ಎಲ್ಲರೂ ದೇಹ ಫಿಟ್ ಆಗಿ ಇದ್ದು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ವರ್ಕೌಟ್, ಯೋಗ ಮಾಡುತ್ತಾರೆ. ಒಂದೊಂದು ವ್ಯಾಯಾಮವು ವಿಭಿನ್ನ ಪ್ರಯೋಜಗಳನ್ನು ನಮ್ಮ ದೇಹಕ್ಕೆ ನೀಡುತ್ತವೆ. ಇಂದು ಪ್ಲ್ಯಾಂಕ್ ವ್ಯಾಯಾಮದ ಬಗ್ಗೆ ಮಾಹಿತಿ ನೀಡಿದ್ದೇವೆ.
ದಿನನಿತ್ಯ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಸಾಧ್ಯ. ಇದು ಸದೃಢ ದೇಹವನ್ನು ಹೊಂದಲು ಮತ್ತು ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅದಲ್ಲದೆ ದೇಹದ ತೂಕ ಇಳಿಸಿಕೊಳ್ಳಲು ಸಹಾಯಕ. ವ್ಯಾಯಾಮವು ದೇಹದ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಹಾಗೂ ಮೆದುಳಿನ ಅವ್ಯವಸ್ಥೆಯನ್ನು ನಿವಾರಿಸಲು ಸಹಾಯ ಮಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಅನೇಕ ರೀತಿಯ ವ್ಯಾಯಾಮಗಳಿದ್ದು, ಅವುಗಳಿಂದ ದೇಹಕ್ಕೆ ವಿವಿಧ ರೀತಿಯ ಪ್ರಯೋಜಗಳಿವೆ. ಅದರಲ್ಲಿ ಪ್ಲ್ಯಾಂಕ್ ವ್ಯಾಯಾಮ ಕೂಡ ಒಂದು. ಪ್ಲ್ಯಾಂಕ್ ವ್ಯಾಯಾಮದಿಂದ ದೇಹಕ್ಕೆ ಅನೇಕ ಪ್ರಯೋಜನಗಳಿದ್ದು, ಅವುಗಳ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ದೇಹದ ಸಮತೋಲನ ಮತ್ತು ಭಂಗಿಯ ಸುಧಾರಣೆ
ಸ್ನಾಯುವಿನ ಬೆಳವಣಿಗೆ ಹೊರತಾಗಿ, ಪ್ಲ್ಯಾಂಕ್ ವ್ಯಾಯಾಮ (Plank exercise) ಉತ್ತಮ ದೇಹದ ಸಮತೋಲನ, ಭಂಗಿ ಸಾಧಿಸಲು ಸಹಾಯ ಮಾಡುತ್ತದೆ. ಬೆನ್ನು, ಕುತ್ತಿಗೆ, ಎದೆ (Chest), ಭುಜ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವ ಮೂಲಕ ದೇಹದ ಭಂಗಿಯನ್ನು ಸುಧಾರಿಸಲು ಪ್ಲ್ಯಾಂಕಿಂಗ್ ವ್ಯಾಯಾಮವು ಸಹಾಯಕಾರಿಯಾಗಿದೆ. ಈ ವ್ಯಾಯಾಮವನ್ನು ಮಾಡುವುದರಿಂದ ಗೂಡು ಬೆನ್ನನ್ನು ನೇರವಾಗಿಸಲು ಸಹಾಯವಾಗುತ್ತದೆ. ಇನ್ನು ಇದನ್ನು ದಿನನಿತ್ಯ ವ್ಯಾಯಾಮದ ಮೂಲಭೂತ ಭಾಗವೆಂದು ಪರಿಗಣಿಸಲಾಗಿದ್ದು, ಕಾರಣವೇನೆಂದರೆ ಉತ್ತಮ ಸಮತೋಲನ. ಹಾಗೇ ಪ್ಲ್ಯಾಂಕ್ ವ್ಯಾಯಾಮ ಮಾಡುವ ಸಮಯದಲ್ಲಿ ಒಂದೇ ಗುಂಪಿನ ಸ್ನಾಯುಗಳಿಗೆ (muscles) ಭಾರ ಬೀಳುವ ಸಾಧ್ಯತೆ ಕಡಿಮೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿತೀರಾ? ಇವತ್ತೆ ಬಿಟ್‌ಬಿಡಿ!
undefined
ಮೂಳೆಗಳ ಮೂಲವನ್ನು ಬಲಪಡಿಸುತ್ತದೆ
ಪ್ಲ್ಯಾಂಕ್ ವ್ಯಾಯಾಮವು ದೇಹದಲ್ಲಿನ ಬೆನ್ನುಮೂಳೆ, ಭುಜದ ಮೂಳೆಗಳು (Shoulder bones), ಸೊಂಟ ಮತ್ತು ಕೀಲುಗಳ ಮೂಲವನ್ನು ಬಲಗೊಳಿಸುತ್ತದೆ. ಮೂಳೆಗಳ ಮೂಲವಾದ ಟ್ರಾನ್ಸ್ವರ್ಸಸ್ ಅಬ್ಡೋಮಿನಿಸ್, ರೆಕ್ಟಸ್ ಅಬ್ಡೋಮಿನಿಸ್ ಎನ್ನುವ ಪ್ರಮುಖ ಸ್ನಾಯು ಗುಂಪುಗಳನ್ನು ಪ್ಲ್ಯಾಂಕ್ ವ್ಯಾಯಾಮದ ಸಹಾಯದಿಂದ ಬಲಗೊಳಿಸಬಹುದು.
ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ
ಪ್ಲ್ಯಾಂಕ್ ವ್ಯಾಯಾಮದ ಭಂಗಿಯುಲ್ಲಿ ಮುಖ್ಯವಾಗಿ ಹೊಟ್ಟೆಯ ಸ್ನಾಯುಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಹೊಟ್ಟೆಯ ಕೊಬ್ಬನ್ನು (Belly fat) ತೊಡೆದು ಹಾಕಲು ಇದು ಉತ್ತಮ ವ್ಯಾಯಾಮವಾಗಿದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ಪ್ಲ್ಯಾಂಕ್ ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ದೇಹಕ್ಕೆ ಆಕರ್ಷಕವಾದ ಆಕಾರವನ್ನು ನೀಡುತ್ತದೆ.
ಬೆನ್ನುನೋವಿಗೆ ರಾಮಬಾಣ
ಪ್ಲ್ಯಾಂಕ್ ವ್ಯಾಯಾಮವು ಬೆನ್ನಿನಲ್ಲಿನ ಸಣ್ಣ ಮೂಳೆಗಳು ಸಂಪೂರ್ಣವಾಗಿ ಜೋಡಿಸಲು ಸಹಾಯ ಮಾಡುವುದರಿಂದ, ಬೆನ್ನು ನೋವನ್ನು (back pain) ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ವೃದ್ಧಾಪ್ಯದಲ್ಲಿ ಉಂಟಾಗುವಂತಹ ಬೆನ್ನುನೋವನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ ಈ ಭಂಗಿಯು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಹೀಗೆ ಪ್ಲ್ಯಾಂಕ್ ವ್ಯಾಯಾಮವು (Plank exercise)ಬೆನ್ನು ನೋವನ್ನು ತಡೆಯಲು ಮತ್ತಷ್ಟು ಸಹಾಯ ಮಾಡುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸಲು ಈ ಆಟಗಳನ್ನ ಆಡಿದ್ರೆ ಸಾಕು
ಚಯಾಪಚಯವನ್ನು ಸುಧಾರಿಸುತ್ತದೆ
ಪ್ಲ್ಯಾಂಕ್ ವ್ಯಾಯಾಮ ಮಾಡುವಾಗ ಶ್ರಮ ಮತ್ತು ಸಂಪೂರ್ಣ ಸ್ನಾಯುಗಳ ಬಲವನ್ನು ಉಪಯೋಗಿಸಬೇಕು. ಇದರಿಂದ ಕಿಬ್ಬೊಟ್ಟೆಯ (Belly) ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಅನೇಕ ಸಂದರ್ಭಗಳಲ್ಲಿ ದೇಹದ ಇತರ ಭಾಗಗಳಲ್ಲಿನ ಸ್ನಾಯುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಹಾಗೆ ಹೆಚ್ಚು ಸ್ನಾಯುವಿನಿಂದಾಗಿ ಹೆಚ್ಚು ಕ್ಯಾಲೊರಿಗಳು (Calories)ಬರ್ನ್ ಆಗುತ್ತವೆ. ಇನ್ನು ಜಡ ಜೀವನಶೈಲಿಯನ್ನು ಹೊಂದಿದ್ದಲ್ಲಿ ಪ್ಲ್ಯಾಂಕ್ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಇದು ಕೊಬ್ಬನ್ನು ಸುಡುವುದು ಮಾತ್ರವಲ್ಲದೆ ಚಯಾಪಚಯವನ್ನು (Metabolism) ಸುಧಾರಿಸುತ್ತದೆ. ಪ್ರತಿದಿನ ಪ್ಲ್ಯಾಂಕ್ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಮೆಟಾಬಾಲಿಕ್ ದರ ಹೆಚ್ಚಿಸಬಹುದು.
ಪ್ಲ್ಯಾಂಕ್ ವ್ಯಾಯಾಮದಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದರೆ ಇದನ್ನು ಮಾಡುವಾಗ ಎಚ್ಚರಿಕೆ ವಹಿಸುವುದು ಅಷ್ಟೇ ಮುಖ್ಯ. ಯಾಕೆಂದ್ರೆ ಪ್ಲ್ಯಾಂಕ್ ವ್ಯಾಯಾಮ ಮಾಡುವಾಗ ದೇಹದ ಮೇಲೆ ನಿಯಂತ್ರಣವಿರುವುದಿಲ್ಲ. ಈ ವೇಳೆ ದೇಹವನ್ನು ಸರಿಯಾಗಿ ನಿಯಂತ್ರಿಸಬೇಕು. ಇಲ್ಲವಾದರೆ ಮೊಣಕೈ, ಮತ್ತು ಮಣಿಕಟ್ಟಿನ ಮೇಲೆ ಗಾಯಗಳಾಗಬಹುದು.