
ಮನೆ (Home) ಯಲ್ಲಿ ಚಿಕ್ಕ ಮಕ್ಕಳಿ (Children)ದ್ರೆ ತುರ್ತು ಸಂದರ್ಭದಲ್ಲಿ ಬೇಕು ಎನ್ನುವ ಕಾರಣಕ್ಕೆ ನೆಗಡಿ,ಕೆಮ್ಮು,ವಾಂತಿ-ಬೇಧಿ ಸೇರಿದಂತೆ ಸಾಮಾನ್ಯವಾಗಿ ಕಾಡುವ ರೋಗಗಳ ಔಷಧಿಗಳನ್ನು ಮನೆಯಲ್ಲಿಟ್ಟುಕೊಂಡಿರುತ್ತೇವೆ. ಅನೇಕ ಬಾರಿ ವೈದ್ಯರ ಸಲಹೆ ಪಡೆಯದೇ ಪಾಲಕರೇ ಮಕ್ಕಳಿಗೆ ಮಾತ್ರೆ,ಔಷಧಿ ನೀಡುತ್ತಾರೆ. ಆದ್ರೆ ಹಿಂದೆ ಕಾಡಿದ ಜ್ವರ ಹಾಗೂ ಈಗ ಮಕ್ಕಳಿಗೆ ಬಂದ ಜ್ವರದಲ್ಲಿ ವ್ಯತ್ಯಾಸವಿರುತ್ತದೆ. ಪಾಲಕರು ನೀಡುವ ಔಷಧಿಯಿಂದ ಮಕ್ಕಳ ಜ್ವರ ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಅನೇಕ ಬಾರಿ ಬೇಗ ಗುಣವಾಗ್ಲಿ ಎಂಬ ಕಾರಣಕ್ಕೆ ಹೆಚ್ಚು ಡೋಸ್ ನೀಡುವುದೂ ಇದೆ. ಇದೆಲ್ಲವೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಐಬುಪ್ರೊಫೇನ್ (ibuprofen) ಜ್ವರ ಅಥವಾ ನೋವಿನ ಸಂದರ್ಭದಲ್ಲಿ ನೀಡುವ ಒಂದು ಔಷಧಿ. ವಯಸ್ಕರು ಸಾಮಾನ್ಯವಾಗಿ ಈ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಮಾತ್ರೆಯನ್ನು ಮಕ್ಕಳಿಗೆ ನೀಡಬಹುದಾ?
ಜ್ವರದಲ್ಲಿ ಮಗುವಿಗೆ ಐಬುಪ್ರೊಫೇನ್ ತಿನ್ನಿಸಿದರೆ ಅನಾಹುತ ಸಂಭವಿಸಬಹುದು. ಹಾಗಾಗಿ ಐಬುಪ್ರೋಫೇನ್ ನೀಡುವ ಮೊದಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಯಾವುದೇ ಅಡ್ಡ ಪರಿಣಾಮವುಂಟಾಗುವುದಿಲ್ಲ.
ಐಬುಪ್ರೊಫೇನ್ ಎಂದರೇನು ?: ಮೊದಲೇ ಹೇಳಿದಂತೆ ಈ ಔಷಧಿಯನ್ನು ಮುಖ್ಯವಾಗಿ ನೋವು, ಊತ ಮತ್ತು ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧವಾಗಿದೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ಇದನ್ನು ನೀವು ಔಷಧಿ ಮಳಿಗೆಗಳಲ್ಲಿ ಖರೀದಿ ಮಾಡಬಹುದು.
WORLD KIDNEY DAY 2022: ನಿಮ್ಮ ಕಿಡ್ನಿಗಳನ್ನು ಹ್ಯಾಪಿಯಾಗಿಡುವುದು ಹೇಗೆ?
ಮಕ್ಕಳಿಗೆ ಐಬುಪ್ರೊಫೇನ್ ನೀಡಬಹುದೇ? : ಯಸ್. ಐಬುಪ್ರೊಫೇನ್ ಅತ್ಯಂತ ವಿಶ್ವಾಸಾರ್ಹ ಔಷಧವಾಗಿದೆ. ಆದ್ರೆ ವೈದ್ಯರು ಸೂಚಿಸಿದ ಪ್ರಮಾಣದಲ್ಲಿಯೇ ಐಬುಪ್ರೊಫೇನ್ ನೀಡುವುದು ಅತ್ಯಗತ್ಯ.
ಐಬುಪ್ರೊಫೇನ್ ಯಾವಾಗ ನೀಡಲಾಗುತ್ತದೆ ? : ಜೀರ್ಣಕ್ರಿಯೆಗೆ ಸಮಸ್ಯೆಯಾಗದಿರಲು ಐಬುಪ್ರೊಫೇನ್ ಅನ್ನು ಆಹಾರದ ನಂತ್ರ ತೆಗೆದುಕೊಳ್ಳುವುದು ಉತ್ತಮ. ಇದರ ಡೋಸೇಜ್, ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿರುತ್ತದೆ. ವಯಸ್ಕರು ಮತ್ತು ಮಕ್ಕಳು ಒಂದೇ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡುವಂತಿಲ್ಲ. ವೈದ್ಯರ ಸೂಚನೆಯಂತೆ ಮಕ್ಕಳಿಗೆ ನೀಡಬೇಕಾಗುತ್ತದೆ.
ಯಾರು ಐಬುಪ್ರೊಫೇನ್ ತೆಗೆದುಕೊಳ್ಳಬಾರದು ? : ಸಾಮಾನ್ಯವಾಗಿ ರೋಗವನ್ನು ಪತ್ತೆಹಚ್ಚಿದ ನಂತರ ಶಿಶುವೈದ್ಯರು ಐಬುಪ್ರೊಫೇನ್ ಸೂಚಿಸುತ್ತಾರೆ. ಆದ್ರೆ ಅಲ್ಸರೇಟಿವ್ ಕೊಲೈಟಿಸ್ ಅಸ್ತಮಾ, ಔಷಧಿ ಅಲರ್ಜಿ, ಹೃದಯ ರೋಗ ಅಥವಾ ರಕ್ತದೊತ್ತಡ ಸಮಸ್ಯೆಗಳಿರುವ ಮಕ್ಕಳಿಗೆ ಐಬುಪ್ರೊಫೇನ್ ನೀಡಲಾಗುವುದಿಲ್ಲ.
ನಾನು ಯಾವಾಗ ಐಬುಪ್ರೊಫೇನ್ ತೆಗೆದುಕೊಳ್ಳಬಹುದು ? : ಮಗುವಿಗೆ ವಿಪರೀತ ಜ್ವರವಿದ್ದು,ಯಾವುದೇ ಮದ್ದಿನಿಂದ ಗುಣವಾಗ್ತಿಲ್ಲ ಎಂದಾದಾಗ ಐಬುಪ್ರೊಫೇನ್ ನೀಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಪಾಲಕರು ತಮ್ಮ ಮನಸ್ಸಿಗೆ ಬಂದಂತೆ ನೀಡಬಾರದು. ವೈದ್ಯರ ಸಲಹೆ ನಂತ್ರವೇ ಮಕ್ಕಳಿಗೆ ಈ ಮಾತ್ರೆಯನ್ನಿ ನೀಡಬೇಕು.
Mother And Baby: ತಾಯಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಮಗುವಿಗೆ ಶೀತವಾಗುತ್ತಾ?
ವೈದ್ಯರು ಹೇಳೋದೇನು? : ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಐಬುಪ್ರೊಫೇನ್ ನೀಡಬಹುದು ಎನ್ನುತ್ತಾರೆ ಶಿಶು ವೈದ್ಯರು. ಮಗುವಿಗೆ ಇದರ ಡೋಸೇಜ್ ಪ್ರತಿ ಕೆಜಿಗೆ ಮಿಲಿಗ್ರಾಂನಲ್ಲಿರುತ್ತದೆ. ಪ್ರತಿ ಕೆಜಿ ತೂಕಕ್ಕೆ 5 ರಿಂದ 10 ಮಿಗ್ರಾಂ ಮತ್ತು ಐಬುಪ್ರೊಫೇನ್ ಅನ್ನು ದಿನಕ್ಕೆ 3 ಬಾರಿ ಪ್ರತಿ 8 ಗಂಟೆಗಳಿಗೊಮ್ಮೆ ನೀಡಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಮಗುವಿಗೆ ಡೆಂಗ್ಯೂ ಜ್ವರವಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಐಬುಪ್ರೊಫೇನ್ ನೀಡಿದರೆ, ಇದು ಗ್ಯಾಸ್ಟ್ರಿಟಿಸ್ ಅಥವಾ ಪ್ಲೇಟ್ಲೆಟ್ಗಳ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು ಎನ್ನುತ್ತಾರೆ ವೈದ್ಯರು. ಹಾಗಾಗಿ ಐಬುಪ್ರೊಫೇನ್ ಬಗ್ಗೆ ಪಾಲಕರಿಗೆ ಎಷ್ಟೇ ಮಾಹಿತಿಯಿರಲಿ ಇಲ್ಲವೆ ಈ ಹಿಂದೆ ವೈದ್ಯರ ಮಗುವಿಗೆ ಆ ಔಷಧಿ ನೀಡಿರಲಿ,ಪಾಲಕರು ವೈದ್ಯರ ಸಲಹೆ ಇಲ್ಲದೆ, ಮಗುವನ್ನು ತಪಾಸಣೆಗೊಳಪಡಿಸದೆ ಐಬುಪ್ರೊಫೇನ್ ಔಷಧಿ ನೀಡಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.