
ಬೆಂಗಳೂರು (ಜೂ. 13) ಬೆಂಗಳೂರಿನ HSIS Gosha ಸರ್ಕಾರಿ ಆಸ್ಪತ್ರೆ ಸಾಧನೆ ಮಾಡಿದೆ. ಜೂನ್ 12 ರಂದು ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಕೊರೋನಾ ಪೀಡಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ.
ಈ ಬಗ್ಗೆ ವಿವರಣೆಯನ್ನು ಆಸ್ಪತ್ರೆ ನಿರ್ದೇಶಕ ಡಾ. ತುಳಸಿದೇವಿ ನೀಡಿದ್ದಾರೆ. ಈ ವರ್ಷದ ಮಾರ್ಚ್ 27 ರಂದು ರಾಜ್ಯ ಸರ್ಕಾರ ನಮಗೊಂದು ಆದೇಶ ನೀಡಿತ್ತು. ಕೊರೋನಾ ಸೊಂಕಿತ ಗರ್ಭಿಣಿಯರಿಗೆಂದೇ ವಿಶೇಷ ವಾರ್ಡ್ ಸಿದ್ಧಮಾಡಲು ತಿಳಿಸಿತ್ತು. ಅಲ್ಲಿಂದ 564 ಕೊರೋನಾ ಕೇಸ್ ಹ್ಯಾಂಡಲ್ ಮಾಡಿದ್ದೇವೆ. ಮೂರು ನೂರು ಹೆರಿಗೆ ಮಾಡಿಸಿದ್ದೇವೆ ಎಂದು ತಿಳಿಸಿದರು.
ಶುಭ ಸುದ್ದಿ; ಕರ್ನಾಟಕದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೋನಾ
141 ನರ್ಮಲ್ ಹೆರಿಗೆಯಾಗಿದ್ದರೆ 159 ಸಿಸೇರಿಯನ್ ಮಾಡಲಾಗಿದೆ. 28 ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ತಾಯಿಯಿಂದ ಮಗುವಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಆರು ಮಂದಿಗೆ ಅಬಾರ್ಶನ್ ಮಾಡಲಾಗಿದೆ. ಕೊರೋನಾದ ಎಲ್ಲ ನಿಯಮ ಪಾಲನೆ ಮಾಡಿಕೊಂಡು ಕಾರ್ಯನಿರ್ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆಸ್ಪತ್ರೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಕರ್ನಾಟಕಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು ಸರ್ಕಾರ ಲಾಕ್ ಡೌನ್ ಸಡಿಲಿಕೆಯೆಡೆ ಹೆಜ್ಜೆ ಇಟ್ಟಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.