'ಪಾಸಿಟಿವ್ ಬದಲು ಪಾಸಿಟಿವ್ ಚಿಂತನೆ ಬೇಕಾಗಿದೆ' ಇಂದು ಜೈನ ಮುನಿ ಶ್ರೀ ಪ್ರಮನ್‌ಸಾಗರ್ ಜಿ ಮಾತು

By Suvarna News  |  First Published May 10, 2021, 11:40 PM IST

* ಕೊರೋನಾ ಕಾಲದಲ್ಲಿ ನಕಾರಾತ್ಮಕ ಚಿಂತನೆ ದೂರವಿಟ್ಟು ಹೊರಬನ್ನಿ
* ಧಾರ್ಮಿಕ ಚಿಂತಕರು, ಉದ್ಯಮಿಗಳಿಂದ ಧೈರ್ಯ ತುಂಬುವ ಕೆಲಸ
* ಸೋಶಿಯಲ್ ಮೀಡಿಯಾ ಮುಖೇನ ಲೈವ್ ಮಾಹಿತಿ
* ಸದ್ಗುರು, ರವಿಶಂಕರ್ ಗುರೂಜಿ, ಪ್ರೇಂ ಜೀ ಮಾತನಾಡಲಿದ್ದಾರೆ


ನವದೆಹಲಿ(ಮೇ  10) ಕೊರೋನಾದ ಆತಂಕದ ಸಮಯದಲ್ಲಿ ನಕಾರಾತ್ಮಕ ಅಂಶದಿಂದ ಸಕಾರಾತ್ಮಕ ಅಂಶದ ಕಡೆ ಬರಲೇಬೇಕಿದೆ. ಪಾಸಿಟಿವ್ ಆಗುವ ಬದಲು ಪಾಸಿಟಿವ್ ಚಿಂತನೆಗಳು ಬೇಕಾಗಿದೆ. 

ಧಾರ್ಮಿಕ ಸಂಸ್ಥೆಗಳು, ಉದ್ಯಮಿಗಳು, ಫಿಲೋಸಾಫರ್‌ಗಳು, ಮಾಧ್ಯಮಗಳು ಆ ಕೆಲಸವನ್ನು ಆರಂಭಿಸಿವೆ.ಕೊರೋನಾ ಸಂಕಷ್ಟದ ಸಂದರ್ಭದಿಂದ ಹೇಗೆ ಹೊರಗೆ ಬರಬೇಕು? ನಮ್ಮನ್ನು ಖಿನ್ನತೆ ಆವರಿಸಿಕೊಳ್ಳುವುದರಿಂದ ಹೇಗೆ ಹೊರಗೆ ಇರಬೇಕು ಎಂಬ ವಿಚಾರದ ಕುರಿತು ಬುಧವಾರ ಸಂಜೆ  4.30ಕ್ಕೆ  ಜೈನ ಮುನಿ ಶ್ರೀ ಪ್ರಮನ್‌ಸಾಗರ್ ಜಿ ಮಾತನಾಡಲಿದ್ದಾರೆ.

Latest Videos

undefined


ಕೊರೋನಾ ಸಂಕಷ್ಟದ ಸಂದರ್ಭದಿಂದ ಹೇಗೆ ಹೊರಗೆ ಬರಬೇಕು? ನಮ್ಮನ್ನು ಖಿನ್ನತೆ ಆವರಿಸಿಕೊಳ್ಳುವುದರಿಂದ ಹೇಗೆ ಹೊರಗೆ ಇರಬೇಕು ಎಂಬ ವಿಚಾರದ ಕುರಿತು ಬುಧವಾರ ಸಂಜೆ 4.30ಕ್ಕೆ ಶ್ರೀ ರವಿಶಂಕರ ಗುರೂಜಿ ಮಾತನಾಡಲಿದ್ದಾರೆ. 

ಇದೆ ವಿಚಾರವನ್ನು ಇಟ್ಟುಕೊಂಡು ಸದ್ಗುರು ಜಗ್ಗಿ ವಾಸುದೇವ್‌ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.  ಮೇ 11ರಿಂದ 15ರವರೆಗೆ ವಿವಿಧ ವಿಭಾಗದಲ್ಲಿ ಉಪನ್ಯಾಸ ನೀಡಲಿದ್ದಾರೆ. ಅದಕ್ಕೆ ವೇಳೆಯನ್ನು ನಿಗದಿ ಮಾಡಿಕೊಂಡಿದ್ದಾರೆ.

ಯಾರಿಗೆ ಆಕ್ಸಿಜನ್ ಬೆಡ್ ಬೇಕಾಗುತ್ತದೆ?  ಧೈರ್ಯ ಕಳೆದುಕೊಳ್ಳದಿರಿ

ಸದ್ಗುರು ಜಗ್ಗಿ ವಾಸುದೇವ್ , ಜೈನ ಮುನಿ  ಶ್ರೀ ಪ್ರಮನ್‌ಸಾಗರ್ ಜಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಅಜೀಮ್ ಪ್ರೇಮ್‌ಜಿ,  ಶಂಕರಚಾರ್ಯ ವಿಜಯೇಂದ್ರ ಸರಸ್ವತಿ ಜಿ, ಸೋನಾಲ್ ಮಾನ್ಸಿಂಗ್ ಜಿ (ಪದ್ಮವಿಭೂಷಣ್), ಆಚಾರ್ಯ ವಿದ್ಯಾಸಾಗರ್ ಜಿ, ಪೂಜ್ಯಾ ಶ್ರೀ ಮಹಾ ಸಾಂತ್ ಜ್ಞಾನ ದೇ. ಉಪನ್ಯಾಸ ಸರಣಿಯಲ್ಲಿ ಮಾತನಾಡಲಿದ್ದಾರೆ. ಆರ್‌ ಎಸ್‌ಎಸ್ ಸರಸಂಘಸಂಚಾಲಕ ಡಾ. ಮೋಹನ್ ಭಾಗವತರ ಮಾತಿನೊಂದಿಗೆ ಕಾರ್ಯಕ್ರಮ ಅಂತ್ಯವಾಗಲಿದೆ.

ಮೇ  11ರಿಂದ 15ರವರೆಗೆ ಪ್ರತಿದಿನ ಸಂಜೆ 4.30 ರಿಂದ 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಮುಖೇನ ಲೈವ್ ಆಗಿ ಮಾಹಿತಿ ತಿಳಿದುಕೊಳ್ಳಬಹುದು. 

ಈ ಪೇಜ್ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು

click me!