ಬಾಟಲಿ ನೀರು ಕುಡಿಯುತ್ತೀರಾ? ಹಾಗಾದ್ರೆ ಈ ಕೆಲವು ವಿಚಾರ ಗೊತ್ತಿರಲಿ

First Published May 16, 2021, 1:23 PM IST

ಜಲವೇ ಜೀವನ ಎಂಬ ಮಾತನ್ನು ನಾವು ಚಿಕ್ಕಂದಿನಿಂದಲೂ ಕೇಳುತ್ತ ಬಂದಿದ್ದೇವೆ. ಶರೀರದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರಬೇಕು. ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಶರೀರದಿಂದ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ಮೂಲಕ ನೀರಿನ ವಿಸರ್ಜನೆಯಾಗುವ ಕಾರಣ ಡಿಹೈಡ್ರೆಶನ್ ಸಮಸ್ಯೆ ಎದುರಾಗುತ್ತದೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.