ಭಾರತದಲ್ಲಿ ಈಗಾಗಲೇ ಮ್ಯಾಗ್ನೆಟಿಕ್ ಥೆರಪಿ, ಕಲರ್ ಥೆರಪ್, ಕಾಸ್ಮೆಟಿಕ್ ಥೆರಪಿ, ರೇಖಿ ಸೇರಿ ಅನೇಕ ನೋವು ನಿವಾರಕ ವಿಧಾನಗಳಿವೆ. ಇದೀಗ ಜರ್ಮನಿಯಲ್ಲಿ ತುಂಭಾ ಯಶಸ್ವಿಯಾಗಿರುವ Liebscher & Bracht Pain Therapy ಹೊಸ ಸೇರ್ಪಡೆಯಾಗಿದೆ.
ಬೆಂಗಳೂರು: ಆಧುನಿಕ ಜೀವನಶೈಲಿ ಮನುಷ್ಯನಲ್ಲಿ ಸಾಕಷ್ಟು ದೈಹಿಕ ಹಾಗೂ ಮಾನಸಿಕ ನೋವಿಗೆ ಕಾರಣವಾಗುತ್ತಿವೆ. ಇದರಿಂದ ಅನೇಕ ಪೇನ್ ಕಿಲ್ಲರ್ಸ್ ಸೇವಿಸೋದು ಹೆಚ್ಚುತ್ತಿದೆ. ಇದು ಇನ್ಯಾವುದೋ ಅಡ್ಡ ಪರಿಣಾಮಕ್ಕೆ ಕಾರಣವಾಗಿ ಆರೋಗ್ಯವನ್ನು ಮತ್ತಷ್ಟು ದುರ್ಬಲಗೊಳಿಸಬಲ್ಲದು. ಸಮಾಜವನ್ನು ನೋವಿನಿಂದ ಮುಕ್ತಗೊಳಿಸಲು ಜರ್ಮನಿಯಲ್ಲಿ ಪ್ರಸಿದ್ಧವಾಗಿರುವ ಲಿಬೆಶರ್ ಮತ್ತು ಬ್ರಾಶ್ ಪೇನ್ ಥೆರಪಿಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ ಎಂದು ಮಾನವತಾವಾದಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
ಇದೇ ಮೊದಲ ಬಾರಿಗೆ ಭಾರತದಲ್ಲಿ ಜರ್ಮನಿಯ ಲಿಬೆಶರ್ ಮತ್ತು ಬ್ರಾಶ್ ಪೇನ್ ಥೆರಪಿಗೆ ಇಲ್ಲಿನ ಆರ್ಟ್ ಲಿವಿಂಗ್ ಆಶ್ರಮದಲ್ಲಿ ತರಬೇತು ನೀಡಿದ್ದು, 20 ಪ್ರಶಿಕ್ಷಣಾರ್ಥಿಗಳ ಸನ್ಮಾನ ಹಾಗೂ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮದಲ್ಲಿ ಗುರೂಜಿ ಆಶೀರ್ವಚನ ನೀಡಿದರು.
ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನಲ್ಲಿ ಸಂಭ್ರಮದ ಭಾವ್ - ಅಭಿವ್ಯಕ್ತಿ ಶೃಂಗಸಭೆ
'ದೀರ್ಘಕಾಲೀನ ನೋವು ಭಾರತದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕಾಗಿ ನೋವು ನಿವಾರಕ ಮಾತ್ರೆಗಳ ಮೇಲಿನ ಅವಲಂಬನೆಯು ಹೆಚ್ಚುತ್ತಿರುವುದರಿಂದ ಈ ನವೀನ ಚಿಕಿತ್ಸಾ ಪದ್ಥತಿಯು ಮಾತ್ರೆಗಳ ಅಡ್ಡಪರಿಣಾಮಗಳನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗುವ ಆಶಾಕಿರಣವನ್ನು ತೋರುತ್ತಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಒಳ್ಳೆಯದಿದ್ದರೂ, ನಾವದನ್ನು ಕಲಿಯಬೇಕು. ಮಾನಸಿಕ ನೋವಿನ ನಿವಾರಣೆಗಾಗಿ ಜ್ಞಾನವಿದೆ. ದೈಹಿಕ ನೋವಿಗಾಗಿ ಅಂಥ ಚಿಕಿತ್ಸೆಗಳಿವೆ. ಈ ಜ್ಞಾನವು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು. ಜಗತ್ತಿನ ಒಂದರ ಐದು ಭಾಗ ಭಾರತದಲ್ಲಿ ವಾಸಿಸುತ್ತದೆ. ಆದ್ದರಿಂದ ಇನ್ನೂ ಹೆಚ್ಚು ಜನರಿಗೆ ತರಬೇತಿ ನೀಡಿ ಸಂತೋಷಮಯ, ನೋವು ಮುಕ್ತ ಸಮಾಜ ಸೃಷ್ಟಿಸಬೇಕೆಂದು ನಿರ್ಧರಿಸಿದ್ದೇವೆ. ಆರೋಗ್ಯಕರ ದೇಹ, ಆರೋಗ್ಯಯುತ ಮನಸ್ಸು ಮತ್ತು ಸಂತೋಷಮಯವಾದ ಆತ್ಮವೇ ನಮ್ಮ ಗುರಿ,' ಎಂದು ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ನೋವಿಗೆ ನೈಸರ್ಗಿಕ ಮದ್ದು: ನೋವು ಶಮನಕ್ಕೆ ನೀಡಬಹುದಾದ ಸಂಪೂರ್ಣ ನೈಸರ್ಗಿಕ ವಿಧಾನ (Natural Way of Healing) ಇದಾಗಿದ್ದು, ಸರಳ ವ್ಯಾಯಾಮ ಹಾಗೂ ಇನ್ನಿತರೆ ವಿಧಾನಗಳಿಂದ ನೋವಿಗೆ ಮುಕ್ತಿ ಹಾಡಲಾಗುವುದು. ಯಾವುದೇ ಔಷಧಿ ಚಿಕಿತ್ಸೆ ಇಲ್ಲದೇ ಜನರು ನೋವಿನಿಂದ ಮುಕ್ತರಾಗುತ್ತಿರುವುದರಿಂದ ಈ ವಿಧಾನಕ್ಕೆ ಹಲವು ಮಾರು ಹೋಗುತ್ತಿದ್ದಾರೆ, ಎಂದು ಥೆರಪಿ ಬಗ್ಗೆ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೇ ಜರ್ಮನಿ ಸೇರಿ ಅನೇಕ ಯೂರೋಪ್ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿರುವ ಲಿಬೆಶರ್ ಮತ್ತು ಬ್ರಾಶ್ ಪೇನ್ ಥೆರಪಿಯನ್ನು ಕಂಡು ಹಿಡಿದ ರೊನಾಲ್ಡ್ ಲಿಬೆಶರ್ ಮತ್ತು ಪತ್ನಿ ಡಾ.ಪೆಟ್ರಾ ಬ್ರಾಶ್ ಈ ಚಿಕಿತ್ಸೆಯನ್ನು ಸುಮಾರು 35 ವರ್ಷಗಳಿಂದಲೂ ನೀಡುತ್ತಿದ್ದು, ಎಂಥದ್ದೇ ನೋವಿದ್ದರೂ ಅದನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಾಜದ ನೈಜ ಪರಿವರ್ತನೆಗೆ ನಾಂದಿ ಹಾಡುತ್ತಿರುವ ಶಿಕ್ಷಕರಿಗೆ ಎಜುಕೇಶನ್ ಅವಾರ್ಡ್!
ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಈ ಚಿಕಿತ್ಸೆ ನೀಡಲು ಸುಮಾರು 13 ಸಾವಿರ ಮಂದಿಗೆ ತರಬೇತು ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಡಾ.ಲಿಬೆಶರ್ ದಂಪತಿಗೆ ಸುಮಾರು 2 ಮಿಲಿಯನ್ ಫಾಲೋಯರ್ಸ್ ಇದ್ದಾರೆ. ಯಾವುದೇ ರೀತಿಯ ನೋವಿನಿಂದಾದರೂ ಕೇವಲ ಮೂರು ದಿನಗಳ ಸೆಷನ್‌ನಲ್ಲಿಯೇ ಮುಕ್ತಿ ನೀಡಬಹುದಾದ ಈ ಚಿಕಿತ್ಸೆಯಿಂದ ದಶಕಗಳ ಕಾಲ ಅನುಭವಿಸುತ್ತಿದ್ದ ನೋವಿಗೂ ಗುಡ್ ಬೈ ಹೇಳಿದವರಿದ್ದಾರೆ. ಮಾನಸಿಕ ಹಾಗೂ ದೈಹಿಕ ನೆಮ್ಮದಿ ನೀಡುವಂಥ ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದ್ದು, ನೋವಿನಿಂದ ಮುಕ್ತರಾದ ಅನೇಕ ತಮ್ಮ ಖುಷಿಯನ್ನು ಈ ಕಾರ್ಯಕ್ರಮದಲ್ಲಿ ಹಂಚಿ ಕೊಂಡರು.
ತರಬೇತು ನೀಡಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೋವು ನಿವಾರಕ ಚಿಕಿತ್ಸಾ ವಿಧಾನದ ರೂವಾರಿ ರೊನಾಲ್ಡ್ ಲಿಬೆಶರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಲ್ಲದೇ, ನೋವು ಶಮನಕ್ಕೆ ಆರ್ಟ್ ಆಫ್ ಲಿವಿಂಗ್ ಜೊತೆ ಕೈ ಜೋಡಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗುರೂಜಿಯವರು ಅವರನ್ನು ಸನ್ಮಾಸಿಿದರು.
ಯೋಧ್ಯೆ ಶಾಂತವಾಗಿರಲು ಈ ದೇವಿಯೇ ಕಾರಣ… ರವಿಶಂಕರ್ ಗುರೂಜಿ ಹೇಳಿದ್ದೇನು?