
ಕ್ಯಾನ್ಸರ್ (Cancer) ಎನ್ನುವುದು ದೇಹದ ಕೆಲವು ಜೀವಕೋಶಗಳು (body's cells) ಅನಿಯಂತ್ರಿತವಾಗಿ ಬೆಳೆದು ದೇಹದ ಇತರ ಭಾಗಗಳಿಗೆ ಹರಡುವ ಕಾಯಿಲೆ. ಕ್ಯಾನ್ಸರ್‌ನ ಲಕ್ಷಣಗಳು (symptoms) ಅಸಂಖ್ಯಾತ. ಆದರೂ ಅನೇಕ ಎಚ್ಚರಿಕೆಯ ಚಿಹ್ನೆಗಳು ಗೆಡ್ಡೆಯ ಮೂಲಕ್ಕೆ ಸಂಬಂಧಿಸಿಲ್ಲ. ಕೆಲವೊಮ್ಮೆ, ಕ್ಯಾನ್ಸರ್ ಗಡ್ಡೆಯು ಮಾರಣಾಂತಿಕವಾಗಿದ್ದಾಗ ನರಗಳು ಕೇಂದ್ರೀಕೃತವಾಗಿರುವ ದೇಹದ ಇತರ ಭಾಗಗಳಿಗೆ ಹರಡಬಹುದು. ಇದು ಸ್ನಾಯು ಸೆಳೆತಗಳು, ಅಥವಾ ಜರ್ಕಿಂಗ್(jerking)ಗೆ ಕಾರಣವಾಗುತ್ತದೆ. ಸ್ನಾಯು ಸೆಳೆತಗಳು ಅನೈಚ್ಛಿಕ ಸಂಕೋಚನಗಳಿಂದ ಉಂಟಾಗುತ್ತವೆ.
ಕ್ಯಾನ್ಸರ್‌ನಲ್ಲೂ ಹಲವು ವಿಧಗಳಿವೆ. ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್ ಹೀಗೆ ಹಲವು. ಆದ್ರೆ ಇತ್ತೀಚಿನ ಕ್ಲಿನಿಕಲ್ ಪ್ರಯೋಗದಿಂದ ಸಂತಸದ ವಿಚಾರವೊಂದು ಹೊರಬಂದಿದೆ. ಇತ್ತೀಚಿನ ಕ್ಲಿನಿಕಲ್ ವರದಿಯೊಂದರ ಪ್ರಕಾರ, ಗುದನಾಳದ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಈ ಚಿಹ್ನೆಗಳು ಕಂಡುಬಂದರೆ Cancer Test ಮಾಡಿಸಲೇಬೇಕು!
ಇಲ್ಲಿವರೆಗೆ ಗುದನಾಳದ ಕ್ಯಾನ್ಸರ್ ಎಂದರೆ ಜನರು ಬೆಚ್ಚಿ ಬೀಳುವಂತಾಗಿತ್ತು. ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಇದೆಯೆಂದರೆ ಅವರು ಜೀವನಪರ್ಯಂತೆ ನರಕ ಅನುಭವಿಸಬೇಕಾಗಿತ್ತು. ಆದ್ರೆ ಇನ್ಮುಂದೆ ಆ ಸಮಸ್ಯೆ ಇರುವುದಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಔಷಧಿ ಪ್ರಯೋಗ ನಡೆಸಲಾಗಿದ್ದು, ಪ್ರತಿ ರೋಗಿಗೆ ಗುದನಾಳದ ಕ್ಯಾನ್ಸರ್ ಮಾಯವಾಗುತ್ತದೆ ಎಂದು ತಿಳಿಸಲಾಗಿದೆ. 18 ಗುದನಾಳದ ಕ್ಯಾನ್ಸರ್ ರೋಗಿಗಳಿಗೆ ಆರು ತಿಂಗಳ ಕಾಲ ಒಂದೇ ಔಷಧವನ್ನು ನೀಡಲಾಯಿತು ಮತ್ತು ಚಿಕಿತ್ಸೆಯ ಪರಿಣಾಮವಾಗಿ, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಸಂಪೂರ್ಣವಾಗಿ ಕಡಿಮೆಯಾಯಿತು.
ಔಷಧಿಯಿಂದ ಕ್ಯಾನ್ಸರ್ ಸಂಪೂರ್ಣ ಗುಣಮುಖ
ಇತಿಹಾಸದಲ್ಲಿ ಮೊದಲ ಬಾರಿಗೆ, ಔಷಧಿ ಪ್ರಯೋಗದಲ್ಲಿ ಪ್ರತಿ ರೋಗಿಗೆ ಕ್ಯಾನ್ಸರ್ ಕಣ್ಮರೆಯಾಗುತ್ತದೆ ಎಂಬುದನ್ನು ಈ ಮೂಲಕ ಅಧಿಕೃತವಾಗಿ ದೃಢಪಡಿಸಲಾಗಿದೆ. ಇದು ಎಲ್ಲಾ ರೋಗಿಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲಯ ಸುದೀರ್ಘ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಗುದನಾಳದ ಕ್ಯಾನ್ಸರ್ ಇರುವವರಿಗೆ ಪ್ರಾಯೋಗಿಕ ಚಿಕಿತ್ಸೆ ನೀಡಲಾಯಿತು.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಒಂದು ಚಿಕ್ಕ ಕ್ಲಿನಿಕಲ್ ಪ್ರಯೋಗದಲ್ಲಿ, 18 ರೋಗಿಗಳು ಸುಮಾರು ಆರು ತಿಂಗಳ ಕಾಲ ದೋಸ್ಟಾರ್ಲಿಮಾಬ್ ಎಂಬ ಔಷಧಿಯನ್ನು ತೆಗೆದುಕೊಂಡರು ಮತ್ತು ಕೊನೆಯಲ್ಲಿ, ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಗೆಡ್ಡೆಗಳ ಸಮಸ್ಯೆ ಕಡಿಮೆಯಾಗುವುದನ್ನು ನೋಡಿದರು.
ದೋಸ್ಟಾರ್ಲಿಮಾಬ್ ಎಂಬುದು ಪ್ರಯೋಗಾಲಯ-ಉತ್ಪಾದಿತ ಅಣುಗಳನ್ನು ಹೊಂದಿರುವ ಔಷಧವಾಗಿದ್ದು, ಅದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ 18 ಗುದನಾಳದ ಕ್ಯಾನ್ಸರ್ ರೋಗಿಗಳಿಗೆ ಒಂದೇ ಔಷಧವನ್ನು ನೀಡಲಾಯಿತು ಮತ್ತು ಚಿಕಿತ್ಸೆಯ ಪರಿಣಾಮವಾಗಿ, ಪ್ರತಿ ರೋಗಿಯಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಅಳಿಸಿಹಾಕಲಾಯಿತು. ಎಂಡೋಸ್ಕೋಪಿ; ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್‌ಗಳು ಅಥವಾ ಎಂಆರ್‌ಐ ಸ್ಕ್ಯಾನ್‌ಗಳು ಕ್ಯಾನ್ಸರ್ ಇಲ್ಲವೆಂಬ ಫಲಿತಾಂಶ ಬಂತು. ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ ಲೂಯಿಸ್ ಎ. ಡಯಾಜ್ ಜೆ, ಕ್ಯಾನ್ಸರ್‌ನಿಂದ ವ್ಯಕ್ತಿಯೊಬ್ಬರು ಸಂಪೂರ್ಣವಾಗಿ ಗುಣಮುಖರಾಗಿರುವುದು, ಕ್ಯಾನ್ಸರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ಹೇಳಿದರು.
ಭಾರತದಲ್ಲಿ ರಕ್ತ ಕ್ಯಾನ್ಸರ್‌ಗೆ ಪ್ರತಿ ವರ್ಷ 70,000 ಮಂದಿ ಬಲಿ
ಹೊಸ ಸಂಶೋಧನೆಗೆ ವೈದ್ಯಕೀಯ ಲೋಕದಲ್ಲಿ ಭರವಸೆ
ಸದ್ಯ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಿರುವ ಹೊಸ ಸಂಶೋಧನೆ ವೈದ್ಯಕೀಯ ಲೋಕದಲ್ಲಿ ಸದ್ದು ಮಾಡುತ್ತಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ತಜ್ಞರಾಗಿರುವ ಡಾ.ಅಲನ್ ಪಿ. ವೆನೂಕ್ ಅವರು ಮಾತನಾಡುತ್ತಾ, ಪ್ರತಿಯೊಬ್ಬ ರೋಗಿಯ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ ಈ ಸಂಶೋಧನೆಯನ್ನು ವಿಶ್ವದಲ್ಲೇ ಮೊದಲನೆಯದು ಎಂದು ಶ್ಲಾಘಿಸಿದರು. ಪ್ರಯೋಗ ಔಷಧದಿಂದ ಎಲ್ಲಾ ರೋಗಿಗಳು ಗಮನಾರ್ಹ ತೊಡಕುಗಳನ್ನು ಅನುಭವಿಸದ ಕಾರಣ ಇದು ವಿಶೇಷವಾಗಿ ಪ್ರಭಾವಶಾಲಿಯಾಗಿದೆ ಎಂದು ಅವರು ಗಮನಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.