ತೂಕ ಇಳಿಕೆ ಮಾಡಿಕೊಳ್ಳಲು ಯಾವ್ಯಾವುದೋ ಡಯೆಟ್ ಮೊರೆ ಹೋಗಿ, ಸುಸ್ತಾಗಿ ನಿತ್ರಾಣಗೊಳ್ಳಬೇಕಿಲ್ಲ. ದೈನಂದಿನ ದಿನಚರಿ, ಆಹಾರ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು. ಉತ್ತಮ ಆಹಾರ ಸೇವನೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.
ಬಹಳಷ್ಟು ಜನ ತೂಕ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಮೇಲ್ನೋಟಕ್ಕೆ ಸುಲಭವೆಂದು ಕಂಡುಬಂದರೂ ಬಹಳ ಕಠಿಣವಾದ ಹಾದಿ ಇದು. ತೂಕ ಇಳಿಸಿಕೊಳ್ಳಲು ಕೆಲವರು ವಿವಿಧ ರೀತಿಯ ಡಯೆಟ್ ಮೊರೆ ಹೋಗುತ್ತಾರೆ. ವ್ಯಾಯಾಮ, ಯೋಗಗಳನ್ನು ಮಾಡಿದರೂ ತೂಕ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆ ಮೂಡಿಸುತ್ತಿರುತ್ತದೆ. ವರ್ಕೌಟ್, ಡಯೆಟ್ ಎಂದು ಎಷ್ಟು ಬಸವಳಿದರೂ ಎತ್ತರಕ್ಕೆ ತಕ್ಕ ತೂಕ ಅಂದರೆ ಐಡಿಯಲ್ ವೇಟ್ ಹೊಂದಲು ಎಲ್ಲರಿಂದಲೂ ಸಾಧ್ಯವಿಲ್ಲ. ಒಟ್ಟಾರೆ ತೂಕ ಕಡಿಮೆ ಮಾಡಿಕೊಳ್ಳುವ ಇಡೀ ಪ್ರಕ್ರಿಯೆಯೇ ಸುಸ್ತೆನಿಸುತ್ತದೆ, ವ್ಯಕ್ತಿಯನ್ನು ನಿತ್ರಾಣಗೊಳಿಸುತ್ತದೆ. ಮೊದಲು ಕಟ್ಟುನಿಟ್ಟಾದ ಆಹಾರ ಪದ್ಧತಿ ಅನುಸರಿಸಿದರೂ ಕೊನೆಕೊನೆಗೆ ತಿನ್ನುವ ಬಯಕೆ ಹೆಚ್ಚಾಗಿ ಕಂಡಿದ್ದನ್ನು ತಿನ್ನುವಂತಾಗುತ್ತದೆ. ಅದರ ಬದಲು ತೂಕ ಇಳಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಹಗುರವಾಗಿರಬೇಕು. ಮನಸ್ಸಿಗೆ ಭಾರ ಎನಿಸಬಾರದು, ನಿತ್ರಾಣಗೊಳಿಸಲೂಬಾರದು. ಅಂತಹ ವಿಧಾನ ಅನುಸರಿಸಿದರೆ ಹೆಚ್ಚು ಒತ್ತಡ ಉಂಟಾಗುವುದಿಲ್ಲ. ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುವುದಿಲ್ಲ. ಅಂತಹ ವಿಧಾನ ನಮ್ಮ ನಡುವೆಯೇ ಇದೆ. ಮನಸ್ಸು ಮಾಡಿದರೆ ಈ ವಿಧಾನವನ್ನು ಸುಲಭವಾಗಿ ಅನುಸರಿಸಬಹುದು. ಆಹಾರ ಪದಾರ್ಥಗಳಲ್ಲಿ ದೇಹಕ್ಕೆ ಬೇಕಾದುದನ್ನು ಮಾತ್ರ ಸೇವಿಸಿ, ಬೇಡವಾದುದನ್ನು ತ್ಯಜಿಸುವ ಈ ವಿಧಾನವನ್ನು ಸಮಗ್ರ ವಿಧಾನ ಎಂದು ಕರೆಯಬಹುದು.
• ಸಮಗ್ರ ಆಹಾರ (Whole Food)
ಸಮಗ್ರ ಮತ್ತು ಸಂಸ್ಕರಣೆ ಮಾಡದ (Unprocessed) ಆಹಾರಗಳು ದೇಹಕ್ಕೆ ಅತಿ ಮುಖ್ಯ. ತೂಕ ಕಡಿಮೆಯಾಗಲು (Weight Loss) ಇವು ಪ್ರಮುಖ ಕೊಡುಗೆ ನೀಡುತ್ತವೆ. ಧಾನ್ಯಗಳು (Grains), ಹಣ್ಣುಗಳು, ತರಕಾರಿ ಮತ್ತು ಆರೋಗ್ಯಕರ ಕೊಬ್ಬುಗಳ (Healthy Fat) ಸೇವನೆಯಿಂದ ದೇಹಕ್ಕೆ ಅಗತ್ಯ ಶಕ್ತಿ (Energy) ಮತ್ತು ದೀರ್ಘಕಾಲದ ಆರೋಗ್ಯಕ್ಕೆ (Health) ಪೂರಕವಾಗಿವೆ.
Health Tips: ಕೊಲೆಸ್ಟ್ರಾಲ್ ಕಡಿಮೆ ಮಾಡ್ಬೇಕಾ? ವೆಜ್ ಡಯಟ್ ಶುರುಮಾಡಿ
• ಆಹಾರದ ಪ್ರಮಾಣ (Portion of Food)
ಹಸಿವಾಗಿದೆ ಎಂದು ಹೆಚ್ಚು ಪ್ರಮಾಣದಲ್ಲಿ ತಿನ್ನುವುದು ತೂಕ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ಊಟ-ತಿಂಡಿ ಕಡಿಮೆ ಪ್ರಮಾಣದಲ್ಲಿರಬೇಕು. ದೊಡ್ಡ ತಟ್ಟೆ ಇಟ್ಟುಕೊಳ್ಳುವ ಬದಲು ಸಣ್ಣ ತಟ್ಟೆ, ಬೌಲ್ ಉಪಯೋಗಿಸಿದರೆ ಉತ್ತಮ. ಆರಂಭದಲ್ಲಿ ಇದರಿಂದ ತೂಕ ಹೆಚ್ಚುವುದು ತಪ್ಪುತ್ತದೆ. ಕೊನೆಗೆ ತೂಕ ಇಳಿಕೆಯಾಗಲು ಆರಂಭವಾಗುತ್ತದೆ. ಆಹಾರವನ್ನು ನಿಧಾನವಾಗಿ ಲಾಲಾರಸದೊಂದಿಗೆ ಬೆರೆಯುವಂತೆ ಸೇವಿಸಬೇಕು. ಪ್ರಮಾಣ ಕಡಿಮೆಯಿದ್ದರೂ ಅದು ನಮ್ಮನ್ನು ಸಂತೃಪ್ತಿಗೊಳಿಸುವಂತೆ (Full) ಅಗಿದು ತಿನ್ನಬೇಕು. ಆಗ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.
• ಪ್ರೊಟೀನ್ ಅಗತ್ಯ (Protein)
ಆಹಾರದಲ್ಲಿ ಪ್ರೊಟೀನ್ ಅಗತ್ಯ. ಹೀಗಾಗಿ, ಪ್ರತಿದಿನ ಪ್ರತಿ ಊಟದಲ್ಲಿ ಅಗತ್ಯ ಪ್ರಮಾಣದಷ್ಟು ಪ್ರೊಟೀನ್ ಸೇವಿಸುವುದು ಮುಖ್ಯ. ಪ್ರೊಟೀನ್ ದೀರ್ಘಕಾಲ ಹೊಟ್ಟೆ ತುಂಬಿರುವ ಭಾವನೆ ಮೂಡಿಸುವುದರಿಂದ ತೂಕ ಇಳಿಕೆಗೆ ಅನುಕೂಲ. ಹಸಿವಿಗೆ ಕಾರಣವಾಗುವ ಹಾರ್ಮೋನ್ (Hormone) ಘ್ರೆಲಿನ್ (Ghrelin) ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಪ್ರೊಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ತಿನ್ನುವ ಬಯಕೆಯನ್ನು ಕಡಿಮೆಗೊಳಿಸುವ ಮೂರು ರೀತಿಯ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ, ನಿತ್ರಾಣಗೊಳ್ಳದೇ (Exhaust), ಸುಸ್ತಾಗದೇ (Fatigue) ತೂಕ ಇಳಿಕೆ ಸಾಧ್ಯವಾಗುತ್ತದೆ.
• ಸಕ್ಕರೆ (Sugar)
ಸಕ್ಕರೆ ಕ್ಯಾಲರಿಯ ಮೂಲವಾಗಿದೆ, ತೂಕ ಹೆಚ್ಚಳಕ್ಕೆ ಭಾರೀ ಕೊಡುಗೆ ನೀಡುತ್ತದೆ. ಆದರೆ, ಇದು ದೇಹಕ್ಕೆ ಯಾವುದೇ ರೀತಿಯ ಪೌಷ್ಟಿಕಾಂಶ (Nutrients) ನೀಡುವುದಿಲ್ಲ, ಬದಲಿಗೆ ತೂಕ ಇಳಿಕೆಗೆ ಅಡ್ಡಗಾಲು ಹಾಕುತ್ತದೆ. ಸಕ್ಕರೆ ಸೇವನೆ ಮಾಡುತ್ತಿದ್ದರೆ ತೂಕ ಇಳಿಕೆ ಸಾಧ್ಯವಿಲ್ಲ.
Health Tips: ಈಸ್ಟ್ರೋಜೆನ್ ಏರಿಕೆಯಾದ್ರೆ ಸಮಸ್ಯೆ ಗ್ಯಾರೆಂಟಿ, ಈ 5 ವಸ್ತುಗಳಿಂದ ದೂರವಿರ್ಲೇ ಬೇಕು
• ನೀರು ಕುಡಿಯುವುದು (Consume Water)
ತೂಕ ಇಳಿಕೆ ಮಾಡಿಕೊಳ್ಳಬೇಕೆಂಬ ಹಂಬಲ ಉಳ್ಳವರು ದಿನವೂ ಚೆನ್ನಾಗಿ ನೀರು ಕುಡಿಯಬೇಕು. ಇಡೀ ದಿನ ಆಗಾಗ ನೀರು ಕುಡಿಯುತ್ತ ದೇಹ ಹೈಡ್ರೇಟ್ (Hydrate) ಆಗಿರುವಂತೆ ನೋಡಿಕೊಳ್ಳಬೇಕು. ಕನಿಷ್ಠ 2 ಲೀಟರ್ ನೀರು ಕುಡಿಯಬೇಕು ಎನ್ನುವುದು ತಜ್ಞರ ಶಿಫಾರಸು.