
ನಿಮ್ಮ ಮೂಡ್ (Mood) ಚೆನ್ನಾಗಿರುವ ಹಾಗೆ ನೋಡಿಕೊಳ್ಳಬೇಕಾದವರು ನೀವೆ. ಕೆಲವರು ಮೂಡ್ ಸರಿ ಇಲ್ಲ ಎಂದಾಗ ಚಾಕಲೇಟು ತಿನ್ನುತ್ತಾರೆ, ಕೆಲವರು ಐಸ್‌ಕ್ರೀಮ್ ಮೊರೆ ಹೋಗುತ್ತಾರೆ. ಇನ್ನೂ ಹೆಚ್ಚಿನವರು ತಮಗಿಷ್ಟವಾಗುವ ಹಾಡುಗಳನ್ನು ಕೇಳುತ್ತಾರೆ. ಹಾಗೆ ಒಬ್ಬೊಬ್ಬರು ಒಂದೊಂದು ರೀತಿ ನಿಮ್ಮ ಮೂಡ್ ಸರಿ ಮಾಡಿಕೊಳ್ಳಲು ಪ್ರಯತ್ತನಿಸುತ್ತಾರೆ. ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಬದಲಿಸಿಕೊಳ್ಳುವ ಮೂಲಕ ಕೂಡ ರಿಲಾಕ್ಸಿಂಗ್ ಮೂಡ್ ಪಡೆಯಬಹುದು.
ಅದಕ್ಕಾಗಿ ಈ ಕೆಲವು ಮಾರ್ಗಗಳನ್ನು ಅನುಸರಿಸಬಹುದು.
ನಿಮ್ಮ ಸುತ್ತಮುತ್ತಲಿನ ವಾತಾವರಣ ಅಥವಾ ವಸ್ತುಗಳನ್ನು ಮರುಹೊಂದಿಸಿ (Rearrange)
ಸ್ವಾಭಾವಿಕವಾಗಿ (Naturally) ನೀವಿರುವ ಪ್ರದೇಶವನ್ನು ಹೊಸ ರೀತಿಯಲ್ಲಿ ಜೋಡಿಸಿಕೊಳ್ಳುವುದರಿಂದ ಒಂದು ಫ್ರೆಶ್ ಮನಸ್ಥಿತಿ ದೊರೆಯುತ್ತದೆ. ಇದು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತದೆ. ಜೊತೆಗೆ ನೀವೂ ಆರಾಮವಾಗಿ ಹಾಗೂ ನಿರಾಳವಾಗಿರುವ ಅನುಭವ ಆಗುತ್ತದೆ. ನೀವು ಸಣ್ಣ ಬದಲಾವಣೆಗಳನ್ನು ಮಾಡಿದರೂ ಅದು ನಿಮ್ಮ ಮನಸ್ಸಿಗೆ ದೊಡ್ಡ ಖುಶಿಯನ್ನೇ ನೀಡುತ್ತದೆ. ಉದಾಹರಣೆಗೆ ನಿಮ್ಮ ಕೊಠಡಿಗೆ ಹೊಸ ಪೇಂಟಿಂಗ್ ಸೇರಿಸುವುದು, ಹಾಸಿಗೆಗೆ ಹೊಸ ರೀತಿಯ ದಿಂಬುಗಳನ್ನು (Pillow) ಸೇರ್ಪಡೆ ಮಾಡುವುದು, ಯಾವುದಾದರು ಕಲಾಕೃತಿಯನ್ನು ಇಡುವುದು ಹೀಗೆ ಏನೋ ಒಂದು ಹೊಸ ಬದಲಾವಣೆಯನ್ನು ಮಾಡಿದಾಗ ಹೊಸ ಹುರುಪಿನ ಜೊತೆಗೆ ಮನಸ್ಸಿಗೆ ವಿಶ್ರಾಂತಿ ಕೂಡಾ ಸಿಗುತ್ತದೆ.
Freezerನಲ್ಲಿ ಆಹಾರ ಇಡೋ ಮುನ್ನ ಈ ಆರ್ಟಿಕಲ್ ಓದ್ಬಿಡಿ
ವಸ್ತುಗಳನ್ನು ಸ್ವಚ್ಛವಾಗಿ (Clean) ಜೋಡಿಸಿ ಇಡುವುದು
ನೀವು ವಾಸ ಮಾಡುವ ಪರಿಸರ ಸ್ವಚ್ಛವಾಗಿಲ್ಲ ಎಂದಾಗ ಮನಸ್ಸಿನ ಕಿರಿಕಿರಿ ಹೆಚ್ಚುತ್ತದೆ. ನೀವು ಯಾವುದೋ ಯೋಚನೆಯಲ್ಲಿ ರೂಮಿನೊಳಗೆ ಕಾಲಿಡುತ್ತೀರಿ. ಅಲ್ಲಿ ನೋಡಿದರೆ ಅಸ್ತವ್ಯಸ್ತವಾಗಿ ಬಿದ್ದಿರುವ ವಸ್ತುಗಳನ್ನು ನೋಡಿ ಇನ್ನೂ ಹೆಚ್ಚಿನ ಇರಿಟೇಶನ್ ಆಗುವುದರಲ್ಲಿ ಅನುಮಾನವಿಲ್ಲ. ಒಂದು ಕಡೆ ಆರಾಮವಾಗಿ ಕುಳಿತುಕೊಳ್ಳಬೇಕು ಎಂದು ಕೂಡಾ ಅನಿಸುವುದಿಲ್ಲ. ಅದಕ್ಕಾಗಿ ಆದಷ್ಟು ನೀವು ವಾಸ ಮಾಡುವ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇದನ್ನು ನೋಡಿದಾಗಲೇ ಒಂದು ರೀತಿಯ ವಿಶ್ರಾಂತ (Relaxing) ಮನಸ್ಥಿತಿ ದೊರಕುತ್ತದೆ. ಪ್ರತಿದಿನ ಬಳಸುವ ವಸ್ತುಗಳನ್ನು ಕೈಗೆಟಕುವ ಹಾಗೆ ಒಂದು ಕಡೆ ಜೋಡಿಸಿಡಿ. ಇಲ್ಲವಾದರೆ ಇದೂ ಕೂಡ ನಿಮ್ಮ ಮೂಡ್ ಕೆಡುವ ಹಾಗೆ ಮಾಡಿಬಿಡಬಹುದು. ನಿಮ್ಮ ಎಲ್ಲಾ ಕೆಲಸಗಳಿಗೂ ಬೇರೆಯವರ ಮೇಲೆ ಅವಲಂಬಿಸುವ ಬದಲು ನಿಮ್ಮ ಕೆಲಸ ನೀವು ಮಾಡಿಕೊಳ್ಳುವುದು ಉತ್ತಮ.
ಕ್ಯಾಂಡಲ್ (Candle) ಹಾಗೂ ಬೆಳಕು (Light) ಬಳಸುವುದು
ಕೆಲವೊಮ್ಮೆ ಮಂದ ಬೆಳಕಿನಲ್ಲಿ ಇರುವುದು ನಿಮ್ಮನ್ನು ಬೇಸರದ ಮನಸ್ಥಿತಿಗೆ ದೂಡುವ ಸಂಭವವಿದೆ. ಆದರೆ ಇನ್ನೂ ಕೆಲವು ಸಮಯಗಳಲ್ಲಿ ಇಂತಹ ಮಂದ ಬೆಳಕು ನಿಮಗೆ ಹೆಚ್ಚು ವಿಶ್ರಾಂತೆ ನೀಡುತ್ತವೆ. ಮೊದಲೇ ಮನೆಗೆ ಸುಸ್ತಾಗಿ ಹೋಗಿರುತ್ತೀರಿ, ಅದರಲ್ಲಿಯೂ ಒಂದೇ ಸಲಕ್ಕೆ ಹೀಗೆ ಜಗಮಗಿಸುವ ಬೆಳಕನ್ನು ನೋಡಿದಾಗ ಆ ಬೆಳಕಿನಂತೆ ಇನ್ನೂ ಹೆಚ್ಚಿನ ಕಿರಿಕಿರಿ (Irritation) ಉಂಟಾಗುತ್ತದೆ. ಅಷ್ಟೇ ಅಲ್ಲದೆ ತಲೆ ನೋವು ಕೂಡ ಶುರುವಾಗಿ ಬಿಡಬಹುದು. ಬೇರೆ ಯಾವುದೇ ಕೆಲಸ ಮಾಡಲೂ ಆಸಕ್ತಿ ಬರುವುದಿಲ್ಲ. ಆದ್ದರಿಂದ ಹೀಗೆ ಮಂದ ಬೆಳಕಿನಲ್ಲಿ ಕುಳಿತುಕೊಳ್ಳಬಹುದು ಅಥವಾ ಕ್ಯಾಂಡಲ್ ಅಥವಾ ದೀಪ ಹಚ್ಚಿಕೊಂಡು ಅದರ ಮುಂದೆ ಕೂರುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದರ ಜೊತೆಗೆ ಯಾವುದಾದರೂ ಸುಗಂಧಭರಿತ ಊದುಬತ್ತಿಯನ್ನೇನಾದರೂ ಹಚ್ಚಿಕೊಳ್ಳುತ್ತೀರಿ ಎಂದರೆ ಅದೂ ಇನ್ನೂ ಹೆಚ್ಚು ಆರಾಮವನ್ನು ನೀಡುತ್ತದೆ.
Intrusive Thoughts: ಒಳನುಗ್ಗುವ ಆಲೋಚನೆಗಳಿಗೆ ಕಡಿವಾಣ ಹಾಕುವುದು ಹೇಗೆ!
ಸಂಗೀತ (Music)
ತುಂಬಾ ಜನರು ತಮ್ಮ ಮೂಡ್ ಹಾಳಾದಾಗ ಮ್ಯೂಸಿಕ್‌ನ ಮೊರೆ ಹೋಗುತ್ತಾರೆ. ಇದರಿಂದ ನಿಮ್ಮ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಸಂಗೀತವು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ, ಮ್ಯೂಸಿಕ್ ಕೇಳುತ್ತಿದ್ದರೆ ಬೇರೆ ಎಲ್ಲ ಯೋಚನೆಗಳು ಹಾಗೇ ಸರಿದು ಹೋಗುತ್ತದೆ. ಹಾಗಾಗಿ ಒಂದು ಮೆಲೋಡಿ ಮ್ಯೂಸಿಕ್ ಕೇಳುತ್ತಾ ನಿಮ್ಮ ನಿತ್ಯ ಕೆಲಸ ಮುಂದುವರೆಸಿ.
ಹೀಗೆ ನೀವೆ ನಿಮಗೆ ಯಾವ ವಿಷಯ ಹೆಚ್ಚು ಕಿರಿಕಿರಿ ನೀಡುತ್ತದೆ ಎಂಬುದನ್ನು ಗುರುತಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಿ ಹಾಗೂ ರಿಲ್ಯಾಕ್ಸಿಂಗ್ ಮೂಡ್ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.