ವೃದ್ಧರಿಗೆ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ 30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ರಾಜ್ಯಕ್ಕೆ ಸರಬರಾಜು ಮಾಡಲಾಗಿದೆ.
ಬೆಂಗಳೂರು (ಜ.01): ದೇಶದಲ್ಲಿ ಕೋವಿಡ್-19 ಒಮಿಕ್ರಾನ್ ವೈರಸ್‌ನ ಉಪತಳಿ ಜೆಎನ್.1 ಪತ್ತೆಯಾದ ಬೆನ್ನಲ್ಲಿಯೇ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು ಹಲವರು ಕೋವಿಡ್‌ಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿಯೇ ವೃದ್ಧರಿಗೆ, ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ 30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ರಾಜ್ಯಕ್ಕೆ ಸರಬರಾಜು ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ 30,000 ಡೋಸ್ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ರಾಜ್ಯಕ್ಕೆ ಸರಬರಾಜು ಮಾಡಲಾಗಿದೆ. ಈ ಕೋರ್ಬಿವ್ಯಾಕ್ಸ್ ಲಸಿಕೆಗಳನ್ನು ಆಯಾ ಜಿಲ್ಲೆಗಳಿಗೆ ಅಗತ್ಯತೆಗನುಸಾರವಾಗಿ ಹಂಚಿಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಕೋರ್ಬಿವ್ಯಾಕ್ಸ್ ಲಸಿಕೆಉನ್ನು ವೊಜಾತಿ (ಹೆಟೆರೊಲಾಗಸ್) ಮುನ್ನೆಚ್ಚರಿಕೆ ಡೋಸ್ ಆಗಿ ನೀಡಬಹುದಾಗಿರುತ್ತದೆ. ಆದ್ದರಿಂದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಕನಿಷ್ಠ 6 ತಿಂಗಳುಗಳು ಅಥವಾ 26 ವಾರಗಳನ್ನು ಪೂರೈಸಿದ ಮುನ್ನೆಚ್ಚರಿಕಾ ಡೋಸ್ ಪಡೆಯದ 60 ವರ್ಷ ಮೇಲ್ಪಟ್ಟವರಿಗೆ, ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವವರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗುತ್ತದೆ.
ತೀರ ತುರ್ತು ಇದ್ದರೆ ಮಾತ್ರ ಐಸಿಯುಗೆ ದಾಖಲು: ಮೊದಲ ಬಾರಿ ಕೇಂದ್ರ ಸರ್ಕಾರ ಮಾರ್ಗಸೂಚಿ
ಇನ್ನು ಆರೋಗ್ಯ ಇಲಾಖೆಯ ಕೋವಿನ್ ಪೋರ್ಟಲ್‌ನಿಂದ ಲಸಿಕೆ ಪಡೆದವರ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಹಂಚಿಕೆಯಾದ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ಬಳಸಿ ಕೋವಿಡ್-19 ಲಸಿಕಾರಣದ ಮಾರ್ಗಸೂಚಿ ಪ್ರಕಾರ ಲಸಿಕಾಕರಣ ಮಾಡಬೇಕು. ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ವತಿಯಿಂದ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಈ ಕೋವಿಡ್ ಲಸಿಕೆಯನ್ನು ಹಂಚಿಕೆ ಮಾಡಿ ಅಲ್ಲಿ ಮಾತ್ರ ಲಸಿಕಾಕರಣ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.
ಲಸಿಕಾ ಲಭ್ಯತೆ ಮತ್ತು ಲಸಿಕಾ ಕೇಂದ್ರದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಹೆಚ್ಚಿನ ಮಟ್ಟದ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಇನ್ನು ಜಿಲ್ಲಾವಾರು ಲಸಿಕೆಗಳನ್ನು ಹಂಚಿಕೆ ಮಾಡಿದ ಪಟ್ಟಿ ಈ ಕೆಳಗಿನಂತೆ ತೋರಿಸಲಾಗಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿ- 5,680
ಬೆಳಗಾವಿ - 2,280
ಮೈಸೂರು - 1,360
ತುಮಕೂರು - 1,300
ದಕ್ಷಿಣ ಕನ್ನಡ - 1,140
ವಿಜಯಪುರ - 1,000
ಕೋವಿಡ್ ಮಾರ್ಗಸೂಚಿ: ಪಾಸಿಟಿವ್ ಉದ್ಯೋಗಿಗಳಿಗೆ 7 ದಿನ ವೇತನ ಸಹಿತ ರಜೆ: ನೆಗಡಿ, ಜ್ವರವಿರುವ ಮಗುವಿಗೆ ಶಾಲೆ ರಜೆ
ಈ ಪ್ರಮುಖ ಜಿಲ್ಲೆಗಳಿಗೆ ಹೆಚ್ಚಿನ ಕೋರ್ಬಿವ್ಯಾಕ್ಸ್ ಲಸಿಕಾ ಡೋಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ಲಸಿಕೆಗಳನ್ನು ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.