ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತ ಹೋಗುವುದು ಆರಂಭದಲ್ಲಿ ಗೊತ್ತೇ ಆಗುವುದಿಲ್ಲ. ಹೀಗಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಎಂದು ಹೇಳಲಾಗುತ್ತದೆ. ದೇಹದಲ್ಲಿ ಇದರ ಪ್ರಮಾಣ ಮೀರುವ ಸಮಯದಲ್ಲಿ ಹಲವು ರೀತಿಯ ಸಂಕೇತಗಳು ಗೋಚರಿಸುತ್ತವೆ. ಮುಖ್ಯವಾಗಿ ಕಾಲುಗಳಲ್ಲಿ ಹಲವು ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬಾರದು.
ದೇಹದಲ್ಲಿ ಕೊಬ್ಬು ಹೆಚ್ಚುವುದು ಗಂಭೀರವಾದ ಸಮಸ್ಯೆ. ಕೊಬ್ಬು ಹೃದಯ ರೋಗ, ನರಗಳ ಸಮಸ್ಯೆ, ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಮುಂತಾದ ಸಮಸ್ಯೆಗಳಿಗೆ ಮೂಲವಾಗಿದೆ. ಜೀವಕ್ಕೆ ಹಾನಿ ತಂದೊಡ್ಡಬಲ್ಲ ಕೊಬ್ಬಿನ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅಧಿಕ ಕೊಲ್ಟಸ್ಟ್ರಾಲ್ ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ನಂತೆ. ದೇಹದ ಹಲವು ಕಾರ್ಯಗಳಿಗೆ ಕೊಬ್ಬು ಅತ್ಯಗತ್ಯ. ಕೋಶಗಳುಇ, ಕೆಲವು ಹಾರ್ಮೋನುಗಳು ಮತ್ತು ವಿಟಮಿನ್ ಡಿ ಸೃಷ್ಟಿಯಾಗಲು ಕೊಬ್ಬಿನ ಅಗತ್ಯವಿದೆ. ಆದರೆ, ಇದರ ಪ್ರಮಾಣ 200 ಮಿಲಿಗ್ರಾಮ್ ಗಿಂತ ಹೆಚ್ಚಾದರೆ ಅಪಾಯಕಾರಿಯಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದು ಸಾಮಾನ್ಯವಾಗಿ ತಡವಾಗಿಯೇ ತಿಳಿದುಬರುತ್ತದೆ.
ಆದರೆ, ಕೊಬ್ಬಿನ ಅಂಶ ಹೆಚ್ಚಾಗುವ ಸಮಯದಲ್ಲಿ ಹಲವು ರೀತಿಯ ಲಕ್ಷಣಗಳು ಗೋಚರವಾಗುತ್ತವೆ. ಇವುಗಳ ಬಗ್ಗೆ ಯಾರೂ ಹೆಚ್ಚು ಗಮನ ನೀಡುವುದಿಲ್ಲ. ಹೀಗಾಗಿ, ಕೊಬ್ಬು ನಿಧಾನವಾಗಿ ಹೆಚ್ಚಾಗುತ್ತಲೇ ಇರುತ್ತದೆ. ಯಾವಾಗ ಕೊಬ್ಬು ಹೆಚ್ಚಾಗಿದೆ ಎನ್ನುವುದು ತಿಳಿದುಬರುತ್ತದೆಯೋ ಆಗ ಸಾಕಷ್ಟು ಹಾನಿಯಾಗಿರುತ್ತದೆ. ಆದರೂ ದೇಹದ ಬಗ್ಗೆ ಸೂಕ್ಷ್ಮವಾಗಿದ್ದರೆ ಕೊಬ್ಬು ಹೆಚ್ಚುತ್ತಿರುವುದನ್ನು ಕೆಲವು ಲಕ್ಷಣಗಳ ಮೂಲಕ ತಿಳಿದುಕೊಳ್ಳಬಹುದು. ಮುಖ್ಯವಾಗಿ, ಕಾಲುಗಳಲ್ಲಿ ಕೆಲವು ಅಂಶಗಳು ಗೋಚರಿಸುತ್ತವೆ, ಇವುಗಳ ಬಗ್ಗೆ ಗಮನ ನೀಡಬೇಕು.
Weight Loss Tips: ತೂಕ ಇಳಿಸಿಕೊಳ್ಳಲು ಬೆವರು ಇಳಿಸಬೇಕಿಲ್ಲ, ಹೀಗೂ ಮಾಡಿದ್ರೂ ಸಾಕು!
ರಕ್ತನಾಳಗಳಲ್ಲಿ (Blood Vessel) ಕೊಬ್ಬಿನ ಮಟ್ಟ (Cholesterol Level) ಹೆಚ್ಚಾಗುವುದನ್ನು ತಿಳಿದುಕೊಳ್ಳಲು ಕಾಲಕಾಲಕ್ಕೆ ರಕ್ತದ ಪರೀಕ್ಷೆ (Blood Test) ಮಾಡಿಸಬೇಕು. ಆಹಾರದ (Food) ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ಕೊಬ್ಬು ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಬಾರದು. ಆಹಾರದಲ್ಲಿ ನಿಯಂತ್ರಣ ತಂದುಕೊಂಡರೆ ಕೊಬ್ಬು ಶೇರಖಣೆಯಾಗುವುದು ಕಡಿಮೆ ಮಾಡಬಹುದು.
• ಕ್ಲಾಡಿಕೇಷನ್ (Claudication)
ರಕ್ತನಾಳಗಳಲ್ಲಿ ರಕ್ತದ ಹರಿವಿಗೆ (Flow) ಧಕ್ಕೆಯಾದ ಸಮಯದಲ್ಲಿ ನೋವು (Pain) ಕಂಡುಬರುತ್ತದೆ. ಇದನ್ನು ಕ್ಲಾಡಿಕೇಷನ್ ಎನ್ನಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವ ಅತಿ ಗಮನಾರ್ಹ ಲಕ್ಷಣವೆಂದರೆ ಇದು. ಈ ಸ್ಥಿತಿ ಉಂಟಾದಾಗ ಕಾಲುಗಳ ಮಾಂಸಖಂಡಗಳಲ್ಲಿ (Muscles) ನೋವು, ಸೆಳೆತ, ಸುಸ್ತು ಕಂಡುಬರುತ್ತದೆ. ಇದು ಯಾವಾಗಲೂ ಸ್ವಲ್ಪ ದೂರ ನಡೆದ ಬಳಿಕ ಉಂಟಾಗಿ, ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಾಗ ಮಾಯವಾಗುತ್ತದೆ. ವಿಶ್ರಾಂತಿ (Rest) ಸ್ಥಿತಿಯಿಂದ ಯಾವುದಾದರೊಂದು ಕೆಲಸಕ್ಕೆ ಮೇಲೆದ್ದಾಗ ಸೆಳೆತ ಉಂಟಾಗುತ್ತದೆ. ರೆಸ್ಟ್ ಮಾಡಿದ ನಂತರ ಕೆಲಸ ಆರಂಭಿಸಲು ಮುಂದಾದಾಗ, ದೀರ್ಘ ನಿದ್ರೆಯಿಂದ ಎದ್ದ ಬಳಿಕ ಕಂಡುಬರುತ್ತದೆ. ನಿತಂಬ, ತೊಡೆ, ಕಾಲುಗಳಲ್ಲಿ ಇಂತಹ ನೋವಾದಾಗ ಕಡೆಗಣಿಸಬಾರದು. ಅಲ್ಲದೆ, ಪಾದಗಳ ಅಡಿಯಲ್ಲಿ ನೋವು ಉಂಟಾಗಬಹುದು. ನೇರವಾಗಿ ಮಲಗಿದ್ದಾಗ ಹೆಚ್ಚು ನೋವು ಕಂಡುಬರಬಹುದು.
• ಕಾಲುಗಳು ತಣ್ಣಗಾಗುವ (Cold) ಸಮಸ್ಯೆ
ಅಧಿಕ ಕೊಬ್ಬು ಇರುವ ಮತ್ತೊಂದು ಸಾಮಾನ್ಯ ಲಕ್ಷಣ ಇದು. ಸಾಮಾನ್ಯ ಹವಾಮಾನದಲ್ಲೂ ಕಾಲುಗಳು (Legs) ತಣ್ಣಗಾಗುವುದು, ಸಣ್ಣದಾದ ಕಂಪನವುಂಟಾಗುವುದು ಕಂಡುಬರುತ್ತದೆ. ಇದು ಪೆರಿಫೆರಲ್ ಆರ್ಟರಿ ಸಮಸ್ಯೆಯ ಸಂಕೇತವೂ ಆಗಿರಬಹುದು. ಆರಂಭದಲ್ಲಿ ಇದು ಸಮಸ್ಯೆ (Problem) ಎನಿಸದಿದ್ದರೂ ಪದೇ ಪದೆ ಅನುಭವಕ್ಕೆ ಬಂದಾಗ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಮಹಿಳೆಯರು ಚಿತ್ರ, ವಿಚಿತ್ರವಾಡಿದರೆ ಮೆಂಟಲ್ ಹೆಲ್ತ್ ಸಮಸ್ಯೆ, ಭೂತದ ಕಾಟವಲ್ಲ!
• ಕಾಲುಗಳ ಚರ್ಮದ ಬಣ್ಣ (Skin Color) ಮತ್ತು ಸ್ವರೂಪದಲ್ಲಿ ಬದಲಾವಣೆ (Change)
ಅಧಿಕ ಕೊಬ್ಬಿನಿಂದ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ನಾಳಗಳಲ್ಲಿ ಅಲ್ಲಲ್ಲಿ ಕೊಬ್ಬು ಸೇರಿಕೊಂಡು ಬ್ಲಾಕ್ (Block) ಉಂಟಾಗುತ್ತವೆ. ಇದರಿಂದ ರಕ್ತದ ಸಂಚಾರಕ್ಕೆ ಧಕ್ಕೆಯಾಗುತ್ತದೆ. ಕೆಲವು ಸ್ಥಳದಲ್ಲಿ ರಕ್ತದ ಪೂರೈಕೆ ಕಡಿಮೆ ಆದಾಗ ಆ ಭಾಗದ ಕಾರ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಹಾಗೂ ತ್ವಚೆಯ ಸ್ವರೂಪದಲ್ಲಿ ಬದಲಾವಣೆ ಕಂಡುಬರುತ್ತದೆ. ಕಾಲುಗಳ ಯಾವುದಾದರೂ ಭಾಗದಲ್ಲಿ ಚರ್ಮದ ಬಣ್ಣ ಬದಲಾದರೆ ಅಲಕ್ಷಿಸಬಾರದು. ಚರ್ಮದಲ್ಲಿ ಏರುಪೇರು, ಕಪ್ಪಾಗುವುದು, ತಗ್ಗಿದಂತೆ ಭಾಸವಾಗುವುದು ಇತ್ಯಾದಿ ಕಂಡುಬಂದರೆ ಎಚ್ಚರಿಕೆ (Care) ತೆಗೆದುಕೊಳ್ಳಬೇಕು.