ಸಾಲ ಮಾಡಿಯಾದ್ರೂ ತುಪ್ಪ (Ghee) ತಿನ್ನು ಎನ್ನುವ ಗಾಧೆಯಿದೆ. ತುಪ್ಪಕ್ಕೆ ಅಷ್ಟು ಬೇಡಿಕೆಯಿದೆ. ತುಪ್ಪ ರುಚಿ (Taste) ಮಾತ್ರವಲ್ಲ ಆರೋಗ್ಯಕ್ಕೂ (Health) ಒಳ್ಳೆಯದು. ಎಮ್ಮೆ ತುಪ್ಪ ಹಾಗೂ ಆಕಳ ತುಪ್ಪ ಎರಡೂ ರುಚಿ ಹೆಚ್ಚು. ಆದ್ರೆ ಇದ್ರಲ್ಲಿ ಯಾವುದು ಬೆಸ್ಟ್ ಎಂಬುದು ನಿಮಗೆ ಗೊತ್ತಾ?
ಒಬ್ಬಟ್ಟಿ (Puran Poli) ನ ಮೇಲೆ ಬಿಸಿ ಬಿಸಿ ತುಪ್ಪ (Ghee) ಬಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನೋರಿದ್ದಾರೆ. ತುಪ್ಪ ವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ರೆ ಅದು ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನ (Benefit) ಕಾರಿ. ಈ ಕಾರಣಕ್ಕಾಗಿಯೇ ಆಹಾರದಲ್ಲಿ ತುಪ್ಪ ಸೇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಆಯುರ್ವೇದ (Ayurved) ದಲ್ಲಿ ತುಪ್ಪವನ್ನು ಶಕ್ತಿಯುತ ಆಹಾರ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ, ದಾಲ್, ಖಿಚಡಿಯಿಂದ ಹಿಡಿದು ಹಲ್ವಾ ಮತ್ತು ಚಪಾತಿಯವರೆಗೆ ಎಲ್ಲದಕ್ಕೂ ತುಪ್ಪ ತಿನ್ನುತ್ತಾರೆ. ಪರಿಷ್ಕರಿಸಿದ ಎಣ್ಣೆಗಳಿಗಿಂತ ತುಪ್ಪದಿಂದ ಅಡುಗೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ.
ತುಪ್ಪ ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್ ಗಳನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಸಹಕಾರಿ. ತುಪ್ಪವು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಒಟ್ಟಾರೆ ಉತ್ತಮ ಆರೋಗ್ಯಕ್ಕೆ ತುಪ್ಪ ಬೇಕು. ಇದು ಚರ್ಮ, ಕೂದಲು, ಮೆದುಳು, ತೂಕ ಇಳಿಕೆ, ಬಲವಾದ ಮೂಳೆ ಸೇರಿದಂತೆ ಅನೇಕ ಆರೋಗ್ಯದ ಗುಣವನ್ನು ಹೊಂದಿದೆ. ತುಪ್ಪವನ್ನು ಎಮ್ಮೆ ಅಥವಾ ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ ಹಸು ಅಥವಾ ಎಮ್ಮೆ ಇವರೆಡರಲ್ಲಿ ಯಾವುದರ ತುಪ್ಪ ಉತ್ತಮ ಎಂಬ ಪ್ರಶ್ನೆ ಯಾವಾಗಲೂ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆಹಾರದಲ್ಲಿ ಪೋಷಕಾಂಶ ಹಾಗೆಯೇ ಇರಬೇಕಾದ್ರೆ ಅಡುಗೆ ಮಾಡೋವಾಗ ಈ ಟಿಪ್ಸ್ ಫಾಲೋ ಮಾಡಿ
ತುಪ್ಪದ ಪೋಷಕಾಂಶಗಳು : ತುಪ್ಪ ಪೋಷಕಾಂಶಗಳ ಉಗ್ರಾಣವಾಗಿದೆ. ಹಸುವಿನ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಹೇರಳವಾಗಿದೆ. ಇದು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಇದು ಹೃದಯ ಮತ್ತು ಕೆಲ ಕ್ಯಾನ್ಸರ್ ತಡೆಯಲು ಸಹಕಾರಿಯಾಗಿದೆ.
ಹಸುವಿನ ತುಪ್ಪದ ಪ್ರಯೋಜನಗಳು : ಹಸುವಿನ ತುಪ್ಪವು ಹಳದಿ ಬಣ್ಣದ್ದಾಗಿರುತ್ತದೆ. ಹಲವಾರು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದರಲ್ಲಿ ಅತಿ ಕಡಿಮೆ ಪ್ರಮಾಣದ ಕೊಬ್ಬು ಕಂಡುಬರುತ್ತದೆ. ಇದು ಮಕ್ಕಳು ಮತ್ತು ವಯಸ್ಕರಲ್ಲಿ ತೂಕವನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಮ್ಮೆ ತುಪ್ಪದ ಪ್ರಯೋಜನಗಳು : ಎಮ್ಮೆ ತುಪ್ಪವು ಬಿಳಿ ಬಣ್ಣದ್ದಾಗಿರುತ್ತದೆ. ಹಸುವಿನ ತುಪ್ಪದಷ್ಟು ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿಲ್ಲ ಎನ್ನುತ್ತಾರೆ ವೈದ್ಯರು. ಆದ್ರೆ ಇದ್ರಲ್ಲೂ ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಅಂಶಗಳು ಕಂಡು ಬರುತ್ತವೆ. ಇದರಲ್ಲಿ ಕೊಬ್ಬಿನ ಅಂಶವೂ ಅಧಿಕವಾಗಿರುತ್ತದೆ.
Health Care: ಟೀ ಚಟ ಬಿಡೋದು ಸುಲಭ ಅಲ್ಲ ಸ್ವಾಮಿ
ಆಯುರ್ವೇದದಲ್ಲಿ ತುಪ್ಪವನ್ನು ತಿನ್ನುವ ಪ್ರಯೋಜನಗಳು : ಆಯುರ್ವೇದದ ಪ್ರಕಾರ, ತುಪ್ಪ ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ಸಪ್ತ ಧಾತುಗಳ ರಚನೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾದ ಎ, ಇ ಮತ್ತು ಡಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಉಲ್ಬಣಗೊಳ್ಳುವ ವಾತ, ಪಿತ್ತ ಮತ್ತು ಕಫ ದೋಷಗಳನ್ನು ಸಹ ಕಡಿಮೆ ಮಾಡುತ್ತದೆ.
ಗರಿಷ್ಠ ಪ್ರಯೋಜನಗಳನ್ನು ಪಡೆಯಲು ತುಪ್ಪವನ್ನು ಹೇಗೆ ತಿನ್ನಬೇಕು ? : ತುಪ್ಪವನ್ನು ತಿನ್ನಲು ಹಲವು ಮಾರ್ಗಗಳಿವೆ. ಆದರೆ ತುಪ್ಪದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸರಳವಾದ ಉತ್ತರವೆಂದರೆ ನೀವು ಅದನ್ನು ನಿಮ್ಮ ತರಕಾರಿ, ರೊಟ್ಟಿ ಅಥವಾ ದಾಲ್ ಜೊತೆ ಸೇರಿಸಿ ತಿನ್ನುತ್ತೀರಿ. ಇದಲ್ಲದೆ ಹಾಲಿನೊಂದಿಗೆ ತುಪ್ಪ ಸೇರಿಸಿ ಸೇವನೆ ಮಾಡ್ಬಹುದು.