ಚಳಿಗಾಲದಲ್ಲಿ ತೂಕ ಹೆಚ್ಚುವ ಸಮಸ್ಯೆ ಹಲವರಿಗೆ ಎದುರಾಗುತ್ತದೆ. ಅಸಲಿಗೆ, ಇದು ನಮ್ಮಲ್ಲಿಯೇ ಇರುವ ಸಮಸ್ಯೆ. ಚಳಿಗಾಲದಲ್ಲಿ ಆಲಸ್ಯಕ್ಕೆ ಬೈ ಹೇಳಿ ಚಟುವಟಿಕೆಯಿಂದ ಕೂಡಿದ್ದರೆ, ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ತೂಕ ಹೆಚ್ಚುವುದರಿಂದ ಬಚಾವಾಗಬಹುದು.
ಹೇಗೆ ಮಲಗಿದರೂ ಚಳಿಯ ಅಲೆಯೊಂದು ಹೊದಿಕೆಯೊಳಗೆ ನುಸುಳುತ್ತದೆ. ಆಚೆ ಮಗ್ಗುಲಿಗೆ ಮಲಗಿದರೂ ಹಾಗೆಯೇ, ಈಚೆ ಮಗ್ಗುಲಿನಲ್ಲಿ ಹೆಚ್ಚು ಹೊತ್ತು ಮಲಗಲಿಕ್ಕೇ ಸಾಧ್ಯವಾಗದು. ಒಟ್ಟಿನಲ್ಲಿ ನಿದ್ರೆ ಬರುವಾಗ ಗಡಿಯಾರದ ಮುಳ್ಳು ಅದೆಲ್ಲಿರುತ್ತದೆಯೋ ಗೊತ್ತಿಲ್ಲ. ಬೆಳಗ್ಗೆ ಮಾತ್ರ ಬೇಗ ಎಚ್ಚರವಾಗದ ಸ್ಥಿತಿ. ಆದರೂ ಕಾರ್ಯಭಾರದ ಒತ್ತಡ, ಗಡಿಬಿಡಿ. ಏಳಲೇಬೇಕು ಎನ್ನುವ ಧಾವಂತ. ಎದ್ದು ಕೆಲಸ ಪೂರೈಸಲೂ ಸಮಯವಿಲ್ಲದಿರುವಾಗ ವ್ಯಾಯಾಮಕ್ಕೆಲ್ಲ ಪುರುಸೊತ್ತು, ನೋ ಛಾನ್ಸ್. ಒಂದೊಮ್ಮೆ ವಾರಾಂತ್ಯಗಳಲ್ಲಿ ಸ್ವಲ್ಪ ಸಮಯವಿದ್ದರೂ ಬೆಚ್ಚಗೆ ಮುದುಡಿ ಮಲಗುವ ಆಸೆ. ಒಟ್ಟಿನಲ್ಲಿ ಚಳಿಗಾಲವೊಂದು ಆಲಸ್ಯದ, ಧಾವಂತದ ಸಮಯವಾಗಿಬಿಡುತ್ತದೆ. ಪರಿಣಾಮವಾಗಿ, ಕೆಲವೇ ದಿನಗಳಲ್ಲಿ ತೂಕದಲ್ಲಿ ಏರಿಕೆಯಾಗುತ್ತದೆ. ಚಳಿಯಲ್ಲಿ ಕಾಫಿ, ಟೀ ಸೇವನೆ ಹೆಚ್ಚಾಗುತ್ತದೆ, ಕುರುಕಲು ತಿನಿಸುಗಳೂ ಸೆಳೆಯುತ್ತವೆ. ಜತೆಗೆ, ಸರಿಯಾದ ನಿದ್ರೆ ಇಲ್ಲದಿರುವುದು, ದೈಹಿಕ ಚಟುವಟಿಕೆಗೆ ಆಲಸ್ಯ ಅಥವಾ ಸಮಯವಿಲ್ಲ ಎನ್ನುವ ನೆಪಗಳೂ ಸೇರಿ ಒಂದೆರಡು ಕೆಜಿ ತೂಕ ಹೆಚ್ಚಾದಾಗ “ಛೇʼ ಎನ್ನುವಂತೆ ಆಗುತ್ತದೆ. ಆದರೇನು ಮಾಡುವುದು? ದಿನಗಳು ಸರಿದು ಹೋಗಿರುತ್ತವೆ. ಹೌದು, ಚಳಿಗಾಲದಲ್ಲಿ ಬಹಳಷ್ಟು ಜನರ ತೂಕ ಹೆಚ್ಚಾಗಿಬಿಡುತ್ತದೆ. ಇದಕ್ಕೆ ಹೊಣೆ ಚಳಿಗಾಲವಲ್ಲ, ನಮ್ಮ ಜೀವನಶೈಲಿ. ಹೀಗಾಗಿ, ಚಳಿಗಾಲದಲ್ಲಿ ತೂಕ ಏರಿಕೆಯ ಬಗ್ಗೆ ಹೆಚ್ಚಾಗಿ ಗಮನ ನೀಡಬೇಕು. ಏಕೆಂದರೆ, ಹಲವು ಪ್ರತಿ ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತ, ನಾಲ್ಕು ವರ್ಷಗಳ ಅವಧಿಯಲ್ಲಿ ಹಲವಾರು ಕೆಜಿ ಏರಿಬಿಡುತ್ತಾರೆ. ಯಾವ ಕಾರಣಕ್ಕೂ ಇದು ಸರಿಯಲ್ಲ. ಅದಕ್ಕಾಗಿ ಕೆಲವು ರೀತಿಯಲ್ಲಿ ಎಚ್ಚರಿಕೆ ತೆಗೆದುಕೊಳ್ಳಿ.
• ಕ್ಯಾಲರಿ (Calories) ಬಗ್ಗೆ ಗಮನವಿರಲಿ
ತಿನ್ನುವ ಪ್ರತಿ ಆಹಾರದಲ್ಲೂ (Food) ಎಷ್ಟು ಕ್ಯಾಲರಿ ಇರಬಹುದು ಎನ್ನುವ ಅಂದಾಜಿರಬೇಕು. ಆಗ ಸೇವನೆ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಅಧಿಕ ಕ್ಯಾಲರಿಯುಕ್ತ ತಿನಿಸುಗಳ ಸೇವನೆಯನ್ನು ಮಿತಗೊಳಿಸಿ. ಮೂರೂ ಹೊತ್ತೂ ಅಧಿಕ ಕ್ಯಾಲರಿ ಹೊಂದಿದ ಆಹಾರವನ್ನು ತಿಂದರೆ ದೇಹದಲ್ಲಿ ಕೊಬ್ಬು (Fat) ಸಂಗ್ರಹವಾಗುತ್ತದೆ. ಆಹಾರಕ್ಕೂ ಅರ್ಧ ಗಂಟೆ ಮುನ್ನ ಒಂದು ದೊಡ್ಡ ಗ್ಲಾಸ್ ನೀರನ್ನು (Water) ಕುಡಿಯಬೇಕು. ಆಗ ಹಸಿವು (Hungry) ಕಡಿಮೆಯಾಗಿ ಕಡಿಮೆ ಆಹಾರ ಸೇವನೆಗೆ ಅನುಕೂಲವಾಗುತ್ತದೆ. ಚಳಿಗೆ ಹಿತವೆಂದು ಅಧಿಕ ಸಿಹಿ (Sweet), ಕರಿದ (Fried) ತಿಂಡಿಗಳನ್ನು ಸೇವನೆ ಮಾಡುವುದರಿಂದ ತೂಕ (Weight) ಹೆಚ್ಚಾಗುತ್ತದೆ.
ತೂಕ ಇಳಿಸಿಕೊಳ್ಳಲು ಪೈನಾಪಲ್ ಡಯಟ್: ಸೈಡ್ ಎಫೆಕ್ಟ್ಸ್ ಒಂದೆರಡಲ್ಲ!
undefined
• ಆಹಾರದಲ್ಲಿ ಆರೋಗ್ಯಕರ (Healthy) ಅಂಶಗಳಿರಲಿ
ದೇಹಕ್ಕೆ ಎಲ್ಲ ರೀತಿಯ ಪೌಷ್ಟಿಕಾಂಶ (Nutrition) ದೊರೆಯುವುದು ಮುಖ್ಯ. ಆಗ, ಜಂಕ್ ಫುಡ್ (Junk Food) ತಿನ್ನಬೇಕೆಂಬ ಕ್ರೇವಿಂಗ್ಸ್ (Cravings) ಕಡಿಮೆ ಆಗುತ್ತದೆ. ವಿಟಮಿನ್, ನಾರಿನಂಶ, ತರಕಾರಿ, ಬೀನ್ಸ್, ಹಣ್ಣುಗಳು, ಬೀಜಗಳು, ನಾಟಿ ಮೊಟ್ಟೆಗಳ ಸೇವನೆ ಉತ್ತಮ. ನಾರಿನಂಶ (Fibre) ಹೆಚ್ಚಾಗಿರುವ ಆಹಾರದಿಂದ ಹೆಚ್ಚು ಸಮಯ ಹೊಟ್ಟೆ ತುಂಬಿಕೊಂಡಿರುವಂತೆ ಭಾಸವಾಗಿ, ಬೇಗ ಹಸಿವಾಗುವುದಿಲ್ಲ.
• ಚಳಿಗಾಲದಲ್ಲಿ ವ್ಯಾಯಾಮ (Exercise) ಅತ್ಯಗತ್ಯ
ಚಳಿಗಾಲದಲ್ಲಿ ಆರೋಗ್ಯ (Health) ಚೆನ್ನಾಗಿರಬೇಕು ಎಂದಾದರೆ, ಖುಷಿಯಾಗಿ ಚಟುವಟಿಕೆ ಮಾಡಬೇಕು ಎಂದಾದರೆ ವ್ಯಾಯಾಮ ಮಾಡಲೇಬೇಕು. ಅದಕ್ಕಾಗಿ ಜಿಮ್ ಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಸರಳವಾದ ವ್ಯಾಯಾಮ, ಯೋಗಾಸನಗಳನ್ನು ಮಾಡಿ ದೇಹಕ್ಕೆ ಶಕ್ತಿ (Energy), ಸ್ಫೂರ್ತಿ ತುಂಬಬೇಕು. ಹಾಗೆಯೇ, ಚಳಿಗಾಲದಲ್ಲಿ ಹೆಚ್ಚು ನೀರಿನ ಸೇವನೆ ಅಗತ್ಯ.
Morning Sunlight: ಬೆಳಗ್ಗಿನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಮೆದುಳು ಚುರುಕಾಗುತ್ತೆ
• ಲೋ ಕ್ಯಾಲರಿ ಸ್ನ್ಯಾಕ್ಸ್ (Snacks)
ಹಸಿವಾದಾಗ ಏನಾದರೂ ಕುರುಕಲು ತಿಂಡಿಗಳನ್ನು ತಿನ್ನುವುದರಿಂದ ಕ್ರೇವಿಂಗ್ಸ್ ಇನ್ನಷ್ಟು ಹೆಚ್ಚಾಗಬಹುದು. ಆಗ ಮತ್ತಷ್ಟು ಆಹಾರ ದೇಹ ಸೇರುತ್ತದೆ. ಆದರೆ, ತಿನ್ನುವ ಬಯಕೆ ಮಾತ್ರ ಕಡಿಮೆ ಆಗಿರುವುದಿಲ್ಲ. ಹೀಗಾಗಿ, ಕ್ಯಾಲರಿ ಅತಿ ಕಡಿಮೆ ಪ್ರಮಾಣದಲ್ಲಿರುವ ಸ್ನ್ಯಾಕ್ಸ್ ಗಳನ್ನಷ್ಟೇ ಸೇವಿಸಬೇಕು. ನಿಮಗೆ ಗೊತ್ತೇ? ನಮ್ಮ ನಾಲಿಗೆಯಲ್ಲಿ ರುಚಿ ಗುರುತಿಸುವ ಮೊಗ್ಗುಗಳು (Taste Buds) ಅಲ್ಪಾಯುಷಿಗಳಾಗಿರುತ್ತವೆ. ಹೀಗಾಗಿ, ಅವುಗಳ ರುಚಿಯನ್ನು ಬದಲಿಸಲು ಸಾಧ್ಯ. ಕರಿದ ತಿನಿಸುಗಳ ಸೇವನೆಯೇ ನಿಮಗಿಷ್ಟ ಎಂದಾದರೆ ಕೇವಲ 15 ದಿನಗಳಲ್ಲಿ ಈ ಟೇಸ್ಟ್ ಅನ್ನು ಬದಲಿಸಿಕೊಳ್ಳಬಹುದು, ಇದಕ್ಕೆ ಮನಸ್ಸಿನ ಸಂಕಲ್ಪ ಅತ್ಯಗತ್ಯ.