ಕೆಲಸ, ಒತ್ತಡ, ಕಂಪ್ಯೂಟರ್ ಬಳಕೆ, ಕುಳಿತುಕೊಳ್ಳುವ ಭಂಗಿ ಹೀಗೆ ಅನೇಕ ಕಾರಣಕ್ಕೆ ಕುತ್ತಿಗೆ ನೋವು ಕಾಡೋದು ಸಹಜ. ಕುತ್ತಿಗೆ ನೋವಿಗೆ ಜನರು ಮಾತ್ರೆ ಸೇವನೆ ಮಾಡ್ತಾರೆ. ಆದ್ರೆ ಅದ್ರಿಂದ ಪ್ರಯೋಜನ ಶೂನ್ಯ. ಅಂಥವರು ದಿನದಲ್ಲಿ ಕೆಲವೇ ನಿಮಿಷ ಕೆಲ ವ್ಯಾಯಾಮ ಮಾಡಿದ್ರೆ ಸಾಕು, ಕತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ಎಲ್ಲರ ಬಾಯಲ್ಲೂ ಇತ್ತೀಚಿಗೆ ಸಾಮಾನ್ಯವಾಗಿ ಕೇಳಿ ಬರುವ ಮಾತುಗಳಲ್ಲಿ ಕತ್ತು ನೋವು ಕೂಡ ಒಂದು. ಕುಳಿತುಕೊಳ್ಳುವ ಭಂಗಿ ಹಾಗೂ ದೀರ್ಘಕಾಲ ಕಂಪ್ಯೂಟರ್, ಗೆಜೆಟ್ ಬಳಕೆಯಿಂದ ಕತ್ತು ನೋವು ಕಾಣಿಸಿಕೊಳ್ಳುತ್ತದೆ. ಈ ಕತ್ತು ನೋವು ಹಿಂಸೆ ನೀಡುವ ನೋವುಗಳಲ್ಲಿ ಒಂದು. ನೋವನ್ನು ಸುಲಭವಾಗಿ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಕತ್ತು ನೋವಿಗೆ ಮೂಳೆ ಸವೆತ ಕೂಡ ಒಂದು ಕಾರಣವಾಗಬಹುದು. ಮೂಳೆ ಸವೆತ ಅಂದ್ರೆ ಅಸ್ಥಿಸಂಧಿವಾತ ಅನೇಕ ದಿನಗಳವರೆಗೆ ನಮ್ಮನ್ನು ಕಾಡುತ್ತದೆ. ಕುತ್ತಿಗೆ ನೋವಿಗೆ ಇನ್ನೂ ಅನೇಕ ಕಾರಣವಿದೆ. ನರಗಳ ಸೆಳೆತ, ಗಾಯ, ಸಂಧಿವಾತ, ಸ್ನಾಯು ಸೆಳೆತ, ಕೀಲು ನೋವಿನಂತಹ ಕಾಯಿಲೆಗಳು ಕುತ್ತಿಗೆ ನೋವಿಗೆ ಕಾರಣವಾಗುತ್ತವೆ. ಕುತ್ತಿಗೆ ನೋವು ದೀರ್ಘ ಕಾಲದಿಂದ ಕಾಡ್ತಿದ್ದರೆ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಇನ್ನು ನಿಮಗೆ ಆಗಾಗ ಕುತ್ತಿಗೆ (Neck) ನೋವು ಬರ್ತಿದೆ, ಕೆಲಸದ ಕಾರಣಕ್ಕೆ ಹೀಗಾಗ್ತಿದೆ ಎಂದಾದ್ರೆ ಮನೆಯಲ್ಲೇ ಕೆಲ ಟಿಪ್ಸ್ ಪಾಲಿಸಿ. ಇದ್ರಿಂದ ಕತ್ತು ನೋವು (Pain) ನ್ನು ನೀವು ಕಡಿಮೆ ಮಾಡಬಹುದು.
ಕತ್ತು ನೋವಿಗೆ ಇಲ್ಲಿದೆ ಪರಿಹಾರ :
ಧನುರಾಸನ (Dhanurasana) : ಯೋಗದಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಸಂಗತಿ ನಿಮಗೆಲ್ಲ ತಿಳಿದಿದೆ. ಕತ್ತು ನೋವು ಜಾಸ್ತಿ ಇದೆ ಎನ್ನುವವರು ಧನುರಾಸನ ಅಭ್ಯಾಸ ಮಾಡಿ. ಮೊದಲು ಹೊಟ್ಟೆ ಮೇಲೆ ಮಲಗಿಕೊಳ್ಳಿ. ನಂತ್ರ ನಿಮ್ಮ ಕಾಲನ್ನು ಎತ್ತಿ. ನಿಮ್ಮ ಕೈಗಳಿಂದ ಮೊಣಕಾಲನ್ನು ಹಿಡಿಯಿರಿ. ನಂತ್ರ ಕೈಗಳನ್ನು ಹಿಂದಕ್ಕೆ ಜಗ್ಗುತ್ತಾ ಕುತ್ತಿಗೆಯನ್ನು ಎತ್ತಿ. ಹಾಗೆ ತೊಟೆಯನ್ನು ಅಗಲ ಮಾಡಿ ಅದನ್ನು ಎತ್ತಿ. ಹೊಟ್ಟೆ ಬಿಟ್ಟು ದೇಹದ ಎಲ್ಲ ಭಾಗ ನೆಲದಿಂದ ಮೇಲಿರಬೇಕು. 10 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ನೀವು ಇರಬೇಕು. ನಂತ್ರ ನಿಧಾನವಾಗಿ ಸಹಜ ಸ್ಥಿತಿಗೆ ಬರಬೇಕು. ಬೆನ್ನು ಹಾಗೂ ಬೆನ್ನಿನ ಸ್ನಾಯುಗಳನ್ನು ಇದು ಬಲಪಡಿಸುತ್ತದೆ.
ಟೆನ್ನಿಸ್ ಬಾಲ್ ಮಸಾಜ್ : ಟೆನ್ನಿಸ್ ಬಾಲ್ ಮೂಲಕ ಕುತ್ತಿಗೆಯನ್ನು ಮಸಾಜ್ ಮಾಡಿದ್ರೂ ನಿಮ್ಮ ಕುತ್ತಿಗೆ ನೋವು ಕಡಿಮೆಯಾಗುತ್ತದೆ. ಕತ್ತು ನೋವಿರುವ ಜಾಗದಲ್ಲಿ ಬೌಲ್ ಹಿಡಿದು 20 ನಿಮಿಷ ಮಸಾಜ್ ಮಾಡಿ. ಕುತ್ತಿಗೆಗೆ ಬಾಲನ್ನು ಒತ್ತುತ್ತಿರಿ. ಟೆನಿಸ್ ಬಾಲ್ ನಿಮ್ಮ ಸ್ನಾಯುಗಳ ಬಿಗಿತವನ್ನು ಸರಿಪಡಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿತೀರಾ? ಇವತ್ತೆ ಬಿಟ್‌ಬಿಡಿ!
ಉಷ್ಟ್ರಾಸನ : ವರದಿ ಪ್ರಕಾರ ಕತ್ತು ನೋವಿಗೆ ಉಷ್ಟ್ರಾಸನ ಕೂಡ ಬಹಳ ಒಳ್ಳೆಯ ಆಸನವಾಗಿದೆ. ಈ ಆಸನ ಮಾಡಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ಹಸ್ತದಿಂದ ಮೊಣಕಾಲಿನವರೆಗಿನ ಭಾಗ ಮಾತ್ರ ನೆಲಕ್ಕೆ ಊರಿರಲಿ. ತೊಡೆಯ ಭಾಗ ನೆಲದಿಂದ ಮೇಲಿರಬೇಕು. ನಿಮ್ಮ ಕೈಗಳನ್ನು ಸೊಂಟದ ಪಕ್ಕದಿಂದ ತೆಗೆದುಕೊಂಡು ಹೋಗಿ ನಿಮ್ಮ ಹಿಮ್ಮಡಿಯನ್ನು ಹಿಡಿಯಬೇಕು. ಆಗ ದೇಹ ಹಿಂದಕ್ಕೆ ಭಾಗಬೇಕು. ಸುಮಾರು 30-60 ಸೆಕೆಂಡುಗಳ ಕಾಲ ಈ ಸ್ಥಿತಿಯಲ್ಲಿ ಇರಬೇಕು.
ಕತ್ತಿನ ವ್ಯಾಯಾಮ: ದೀರ್ಘ ಕಾಲದವರೆಗೆ ನೀವು ಕಂಪ್ಯೂಟರ್ (Computer) ಮುಂದೆ ಒಂದೇ ಭಂಗಿಯಲ್ಲಿ ಕುಳಿತಿರುತ್ತೀರಿ. ಇದ್ರಿಂದ ಕತ್ತಿನ ಸ್ನಾಯುಗಳು ಹಿಡಿದಿರುತ್ತವೆ. ಇದ್ರಿಂದ ಕತ್ತು ನೋವು ಕಾಡುತ್ತದೆ. ಪ್ರತಿ ದಿನ ಕತ್ತಿನ ವ್ಯಾಯಾಮ ಮಾಡಿದ್ರೆ ನೋವು ಕಡಿಮೆಯಾಗುತ್ತದೆ. ಕತ್ತನ್ನು ಮೇಲೆ ಕೆಳಗೆ ಮಾಡುವುದು, ಕತ್ತನ್ನು ಎರಡಿಂದ ಬಲಕ್ಕೆ ತಿರುಗಿಸುವುದು ಮಾಡಬೇಕು.
30ರಲ್ಲೂ ಮೂಳೆ ಗಟ್ಟಿಯಾಗಿರಬೇಕು ಅಂದ್ರೆ ತಪ್ಪಿಯೂ ಇದನ್ನೆಲ್ಲಾ ತಿನ್ಬಾರ್ದು
ಕಾರ್ನ್ ಸ್ಟ್ರೆಚ್ ನಿಂದ ನೋವು ಮಾಯ : ಗೋಡೆಗೆ ಮುಖ ಮಾಡಿ ನೀವು ನಿಲ್ಲಬೇಕು. ಪಾದಗಳನ್ನು ಒಟ್ಟಿಗೆ ಸೇರಿಸಿ. ಗೋಡೆಯಿಂದ ಎರಡು ಅಡಿ ದೂರದಲ್ಲಿ ಪಾದವಿರಲಿ. ಹಸ್ತವನ್ನು ಗೋಡೆಗಳಿಗೆ ಒತ್ತಿ. ನಂತ್ರ ಕೈಗಳನ್ನು ನೇರಮಾಡಿ. ಹಸ್ತ ಕೈಗೆ ಒತ್ತಿರಲಿ. ಈ ವ್ಯಾಯಾಮವನ್ನು 60 ಸೆಕೆಂಡು ಮಾಡಿ.