Leeches: ಮನೆ ಹೊರಗೆ ಮಾತ್ರವಲ್ಲ ಒಳಗೂ ಲಗ್ಗೆಯಿಟ್ಟು ರಕ್ತ ಹಿರುವ ಜಿಗಣೆ ಕಾಟಕ್ಕೆ ಇಲ್ಲಿದೆ ಮದ್ದು

Published : Sep 24, 2026, 01:33 PM IST
Leeches

ಸಾರಾಂಶ

ಮಳೆಗಾಲದಲ್ಲಿ ಪರಿಸರ ಎಷ್ಟು ಸುಂದರವಾಗಿರುತ್ತೋ ಅಷ್ಟೇ ಕೀಟಗಳ ಕಾಟ ಹೆಚ್ಚಾಗುತ್ತೆ. ಮಳೆಗಾಲದಲ್ಲಿ ಹಾರುವ ಇರುವೆಗಳು ಮತ್ತು ಸೊಳ್ಳೆಗಳಂತಹ ಕೀಟಗಳ ಜೊತೆ ಜಿಗಣೆ ಕಾಟ ಹೆಚ್ಚು. ರಕ್ತ ಹೀರುವ ಜಿಗಣೆಯಿಂದ ರಕ್ಷಣೆ ಹೀಗೆ ಮಾಡಿ.

ಮಳೆಗಾಲ ಶುರುವಾಗ್ತಿದ್ದಂತೆ ಮನೆ ಸುತ್ತಮುತ್ತ ಕೀಟ-ಜಂತುಗಳ ಕಾಟ ಶುರುವಾಗುತ್ತೆ. ಮನೆಯಿಂದ ಹೊರಗೆ ಹೋದ್ರೆ ಸಾಕು ಜಿಗಣೆ ರಕ್ತ ಹೀರುತ್ತೆ. ಮಲೆನಾಡಿನಂತಹ ಪ್ರದೇಶಗಳಲ್ಲಿ ಜಿಗಣೆ ಕಾಟ ವಿಪರೀತ. ನಾವು ಮನೆಯಿಂದ ಹೊರಗೆ ಹೋಗ್ಬೇಕಾಗಿಲ್ಲ ಅವೇ ಮನೆಯೊಳಗೆ ಪ್ರವೇಶ ಮಾಡುತ್ವೆ. ಜಿಗಣೆ ನೋಡಲು ಅಸಹ್ಯವಾಗಿರುವುದಷ್ಟೇ ಅಲ್ಲ, ಚರ್ಮಕ್ಕೆ ಬಿಗಿಯಾಗಿ ಅಂಟಿಕೊಳ್ಳುವ ಅವು ರಕ್ತ ಹೀರುತ್ತದೆ. ಚರ್ಮಕ್ಕೆ ಅಂಟಿಕೊಂಡ ಜಿಗಣೆ ತೆಗೆಯೋದು ಒಂದ್ಕಡೆ ಕಷ್ಟವಾದ್ರೆ ಇನ್ನೊಂದು ಕಡೆ ನಂತ್ರ ಕಾಡುವ ರಕ್ತಸ್ರಾವ, ತುರಿಕೆ ಮತ್ತಷ್ಟು ತೊಂದರೆ ನೀಡುತ್ತದೆ.

ಜಿಗಣೆಯನ್ನು ದೂರ ಇಡೋದು ಹೇಗೆ?

ಮನೆ ಅಥವಾ ಗಾರ್ಡನ್ ಸುತ್ತ ಜಿಗಣೆಗಳು ಕಾಣಿಸಿಕೊಳ್ಳುತ್ತಿದ್ದರೆ, ಅವು ಒಳಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಮೊದಲಿಗೆ ಜಿಗಣೆಗಳು ಮನೆ ಒಳಗೆ ಎಲ್ಲಿಂದ ಬರುತ್ತಿವೆ ಎಂಬುದನ್ನು ಗಮನಿಸಿ. ಮನೆಯ ಚರಂಡಿ ಹಾಗೂ ನೀರು ಹರಿಯುವ ಜಾಗಗಳಿಗೆ ಜಾಲರಿ ಅಳವಡಿಸಿ. ಮಳೆಗಾಲದಲ್ಲಿ ಸಾಧ್ಯವಾದಷ್ಟು ಕಿಟಕಿ-ಬಾಗಿಲುಗಳನ್ನು, ವಿಶೇಷವಾಗಿ ಸಂಜೆ ಸಮಯದಲ್ಲಿ ಮುಚ್ಚಿಡಿ. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

ಉಪ್ಪು

ಜಿಗಣೆ ಓಡಿಸಲು ಉಪ್ಪು ಸಹಕಾರಿ. ಚಿಟಕಿ ಉಪ್ಪಿನಿಂದ ಕ್ಷಣ ಮಾತ್ರದಲ್ಲಿ ಜಿಗಣೆ ಓಡಿಸಬಹುದು. ಉಪ್ಪಿನ ವಾಸನೆ ಜಿಗಣೆಗೆ ಕಿರಿಕಿರಿಯುಂಟು ಮಾಡುತ್ತದೆ. ಜಿಗಣೆಗಳು ಕಾಣಿಸಿಕೊಳ್ಳುವ ಜಾಗದಲ್ಲಿ ಸ್ವಲ್ಪ ಪ್ರಮಾಣದ ಉಪ್ಪನ್ನು ಹಾಕಬೇಕು. ಕಿಟಕಿ-ಬಾಗಿಲುಗಳ ಬಳಿ ಕೂಡ ಉಪ್ಪನ್ನು ಹಾಕಿ. ಮನೆಯ ಸುತ್ತಮುತ್ತ ಉಪ್ಪು ಬೆರೆಸಿದ ನೀರನ್ನು ಸಿಂಪಡಿಸಬೇಕು.

ಸೀಮೆಎಣ್ಣೆ

ಸೀಮೆಎಣ್ಣೆ ವಾಸನೆಯು ಜಿಗಣೆಗಳು ಮತ್ತು ಮಳೆಗಾಲದ ಇತರ ಕೀಟಗಳನ್ನು ಸೆಕೆಂಡುಗಳಲ್ಲಿ ಓಡಿಸುತ್ತದೆ. ಮಳೆಗಾಲದಲ್ಲಿ ಹಾರುವ ಇರುವೆಗಳನ್ನು ಓಡಿಸಲು ಈ ಎಣ್ಣೆಯನ್ನು ಬಳಸಬಹುದು. ಒಂದು ಕಪ್ ಸೀಮೆಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಮನೆಯ ಸುತ್ತ ಸಿಂಪಡಿಸಿ. ಸೀಮೆಎಣ್ಣೆ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುವಾಗಿರುವುದರಿಂದ ಬೆಂಕಿ, ಒಲೆ ಅಥವಾ ಇತರ ಶಾಖದ ಮೂಲಗಳಿಂದ ದೂರವಿರಿಸಿ. ಮಕ್ಕಳು, ಸಾಕುಪ್ರಾಣಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಿ.

ಬೇಕಿಂಗ್ ಸೋಡಾ

ಒಂದು ಮಗ್ ನೀರಿಗೆ ಸುಮಾರು ಮೂರು ಚಮಚ ಬೇಕಿಂಗ್ ಸೋಡಾ ಹಾಕಿ ಬೆರೆಸಿ. ಜಿಗಣೆಗಳು ಕಾಣಿಸಿಕೊಳ್ಳುವ ಚರಂಡಿ ಅಥವಾ ಗಾರ್ಡನ್ನ ಕೆಲವು ಜಾಗಗಳಲ್ಲಿ ಸಿಂಪಡಿಸಿ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಅಡಿಗೆ ಸೋಡಾ ಸಿಂಪಡಿಸಲು ಮರೆಯದಿರಿ.

ಸುಣ್ಣ

ಸುಣ್ಣ ಕೂಡ ಜಿಗಣೆ ಓಡಿಸಲು ಉತ್ತಮ ಮದ್ದಾಗಿದೆ. ನೀವು ಸುಣ್ಣವನ್ನು ಮನೆ ಸುತ್ತಮುತ್ತ, ಜಿಗಣೆ ಬರುವ ಜಾಗಕ್ಕೆ ಹಾಕುವುದರಿಂದ ಜಿಗಣೆ ಓಡಿ ಹೋಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಬಿಲ್, ಬಸ್ ಟಿಕೆಟ್ ಮುಟ್ಟೋ ಮುಂಚೆ ಇಷ್ಟು ಮಾಡಿ.. ಇಲ್ಲವೆಂದ್ರೆ ಕಾದಿದೆ ಕ್ಯಾನ್ಸರ್, ಬಂಜೆತನದ ಆಪತ್ತು!
Amla Benefits: ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ತಿಂದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಒಮ್ಮೆ ಟ್ರೈ ಮಾಡಿ!