Mental Health : ಪೋರ್ನ್ ಚಿತ್ರ ನೋಡಲು ಮನಸ್ಸು ಚಡಪಡಿಸ್ತಿದ್ಯಾ? ವ್ಯಸನ ಅತಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

Suvarna News   | Asianet News
Published : Jan 22, 2022, 07:02 PM ISTUpdated : Jan 22, 2022, 07:03 PM IST
Mental Health  : ಪೋರ್ನ್ ಚಿತ್ರ ನೋಡಲು ಮನಸ್ಸು ಚಡಪಡಿಸ್ತಿದ್ಯಾ? ವ್ಯಸನ ಅತಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಸಾರಾಂಶ

ಚಟ ಹಿಡಿಸಿಕೊಳ್ಳೋದು ಸುಲಭ. ಅದ್ರಿಂದ ಹೊರಗೆ ಬರೋದು ಕಷ್ಟಸಾಧ್ಯ. ಮದ್ಯಪಾನ,ಧೂಮಪಾನ ಚಟದಂತೆ ಪೋರ್ನ್ ವ್ಯಸನ ಬಿಡುವುದು ಕೂಡ ಸುಲಭವಲ್ಲ. ಮಜಕ್ಕೆ ಶುರುವಾಗುವ ಚಟ ಕೊನೆಯಲ್ಲಿ ಜೀವನ ಹಾಳು ಮಾಡುತ್ತೆ.  

ಕಂಪ್ಯೂಟರ್ (Computers), ಮೊಬೈಲ್ (Mobile) ಮತ್ತು ಇಂಟರ್ನೆಟ್ ಯುಗದಲ್ಲಿ ಮನುಷ್ಯ ಅನುಕೂಲಗಳ ಜೊತೆಗೆ ಹಲವಾರು ಅನಾನುಕೂಲಗಳನ್ನು ಎದುರಿಸುತ್ತಿದ್ದಾನೆ. ಇವುಗಳಲ್ಲಿ  ಅಶ್ಲೀಲ ವಿಡಿಯೋಗಳ (Pornography) ವೀಕ್ಷಣೆ ಚಟವೂ ಒಂದು. ಹಿಂದೆ ಇದ್ರ ವೀಕ್ಷಣೆ ಇರಲಿಲ್ಲವೆಂದಲ್ಲ. ಆದ್ರೆ ಈಗಿನಂತೆ ಸುಲಭವಾಗಿ ಪೋರ್ನ್ ಚಿತ್ರಗಳು ಸಿಗ್ತಿರಲಿಲ್ಲ. ಈಗ ಮೊಬೈಲ್ ನಲ್ಲಿ ಸುಲಭವಾಗಿ ಅದನ್ನು ನೋಡಬಹುದು. ಇದು ಪೋರ್ನ್ ವೀಕ್ಷಣೆ ಚಟಕ್ಕೆ ಮತ್ತಷ್ಟು ದಾರಿ ಮಾಡಿಕೊಟ್ಟಿದೆ. ಒಬ್ಬ ವ್ಯಕ್ತಿಯು ಮದ್ಯಪಾನಕ್ಕೆ ಹೇಗೆ ವ್ಯಸನಿಯಾಗಿದ್ದಾನೋ ಹಾಗೆಯೇ ಪೋರ್ನ್ ಚಿತ್ರ ವೀಕ್ಷಣೆ ಕೂಡ ಒಂದು ವ್ಯಸನ. ಸದಾ ಫೋರ್ನ್ ಚಿತ್ರಗಳನ್ನು ವೀಕ್ಷಣೆ ಮಾಡುವ ಚಟ ಜೀವನ ಹಾಳು ಮಾಡುತ್ತದೆ. ಅನೇಕ ದಾಂಪತ್ಯದ ಬಿರುಕಿಗೆ ಇದು ಕಾರಣವಾಗಿದೆ. ಇದೊಂದು ಮಾನಸಿಕ ಅಸ್ವಸ್ಥತೆ. ಇದರಿಂದ ಹೊರಗೆ ಬರುವುದು ಸುಲಭವಲ್ಲ. ನೀವೂ ಪೋರ್ನ್ ವೀಕ್ಷಣೆ ಚಟಕ್ಕೆ ಬಿದ್ದಿದ್ದರೆ ಇಂದೇ ಅದನ್ನು ಬಿಟ್ಟುಬಿಡಲು ಪ್ರಯತ್ನ ಶುರು ಮಾಡಿ. ಒಂದೇ ದಿನದಲ್ಲಿ ಹೋಗುವ ಚಟ ಇದಲ್ಲ. ಮನಸ್ಸಿದ್ದಲ್ಲಿ ಮಾರ್ಗ. ಹಾಗಾಗಿ ಸತತ ಪ್ರಯತ್ನದ ಮೂಲಕ ನೀವು ಈ ಚಟದಿಂದ ಹೊರಗೆ ಬರಬಹುದು. ಇಂದು ಪೋರ್ನ್ ವ್ಯಸನದಿಂದ ಹೇಗೆ ಮುಕ್ತಿ ಪಡೆಯುವುದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.

ಕಂಪ್ಯೂಟರ್ ಅಥವಾ ಮೊಬೈಲ್  ನಿಂದ ದೂರವಿರಿ : ಈಗ ಮೊಬೈಲ್,ಕಂಪ್ಯೂಟರ್ ಹಿಡಿಯಲು ವಯಸ್ಸು ಬೇಕಾಗಿಲ್ಲ. ಆನ್ಲೈನ್ ಕ್ಲಾನ್ ಗಳಿಂದ ಮಕ್ಕಳ ಕೈನಲ್ಲೂ ಮೊಬೈಲ್ ಓಡಾಡುತ್ತದೆ. ಮಹಿಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಹುತೇಕ ಸಮಯವನ್ನು ಮೊಬೈಲ್ ನಲ್ಲಿ ಕಳೆಯುತ್ತಾರೆ. ಕೆಲಸದ ಮಧ್ಯೆ ಸ್ವಲ್ಪ ಬಿಡುವಿದ್ದರೆ ಪೋರ್ನ್ ಸೈಟ್ ಗಳಿಗೆ ಭೇಟಿ ನೀಡುತ್ತಾರೆ. ಒಮ್ಮೆ ಪೋರ್ನ್ ಸೈಟ್ ಗೆ ಭೇಟಿ ನೀಡಿದರೆ ಸಾಕು.ನಂತ್ರ ತಾನಾಗಿಯೇ ಅದ್ರ ನೋಟಿಫಿಕೇಷನ್ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಫೋಟೋ, ವಿಡಿಯೋ ಅಥವಾ ಜಾಹೀರಾತಿನ ಪ್ರಭಾವದಿಂದಲೂ ಗಮನ ಅದರ ಕಡೆಗೆ ಹೋಗುತ್ತದೆ. ಖಾಲಿ ಸಮಯದಲ್ಲಿ ಪೋರ್ನ್ ಸೈಟ್ ಇಣುಕಿ ನೋಡುವವರು ನೀವಾಗಿದ್ದರೆ,ಕೆಲಸ ಮುಗಿದ ತಕ್ಷಣ ಮೊಬೈಲ್,ಲ್ಯಾಪ್ ಟಾಪ್ ದೂರವಿಡಿ. ಅಗತ್ಯವಿದ್ದಾಗ ಮಾತ್ರ ಗ್ಯಾಜೆಟ್‌ಗಳನ್ನು ಬಳಸಿ.

ಎಂದೂ ಒಂಟಿಯಾಗಿರಬೇಡಿ : ಪೋರ್ನ್ ಚಟ ಹೆಚ್ಚಾಗಿ ಮನೆಯ ಹೊರಗೆ ವಾಸಿಸುವ ಅಥವಾ ಒಂಟಿಯಾಗಿ ವಾಸಿಸುವ ಜನರಲ್ಲಿ ಕಂಡುಬರುತ್ತದೆ. ಅಧ್ಯಯನ, ಉದ್ಯೋಗ ಅಥವಾ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂಟಿಯಾಗಿ ವಾಸಿಸುವ ಜನರು ಲೈಂಗಿಕ ಉತ್ಸಾಹದಿಂದ ಪೋರ್ನ್ ವೀಕ್ಷಿಸಲು ಪ್ರಾರಂಭಿಸುತ್ತಾರೆ. ನಂತರ ಅದು ವ್ಯಸನವಾಗುತ್ತದೆ. ಹಾಗಾಗಿ ಜನರು ಸದಾ ಯಾವುದಾದರೂ ಕೆಲಸದಲ್ಲಿ ನಿರತರಾಗಿರುವುದು ಅವಶ್ಯಕ. ಅಥವಾ ಇಡೀ ಕುಟುಂಬದೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ.  

ಕಂಪ್ಯೂಟರನ್ನು ಈ ಜಾಗದಲ್ಲಿಡಿ:  ಕತ್ತಲ ಕೋಣೆಯಲ್ಲಿ ಅಥವಾ ಯಾರೂ ಬರದ ಸ್ಥಳದಲ್ಲಿ ನೀವು ಕುಳಿತಾಗ ಪೋರ್ನ್ ವೀಕ್ಷಣೆ ಹೆಚ್ಚಾಗುತ್ತದೆ. ಮನೆಯಲ್ಲಿ ಸದಾ ಎಲ್ಲರೂ ಓಡಾಡುವ ಜಾಗದಲ್ಲಿ ನೀವು ಕುಳಿತುಕೊಂಡರೆ ಆಗ ಮನಸ್ಸಿನಲ್ಲೊಂದು ಭಯವಿರುತ್ತದೆ. ಬೇರೆಯವರು ನೋಡಿದರೆ ಎಂಬ ಕಾರಣಕ್ಕೆ ನೀವು ಪೋರ್ನ್ ವೀಕ್ಷಣೆಗೆ ಏಕಾಗ್ರತೆ ನೀಡಲು ಸಾಧ್ಯವಾಗುವುದಿಲ್ಲ. 

Snoring Problem: ಗೊರಕೆ ಹೊಡೀತೀರಾ? ಮೊದಲು ಬೊಜ್ಜು ಕರಗಿಸಿಕೊಳ್ಳಿ

ಸಂಗೀತದಿಂದ ಎಲ್ಲವೂ ಸಾಧ್ಯ: ಸಂಗೀತದಲ್ಲಿ ಅಧ್ಬುತ ಶಕ್ತಿಯಿದೆ. ಇದು ನೋವನ್ನು ಮರೆಸಬಲ್ಲದು. ಇದು ಮನಸ್ಸಿಗೆ ಶಾಂತಿ ನೀಡುತ್ತದೆ. ಹಾಗಾಗಿ ನೀವು ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಿ. ಇಲ್ಲವೆ ಸಿನಿಮಾ ಧಾರಾವಾಹಿ ವೀಕ್ಷಣೆ ಮಾಡಿ. ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಪೋರ್ನ್ ಬಗ್ಗೆ ಆಲೋಚನೆ ಬರದಂತೆ ನೋಡಿಕೊಳ್ಳಿ. 

Winter and Orange: ಚಳಿಗಾಲದ ಕಿತ್ತಳೆ ತಿಂದ್ರೆ ಸಮಸ್ಯೆಗಳೆಲ್ಲಾ ದೂರ

ಯೋಗಾಭ್ಯಾಸ : ಪೋರ್ನ್ ಚಿತ್ರ ವೀಕ್ಷಣೆಯಿಂದ ದೂರ ಬರಬೇಕೆಂದ್ರೆ ಯೋಗಾಭ್ಯಾಸ ಉತ್ತಮ. ವಿಶೇಷವಾಗಿ ಪ್ರಾಣಾಯಾಮ ರೂಢಿಸಿಕೊಳ್ಳಿ. ಹಾಗೆ ಧ್ಯಾನವನ್ನು ಅಭ್ಯಾಸ ಮಾಡಿ. ಸಾತ್ವಿಕ ಆಹಾರ ಸೇವನೆಗೆ ಮಹತ್ವ ನೀಡಿ. ಮದ್ಯಪಾನ,ಧೂಮಪಾನದಿಂದ ದೂರವಿರಿ. 

ಮಾನಸಿಕ ತಜ್ಞರ ಭೇಟಿ : ಸಮಸ್ಯೆ ಇದ್ಯಾವುದೇ ಉಪಾಯದಿಂದ ಕಡಿಮೆಯಾಗಿಲ್ಲ ಎನ್ನುವವರು ಮನೋವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!