ಗೋಮೂತ್ರ ಸೇವನೆಯಿಂದ ಹಲವಾರು ಆರೋಗ್ಯ ಲಾಭಗಳಿರುವುದನ್ನು ನಾವು ಕೇಳಿರುತ್ತೇವೆ. ಆದರೆ, ಸ್ವಮೂತ್ರ ಸೇವನೆಯಿಂದ ಏನಾದರೂ ಲಾಭಗಳಿವೆಯೇ? ಇದೆ ಎನ್ನುತ್ತದೆ ಯೂರಿನ್ ಥೆರಪಿ.
ಯೂರಿನ್ ಥೆರಪಿ ಅಥವಾ ಯೂರೋ ಥೆರಪಿಯ ಬಗ್ಗೆ ಕೇಳಿರಬಹುದು. ಮಾನವನ ಮೂತ್ರವನ್ನು ಔಷಧಿಗಳಿಂದ ಹಿಡಿದು ಕಾಸ್ಮೆಟಿಕ್‌ವರೆಗೆ ಬಳಸುವುದು, ಆರೋಗ್ಯ ಲಾಭಗಳಿಗಾಗಿ ಸ್ವಮೂತ್ರ ಪಾನ ಮಾಡುವುದು, ತ್ವಚೆಯ ಹೊಳಪಿಗಾಗಿ ಯೂರಿನ್ ಮಸಾಜ್ ಮಾಡುವುದು ಮುಂತಾದವೆಲ್ಲ ಈ ಥೆರಪಿಯ ಭಾಗಗಳು. ಆದರೆ, ಯೂರಿನ್ ಥೆರಪಿಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂಬುದು ಗಮನಾರ್ಹ. ಹಾಗಿದ್ದೂ, ಹಲವು ಜನರು ಸ್ವಮೂತ್ರಪಾನ ಮಾಡುವುದಿದೆ. ಅದರಲ್ಲೂ ಸೆಲೆಬ್ರಿಟಿಗಳು ಸ್ವಮೂತ್ರ ಪಾನ, ಇತರೆ ಬಳಕೆ ಮಾಡಿದ್ದೇ ಅಲ್ಲದೆ, ಅದನ್ನು ಬಹಿರಂಗವಾಗಿ ಹೇಳಿಕೊಂಡ ನಿದರ್ಶನಗಳು ಅಚ್ಚರಿ ಹುಟ್ಟಿಸುತ್ತವೆ. ದಿ ಯೂರಿನ್ ಥೆರಪಿ ಎಂಬ ಗ್ರೂಪ್ ಒಂದು ಸೋಷ್ಯಲ್ ಮೀಡಿಯಾದಲ್ಲಿದ್ದು, ಅದರಲ್ಲಿ 7000ಕ್ಕೂ ಹೆಚ್ಚು ಸದಸ್ಯರಿರುವುದು ನೋಡಿದರೆ ಇದೇನು ಬಹಳ ಅಪರೂಪದ ಸಂಗತಿಯಲ್ಲ ಎಂಬುದೂ ತಿಳಿಯುತ್ತದೆ.
ಯೂರಿನ್ ಥೆರಪಿಯನ್ನು ಬಳಸುವುದನ್ನು ಬಹಿರಂಗವಾಗಿ ಹೇಳಿಕೊಂಡ ಸೆಲೆಬ್ರಿಟಿಗಳಿವರು.
undefined
ಮೊರಾರ್ಜಿ ದೇಸಾಯಿ
ಭಾರತದ ಐದನೇ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ಯೂರಿನ್ ಥೆರಪಿಯನ್ನು ಧೀರ್ಘಕಾಲಿಕವಾಗಿ ಅಭ್ಯಾಸ ಮಾಡಿದ್ದರು. ಸ್ವಮೂತ್ರ ಪಾನ ಮಾಡುತ್ತಿದ್ದ ಅವರು ಇದರಿಂದ ಹಲವಾರು ಅನಾರೋಗ್ಯಗಳನ್ನು ತಡೆಯಬಹುದೆಂದು ನಂಬಿದ್ದರು. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸಲಾಗದ ಕೋಟ್ಯಂತರ ಭಾರತೀಯರು ಸ್ವಮೂತ್ರಪಾನದ ಮೂಲಕ ತಮ್ಮ ರೋಗಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಕರೆಯನ್ನೂ ನೀಡಿದ್ದರು!
ಈ ಐಡಿಯಾಕ್ಕೆ ಭಾರತೀಯರು ಮರುಳಾಗದಿದ್ದರೂ, ಮಧ್ಯಪ್ರದೇಶದ ಅಮರ್‌ಪುರ ಎಂಬ ಹಳ್ಳಿಯ ಜನ ಕಾಯಿಲೆಗಳಿಂದ ಮುಕ್ತರಾಗಲು ತಮ್ಮದೇ ಮೂತ್ರ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.
ಮಡೋನ್ನಾ
ಪಾಪ್ ಜಗತ್ತಿನ ರಾಣಿ ಎಂದೇ ಖ್ಯಾತಿ ಪಡೆದಿರುವ, ಗಾಯಕಿ, ನಟಿಯಾಗಿ ದಂತಕತೆಯಾಗಿರುವ ಮಡೋನ್ನಾ, ತನ್ನ ಅಂಗಾಲಿನಲ್ಲಿ ಕಾಡುತ್ತಿದ್ದ ಚರ್ಮರೋಗಕ್ಕೆ ಔಷಧವಾಗಿ ಕಾಲಿನ ಮೇಲೆಯೇ ಮೂತ್ರ ಮಾಡಿಕೊಳ್ಳುತ್ತಿದ್ದಳು. ಈ ಅಮೆರಿಕನ್ ಗಾಯಕಿ ತನ್ನ ಈ ಅಭ್ಯಾಸದ ಕುರಿತು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಳು. ಮೂತ್ರವು ಆ್ಯಂಟಿ ಸೆಪ್ಟಿಕ್‌ನಂತೆ ಕೆಲಸ ಮಾಡುತ್ತದೆ ಎಂದಿದ್ದಳು.
ಸಾರಾ ಮೈಲ್ಸ್
ಮಡೋನ್ನಾ ಮಾತ್ರವಲ್ಲ, ಪ್ರಖ್ಯಾತ ಆಂಗ್ಲ ನಟಿ ಸಾರಾ ಮೈಲ್ಸ್ ಕೂಡಾ ತನ್ನ ಜೀವಿತದ 30 ವರ್ಷಗಳ ಅವಧಿಯಲ್ಲಿ ಸ್ವಮೂತ್ರ ಪಾನ ಮಾಡಿದ್ದಾಳೆ. 2007ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡ ಸಾರಾ, ಮೂತ್ರವು ನಿಮ್ಮನ್ನು ಅಲರ್ಜಿಗಳ ವಿರುದ್ಧ ಹೋರಾಡಲು ಶಕ್ತವಾಗಿಸುತ್ತದೆ. ಕ್ಲಿನಿಕ್‌ಗಳು ಇದನ್ನು ಕ್ಯಾನ್ಸರ್ ಚಿಕಿತ್ಸೆಗೂ ಬಳಸುತ್ತವೆ. ಎಲ್ಲ ರೀತಿಯ ಅನಾರೋಗ್ಯಗಳಿಗೂ ಔಷಧವಾಗಿ ಇದನ್ನು ಬಳಸಲಾಗುತ್ತದೆ ಎಂದಿದ್ದಳು.
ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡಾ ತಮ್ಮ ಮೂತ್ರವನ್ನು ತೋಟದ ಗಿಡಗಳಿಗೆ ಉತ್ತಮ ಗೊಬ್ಬರವಾಗಿ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಇದು ಬಹಳ ಅಗ್ಗದ ಗೊಬ್ಬರವಾದರೂ ಸಸ್ಯಗಳ ಬೆಳವಣಿಗೆಯಲ್ಲಿ ಮ್ಯಾಜಿಕ್ ಮಾಡಬಲ್ಲದು ಎಂಬುದು ಅವರ ಮಾತು. ಪ್ರತಿ ಬಾರಿ ಸಣ್ಣ ಪ್ಲ್ಯಾಸ್ಟಿಕ್ ಡಬ್ಬಿಯಲ್ಲಿ ಮೂತ್ರ ಮಾಡಿ ಅದನ್ನು 50 ಲೀಟರ್ ಕ್ಯಾನ್‌ಗೆ ವರ್ಗಾಯಿಸುತ್ತೇನೆ. ಅದು ತುಂಬಿದ ಬಳಿಕ ದೆಲ್ಲಿಯ ಬಂಗಲೆಯಲ್ಲಿರುವ ಗಿಡಗಳಿಗೆ ಗೊಬ್ಬರವಾಗಿ ಹಾಕುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಅಭ್ಯಾಸ ರೂಢಿಸಿಕೊಳ್ಳುವಂತೆ ಜನತೆಗೆ ಕರೆಯನ್ನೂ ನೀಡಿದ್ದಾರೆ.
ಬೇರ್ ಗ್ರಿಲ್ಸ್
ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್ ಗ್ರಿಲ್ಸ್, ಅರಣ್ಯದಲ್ಲಿ ಸುತ್ತುವಾಗ ಡಿಹೈಡ್ರೇಶನ್‌ನಿಂದ ಪಾರಾಗಲು ತಾನು ಸ್ವಮೂತ್ರ ಸೇವನೆ ಮಾಡಿದ್ದಾಗಿ ಹೇಳಿದ್ದರು.