ಭಾರತ ಕೊರೊನಾವೈರಸ್‌ನಿಂದ ಸೇಫು, ಯಾಕೆ ಗೊತ್ತಾ?

By Suvarna NewsFirst Published Mar 3, 2020, 3:46 PM IST
Highlights

ಚೀನಾದ ಎಲ್ಲೆಡೆ ಕೊರೊನಾದ ಆತಂಕವೋ ಆತಂಕ. ಹಾಂಕಾಂಗ್, ಸಿಂಗಾಪುರ, ಥಾಯ್ಲೆಂಡ್ ಮುಂತಾದ ದೇಶಗಳು ಕೊರೊನಾದ ಭೀತಿಯಿಂದ ತತ್ತರಿಸಿವೆ. ಇರಾನ್‌ ಹಾಗೂ ಇಟೆಲಿಗಳಲ್ಲೂ ಕೊರೊನಾ ಹರಡಿದೆ. ಇರಾನ್‌ನಲ್ಲಿ 20 ಮಂದಿ ಮತ್ತು ಇಟಲಿಯಲ್ಲಿ 30 ಮಂದಿ ಈ ಜ್ವರದಿಂದ ಸತ್ತಿದ್ದಾರೆ. ಈ ದೇಶಗಳ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಹಾಗಿದ್ದರೆ ಭಾರತದಲ್ಲೂ ಆತಂಕ ಉಂಟಾಗಬೇಕಿತ್ತಲ್ಲವೆ? ಯಾಕೆ ಆಗಿಲ್ಲ?

ಚೀನಾದಲ್ಲಿ ಜನಿಸಿದ ಕೊರೊನಾವೈರಸ್‌ ಜ್ವರ ಈಗ 60ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿದೆ. ಸುಮಾರು 90 ಸಾವಿರ ಕೇಸುಗಳು ಪತ್ತೆಯಾಗಿದೆ. ಅದರಲ್ಲಿ ಮೂರು ಸಾವಿರ ಮಂದಿ ಸತ್ತೇ ಹೋಗಿದ್ದಾರೆ. ಅದರಲ್ಲೂ 2,500 ಕೇಸುಗಳು ಚೀನಾದಲ್ಲೇ ಪತ್ತೆಯಾಗಿ, ಮರಣವನ್ನಪ್ಪಿದ್ದಾರೆ. ಚೀನಾದ ಎಲ್ಲೆಡೆ ಕೊರೊನಾದ ಆತಂಕವೋ ಆತಂಕ. ಹಾಂಕಾಂಗ್, ಸಿಂಗಾಪುರ, ಥಾಯ್ಲೆಂಡ್ ಮುಂತಾದ ದೇಶಗಳು ಕೊರೊನಾದ ಭೀತಿಯಿಂದ ತತ್ತರಿಸಿವೆ. ಇರಾನ್‌ ಹಾಗೂ ಇಟೆಲಿಗಳಲ್ಲೂ ಕೊರೊನಾ ಹರಡಿದೆ. ಇರಾನ್‌ನಲ್ಲಿ 20 ಮಂದಿ ಮತ್ತು ಇಟಲಿಯಲ್ಲಿ 30 ಮಂದಿ ಈ ಜ್ವರದಿಂದ ಸತ್ತಿದ್ದಾರೆ. ಈ ದೇಶಗಳ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಹಾಗಿದ್ದರೆ ಭಾರತದಲ್ಲೂ ಆತಂಕವಿದ್ದರೂ, ಹೋಲಿಸಿದರೆ ತುಸು ಕಡಿಮೆ. ಏಕೆ?

"

ಭಾರತದಲ್ಲಿ ಇದುವರೆಗೆ ಪತ್ತೆಯಾಗಿರುವ ಕೊರೊನಾ ಕೇಸುಗಳು ಐದು ಮಾತ್ರ. ಆದರೆ ಒಂದೇ ಒಂದು ಸಾವು ಕೂಡ ಇದರಿಂದಾಗಿ ಸಂಭವಿಸಿಲ್ಲ. ಇದರಲ್ಲಿ ಮೂರು ಕೇಸುಗಳೂ ಕಂಡುಬಂದಿರೋದು ಕೇರಳದಲ್ಲೇ. ಮೂವರೂ ಕೊರೊನಾದ ಪ್ರಾಥಮಿಕ ಲಕ್ಷಣಗಳಿಂದ ಪೀಡಿತರಾಗಿದ್ದರೂ, ಕೂಡಲೇ ಸಮರ್ಪಕ ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೊಸ ಕೊರೊನಾ ಕೇಸುಗಳು ಕಂಡುಬಂದಿಲ್ಲ. ಅಂದರೆ ಭಾರತದಲ್ಲಿ ಈಗ ಕೊರೊನಾ ಪ್ರಕರಣಗಳೇ ಇಲ್ಲ. ಇದೇಕೆ?

- ಚೀನಾದಲ್ಲಿ ಕೊರೊನಾವೈರಸ್‌ ಪತ್ತೆಯಾದ ಕೂಡಲೇ ವಿಶ್ವಸಂಸ್ಥೆ ಎಲ್ಲ ದೇಶಗಳನ್ನು ಎಚ್ಚರಿಸಿದ ಕೂಡಲೇ ಭಾರತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತು. ವಿದೇಶಗಳಿಂದ ಬರುವ ಪ್ರವಾಸಿಗಳ ಮೇಲೆ ತೀವ್ರ ನಿಗಾ ಇಟ್ಟಿತು. ಎಲ್ಲ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನರ್‌ಗಳನ್ನು ಇಡಲಾಯಿತು. ಇವು ಪ್ರಯಾಣಿಕನಲ್ಲಿ ಜ್ವರದ ಅಂಶಗಳಿದ್ದರೆ ಕೂಡಲೇ ಪತ್ತೆ ಮಾಡುತ್ತವೆ. ಅನುಮಾನ ಬಂದವರನ್ನು ಕ್ವಾರಂಟೈನ್‌ನಲ್ಲಿ ಇಡಲಾಯಿತು.

- ಭಾರತದ ಆರೋಗ್ಯ ಸಚಿವಾಲಯ ಶೀಘ್ರವೇ ಮುನ್ನೆಚ್ಚರಿಕೆ ಸೂಚನೆಗಳನ್ನು ಎಲ್ಲ ಕಡೆಗೆ ರವಾನಿಸಿತು. ಎಲ್ಲ ಕಡೆಗೆ ಕೊರೊನಾ ಜ್ವರದ ಸೂಚನೆಗಳನ್ನು, ಪತ್ತೆ ಹಚ್ಚುವ ಕ್ರಮಗಳನ್ನು ಹಾಗೂ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿಖರವಾದ ಎಚ್ಚರಿಕೆ ಸೂಚನೆಗಳನ್ನು ಕೊಟ್ಟಿತು.

2 ದಿನ ಬೆಂಗ್ಳೂರಲ್ಲೇ ಇದ್ದ ಕೊರೋನಾ ಸೋಂಕಿತ ವ್ಯಕ್ತಿ..! 

- ಚೀನಾದಲ್ಲಿ ಹಲವು ಭಾರತೀಯ ಪ್ರಜೆಗಳು ಇದ್ದರು, ಈಗಲೂ ಇದ್ದಾರೆ. ಅದರಲ್ಲೂ ಜ್ವರಪೀಡಿತ ವುಹಾನ್‌ ಹಾಗೂ ಹುಬೆಯಿ ಪ್ರಾತ್ಯದಲ್ಲಿ ಸಾಕಷ್ಟು ಇದ್ದಾರೆ. ಇವರನ್ನು ಅಲ್ಲಿಂದ ತೆರವು ಮಾಡಲು ಭಾರತ ಸರಕಾರ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಂಡಿತು. ಇದಕ್ಕಾಗಿ ಸರಕಾರದ ಎಲ್ಲ ಸಚಿವಾಲಯಗಳು ತಕ್ಷಣವೇ ಪರಸ್ಪರ ಚುರುಕಾಗಿ ಸ್ಪಂದಿಸಿ ಕ್ರಮ ಕೈಗೊಂಡವು. ಜಪಾನ್‌ನ ತೀರದಲ್ಲಿ ಹಡಗಿನಲ್ಲಿ ಬಂಧಿತರಾಗಿದ್ದ ಭಾರತೀಯರನ್ನು ಕೂಡ ಅಲ್ಲಿಂದ ತರಲಾಯಿತು. ಕರೆತರುವ ಮುನ್ನ ಕೊರೊನಾ ಪೀಡಿತರು ಅವರಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಯಿತು.

- ಮುಖ್ಯವಾಗಿ, ಪ್ರಾಥಮಿಕವಾಗಿ ಜ್ವರ ಪೀಡಿತರಾದ ಮೂವರು ರೋಗಿಗಳ ಜೊತೆಗೆ ಯಾರು ಸಂಪರ್ಕ ಇಟ್ಟುಕೊಂಡಿದ್ದರೋ ಅವರ ಮೇಲೆ ತೀವ್ರ ನಿಗಾ ಇಡಲಾಯಿತು. ಇದು ಸೋಂಕು ರೋಗ ಆದ್ದರಿಂದ ನಿಕಟವಾಗಿ ಇರುವವರಲ್ಲಿ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ರೋಗಪೀಡಿತರಿಂದ ಇನ್ನೊಬ್ಬರಿಗೆ ಬರಬಹುದು. ಅಥವಾ ಇವರ ಜೊತೆಗೆ ಸಂಪರ್ಕದಲ್ಲಿರುವವರ ಮೂಲಕ ಈ ವೈರಸ್‌ ಬೇರೊಬ್ಬರಿಗೆ ಹರಡಬಹುದು. ಕೇರಳದಲ್ಲಿ ಮೊದಲ ಹರಡಿದ್ದ ನಿಪಾ ಜ್ವರ ಹರಡಿದ್ದು ಹೀಗೆಯೇ. ಈ ನಿಟ್ಟಿನಲ್ಲಿ ಕೇರಳ ಸರಕಾರ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಪಾಲಿಸುತ್ತಿದೆ. ಈ ಬಾರಿಯೂ ಇದನ್ನು ಹೆಚ್ಚು ಹರಡದಂತೆ ತಡೆಯುವಲ್ಲಿ ಕೇರಳದ ಬಹುಪಾಲು ಇದೆ.

 ಕೊರೋನಾ ಅಟ್ಟಹಾಸಕ್ಕೆ ಭಾರತೀಯ ಚಿತ್ರರಂಗ ಗಢಗಢ; ಶೂಟಿಂಗ್ ಕ್ಯಾನ್ಸಲ್! 

- ಆದರೂ ಕೊರೊನಾ ಹಲವು ಕಡೆಗಳಿಗೆ ಹರಡುತ್ತಿದೆ. ವೈರಸ್‌ಗಳು ಕಣ್ಣಿಗೆ ಕಾಣದಂತೆ, ಮೇಲ್ನೋಟಕ್ಕೆ ಯಾವುದೇ ಸೂಚನೆಯಿಲ್ಲದೆ ಹರಡುವ ಸಾಮರ್ಥ್ಯ ಹೊಂದಿರುವುದು ಇದಕ್ಕೆ ಕಾರಣ. ಭಾರತವೂ ಎಚ್ಚರದಿಂಧ ಇರಬೇಕು ಎಂದು ಸೂಚಿಸಲಾಗಿದೆ. ವಿಶ್ವಸಸ್ಥೆಯ ಎಚ್ಚರಿಕೆ ಸೂಚನೆಗಳನ್ನು ಭಾರತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಹೀಗಾಗಿ ಭಾರತ ಇದುವರೆಗೆ ಸೇಫಾಗಿ ಇದೆ.

click me!