ಡಬಲ್ ಮಾಸ್ಕ್ ಧರಿಸುವುದು..ಸತ್ಯ-ಮಿಥ್ಯಗಳನ್ನು ತಿಳಿದುಕೊಳ್ಳಿ

By Suvarna News  |  First Published May 11, 2021, 12:30 AM IST

* ಕೊರೋನಾ ಕಾಲದಲ್ಲಿ ಡಬಲ್ ಮಾಸ್ಕ್ ಧರಿಸುವುದು ಉಚಿತವೇ?
* ಮಾಸ್ಕ್ ಧರಿಸುವುದು ಹೇಗಿರಬೇಕು? ಲೂಸ್ ಆಗಿದ್ದರೆ ನೋ ಯೂಸ್
* ಬಟ್ಟೆ ಮಾಸ್ಕ್ ಗಿಂತ ವೈದ್ಯಕೀಯ ಮಾಸ್ಕ್ ಪರಿಣಾಮಕಾರಿ
* ಒಂದೇ ಮಾಸ್ಕ್ ಧರಿಸುವುದು ಸರಿ ಅಲ್ಲ


ನವದೆಹಲಿ(ಮೇ  10)  ದೇಶದಲ್ಲಿ ಕರೋನಾ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನ 4 ಲಕ್ಷ ಕರೋನಾ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಜನರನ್ನು ತೊಂದರೆಗೆ ಸಿಲುಕಿಸಿದೆ. ಕರೋನಾ ಸೋಂಕನ್ನು ತಡೆಗಟ್ಟಲು, ಅನೇಕ ರಾಜ್ಯಗಳು ತಮ್ಮನ್ನು ತಾವು ಲಾಕ್ ಡೌನ್ ಮಾಡುವುದಾಗಿ ಘೋಷಿಸಿವೆ. 

ಈ ನಡುವೆ ಡಬಲ್ ಮಾಸ್ಕ್ ಧರಿಸುವುದು ಪರಿಣಾಮಕಾರಿ ಎನ್ನುವ ಮಾಹಿತಿಯೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡಿದೆ. ಹಾಗಾದರೆ ವಾಸ್ತವ ಏನು? ಸರ್ಕಾರವೇ ಈ ಬಗ್ಗೆ  ಒಂದಷ್ಟು ವಿಚಾರಗಳನ್ನು ಸ್ಪಷ್ಟಮಾಡಿದೆ.

Latest Videos

undefined


ಏನು ಮಾಡಬೇಕು? 
* ಡಬಲ್ ಮಾಸ್ಕ್ ಎಂದರೆ ಅಲ್ಲಿ ಸರ್ಜಿಕಲ್ ಮಾಸ್ಕ್ ಇರಬೇಕು, ಎರಡು ಅಥವಾ ಮೂರು ಲೇಯರ್ ಇರಬೇಕು
* ಮೂಗಿನ  ಮೇಲಿನಿಂದ ಸರಿಯಾದ ರೀತಿಯಲ್ಲಿ ಒತ್ತಿಕೊಂಡಿರಬೇಕು. ಅಂದರೆ ಟೈಟ್ ಆಗಿ ಕುಳಿತುಕೊಂಡಿರಬೇಕು
* ಉಸಿರಾಟಕ್ಕೆ ಟಡಚಣೆಯಾಗದ ರೀತಿಯಲ್ಲಿ ಮಾಸ್ಕ್ ಇರಬೇಕು
* ಮುಖಕ್ಕೆ ಧರಿಸುವ ಮಾಸ್ಕ್ ನ್ನು ಆಗಾಗ್ಗೆ ವಾಶ್ ಮಾಡುತ್ತಿರುವುದು ಮುಖ್ಯ

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು

ಏನು ಮಾಡಬಾರದು? 
* ಒಂದೇ ಬಗೆಯ ಎರಡು ಮಾಸ್ಕ್ ಧರಿಸುವುದು ಸರಿ ಅಲ್ಲ
* ಒಂದೇ ಮಾಸ್ಕ್ ನ್ನು ನಿರಂತರವಾಗಿ ಧರಿಸಬೇಡಿ


ಅಧ್ಯಯನದ ಪ್ರಕಾರ, ಬಿಗಿಯಾಗಿರುವ ಎರಡು ಮಾಸ್ಕ್ ಧರಿಸುವುದರಿಂದ ವೈರಸ್ ನಿಂದ ಹೆಚ್ಚಿನ ರಕ್ಷಣೆ ಸಿಗುತ್ತದೆ. SARS-CoV-2-ಕಣಗಳನ್ನು ಫಿಲ್ಟರ್ ಮಾಡುವ ಪರಿಣಾಮ ಡಬಲ್ ಆಗುತ್ತದೆ.

ಜಮಾ ಇಂಟರ್ನಲ್ ಮೆಡಿಸಿನ್ ಜರ್ನಲ್ ಹೇಳುವ ಪ್ರಕಾರ   ಬಟ್ಟೆಯ ಪದರ ಹೆಚ್ಚಿಸುವುದು ಪರಿಹಾರವಲ್ಲ.. ಬದಲಾಗಿ ವೈದ್ಯಕೀಯ ಮಾಸ್ಕ್ ಗಳನ್ನು ಸರಿಯಾದ ರೀತಿ ಧರಿಸಿ. ಮುಖಕ್ಕೆ ಹೊಂದಿಕೊಳ್ಳುವಂತೆ ಅಂದರೆ ಟೈಟ್ ಆಗಿ ಇರುವಂತೆ ನೋಡಿಕೊಳ್ಳಬೇಕು. 

 



The Dos and Dont's while ...Take a look👇 pic.twitter.com/hH8nY9Og38

— PIB in KERALA (@PIBTvpm)
click me!