ಕೊರೋನಾ ಸೋಂಕಿತ ಮಹಿಳೆಗೆ ಶ್ವಾಸಕೋ ಕಸಿ/ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಭಾರತೀಯ ಮೂಲದ ವೈದ್ಯ/ ಅಮೆರಿಕದಲ್ಲಿ ಪವಾಡ ಮಾಡಿದ ಡಾಕ್ಟರ್/ ಮೀರತ್ ಮೂಲದ ಡಾಕ್ಟರ್
ಚಿಕಾಗೋ(ಜೂ. 12) ಕೊರೋನಾವೈರಸ್ ನಿಂದ ಶ್ವಾಸಕೋಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ಮಹಿಳೆಗೆ ಭಾರತದ ಮೂಲದ ವೈದ್ಯರೊಬ್ಬರು ಮರುಜನ್ಮ ನೀಡಿದ್ದಾರೆ.
20 ವರ್ಷದ ಮಹಿಳೆಗೆ ಶ್ವಾಸಕೋಶ ಕಸಿ ಮಾಡಲಾಗಿದೆ. ಅಮೆರಿಕದಲ್ಲಿ ಕೊರೋನಾ ಅಟ್ಟಹಾಸ ನಡೆಯುತ್ತಿರುವಾಗಲೇ ನಡೆದ ಈ ರೀತಿಯ ಮೊಟ್ಟ ಮೊದದ ಶಸ್ತ್ರಚಿಕಿತ್ಸೆ ಇದಾಗಿದೆ.
ತೀವ್ರ ನಿಗಾ ಘಟಕದಲ್ಲಿದ್ದ ಮಹಿಳೆ ಕಳೆದ ಎರಡು ತಿಂಗಳಿನಿಂದ ಕೃತಕ ಉಸಿರಾಟದಲ್ಲೇ ಬದುಕುತ್ತಿದ್ದರು. ನಾರ್ತ್ ವೆಸ್ಟರ್ನ್ ನ ಎದೆಗೂಡಿನ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಅಂಕಿತ್ ಭರತ್ ಶ್ವಾಸಕೋಶ ಜೋಡಣೆ ಜವಾಬ್ದಾರಿ ಹೊತ್ತಿದ್ದರು. ಕೊರೋನಾ ಇದ್ದಾಗಲೂ ಈ ಸವಾಲು ಸ್ವೀಕರಿಸಿದ್ದರು.
ಕೊರೋನಾ ರೋಗಿಯೊಂದಿಗೆ ಡಾಕ್ಟರ್ ಎಂಗೇಜ್; ಏನ್ ಕತೆ
undefined
ಇದು ಅತ್ಯಂತ ದೊಡ್ಡ ಸವಾಲಾಗಿತ್ತು. ನನ್ನ ಜೀವನದಲ್ಲಿ ಮಾಡಿದ ಆಪರೇಶನ್ ಗಳಲ್ಲಿ ಇದು ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ಮೀರತ್ ಮೂಲದ ಭರತ್ ಹೇಳುತ್ತಾರೆ.
ಕೊರೋನಾ ವೈರಸ್ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆಯಾದರೂ ಅದು ಕಿಡ್ನಿ, ಹೃದಯ, ನರವ್ಯೂಹದ ಮೇಲೂ ಪರಿಣಾಮ ಬೀರಬಹುದು ಎಂಬ ಅಂಶವನ್ನು ವೈದ್ಯರು ಹೇಳುತ್ತಾರೆ.
ಕೊರೋನಾ ಸೋಂಕಿನ ಕಾರಣ ಆಪರೇಶನ್ ಗೆ ಒಳಗಾದ ಮಹಿಳೆ ಹೆಸರು ಬಹಿರಂಗ ಮಾಡಲು ಸಾಧ್ಯವಿಲ್ಲ. ಬ್ಯಾಕ್ಟೀರಿಯಾ ಸಹ ಆಕೆಯ ಜೀವ ಹಿಂಡುತ್ತಿತ್ತು. ಆಂಟಿ ಬಯಾಟಿಕ್ ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿತ್ತು ಎಂದು ರೋಗಿಯ ಸ್ಥಿತಿಯನ್ನು ವೈದ್ಯರು ವಿವರಿಸುತ್ತಾರೆ.
ಕೊರೋನಾ ಸೋಂಕಿತ ವ್ಯಕ್ತಿಗೆ ಮಿಡ್ ನೈಟ್ ಆಪರೇಶನ್
ಶ್ವಾಸಕೋಶ ಕೆಲಸ ನಿಲ್ಲಿಸಿದ ನಂತರ ಅದು ಹೃದಯದ ಮೇಲೆ ಪರಿಣಾಮ ಬೀರಿದೆ. ಒಂದಾದ ಮೇಲೆ ಒಂದು ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತಾ ಬಂದಿವೆ.
ಈ ಸಂದರ್ಭ ನಮಗೆ ಶ್ವಾಸಕೋಶ ದಾನ ನೀಡುವವರು ಬೇಕಾಗಿದ್ದರು. ಎರಡು ದಿನದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರು ಶ್ವಾಸಕೋಶ ನೀಡಿದರು. ಆದರೆ ಮ್ಯಾಚ್ ಮಾಡುವುದು ಅಷ್ಟೇ ದೊಡ್ಡ ಸವಾಲಾಗಿತ್ತು. ಇದಕ್ಕೂ ಮೊದಲು ಆಸ್ಟ್ರೀಯಾದಲ್ಲಿ ಇಂಥದ್ದೇ ಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು.
ಸದ್ಯ ಯುವತಿ ಚೇತರಿಸಿಕೊಂಡಿದ್ದು, ಇನ್ನು ಕೆಲವು ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಅಮೆರಿಕದಲ್ಲಿ ಕೋವಿಡ್ ರೋಗಿಗೆ ಇಂತಹ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ಇದೇ ಮೊದಲು. ಕೋವಿಡ್‌ನಿಂದ ತೀವ್ರ ಘಾಸಿಗೊಳ್ಳುವ ಶ್ವಾಸಕೋಶಕ್ಕೆ ಔಷಧಿಯಿಂದ ಯಾವುದೇ ಪ್ರಯೋಜನ ಇಲ್ಲ. ಅಂತಹ ರೋಗಿ ಬದುಕುಳಿಯಲು ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್