* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆಯೂ ಲಸಿಕೆ ಅಭಿಯಾನ * ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ? * ಹೀಗಿದೆ ನೋಡಿ ಮೂರೂ ಲಸಿಕೆಗಳ ನಡುವಿನ ವ್ಯತ್ಯಾಸ
ನವದೆಹಲಿ(ಮೇ.24): ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆಯೂ ಲಸಿಕೆ ಅಭಿಯಾನ ಮುಂದುವರೆದಿದೆ. ಆರಂಭದಲ್ಲಿ ಲಸಿಕೆ ಪಡೆಯಲು ಕೊಂಚ ಹಿಂದೇಟು ಹಾಕಿದವರೂ ಈಗ ಲಸಿಕೆ ಪಡೆಯಲು ದೌಡಾಯಿಸುತ್ತಿದ್ದಾರೆ. ಗಂಟೆಗಟ್ಟಲೇ ನೋಂದಾವಣೆ ಮಾಡಿಸಲು ಕಾದು, ಸ್ಲಾಟ್ ಪಡೆದು ಕ್ಯೂ ನಿಂತು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೂ ಭಾರತ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯದಲ್ಲೇ ಭಾರತೀಯರಿಗೆ ಇದು ಲಭ್ಯವಾಗಲಿದೆ. ಈ ಮೂಲಕ ಎರಡು ದೇಶೀ ಲಸಿಕೆಗಳು ಹಾಗೂ ರಷ್ಯಾದ ಲಸಿಕೆ ಜನರಿಗೆ ಲಭ್ಯವಾಗಲಿದೆ. ಆದರೀಗ ಸದ್ಯ ಈ ಮೂರೂ ಲಸಿಕೆಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ. ಹೀಗಿರುವಾಗ ಈ ಮೂರು ಲಸಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಒಂದು ವಿವರ
ಕೋವಿಶೀಲ್ಡ್: ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಯ ಒಂದು ಡೋಸ್ ಬೆಲೆ 600 ರೂ.
ಕೋವ್ಯಾಕ್ಸಿನ್: ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಯ ಒಂದು ಡೋಸ್ ಬೆಲೆ 1200 ರೂ.
ಸ್ಪುಟ್ನಿಕ್ ವಿ: ಇದನ್ನು ಸದ್ಯ ಪ್ರತೀ ಡೋಸ್‌ಗೂ 948 ರೂ. ನಂತೆ ಆಮದು ಮಾಡಿಕೊಳ್ಳಲಾಗುತ್ತಿದೆ. ಶೇ. 5 ರಷ್ಟು ಜಿಎಸ್‌ಟಿ ಸೇರಿ ಒಟ್ಟು 995.40 ರೂ ಆಗುತ್ತದೆ. ಇದರ ನಿರ್ವಹಣೆ ವೆಚ್ಚವೆಲ್ಲಾ ಸೇರಿ 1250 ರೂ. ಆಗುತ್ತದೆ.
ದಕ್ಷತೆ ಪ್ರಮಾಣ(ಪರಿಣಾಮಕಾರಿ)
ಕೋವಿಶೀಲ್ಡ್: ಈ ಲಸಿಕೆ ಶೇ. 70.4ರಷ್ಟು(ಎರಡನೇ ಡೋಸ್ ಬಳಿಕ) ಪರಿಣಾಮಕಾರಿಯಾಗಿದೆ.
ಕೋವ್ಯಾಕ್ಸಿನ್: ಶೇ. 78 ರಿಂದ 81ರಷ್ಟು ಪರಿಣಾಮಕಾರಿ(ಎರಡನೇ ಡೋಸ್ ಬಳಿ)
ಸ್ಪುಟ್ನಿಕ್ ವಿ: ಈ ಲಸಿಕೆ ಶೇ. 91.6 ರಷ್ಟು ಪರಿಣಾಮಕಾರಿಯಾಗಿದೆ.
ಲಸಿಕೆ ಬಳಿಕದ ಸಾಮಾನ್ಯ ಲಕ್ಷಣಗಳು
ಕೋವಿಶೀಲ್ಡ್: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು, ತುರಿಕೆ ಕಾಣಿಸಿಕೊಳ್ಳಬಹುದು. ಜ್ವರ ಬಂದಂತಾಗುವುದು, ತಲೆನೋವು ಹಾಗೂ ಆಯಾಸ. ಶೀತ, ಜ್ವರ, ಗಂಟಲು ನೋವು ಈ ಲಕ್ಷಣಗಳು ಸಾಮಾನ್ಯ
ಕೋವ್ಯಾಕ್ಸಿನ್: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು, ತುರಿಕೆ ಕಾಣಿಸಿಕೊಳ್ಳಬಹುದು. ಜ್ವರ ಬಂದಂತಾಗುವುದು, ಸುಸ್ತು. ವಾಂತಿ ಬಂದಂತಾಗುವುದು.
ಸ್ಪುಟ್ನಿಕ್ ವಿ: ಲಸಿಕೆ ನೀಡಿದ ಭಾಗದಲ್ಲಿ ನೋವು, ಊತ, ಚರ್ಮ ಕೆಂಪಗಾಗುವುದು. ಜ್ವರದ ಲಕ್ಷಣಗಳಾದ ಶೀತ, ಜ್ವರ, ಗಂಟಲು ನೋವು. ಆಯಾಸ ಹಾಗೂ ತಲೆನೋವು.
ಯಾವುದು ಉತ್ತಮ?
ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ಈ ಮೂರೂ ಲಸಿಕೆಗಳು ಕೊರೋನಾ ವೈರಸ್‌ನಿಂದ ನಿಮ್ಮನ್ನು ರಕ್ಷಿಸಲು ಸಮಾನವಾಗಿವೆ. ಹೀಗಾಗಿ ನಿಮಗೆ ಸಿಗುವ ಲಸಿಕೆಯೇ ಬೆಸ್ಟ್ ಆಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.