ಗಂಡಸರಿಗೆ ಗರುಡಾಸನದ ಲಾಭ ಹೆಚ್ಚು

Suvarna News   | Asianet News
Published : Mar 23, 2022, 01:20 PM ISTUpdated : Mar 23, 2022, 02:12 PM IST
ಗಂಡಸರಿಗೆ ಗರುಡಾಸನದ ಲಾಭ ಹೆಚ್ಚು

ಸಾರಾಂಶ

ಯೋಗ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಮಾನಸಿಕ-ದೈಹಿಕ ಆರೋಗ್ಯದ ಜೊತೆಗೆ ಯೋಗದಿಂದ ಅನೇಕ ಉಪಯೋಗಗಳಿವೆ. ಅದ್ರಲ್ಲಿ ಗರುಡಾಸನ ಪುರುಷರಿಗೆ ಹೇಳಿ ಮಾಡಿಸಿದಂತ ಆಸನ. ನೀವು ಒಮ್ಮೆ ಟ್ರೈ ಮಾಡಿ ಫಲಿತಾಂಶ ನೋಡಿ.  

ಗರುಡಾಸನ (Garudasana) . ಇದು ಸಮತೋಲನ ಭಂಗಿ (Pose) ಯಾಗಿದೆ. ಇದು ಕಾಲುಗಳು, ಭುಜಗಳು ಮತ್ತು ಸೊಂಟ (Hips) ದ ಆರೋಗ್ಯ (Health) ವನ್ನು ವೃದ್ಧಿಸುತ್ತದೆ. ಗರುಡಾಸನ ಸ್ನಾಯುಗಳನ್ನು ಟೋನ್ ಮಾಡುವುದಲ್ಲದೆ ಅಲ್ಲಿ ಸಂಗ್ರಹವಾಗಿರುವ ಕೊಬ್ಬುಗಳನ್ನು ಕರಗಿಉವ ಕೆಲಸ ಮಾಡುತ್ತದೆ. ಗರುಡಾಸನ ಪುರುಷರಿಗೆ ಹೆಚ್ಚು ಉಪಯುಕ್ತವಾಗಿದೆ. ಗರುಡಾಸನ ಮಾಡುವುದ್ರಿಂದ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ ದೂರವಾಗುತ್ತದೆ. ಪ್ರಾಸ್ಟೇಟ್ ಪುರುಷರಲ್ಲಿ ಮಾತ್ರ ಕಂಡುಬರುವ ಗ್ರಂಥಿಯಾಗಿದೆ. ಇದು ಮೂತ್ರಕೋಶದ ಗರ್ಭಕಂಠದ ಕೆಳಗೆ ಮೂತ್ರನಾಳದ ಬಳಿ ಇರುತ್ತದೆ. ವೀರ್ಯಾಣುಗಳಿಗೆ ಪೌಷ್ಠಿಕಾಂಶ ಒದಗಿಸುವ ವೀರ್ಯ ದ್ರವವನ್ನು ಸಂಗ್ರಹಿಸುವ ಕೆಲಸವನ್ನು ಪ್ರಾಸ್ಟೇಟ್ ಗ್ರಂಥಿ ಮಾಡುತ್ತದೆ.  

ಪುರುಷರ ದೌರ್ಬಲ್ಯವನ್ನು ಹೋಗಲಾಡಿಸಲು ಈ ಆಸನವು ವರದಾನವಾಗಿದೆ. ಗರುಡಾಸನವು  ಮೂತ್ರದ ಅಸ್ವಸ್ಥತೆಗಳನ್ನು ತೆಗೆದುಹಾಕಲು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪುರುಷರು ಪ್ರತಿ ದಿನ ಗರುಡಾಸನ ಮಾಡುವುದು ಒಳ್ಳೆಯದು. ಇಂದು ಗರುಡಾಸನದ ಬಗ್ಗೆ ಕೆಲ ಮಾಹಿತಿಯನ್ನು ನೀಡ್ತೇವೆ.

ಗುರುಡಾಸನ ಮಾಡುವ ವಿಧಾನ : ಗರುಡಾಸನವನ್ನು ಮಾಡುವ ಮೊದಲು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಪಡಿಸಿಕೊಳ್ಳಿ. ನಂತರ ಸಮತಟ್ಟಾದ ನೆಲವನ್ನು ಆರಿಸಿ ಮತ್ತು ಚಾಪೆಯನ್ನು ಹಾಕಿ. ನಂತರ  ತಾಡಾಸನದ ಭಂಗಿಯಲ್ಲಿ ನೇರವಾಗಿ ನಿಂತುಕೊಳ್ಳಿ. ಮೊಣಕಾಲುಗಳನ್ನು ಸ್ವಲ್ಪ ಬಾಗಿಸಿ ಖುರ್ಚಿ ಭಂಗಿಗೆ ಬನ್ನಿ. ನಂತರ ಬಲಗಾಲನ್ನು ಮೇಲಕ್ಕೆತ್ತಿ. ಈಗ ಎಡಗಾಲನ್ನು ನೇರವಾಗಿಟ್ಟುಕೊಂಡು ಬಲಗಾಲನ್ನು ಎಡಗಾಲಿನ ಮುಂಭಾಗದಿಂದ ಸರಿಸಿ ಹಿಂದಕ್ಕೆ ತೆಗೆದುಕೊಳ್ಳಿ. ಇದರ ನಂತರ ಒಂದು ಮೊಣಕೈಯನ್ನು ಇನ್ನೊಂದು ಮೊಣಕೈ ಒಳಗೆ ತಂದು ಎರಡೂ ಕೈಗಳ ಪಾದವನ್ನು ನಮಸ್ಕಾರ ಭಂಗಿಗೆ ತರಲು ಪ್ರಯತ್ನಿಸಿ. ಅದೇ ಭಂಗಿಯಲ್ಲಿ ಸ್ವಲ್ಪ ಸಮಯ ಇರಲು ಪ್ರಯತ್ನಿಸಿ. ನಂತರ  ನಿಧಾನವಾಗಿ ಸಮ ಸ್ಥಿತಿಗೆ ಬನ್ನಿ. ಮತ್ತೆ ಎಡಗಾಲನ್ನು ಎತ್ತಿ, ಬಲಗಾಲಿನ ಮುಂಭಾಗದಿಂದ ಸರಿಸಿ ಹಿಂದಕ್ಕೆ ತೆಗೆದುಕೊಳ್ಳಿ. ಮೊಣಕೈಗಳು ಬದಲಾಗಲಿ. ನಿಧಾನವಾಗಿ ಅಭ್ಯಾಸ ಮಾಡುತ್ತ ಬಂದಲ್ಲಿ ಈ ಆಸನ ನಿಮಗೆ ಸುಲಭವಾಗುತ್ತದೆ. ಕೆಲವು ಸೆಕೆಂಡುಗಳ ಕಾಲ ಅದೇ ಭಂಗಿಯಲ್ಲಿರಿ ಮತ್ತು ನಂತರ ವಿಶ್ರಾಂತಿ ಸ್ಥಿತಿಗೆ ಹಿಂತಿರುಗಿ. 

ಸಕ್ಕರೆ ಮಾತ್ರವಲ್ಲ, ಈ ಆರೋಗ್ಯಕರ ವಸ್ತುಗಳಿಂದಲೂ ಡಯಾಬಿಟಿಸ್ ಬರಬಹುದು

ಗರುಡಾಸನದ ಲಾಭಗಳು 
ಮೊದಲೇ ಹೇಳಿದಂತೆ ಪುರುಷ ಸಂತಾನೋತ್ಪತ್ತಿ ಅಂಗಗಳಿಗೆ ಗರುಡಾಸನ ಮಾಡುವುದ್ರಿಂದ ಹೆಚ್ಚಿನ ಪ್ರಯೋಜನವಿದೆ. ಗರುಡಾಸನವನ್ನು ನಿಯಮಿತವಾಗಿ ಮಾಡುವುದ್ರಿಂದ ಕಾಲುಗಳ ಬಲ ಹೆಚ್ಚಾಗುತ್ತದೆ ಮತ್ತು ಭುಜದ ಕೀಲುಗಳಲ್ಲಿ ನಮ್ಯತೆ ಹೆಚ್ಚಿಸುತ್ತದೆ. ನಿಮ್ಮ ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ಇದು ನೆರವಾಗುತ್ತದೆ ಹಾಗೂ ಜ್ಞಾನ ವೃದ್ಧಿ ಮಾಡುತ್ತದೆ. ಗರುಡಾಸನವು ಮೂತ್ರ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಕಾರಿ.  ಕಾಲಿನ ಸ್ನಾಯುಗಳಲ್ಲಿರುವ ಸೆಳೆತವನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಪ್ರಾಸ್ಟೇಟ್ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಗರುಡಾಸನ ಮಾಡುವುದ್ರಿಂದ ಭುಜ, ಬೆನ್ನು, ಸೊಂಟ ಮತ್ತು ತೊಡೆಗಳಿಗೆ ಒಳ್ಳೆಯದು. 

ಗರುಡಾಸನ ಯಾರು ಮಾಡಬಾರದು? 
ಒಳ್ಳೆಯದು ಎಂಬ ಕಾರಣಕ್ಕೆ ಗರುಡಾಸನವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಮೊಣಕಾಲಿನಲ್ಲಿ ನೋವು ಇರುವವರು ಈ ಆಸನವನ್ನು ಮಾಡದಿರುವುದು ಒಳ್ಳೆಯದು. ಮೊದಲ ಬಾರಿ ಆಸನ ಮಾಡಲು ಸಮಸ್ಯೆಯಾಗ್ತಿದ್ದರೆ ಗೋಡೆಯನ್ನು ಹಿಡಿದು ಅಭ್ಯಾಸ ಮಾಡಬಹುದು. ಎರಡು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಈ ಆಸನದಿಂದ ದೂರವಿರಬೇಕು.  ಕಡಿಮೆ ರಕ್ತದೊತ್ತಡ ಇರುವವರು ಇದನ್ನು ಅಭ್ಯಾಸ ಮಾಡಬಾರದು. ಪ್ಲಾಂಟರ್ ಫ್ಯಾಸಿಟಿಸ್ ನಿಂದ ಬಳಲುತ್ತಿರುವವರು ಇದನ್ನು ಮಾಡಬಾರದು.

ಚೀನಾ ಹಾಗೂ ಯುರೋಪ್ ಭಾಗದಲ್ಲಿ ಒಮಿಕ್ರಾನ್ ಸಬ್ ವೇರಿಯಂಟ್ ಅಬ್ಬರ!

ಗರುಡಾಸನವು ನೋಡಲು ಸುಲಭವಾಗಿ ಕಾಣುತ್ತದೆ. ಆದ್ರೆ ಅದನ್ನು ಮಾಡುವುದು ಸುಲಭವಲ್ಲ. ಇದರಲ್ಲಿ ಸಮತೋಲನ ಸಾಧಿಸುವುದು ತುಂಬಾ ಕಷ್ಟ. ಆದರೆ ಎದೆಗುಂದುವ ಅಗತ್ಯವಿಲ್ಲ. ಪ್ರತಿ ದಿನ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ನಮ್ಯತೆ ಬರುತ್ತದೆ.  ಏಕಾಗ್ರತೆ ಬೇಕು ಎನ್ನುವವರು ಈ ಆಸನವನ್ನು ತಪ್ಪದೆ ಮಾಡ್ಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಿನ ಈ 7 ಅಭ್ಯಾಸಗಳು ವಯಸ್ಸಾಗೋದನ್ನ ನಿಧಾನಗೊಳಿಸುತ್ತೆ!
ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್