ನು ಸಾಕಷ್ಟು ಕಡಿಮೆ ಮಾಡಬೇಕು. ಏಕೆಂದರೆ ಹೆಚ್ಚು ಸೋಡಿಯಂ ಸೇವಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಪಲ್ಮನರಿ ಎಡಿಮಾ ಸಮಸ್ಯೆ ಇರುವಾಗ ತಂಪು ಆಹಾರಗಳನ್ನು ಸೇವಿಸಬಾರದು. ಇದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ.

ಮದ್ಯಪಾನ ಮತ್ತು ಧೂಮಪಾನ ತ್ಯಜಿಸಬೇಕು
ಧೂಮಪಾನ (Alcohol) ಮತ್ತು ಮದ್ಯಪಾನ (Smoking) ಕೂಡಾ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಮತ್ತು ಶ್ವಾಸಕೋಶದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಧೂಮಪಾನ ಮತ್ತು ಔಷಧಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇವು ನಿಮ್ಮ ಆರೋಗ್ಯವನ್ನು ಮತ್ತಷ್ಟು ಹಾಳುಮಾಡುತ್ತವೆ. ನೀವು ಈ ಸಲಹೆಗಳನ್ನು ಅನುಸರಿಸಿದರೂ ಸಹ, ನಿಮ್ಮ ಆರೋಗ್ಯವು ಹದಗೆಟ್ಟಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

click me!