ಸೆಗಣಿ ಕೊರೋನಾವನ್ನು ನಿವಾರಿಸುತ್ತದೆ ಎಂಬ ನಂಬಿಕೆಯಲ್ಲಿ ಹಸುವಿನ ಸಗಣಿ ಬಳಸುವ ಅಭ್ಯಾಸದ ವಿರುದ್ಧ ಭಾರತದಲ್ಲಿ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಸೆಗಣಿ ಕೊರೋನಾಗೆ ಪರಿಣಾಮಕಾರಿ ಎಂಬುಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದರಿಂದ ಇತರ ರೋಗಗಳನ್ನು ಹರಡುವ ಅಪಾಯವಿದೆ ಎಂದು ಹೇಳಿದ್ದಾರೆ.
ಕೊರೋನವೈರಸ್ ಸಾಂಕ್ರಾಮಿಕ ರೋಗವು ಭಾರತದಲ್ಲಿ ವಿನಾಶವನ್ನುಂಟು ಮಾಡುತ್ತಿದೆ. ಇದುವರೆಗೆ 22.66 ಮಿಲಿಯನ್ ಪ್ರಕರಣಗಳು ಮತ್ತು 246,116 ಸಾವುಗಳು ವರದಿಯಾಗಿವೆ.
undefined
ಬೆಳಗ್ಗೆ ಗೋಮೂತ್ರ ಕುಡೀರಿ: ಕೊರೋನಾಗೆ ಮದ್ದು ಹೇಳಿದ BJP ಶಾಸಕ
ತಜ್ಞರು ಹೇಳುವಂತೆ ಇದರ ನಿಜವಾದ ಸಂಖ್ಯೆಗಳು ಐದರಿಂದ 10 ಪಟ್ಟು ಹೆಚ್ಚಿರುವ ಸಾಧ್ಯತೆಯೂ ಇದೆ. ದೇಶಾದ್ಯಂತದ ಜನ ಆಸ್ಪತ್ರೆಯ ಬೆಡ್, ಆಕ್ಸಿಜನ್ ಔಷಧಿ ಇಲ್ಲದೆ ಹೆಣಗಾಡುತ್ತಿದ್ದಾರೆ. ಚಿಕಿತ್ಸೆಯ ಕೊರತೆಯಿಂದಾಗಿ ಅನೇಕರು ಸಾಯುತ್ತಿದ್ದಾರೆ.
ಗುಜರಾತ್‌ನಲ್ಲಿ ಕೆಲವು ವಿಶ್ವಾಸಿಗಳು ವಾರಕ್ಕೊಮ್ಮೆ ಗೋಶಾಲೆಗೆ ಹೋಗಿ ತಮ್ಮ ದೇಹವನ್ನು ಗೋವಿನ ಸೆಗಣಿ ಮತ್ತು ಮೂತ್ರದಲ್ಲಿ ನೆನೆಸುತ್ತಿದ್ದಾರೆ. ಇದು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅಥವಾ ಕರೋನವೈರಸ್‌ನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ.
ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು
ಹಿಂದೂ ಧರ್ಮದಲ್ಲಿ, ಹಸು ಪವಿತ್ರ ಸಂಕೇತವಾಗಿದೆ. ಶತಮಾನಗಳಿಂದ ಹಿಂದೂಗಳು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಮತ್ತು ಪ್ರಾರ್ಥನಾ ವಿಧಿಗಳಿಗಾಗಿ ಹಸುವಿನ ಸಗಣಿಗಳನ್ನು ಬಳಸಿದ್ದಾರೆ. ಇದು ಚಿಕಿತ್ಸಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ ಎಂದು ನಂಬುತ್ತಾರೆ.
ಭಾರತ ಮತ್ತು ವಿಶ್ವದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು ಕೊರೋನಾಗೆ ಪರ್ಯಾಯ ಚಿಕಿತ್ಸೆ ಪಡೆಯುವ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ. COVID-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗೋವು ಅಥವಾ ಗೋಮೂತ್ರವು ಕೆಲಸ ಮಾಡುತ್ತದೆ ಎಂಬುದನ್ನು ದೃಢೀಕರಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona