
ಎರಡು ವರ್ಷಗಳ ಕಾಲ ಜನರನ್ನು ಹೈರಾಣಾಗಿಸಿದ್ದ ಮಹಾಮಾರಿ ಕೊರೋನಾ ವೈರಸ್ (Corona virus) ಇನ್ನೇನು ಕಡಿಮೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ದೇಶಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯದ (Central Health ministry) ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 8,329 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ. ಇದು ಮೂರು ತಿಂಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಕಳೆದ 24 ಗಂಟೆಗಳಲ್ಲಿ 4,103 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 40,370 ಕ್ಕೆ ತೆಗೆದುಕೊಂಡಿದೆ.
ನಿನ್ನೆ ಮಹಾರಾಷ್ಟ್ರದಾದ್ಯಂತ 3,081 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿದ್ದು, 1,956 ಸೋಂಕುಗಳು ಮುಂಬೈನಲ್ಲಿ ಪತ್ತೆಯಾಗಿವೆ. ಜನವರಿ 23 ರಿಂದ ಮೊದಲ ಬಾರಿಗೆ, ಮುಂಬೈ ಶುಕ್ರವಾರ ಕೋವಿಡ್ -19 ಪ್ರಕರಣಗಳನ್ನು 1,956 ಕ್ಕೆ ದಾಖಲಿಸಿದೆ. ಇದು ಶೇಕಡಾ 15 ರಷ್ಟು ಏರಿಕೆಯಾಗಿದೆ, ಏಕೆಂದರೆ ನಗರದಲ್ಲಿ ಒಂದು ದಿನ ಮೊದಲು 1,702 ಪ್ರಕರಣಗಳು ವರದಿಯಾಗಿವೆ. ಹಲವು ರಾಜ್ಯಗಳಲ್ಲಿ ಸ್ಕೂಲ್, ಕಚೇರಿ, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ (Mask), ಸಾಮಾಜಿಕ ಅಂತರ (Social Distance)ವನ್ನು ಕಡ್ಡಾಯಗೊಳಿಸಲಾಗಿದೆ.
Covid Crisis: ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ: ಪ್ರತಿದಿನ 300ಕ್ಕೂ ಅಧಿಕ ಕೇಸ್
ಕೊರೋನಾ ನಾಲ್ಕನೆ ಅಲೆಯ ಭೀತಿ ಬೇಡವೆಂದ ಐಸಿಎಂಆರ್
ಜನರು ಕೊರೋನಾ ನಾಲ್ಕನೇ ಅಲೆಯ (Corona 4th Wave) ಅಪ್ಪಳಿಸುವ ಭೀತಿಯಲ್ಲಿದ್ದಾರೆ. ಆದ್ರೆ, ಕೋವಿಡ್ -19ರ ನಾಲ್ಕನೇ ಅಲೆ ಬರುತ್ತಿದೆ ಎಂದು ಹೇಳುವುದು ತಪ್ಪು ಎಂದು ಐಸಿಎಂಆರ್‌ನ (Indian Council of Medical Research) ಎಡಿಜಿ ಸಮೀರನ್ ಪಾಂಡಾ ಹೇಳಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳವಾಗಿರುವುದು ನಿಜ. ಹಾಗೆಂದು ಕೆಲವು ಜಿಲ್ಲೆಗಳಲ್ಲಿನ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನ ದೇಶಾದ್ಯಂತ ಏಕರೂಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಪಾಂಡಾ ಹೇಳಿದರು. ದೇಶದಲ್ಲಿ ಕಂಡುಬರುವ ಪ್ರತಿಯೊಂದು ರೂಪಾಂತರವು ಕಾಳಜಿಯ ರೂಪಾಂತರವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಮ್ಯಾಕ್ಸ್ ಹೆಲ್ತ್ಕೇರ್ನ ಆಂತರಿಕ ಔಷಧದ ನಿರ್ದೇಶಕ ಡಾ.ರೊಮೆಲ್ ಟಿಕೂ ಅವರು, 'ಭಾರತದಲ್ಲಿ ಕೊರೋನಾ ಪ್ರಕರಗಳು ಹೆಚ್ಚಾಗುತ್ತಿರುವುದು ನಿಜ. ಹಾಗೆಂದು ದೇಶದಲ್ಲಿ ಕೋವಿಡ್ -19 ರ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ' ಎಂದು ಹೇಳಿದರು. 'ಹಿಂದಿನ ರೂಪಾಂತರಗಳಿಗಿಂತ ವಿಭಿನ್ನ ಗುಣಲಕ್ಷಣಗಳನ್ನ ಹೊಂದಿರುವ ಹೊಸ ಕೋವಿಡ್-19 ರೂಪಾಂತರ ಎಲ್ಲಾದರೂ ಕಂಡು ಬರದ ಹೊರತು ಸ್ಪಷ್ಟವಾಗಿ ಭಾರತ ನಾಲ್ಕನೇ ಅಲೆಯ ಅಪಾಯದಲ್ಲಿದೆ ಎಂದು ಹೇಳುವುದು ಕಷ್ಟ' ಎಂದವರು ಹೇಳಿದರು.
ಮಾಸ್ಕ್ ಧರಿಸದ ಪ್ರಯಾಣಿಕರು ವಿಮಾನದಿಂದ ಔಟ್!
ಕೋವಿಡ್ -19 ಶಿಷ್ಟಾಚಾರ ಪಾಲಿಸುವಂತೆ ಸೂಚನೆ
ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಗಮನಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಆಯಾ ಆಡಳಿತಗಳು ಕೋವಿಡ್ -19 ಶಿಷ್ಟಾಚಾರದ ಅನುಸರಣೆಯನ್ನ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡು ಐದು ರಾಜ್ಯಗಳು ಪರೀಕ್ಷೆಗಳ ಸಂಖ್ಯೆಯನ್ನ ಹೆಚ್ಚಿಸಬೇಕು ಮತ್ತು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಸೋಂಕಿತ ವ್ಯಕ್ತಿಗಳ ಮಾದರಿಗಳನ್ನು ಕಳುಹಿಸಬೇಕು ಎಂದು ಭೂಷಣ್ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.