ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಸಮಿತಿಯ ಸದಸ್ಯರಾದ ಡಾ.ಆರ್.ಕೆ.ಮಣಿ ಹೇಳಿದ್ದಾರೆ.
ನವದೆಹಲಿ (ಜನವರಿ 1, 2024): ರೋಗಿಗಳನ್ನು ತುರ್ತು ನಿಗಾ ಘಟಕ (ಐಸಿಯು) ಕ್ಕೆ ಸೇರ್ಪಡೆ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ.
‘ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಇದ್ದರೆ, ಹೆಚ್ಚಿನ ನಿಗಾ ವಹಿಸಬೇಕಾದ ಸ್ಥಿತಿಗಳಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯುಗಳಲ್ಲಿ ಮಾತ್ರ ಅಡ್ಮಿಟ್ ಮಾಡಿಕೊಳ್ಳಬಹುದು ಎಂದು ಈ ಸಮಿತಿ ಹೇಳಿದೆ. ದೇಶದಲ್ಲಿ ಐಸಿಯು ಪರಿಮಿತ ಸಂಪನ್ಮೂಲವಾಗಿದ್ದು, ಇವು ಅತ್ಯಂತ ಅಗತ್ಯವಿರುವವರಿಗೆ ದೊರೆಯಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ’ ಎಂದು ಸಮಿತಿಯ ಸದಸ್ಯರಾದ ಡಾ.ಆರ್.ಕೆ.ಮಣಿ ಹೇಳಿದ್ದಾರೆ.
ಇದನ್ನು ಓದಿ: ಹೃದಯಾಘಾತದ ಬಳಿಕ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ಹೃದಯ ಬಡಿತ: ಆದರೂ ವ್ಯಕ್ತಿ ಬದುಕುಳಿದಿದ್ದು ಹೀಗೆ..
ಭಾರತದಲ್ಲಿ ಸುಮಾರು 1 ಲಕ್ಷ ಐಸಿಯು ಹಾಸಿಗೆಗಳ ಸೌಲಭ್ಯವಿದ್ದು, ಇವುಗಳಲ್ಲಿ ಬಹುಪಾಲು ಖಾಸಗಿ ಹಾಗೂ ಮಹಾನಗರಗಳಲ್ಲಿವೆ. ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ದುಸ್ತರವಾಗಿದೆ. ಹೀಗಾಗಿಯೇ ಎಲ್ಲರಿಗೂ ಈ ಸೌಲಭ್ಯ ದೊರೆಯಬೇಕು ಎಂಬ ಕಾರಣಕ್ಕೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಇದನ್ನು ಓದಿ: ದೇಶದ ಮೊದಲ ಯಕೃತ್ ಕಸಿಗೆ 25 ವರ್ಷ : ಯಕೃತ್ ಕಸಿಗೊಳಗಾದ ಮೊದಲ ಮಗು ಈಗ ವೈದ್ಯ