ನೀವೂ ಉಗುರು ಕಡಿತೀರಾ? ಆರೋಗ್ಯ ಹಾಳ್ಮಾಡುವ ಚಟಕ್ಕೆ ಹೇಳಿ ಗುಡ್ ಬೈ

By Suvarna News  |  First Published Mar 10, 2022, 6:01 PM IST

ಉಗುರು, ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಂದದ ಉಗುರು ಎಲ್ಲರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಉಗುರು ಸೊಟ್ಟ-ಪಟ್ಟವಾಗಿರುತ್ತದೆ. ಅದಕ್ಕೆ ಕಾರಣ ಅವರ ಉಗುರು ಕಡಿಯುವ ಚಟ. ಮನೆ ಮದ್ದಿನ ಮೂಲಕವೇ ಈ ಚಟವನ್ನು ಬಿಡ್ಬಹುದು. 
 


ಕೆಲವರು ಉಗುರು (Nail) ಕಚ್ಚು (Chewing)ತ್ತಿರೋದನ್ನು ನೀವು ನೋಡಿರ್ತೀರಾ. ನೀವೇ ಉಗುರು ಕಡಿಯುವ ಅಭ್ಯಾಸ (Practice) ಹೊಂದಿರಲೂಬಹುದು. ಈ ಉಗುರು ಕಡಿಯುವ ಅಭ್ಯಾಸ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತು. ಉಗುರಿನಲ್ಲಿರುವ ಕೊಳಕು ಮತ್ತು ಉಗುರಿನ ಚೂರು ಹೊಟ್ಟೆ ಸೇರುವ ಸಾಧ್ಯತೆ ಇರುತ್ತದೆ. ಇದ್ರಿಂದ ಅನಾರೋಗ್ಯ ಕಾಡುತ್ತದೆ. ಕೆಲವರಿಗೆ ಉಗುರು ಕಡಿಯುವ ಅಭ್ಯಾಸ ಬಾಲ್ಯದಿಂದಲೇ ಬಂದಿರುತ್ತದೆ. ಮತ್ತೆ ಕೆಲವರು ಒತ್ತಡಕ್ಕೊಳಗಾದಾಗ ಉಗುರು ಕಡಿಯುವ ಅಭ್ಯಾಸ ಶುರು ಮಾಡಿರುತ್ತಾರೆ. ಆಳವಾಗಿ ಆಲೋಚನೆ ಮಾಡುವಾಗ ಅಥವಾ ಅತಿಯಾದ ಒತ್ತಡದಲ್ಲಿದ್ದಾಗ ಅವರಿಗೆ ತಿಳಿಯದೇ ಕೈ ಉಗುರು ಬಾಯಿಯೊಳಗೆ ಹೋಗಿರುತ್ತದೆ. ಇದು ನೋಡುವವರಿಗೆ ಅಸಹ್ಯವೆನಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುರು ಕಡಿಯುತ್ತಿದ್ದರೆ ಅದು ಮುಜುಗರಕ್ಕೂ ಕಾರಣವಾಗುತ್ತದೆ. ಅನೇಕರು ಈ ಅಭ್ಯಾಸ ಬಿಡುವ ಪ್ರಯತ್ನ ನಡೆಸಿರುತ್ತಾರೆ. ಆದ್ರೆ ಕಷ್ಟವಾಗಿರುತ್ತದೆ. ಒಂದರೆಡು ದಿನ ಹೇಗೋ ಅದನ್ನು ನಿಯಂತ್ರಿಸಿಕೊಂಡಿರುತ್ತಾರೆ. ಆದ್ರೆ ಗೊತ್ತಿಲ್ಲದೆ ಮತ್ತೆ ಶುರುವಾಗಿರುತ್ತದೆ. ಈ ಉಗುರು ಕಡಿಯುವ ಅಭ್ಯಾಸವನ್ನು ನೀವೂ ಸುಲಭವಾಗಿ ಬಿಡಬಹುದು.

ಉಗುರು ಕಡಿತ ಹೀಗೆ ಬಿಡಿ
ಉಗುರನ್ನು ಕತ್ತರಿಸಿ :
ಅನೇಕರು ಉದ್ದುದ್ದದ ಉಗುರು ಬಿಟ್ಟಿರುತ್ತಾರೆ. ಆಗ ಉಗುರು ಕಡಿಯುವುದು ಸುಲಭ. ಅದೇ ನಿಮ್ಮ ಉಗುರನ್ನು ಆಗಾಗ ಕತ್ತರಿಸುತ್ತಿದ್ದರೆ ಉಗುರು ಬಾಯಿಗೆ ಸಿಗುವುದಿಲ್ಲ. ಉಗುರಿನಲ್ಲಿ ಕೆಸರೂ ಸೇರುವುದಿಲ್ಲ. ಚರ್ಮ ಬಾಯಿಗೆ ಸಿಗುವುದ್ರಿಂದ ನೀವು ಉಗುರು ಕಡಿಯುವ ಅಭ್ಯಾಸವನ್ನು ನಿಧಾನವಾಗಿ ಬಿಡ್ತೀರಿ.

Latest Videos

undefined

ಹಲ್ಲುಜ್ಜುತ್ತಿದ್ದ ವೇಳೆ ಬಿದ್ದು ಬಾಯಲ್ಲಿ ಸಿಲುಕಿಕೊಂಡ ಬ್ರಶ್‌... ವೈದ್ಯರಿಂದ ಶಸ್ತ್ರಚಿಕಿತ್ಸೆ

ಉಗುರಿನ ಸೌಂದರ್ಯ : ಉಗುರು ಕಡಿಯುವವರ ಉಗುರು ನೋಡಿ, ಅದಕ್ಕೆ ಆಕಾರವೇ ಇರುವುದಿಲ್ಲ. ಅದೇ ನಿಮ್ಮ ಉಗುರಿಗೆ ಮೆನಿಕ್ಯೂರ್ ಮಾಡಿದ್ರೆ ಉಗುರು ಸುಂದರವಾಗಿರುತ್ತದೆ. ಆಗ ಆ ಉಗುರನ್ನು ಕಡಿದು ಹಾಳು ಮಾಡಲು ಮನಸ್ಸು ಬರುವುದಿಲ್ಲ. 

ನೇಲ್ ಪಾಲಿಶ್ : ಉಗುರು ಕಡಿಯುವ ಅಭ್ಯಾಸ ಬಿಡ್ಬೇಕೆಂದ್ರೆ ಉಗುರಿಗೆ ಕೆಟ್ಟ ವಾಸನೆಯ ನೇಲ್ ಪಾಲಿಶ್ ಹಚ್ಚಿಕೊಳ್ಳಿ. ಉಗುರು ಬಾಯಿಗೆ ಹೋಗ್ತಿದ್ದಂತೆ ಅದ್ರ ವಾಸನೆ ಅಥವಾ ರುಚಿ ಕಿರಿಕಿರಿಯುಂಟು ಮಾಡುತ್ತದೆ. ನಿಮಗೆ ಗೊತ್ತಿಲ್ಲದೆ ನಿಧಾನವಾಗಿ ನಿಮ್ಮ ಕೈ ಕೆಳಗೆ ಬರುತ್ತದೆ. ನೀವು ಉಗುರಿಗೆ ಕಹಿ ಹಚ್ಚಿಯೂ ಚಟ ಬಿಡುವ ಪ್ರಯತ್ನ ನಡೆಸಬಹುದು.

ಬ್ಯಾಂಡೇಜ್ : ಶೀರ್ಘವೇ ಉಗುರು ಕಡಿಯುವ ಅಭ್ಯಾಸ ಬಿಡ್ಬೇಕು ಎನ್ನುವವರು ಉಗುರಿಗೆ ಬ್ಯಾಂಡೇಜ್ ಹಚ್ಚಬಹುದು. ಬ್ಯಾಂಡೇಜ್ ಕಡಿಯಲು ನಿಮಗೆ ಇಷ್ಟವಾಗುವುದಿಲ್ಲ. ಇದ್ರಿಂದ ನಿಮ್ಮ ಉಗುರು ಕಡಿಯುವ ಅಭ್ಯಾಸ ನಿಲ್ಲುತ್ತದೆ.

Feeling Exhausted: ದೇಹ, ಮನಸ್ಸಿಗೆ ಈ ರೀತಿಯ ವಿಶ್ರಾಂತಿ ಬೇಕು

ಕಾರಣ ಗುರುತಿಸಿ ಚಿಕಿತ್ಸೆ : ಮೊದಲು ನೀವು ಯಾವ ಯಾವ ಸಮಯದಲ್ಲಿ ಉಗುರು ಕಡಿಯುತ್ತೀರಿ ಎಂಬುದನ್ನು ಪತ್ತೆ ಮಾಡಿ. ಒತ್ತಡ ಹೆಚ್ಚಾದಾಗ ಉಗುರು ಕಡಿಯುತ್ತೀರಾದರೆ ಒತ್ತಡಕ್ಕೆ ಒಳಗಾಗಿದ್ದೀರಿ ಎಂಬುದು ಗೊತ್ತಾಗ್ತಿದ್ದಂತೆ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಿರಿ. ಬೇರೆಯವರ ಜೊತೆ ಮಾತನಾಡಿ. ಇಲ್ಲವೆ ಕೈಗಳನ್ನು ಬೇರೆ ಕೆಲಸದಲ್ಲಿ ಬ್ಯುಸಿಯಾಗಿಡಿ. 

ಒಂದು ವೇಳೆ ಕಾರಣವಿಲ್ಲದೆ, ಖಾಲಿ ಕುಳಿತಾಗ ನೀವು ಉಗುರು ಕಡಿಯುತ್ತೀರೆಂದಾದ್ರೆ ಉಗುರು ಬಾಯಿ ಹತ್ತಿರ ಬರ್ತಿದ್ದಂತೆ ಅಲರ್ಟ್ ಆಗಿ. ಖಾಲಿ ಸಮಯ ಕಳೆಯಬೇಡಿ. ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿ. ಸತತ ಪ್ರಯತ್ನವಿದ್ದರೆ ಯಾವುದೇ ಚಟದಿಂದಲಾದ್ರೂ ಹೊರಗೆ ಬರಬಹುದು. ಉಗುರು ಕಡಿಯುವ ಅಭ್ಯಾಸದಿಂದಲೂ ನೀವು ಸುಲಭವಾಗಿ ಹೊರಗೆ ಬರಬಹುದು. ಅಲರಾಂ ಇಟ್ಟುಕೊಂಡು ನಿಮ್ಮನ್ನು ನೀವು ನಿಯಂತ್ರಿಸುವ ಪ್ರಯತ್ನ ನಡೆಸಿ.

ಡಯಟ್ ನಲ್ಲಿ ನಿಯಂತ್ರಣ : ಕೆಲವರು ಉಗುರು ಕಡಿಯಲು ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿರುವುದು ಒಂದು ಕಾರಣವಾಗಿರುತ್ತದೆ. ಹಾಗಾಗಿ ಡಯಟ್ ನಲ್ಲಿ ಬದಲಾವಣೆ ಮಾಡಿ. ಹಾಲು,ಮೊಸರು,ಮೊಟ್ಟೆ ಸೇರಿದಂತೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವನೆ ಮಾಡಿ.

click me!