ಎರಡು ಪಿಂಟ್ ಬಿಯರ್ ಹೀರಿದರೆ ನಿಮ್ಮ ಮೈ ಕೈ ನೋವೆಲ್ಲ ಮಂಗಮಾಯ! ಪ್ಯಾರಾಸಿಟಮಾಲ್ ಅಗತ್ಯವೇ ಇಲ್ಲ! ಇದು ಲಂಡನ್‌ನ ಒಂದು ಸಂಶೋಧನೆ.
ಮೈ ಕೈ ಎಲ್ಲಾ ನೋವೇ? ಎರಡು ಪಿಂಟ್ ಬಿಯರ್ ತಗೊಳಿ! ಪ್ಯಾರಾಸಿಟಮಾಲೂ ಬೇಡ, ಏನೂ ಬೇಡ!
ಹೀಗೆ ನಿಮ್ಮ ಡಾಕ್ಟರ್ ಹೇಳಿದರೆ ಆಶ್ಚರ್ಯ ಪಡಬೇಡಿ. ಆ ಡಾಕ್ಟರ್ ಸಂಜೆ ಗುಟ್ಟಾಗಿ ಒಂದೆರಡು ಪಿಂಟ್ ಬೀರ್ ಹೀರುವ ಬೀರ್‌ಬಲ್ಲ ಆಗಿರಬಹುದು. ಆದರೆ ಅವರು ಹೇಳುವ ಮಾತಿನಲ್ಲಿ ಯಾವ ಸುಳ್ಳೂ ಇಲ್ಲ. ಇದು ಈಗ ಸಂಶೋಧನಕಾರರೇ ಸಮೀಕ್ಷೆಯಿಂಧ ಪಡೆದ ಅಂಕಿ ಅಂಶಗಳ ಸಮೇತ ಸಾಬೀತುಪಡಿಸಿರುವ ಅಂಶ.
ಇದು ಇಂಗ್ಲೆಂಡ್‌ನ ಯುನಿವರ್ಸಿಟಿ ಆಫ್ ಗ್ರೀನ್‌ವಿಚ್‌ನ ಸಂಶೋಧಕರು ಮಾಡಿದ ಅಧ್ಯಯನದಿಂದ ಗೊತ್ತಾಗಿರುವ ವಿಚಾರ. ಸುಮಾರು 400 ಮಂದಿಯ ಮೇಲೆ, 18 ಬೇರೆ ಬೇರೆ ಸಮಯಗಳಲ್ಲಿ, ಸಂದರ್ಭಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಇಲ್ಲಿ ಗೊತ್ತಾಗಿರೋ ಅಂಶ ಎಂದರೆ ಎರಡು ಪಿಂಟ್ ಬಿಯರ್ ಹೀರಿದರೆ ನಿಮ್ಮ ನೋವು ಕಾಲು ಭಾಗ ಅಂದರೆ ಶೇ.25 ಕಡಿಮೆಯಾಗುತ್ತೆ ಅನ್ನೋದು. ಹಾಗಾದರೆ ಎಂಟು ಪಿಂಟ್ ಬಿಯರ್ ಹೀರಿದರೆ ನೋವು ಸಂಪೂರ್ಣ ಮಾಯ ಆಗಬಹುದಾ? ಎಂಬ ತರಲೆ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ನಾವೇನೂ ಹೇಳೋಕಾಗಲ್ಲ. ಬಹುಶಃ ಆಗ ನೋವೆಲ್ಲಾ ಮಾಯವಾಗಿ ನೀವು ಮರುದಿನವೂ ಏಳೋಕಾಗದೇ ಇರಬಹುದು! ಅಥವಾ ಆಸ್ಪತ್ರೆಗೆ ಒಯ್ಯಬೇಕಾಗಬಹುದೋ ಏನೋ!
undefined
ಇರಲಿ, ಅದಲ್ಲ ವಿಷ್ಯ. ಎರಡು ಪಿಂಟ್ ಬಿಯರ್ ಹೀರಿದರೆ ನೋವು ಇಷ್ಟಿಷ್ಟ ಆಯ ಅಂತಾರಲ್ಲ, ಅದೇಕೆ ಅಂತ ನೀವು ಕೇಳಬೇಕಿರೋ ಪ್ರಶ್ನೆ. ಇದರಲ್ಲಿ ಅನುಮಾನ ಎಲ್ಲಿದೆ. ಆಲ್ಕೋಹಾಲ್ ನೋವು ನಿವಾರಕ ಅಂತ್ಲೇ ವೈದ್ಯಕೀಯ ವಲಯದಲ್ಲೂ ಗೊತ್ತಿರೋ ವಿಷಯವೇ ತಾನೆ. ಕೆಲವೊಮ್ಮೆ ಆಲ್ಕೋಹಾಲ್ ಅನ್ನು ಅನಸ್ತೆಟಿಕ್ ಆಗಿಯೂ ಬಳಸುವುದಿದೆ. ಗಾಯಗಳನ್ನು ಸ್ವಚ್ಛಗೊಳಿಸುವಾಗ ಬೆಂಜೀಲ್ ಆಲ್ಕೋಹಾಲ್ ಅನ್ನು ಬಳಸುತ್ತಾರೆ. ಆಗ ಗಾಯದಲ್ಲಿ ನೋವು ಕಡಿಮೆ ಫೀಲ್ ಆಗುವಂತೆ ಆ ಆಲ್ಕೋಹಾಲೇ ನೋಡಿಕೊಳ್ಳುತ್ತೆ. ಎಣ್ಣೆ ಅನ್ನೋದು ಸಾರ್ಥಕ ನೋಡಿ; ಹಚ್ಚಿಕೊಂಡರೂ ನೋವು ನಿವಾರಣೆ, ಹೊಟ್ಟೆಗಿಳಿಸಿದರೂ ನೋವು ನಿವಾರಣೆ!
ಅಂದ್ರೆ ತಾತ್ಪರ್ಯ ಇಷ್ಟೇ. ಸಣ್ಣಪುಟ್ಟ ನೋವುಗಳೆಲ್ಲಾ ಇದ್ದರೆ ನೀವು ಪ್ಯಾರಾಸಿಟಮಾಲ್ ಅಥವಾ ಆಕ್ಲೋಫೆನಾಕ್ ತೆಗೆದುಕೊಳ್ಳಬೇಕಾಗಿಯೇ ಇಲ್ಲ. ಸೀದಾ ಬಾರ್ ಕೌಂಟರ್ ಓಪನ್ ಮಾಡಿ ಎರಡು ಪಿಂಟ್ ಬಿಯರ್, ನಿಮ್ಮ ಇಷ್ಟದ ಬ್ರಾಂಡ್ ಗುಟುಕರಿಸಿದರೆ ಸಾಕು. ಬಹುಶಃ ಕಿಂಗ್‌ಫಿಶರ್, ಬಡ್‌ವೈಸರ್, ಹೀಗೆ ಯಾವ ಬ್ರಾಂಡ್ ಸೇವಿಸಿದರೆ ಎಷ್ಟು ಪೇನ್ ಕಡಿಮೆಯಾಗುತ್ತದೆ, ತಲೆನೋವಿದ್ದರೆ ಯಾವ ಬ್ರಾಂಡ್, ಕಾಲುನೋವಿದ್ದರೆ ಯಾವ ಬ್ರಾಂಡ್ ವಾಸಿ ಎಂಬುದನ್ನೆಲ್ಲ ನೀವೇ ಸಂಶೋಧನೆ ಮಾಡಿ ತಿಳಿಯಬಹುದು.
ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ ...
ಹಾಗಂತ ಬಿಯರ್ ಸೇವನೆಯಿಂದ ಬೇರೆ ದುಷ್ಪರಿಣಾಮಗಳು ಇಲ್ಲ ಅಂತ ಈ ಸಂಶೋಧಕರು ಹೇಳ್ತಿಲ್ಲ. ದೀರ್ಘಕಾಲಿಕ ದುಷ್ಪರಿಣಾಮಗಳು ಲಿವರ್ ಮೇಲೆ ಇದ್ದೇ ಇರುತ್ತವೆ. ಬಿಯರ್ ಸೇವನೆ ಚಟವಾಗಿದ್ದರೆ ಅದು ಲಿವರ್ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಆದರೆ ಒಂದು ಮಧ್ಯಮ ಪ್ರಮಾಣದಲ್ಲಿ ಬಿಯರ್ ಸೇವಿಸುವುದರಿಂದ ಲಾಭವೇ ಹೆಚ್ಚು, ಹಾನಿ ಕಡಿಮೆ ಎಂಬುದು ಈ ಸಂಶೋಧಕರ ಅಂಬೋಣ.
ಈ ಬಿಯರ್ ಪೇನ್‌ಕಿಲ್ಲರ್ ಆಗಿ ಕೆಲಸ ಮಾಡೋದ ಹೇಗೆ ಎಂಬ ಬಗ್ಗೆ ಸಂಶೋಧಕರ ಅಧ್ಯಯನ ಇನ್ನೂ ಮುಂದುವರಿದಿದೆ. ಅಂದರೆ ಇದು ನೀವು ಇದ್ದ ಭಾಗದಿಂದ ಮೆದುಳಿಗೆ ನೋವಿನ ಸಂವೇದನೆ ಸಾಗುವ ನರಗಳನ್ನೇ ಹೈಜಾಕ್ ಮಾಡಿ ಆ ಸ್ಪಂದನ ಇಲ್ಲದಂತೆ ಮಾಡುತ್ತದೋ, ಅಥವಾ ನೋವು ಫೀಲ್ ಆಗುವ ಮೆದುಳಿನ ಭಾಗವನ್ನೇ ಹೈಜಾಕ್ ಮಾಡಿ ನೋವಿನ ಪ್ರಮಾಣ ಗೊತ್ತಾಗದಂತೆ ಮಾಡುತ್ತದೋ ಎಂಬುದು ಗೊತ್ತಾಗಬೇಕಿದೆ. ಕೆಲವೊಮ್ಮೆ ಮದ್ಯ ಸೇವನೆಯಿಂದ ನಮ್ಮಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ನಿವಾರಣೆಯಿಂದಾಗಿ ನಮ್ಮಲ್ಲಿ ಫೀಲ್ ಗುಡ್ ಹಾರ್ಮೋನ್‌ಗಳಾದ ಆಕ್ಸಿಟೋಸಿನ್, ಎಂಡಾರ್ಫಿನ್ ಮುಂತಾದವು ಉತ್ಪತ್ತಿಯಾಗುತ್ತವೆ. ಇದರಿಂದ ಉಂಟಾಗುವ ಹಿತಾನುಭವದಿಂದಾಗಿ ನೋವು ಇಲ್ಲವಾದಂತೆ ಕಾಣುತ್ತದೆ. ಇದು ಕೂಡ ಸಾಧ್ಯ.
ಬಾಟಲಿ ನೀರು ಕುಡಿಯುತ್ತೀರಾ? ಹಾಗಾದ್ರೆ ಈ ಕೆಲವು ವಿಚಾರ ಗೊತ್ತಿರಲಿ ...
ಆದರೆ ಇಲ್ಲಿ ನಿಮ್ಮ ಮನೆಯವರಿಂದ ಒಂದು ಕಂಪ್ಲೇಂಟ್ ಬರಬಹುದು- ಬಿಯರ್ ಕುಡಿದರೆ ಕುಡಿದವನ ನೋವೇ ಮಾಯವಾಗುತ್ತೆ. ಆದರೆ ಮನೆಯಲ್ಲಿರೋ ಇತರರಿಗೆ ತಲೆನೋವು ಶುರುವಾಗುತ್ತೆ! ವಿಶೇಷವಾಗಿ ಹೆಂಡತಿ, ಮಕ್ಕಳಿಗೆ. ಈ ನೋವು ನಿವಾರಣೆ ಮಾಡೋಕೆ ಏನು ಮಾಡಬೇಕು? ಬಿಯರ್ ಸೇವಿಸಿದವನು ಸುಮ್ಮನಿದ್ದರೆ ಓಕೆ. ತಲೆ ತಿನ್ನುವವನೋ ತಪ್ಪು ತಪ್ಪು ಇಂಗ್ಲಿಷ್ ಮಾತಾಡುವವನೋ ಆಗಿದ್ದರೆ ಮನೆಯಲ್ಲಿರುವ ಇತರರು ತಲೆನೋವು ನಿವಾರನೆಗೆ ಪೇನ್‌ಕಿಲ್ಲರ್ ಸೇವಿಸದೆ ಗತ್ಯಂತರವೇ ಇಲ್ಲ!
ಇಷ್ಟನ್ನು ತಿಳಿಯೋದಕ್ಕೆ ಸಂಶೋಧನೆ ಬೇಕಿತ್ತೇ? ಬಿಯರ್ ನಮ್ಮ ಮನಸ್ಸಿನ ನೋವಿಗೆ ಮದ್ದು ಎಂದು ನಾವು ಯಾವತ್ತೋ ಕಂಡುಕೊಂಡಿಲ್ಲವೇ ಎಂದು ನಿತ್ಯ ಬಾರ್‌ಗೆ ಹೋಗಿ ಬಿಯರ್ ಹೀರಿ ಬೀರಬಲ್ಲರಾಗಿ ರಸ್ತೆ ಅಳೆಯುತ್ತಾ ಬರುವವವರು ಎದುರು ವಾದಿಸಬಹುದು. ಅನುಭವದ ಮಾತಿಗೆ ಯಾರಾದರೂ ಯಾಕೆ ಎದುರಾಡಬೇಕು, ಹೇಳಿ!
ಬಾಟಲಿ ನೀರು ಕುಡಿಯುತ್ತೀರಾ? ಹಾಗಾದ್ರೆ ಈ ಕೆಲವು ವಿಚಾರ ಗೊತ್ತಿರಲಿ ...