ನಿದ್ರೆ ಮಾಡಿದ್ರೂ ಸುಸ್ತು ಹೋಗ್ತಿಲ್ವಾ?

Suvarna News   | Asianet News
Published : Mar 17, 2022, 04:42 PM IST
ನಿದ್ರೆ ಮಾಡಿದ್ರೂ ಸುಸ್ತು ಹೋಗ್ತಿಲ್ವಾ?

ಸಾರಾಂಶ

ಪ್ರತಿ ದಿನ ಒಂದೇ ಕೆಲಸ…ಪ್ರತಿ ದಿನ ಬಿಡುವಿಲ್ಲದ ಓಡಾಟ, ಕಿರಿಕಿರಿ, ಒತ್ತಡ… ಇದರಿಂದ ಸಾಕಪ್ಪಾ ಲೈಫ್ ಅನ್ನಿಸಿಬಿಡುತ್ತೆ. ಈ ಎಲ್ಲವೂ ಮನಸ್ಸು, ದೇಹವನ್ನು ನಿರುತ್ಸಾಹಗೊಳಿಸುತ್ತೆ. ಅದಕ್ಕೆ ಚೈತನ್ಯ ಬೇಕೆಂದ್ರೆ ಬೋಸ್ಟರ್ ಡೋಸ್ ನೀಡ್ಲೇಬೇಕು.    

ಸಮಯ (Time ) ಓಡ್ತಿದೆ. ಜನರು ಸಮಯದ ಹಿಂದೆ ಓಡ್ತಿದ್ದಾರೆ. ಬಿಡುವಿಲ್ಲದ ಕೆಲಸ (Work) ದಲ್ಲಿ ಸ್ವಂತಕ್ಕಾಗಿ ಸಮಯ ಸಿಗ್ತಿಲ್ಲ. ಇಡೀ ದಿನ ಕೆಲಸ ಮಾಡಿ ಜನರು ದಿನದ ಕೊನೆಯಲ್ಲಿ ಸಂಪೂರ್ಣ ಬಸವಳಿದಿರುತ್ತಾರೆ. ಒಂದೆರಡು ದಿನ ಓಡ್ತಾ ಕೆಲಸ ಮಾಡ್ಬಹುದು. ಆದ್ರೆ ಪ್ರತಿ ದಿನ ಇದೇ ಒತ್ತಡ (Stress) ದಲ್ಲಿ ಕೆಲಸ ಮಾಡುವುದು ಕಷ್ಟ. ದೇಹ (Body) ದಣಿಯುತ್ತದೆ. ಆಯಾಸಗೊಂಡ ದೇಹಕ್ಕೆ ಚೇತರಿಕೆ ಕಷ್ಟವಾಗುತ್ತದೆ. ಇದ್ರಿಂದಾಗಿ ಜನರಿಗೆ ಇಡೀ ದಿನ ಸುಸ್ತು ಕಾಡುತ್ತದೆ. ಯಾವುದರಲ್ಲೂ ಆಸಕ್ತಿಯಿರುವುದಿಲ್ಲ. ಇದನ್ನು ದೀರ್ಘಕಾಲದ ಆಯಾಸ ಎಂದು ಕರೆಯಲಾಗುತ್ತದೆ. ಈ ಆಯಾಸ, ನಿಮ್ಮ ಕೆಲಸ, ಸಾಮಾಜಿಕ ಜೀವನ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮನ್ನು ರೀಚಾರ್ಜ್ ಮಾಡುವುದು ಬಹಳ ಮುಖ್ಯ. ಮಾನಸಿಕವಾಗಿಯೂ ನೀವು ಶಕ್ತಿ ಪಡೆಯಬೇಕು. ಮನಸ್ಸು ಮತ್ತು ದೇಹವನ್ನು ಸಕ್ರಿಯಗೊಳಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. 

ಮನಸ್ಸು ದೇಹಕ್ಕೆ ಇದು ಬೇಕು 

ಉತ್ತಮ ಗುಣಮಟ್ಟದ ನಿದ್ರೆ : ಪ್ರತಿ ದಿನ ಎಂಟರಿಂದ ಹತ್ತು ಗಂಟೆಗಳ ನಿದ್ದೆಯು ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಮರುದಿನ ಉಲ್ಲಾಸದಿಂದಿರಬೇಕೆಂದ್ರೆ ರಾತ್ರಿ ಉತ್ತಮ ನಿದ್ರೆ ಬೇಕು. ಅನೇಕ ಬಾರಿ ದೇಹ ಎಷ್ಟೇ ದಣಿದಿದ್ದರೂ ನಿದ್ರೆ ಬರುವುದಿಲ್ಲ. ಇದಕ್ಕೆ ಕೆಲ ಕಾರಣಗಳಿವೆ. ನಿದ್ರೆ ಸರಿಯಾಗಿ ಬರಬೇಕೆಂದ್ರೆ ಮಲಗುವ ಮೊದಲ ಅರ್ಧಗಂಟೆ ಮೊಬೈಲ್,ಟಿವಿಯಿಂದ ದೂರವಿರಬೇಕು. ಹಾಗೆಯೇ ಮಲಗುವ ಮೊದಲು ಸ್ವಲ್ಪ ಧ್ಯಾನ ಮಾಡಿ ಮಲಗಿದ್ರೆ ಸುಖ ನಿದ್ರೆ ನಿಮ್ಮದಾಗುತ್ತದೆ.

ಒಂದು ವಾಕ್ ನಲ್ಲಿದೆ ಶಕ್ತಿ : ನಿಮ್ಮನ್ನು ರೀಚಾರ್ಜ್ ಮಾಡಲು ಸುಲಭವಾದ ಮತ್ತು ಉತ್ತಮ ಮಾರ್ಗವೆಂದ್ರೆ ವಾಕ್. ನಿಮ್ಮ ಮಕ್ಕಳು ಅಥವಾ ಸಂಗಾತಿಯೊಂದಿಗೆ ಬೆಳಿಗ್ಗೆ ಅಥವಾ ಸಂಜೆ ವಾಕ್ ಮಾಡುವುದು ಖುಷಿ ನೀಡುತ್ತದೆ. ನೀವು ಬಯಸಿದರೆ, ಕೆಲವೊಮ್ಮೆ ನೀವು ಒಬ್ಬರೇ ವಾಕ್ ಹೋಗಬಹುದು. ವಾಕಿಂಗ್ ಹೋಗುವ ವೇಳೆ ಅನೇಕರು ದೊಡ್ಡದಾಗಿ ಸಂಗೀತ ಕೇಳ್ತಾರೆ. ಮತ್ತೆ ಕೆಲವರು ತೂಕ ಇಳಿಸುವುದಕ್ಕೆ ಗಮನ ನೀಡ್ತಾರೆ. ಇವೆರಡನ್ನೂ ಮಾಡದೆ ಶಾಂತ ಮನಸ್ಸಿನಿಂದ ವಾಕ್ ಮಾಡಿ. ಸುತ್ತಮುತ್ತಲಿನ ಶಬ್ದಗಳು ಮತ್ತು ಚಟುವಟಿಕೆಗಳ ಮೇಲೆ ಗಮನ ಹರಿಸಿ. 10-15 ನಿಮಿಷಗಳ ನಡಿಗೆಯಲ್ಲಿ ತಾಜಾ ಗಾಳಿಯಲ್ಲಿ ಒಳಗೆ ತೆಗೆದುಕೊಳ್ಳಿ. ಇದ್ರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಮನಸ್ಸನ್ನು ತಾಜಾಗೊಳಿಸುತ್ತೆ ಹವ್ಯಾಸ : ಹೆಚ್ಚು ಕೆಲಸ ಮಾಡುವುದರಿಂದ ಅಗತ್ಯಕ್ಕಿಂತ ಹೆಚ್ಚು ಸುಸ್ತಾಗಬಹುದು. ದೇಹ-ಮನಸ್ಸಿಗೆ ವಿಶ್ರಾಂತಿ ನೀಡುವ ಅಗತ್ಯವಿರುತ್ತದೆ. ಆಗ ನೀವು ಹೆಚ್ಚು ಆಸಕ್ತಿ ಹೊಂದಿರುವ ಮತ್ತು ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಉತ್ತಮ ಪರಿಣಾಮ ಬೀರುವಂತಹದನ್ನು ಹವ್ಯಾಸದಲ್ಲಿ ತೊಡಗಿ. ವಾರಕ್ಕೊಮ್ಮೆಯಾದ್ರೂ ನಿಮ್ಮ ಹವ್ಯಾಸಕ್ಕೆ ಸಮಯ ತೆಗೆದಿಡಿ. ನಿಮ್ಮಿಷ್ಟದ ಕೆಲಸ,ಕೆಲವು ದಿನಗಳ ಆಯಾಸವನ್ನು ಕ್ಷಣಮಾತ್ರದಲ್ಲಿ ದೂರ ಮಾಡುತ್ತದೆ. ಹೊಸ ದಿನಕ್ಕೆ,ಹೊಸ ಕೆಲಸಕ್ಕೆ ನಿಮ್ಮನ್ನು ರೀಚಾರ್ಜ್ ಮಾಡುತ್ತದೆ.

Health Tips: ಮಲಬದ್ಧತೆ ಸಮಸ್ಯೆನಾ ? ಕರಬೂಜ ತಿನ್ನಿ ಸಾಕು

ಒತ್ತಡ ಕಡಿಮೆ ಮಾಡಿ : ಒತ್ತಡ ಜೀವನದಲ್ಲಿ ಅನೇಕ ಸಮಸ್ಯೆಯನ್ನುಂಟು ಮಾಡುತ್ತದೆ. ಒತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಹಾಗಾಗಿ ಪ್ರತಿದಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ. ಇದಕ್ಕೆ ಧ್ಯಾನ,ಯೋಗಗಳು ಉತ್ತಮ ಆಯ್ಕೆಯಾಗಿವೆ.   

ಪ್ರವಾಸದ ಪ್ಲಾನ್ ಮಾಡಿ : ಬೇಸರ ಮತ್ತು ಕೆಲಸದ ಒತ್ತಡದಿಂದಾಗಿ ನಾವು ಸುಸ್ತಾಗಿರುತ್ತೇವೆ. ಅಂತಹ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪರಿಸರ ಹಾಗೂ ಕೆಲಸ ಬದಲಾಗುವ ಕಾರಣ ಮನಸ್ಸು ಶಾಂತವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಸಿಕ್ಕಂತಾಗುತ್ತದೆ.

PEANUT OIL HEALTH BENEFITS: ಹೃದಯದ ಆರೋಗ್ಯಕ್ಕಿದು ಅತ್ಯುತ್ತಮ

ಗೆಜೆಟ್ ನಿಂದ ದೂರವಿರಿ : ಅನೇಕ ಬಾರಿ ನಿಮ್ಮ ಮನಸ್ಸು ಹಾಗೂ ದೇಹವನ್ನು ಗೆಜೆಟ್ ದಣಿಸುತ್ತದೆ. ಸದಾ ಮೊಬೈಲ್ ಅಥವಾ ಲ್ಯಾಪ್ ಟಾಪ್ ಬಳಕೆಯಿಂದ ಮನಸ್ಸು ತಿಳಿಯದೆ ಸುಸ್ತಾಗಿರುತ್ತದೆ. ಹಾಗಾಗಿ ಆದಷ್ಟು ಗೆಜೆಟ್ ನಿಂದ ದೂರವಿರಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ