ಆ ಆಹಾರ ತಮ್ಮ ದೇಹಕ್ಕೆ ಅಪಾಯಕಾರಿ ಎಂಬ ವಿಷಯ ತಿಳಿದಿದ್ದರೂ ಅದನ್ನೇ ಪದೇ ಪದೇ ಮತ್ತು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಐಸಿಎಂಆರ್ ಮೂರು ಆಹಾರ ಸೇವನೆ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ನವದೆಹಲಿ: ಬೇಡವಾದ ಕೆಲಸವನ್ನೇ ಮಾಡೋದು ಮನುಷ್ಯ ಸಹಜ ಗುಣ. ಅದು ಆಹಾರ ಸೇವನೆಯಲ್ಲಿಯೂ ಕಂಡು ಬರುತ್ತದೆ. ವೈದ್ಯರು ತಿನ್ನಬೇಡ ಎಂದು ಹೇಳಿರುವ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಆ ಆಹಾರ ತಮ್ಮ ದೇಹಕ್ಕೆ ಅಪಾಯಕಾರಿ ಎಂಬ ವಿಷಯ ತಿಳಿದಿದ್ದರೂ ಅದನ್ನೇ ಪದೇ ಪದೇ ಮತ್ತು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಐಸಿಎಂಆರ್ ಮೂರು ಆಹಾರ ಸೇವನೆ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ದೇಹದ 78 ಭಾಗಗಳಿಗೆ ಕೆಳಗಿನ ಮೂರು ಆಹಾರಗಳು ಅಪಾಯಕಾರಿ ಎಂದು ಸೂಚನೆ ನೀಡಿದೆ.
ಹಲವು ಅಧ್ಯಯನಗಳ ಪ್ರಕಾರ, ಅಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅಂಶದ ಆಹಾರ, ಸಕ್ಕರೆ, ಸೋಶಿಯಂ ಅಂಶವುಳ್ಳ ಆಹಾರ ಸೇವನೆ ದೇಹದ ಬಹುತೇಕ ಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ರೀತಿಯ ಆಹಾರ ಸೇವನೆಯಿಂದ ಮಧುಮೇಹದಿಂದ ಹಿಡಿದು ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದ ಅಂಗಗಳು ಕ್ಷೀಣಿಸಿದಾಗ ಕ್ಯಾನ್ಸರ್‌ಗೆ ತುತ್ತಾಗುತ್ತವೆ. ಇವುಗಳ ಜೊತೆಯಲ್ಲಿ ರಕ್ತದೊತ್ತಡ, ಹೃದಯದ ಸಮಸ್ಯೆ, ಸ್ಥೂಲಕಾಯಕ್ಕೂ ತುತ್ತಾಗಬೇಕಾಗುತ್ತದೆ.
ಮೂರು ಆಹಾರ ಪದಾರ್ಥಗಳ ಸೇವನೆಯಲ್ಲಿರಲಿ ಮಿತಿ
ವೈದ್ಯರು ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇವನೆ ಮೇಲೆ ಮಿತಿ ಇರಬೇಕು ಎಂದು ಹೇಳುತ್ತಿರುತ್ತಾರೆ. ICMR ಮತ್ತು NIN ಜಂಟಿಯಾಗಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಯಲ್ಲಿ ದಿನನಿತ್ಯ ಸೇವಿಸುವ ಆಹಾರ ಹೇಗಿರಬೇಕು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ವಿವರಿಸಿದೆ. ಹೆಚ್ಚಿನ ಪ್ರಮಾಣದ ಕೊಬ್ಬು, ಸಕ್ಕರೆ ಹಾಗೂ ಉಪ್ಪಿನಂಶ ಹೊಂದಿರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಐಸಿಎಂಆರ್ ಹೇಳಿದೆ.
Health Tips: ಗ್ಯಾಸ್‌ಗಿಂತ ಮೈಕ್ರೋವೇವ್ ಬೆಸ್ಟ್ ಅಂತಿದ್ದಾರೆ ತಜ್ಞರು..
ಅಲ್ಟ್ರಾ ಸಂಸ್ಕರಿತ ಆಹಾರ (UPFs) ಮತ್ತು ಕೊಬ್ಬು, ಸಕ್ಕರೆ ಮತ್ತು ಉಪ್ಪು (HFSS) ಅಧಿಕವಾಗಿರುವ ಆಹಾರಗಳಿಂದ ಆದಷ್ಟು ದೂರವಿರಬೇಕು. ದಿನಕ್ಕೆ 20 ರಿಂದ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು ಎಂದು ಐಸಿಎಂಆರ್ ಹೇಳುತ್ತದೆ. ಹೆಚ್ಚು ಎಣ್ಣೆಯಂಶವುಳ್ಳ ಆಹಾರ ದೇಹಕ್ಕೆ ತುಂಬಾ ಅಪಾಯಕಾರಿ. ಇದು ದೇಹದ ಹಲವು ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಲಿವರ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿಸುತ್ತವೆ. ಇಷ್ಟು ಮಾತ್ರವಲ್ಲದೇ ದೇಹದ ತೂಕವೂ ದಿಢೀರ್ ಏರಿಕೆಯಾಗುತ್ತದೆ.
ಜನತೆಗೆ ಐಸಿಎಂಆರ್ ಸಲಹೆ
ಇಂದು ಹಸಿವು ಆದರೆ ಊಟ ಮಾಡುವ ಬದಲು ಕುರುಕುಲು ತಿಂಡಿ ಸೇವನೆ ಮಾಡುತ್ತಾರೆ. ಅದರಲ್ಲಿಯೂ ಉಪ್ಪಿನಂಶವುಳ್ಳ ಆಹಾರ ತಿನ್ನಲು ಹೆಚ್ಚು ಇಷ್ಟಪಡ್ತಾರೆ. ರೆಡ್ ಮೀಟ್, ಫಾಸ್ಟ್‌ಫುಡ್, ಸಂಸ್ಕರಿಸಿದ ಆಹಾರ, ಫಾಸ್ಟ್‌ಫುಡ್ ಸ್ನ್ಯಾಕ್ಸ್, ಖರೀದ ಮಾಂಸದ ಆಹಾರಗಳು ಇದರಲ್ಲಿ ಸೇರುತ್ತವೆ. ಇದರ ಜೊತೆಗೆ ಅತಿಯಾದ ಸಕ್ಕರೆ ಸೇವನೆ ದೇಹದ ತೂಕ ಏರಿಕೆಗೆ ಕಾರಣವಾಗುತ್ತದೆ. ಸಕ್ಕರೆ ಅಂಶದ ಸೇವನೆ ಹಲ್ಲುಗಳ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡದಂತೆ ಜನತೆಗೆ ಐಸಿಎಂಆರ್ ಸಲಹೆ ನೀಡಿದೆ.
ಇವುಗಳನ್ನು ತಿಂದ್ರೆ 50ರ ಹರೆಯದ ಮಹಿಳೆ, 20ರ ಯುವತಿಯಂತೆ ಸ್ಟ್ರಾಂಗ್ ಆಗ್ತಾರೆ!