ಮನೇಲೇ ನೀರನ್ನು ಆಲ್ಕಲೈನ್‌ ಮಾಡಿ ಕುಡೀರಿ, ದುಬಾರಿ ಫಿಲ್ಟರ್ ತರುತ್ತೆ ಹೊಸ ಹೊಸ ರೋಗ!

By Suvarna NewsFirst Published Nov 27, 2023, 12:00 PM IST
Highlights

ಆಲ್ಕಲೈನ್‌ ನೀರು ತುಂಬ ಒಳ್ಳೆಯದನ್ನು ನಾವು ಇತ್ತೀಚೆಗೆ ಸಾಕಷ್ಟು ಕೇಳಿರುತ್ತೇವೆ. ಅದಕ್ಕಾಗಿ ಹಲವು ರೀತಿಯ ತಂತ್ರಜ್ಞಾನವನ್ನು ಒಳಗೊಂಡ ಫಿಲ್ಟರ್ ಬಳಕೆ ಮಾಡುತ್ತೇವೆ.‌ ಆದರೆ, ಯಾವುದೇ ನೀರನ್ನಾದರೂ ಮನೆಯಲ್ಲೇ ಸುಲಭವಾಗಿ ಆಲ್ಕಲೈನ್‌ ಮಾಡ್ಬೋದು ಅಂತ ಅನೇಕರಿಗೆ ತಿಳಿದಿಲ್ಲ.  
 

ನೀರನ್ನು ಶುದ್ಧವಾಗಿಸಿ ಅಥವಾ ಫಿಲ್ಟರ್‌ ಮಾಡಿ ಕುಡಿಯಬೇಕು ಎಂದು ನಾವೆಲ್ಲ ಚಿಕ್ಕಂದಿನಿಂದಲೂ ಕೇಳುತ್ತ ಬಂದಿರುವ ಸಂಗತಿ. ನೀರನ್ನು ಫಿಲ್ಟರ್‌ ಮಾಡುವುದೆಂದರೆ ಯಾವ ಅಂಶವನ್ನು ತೆಗೆದುಹಾಕುವುದು, ಯಾವುದರ ಸೇರ್ಪಡೆ ಎನ್ನುವ ಬಗ್ಗೆ ನಾವ್ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನೀರು ಕಲುಷಿತವಾಗಿದೆಯೋ ಇಲ್ಲವೋ, ಒಟ್ಟಿನಲ್ಲಿ ಎಲ್ಲ ನೀರನ್ನೂ ನಾವು ಫಿಲ್ಟರ್‌ ಮಾಡುತ್ತೇವೆ. ಇಷ್ಟು ವರ್ಷಗಳ ಕಾಲ ಆರ್‌ ಒ ತಂತ್ರಜ್ಞಾನದ ಮೂಲಕ ನೀರನ್ನು ಸೋಸುವ ಫಿಲ್ಟರ್‌ ಗಳು ನಗರ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಮಾರಾಟವಾಗಿವೆ. ಆದರೆ, ಎಂದಿನಿಂದ ಆರ್‌ ಒ ತಂತ್ರಜ್ಞಾನದಿಂದ ಫಿಲ್ಟರ್‌ ಆದ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ದೃಢಪಟ್ಟಿತೋ ಅಂದಿನಿಂದ ಹೆಚ್ಚು ಕೇಳಿಬರುತ್ತಿರುವ ಹೆಸರು ಆಲ್ಕಲೈನ್.‌ ನೀರನ್ನು ಆಲ್ಕಲೈನ್‌ ಮಾಡಿಕೊಂಡು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ, ಇದರಲ್ಲಿ ಅನೇಕ ರೋಗಗಳನ್ನು ನಿರೋಧಿಸುವ ಗುಣವಿರುತ್ತದೆ ಎಂದು ಹೇಳಲಾಗುತ್ತದೆ. ನೀರನ್ನು ಆಲ್ಕಲೈನ್‌ ಮಾಡುವುದೆಂದರೆ ಅದು ಬಹುದೊಡ್ಡ ತಂತ್ರಜ್ಞಾನವಲ್ಲ. ಸರಳವಾಗಿ ಆಲ್ಕಲೈನ್‌ ಮಾಡಿಕೊಂಡು ಸೇವನೆ ಮಾಡಬಹುದು.

ಬೋರ್‌ ನೀರಾದ್ರೆ ಏನ್‌ ಮಾಡೋದು?
ಬೋರ್‌ ನಿಂದ ಬರುವ ನೀರನ್ನು (Water) ಶುದ್ಧ (Purify) ಮಾಡುವ ಫಿಲ್ಟರ್‌ ಗಳಲ್ಲಿ (Filter) ಕೆಲವೊಂದು ಮಿನರಲ್ಸ್‌ ಸೇರಿಸುವ ತಂತ್ರಜ್ಞಾನವಿರುತ್ತದೆ. ಆದರೆ, ಅವು ನೈಸರ್ಗಿಕ ಮಿನರಲ್ಸ್‌ (Minerals) ಅಲ್ಲ. ಆದರೆ, ಬಾವಿಯ ನೀರಿನಲ್ಲಿ ನಿಜವಾದ ಮಿನರಲ್ಸ್‌ ಇರುತ್ತವೆ. ಬಾವಿಯ ನೀರು ನಿಜವಾದ ಮಿನರಲ್‌ ವಾಟರ್‌ ಎಂದರೆ ಅಚ್ಚರಿಯಾಗಬಹುದು. ಫಿಲ್ಟರ್‌ ಗಳಲ್ಲಿರುವ ಮಿನರಲ್ಸ್‌ ನಮ್ಮ ದೇಹಕ್ಕೆ ಬೇಡದೇ ಇರುವಂಥವು ಎನ್ನುತ್ತಾರೆ ತಜ್ಞರು. ಅಸಲಿಗೆ ಫಿಲ್ಟರ್‌ ನಿಂದ ಬರುವ ನೀರೆಲ್ಲವೂ ಡೆಡ್‌ ವಾಟರ್!‌ ಅಂದರೆ, ಅದರಲ್ಲಿ ಯಾವುದೆಂದರೆ ಯಾವ ಸತ್ವವೂ ಇರುವುದಿಲ್ಲ. 

Latest Videos

ಈ ಮಸಾಲೆ ಪದಾರ್ಥದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದ್ರೆ… ರೋಗ ದೂರವಾಗುತ್ತೆ!

ಒಂದೊಮ್ಮೆ ನೀವು ಬೋರ್‌ (Bore well) ನೀರು ಬಳಕೆ ಮಾಡುತ್ತೀರಿ ಎಂದಾದರೆ, ಅದನ್ನು ಬಿಸಿಲಿಗೆ ಇಟ್ಟು ಬಳಸಬೇಕು! ಇದರಿಂದ ಆ ನೀರು ಪಂಚಮಹಾಭೂತ ತತ್ವವನ್ನು ಒಳಗೊಳ್ಳುತ್ತದೆ. ಈಗೆಲ್ಲ ಆಧುನಿಕ ಪದ್ಧತಿಯಲ್ಲಿ ಸೂರ್ಯನ ಬೆಳಕಿನಲ್ಲಿ (Sun Charge) ನೀರನ್ನು ಇಟ್ಟು ಕುಡಿಯುವುದು, ಚಂದ್ರನ ಬೆಳಕಿನಲ್ಲಿ (Moon Charge) ನೀರನ್ನು ಇಟ್ಟು ಕುಡಿಯುವುದು ಕಂಡುಬರುತ್ತದೆ. ಬಾವಿಯ ನೀರಿನಲ್ಲಿ ಈ ಅಂಶಗಳು ಸಹಜವಾಗಿ ಇರುತ್ತವೆ. ಹೀಗಾಗಿ, ಬಿಸಿಲು, ಗಾಳಿಗೆ ತೆರೆದಿರುವ ಬಾವಿಯ ನೀರು ಅತ್ಯುತ್ತಮ. ಆದರೆ, ಎಲ್ಲ ಕಡೆ ಲಭ್ಯವಾಗುವುದಿಲ್ಲ. ಅದಕ್ಕಾಗಿ, ಫಿಲ್ಟರ್‌ ನೀರನ್ನು ಆಲ್ಕಲೈನ್‌ (Alkaline) ಮಾಡಿ ಕುಡಿಯುವುದು ಉತ್ತಮ ಮಾರ್ಗ.

ಯಾವ್ದೇ ನೀರನ್ನಾದ್ರೂ ಆಲ್ಕಲೈನ್‌ ಮಾಡ್ಬೋದು
ಬಾವಿಯ ನೀರನ್ನು ಫಿಲ್ಟರ್‌ ಮಾಡುವ ಅಗತ್ಯವೇ ಇರುವುದಿಲ್ಲ. ಒಂದೊಮ್ಮೆ ಬಾವಿಯ ನೀರನ್ನು ಫಿಲ್ಟರ್‌ ಮಾಡುತ್ತೀರಿ ಎಂದಾದರೆ, ಆ ನೀರಿನಲ್ಲಿರುವ ಎನರ್ಜಿ ನಾಶವಾಗುತ್ತದೆ. ಬದಲಿಗೆ, ಸಿಂಥೆಟಿಕ್‌ ಸೇರ್ಪಡೆಯಾಗುತ್ತದೆ. ಅಷ್ಟೇ, ಇನ್ನೇನೂ ಗುಣಮಟ್ಟ ಹೆಚ್ಚಾಗುವುದಿಲ್ಲ. ಒಂದೊಮ್ಮೆ ಬಾವಿಯ ನೀರನ್ನು ಕುದಿಸುತ್ತೀರಿ ಎಂದಾದರೆ, ಅದನ್ನು ಆಲ್ಕಲೈನ್‌ ಮಾಡಿಕೊಂಡು ಸೇವನೆ ಮಾಡಬೇಕು. ಆಗ ಆ ನೀರು ದೇಹಕ್ಕೆ ಉತ್ತಮ ಪರಿಣಾಮ ನೀರುವ ನೀರಾಗುತ್ತದೆ. ಕುದಿಸಿದ ನೀರಿಗೆ ಒಂದಿಂಚು ಗಾತ್ರದ ತೆಂಗಿನಕಾಯಿಯನ್ನು ಹಾಕಿಡಬೇಕು. ಆಗ ನೀರು ಆಲ್ಕಲೈನ್‌ ಆಗುತ್ತದೆ. ಅಷ್ಟೇ ಅಲ್ಲ, ನೀರಿಗೆ ಸ್ವಲ್ಪ ಜೀರಿಗೆ, ಲಾವಂಚದ ಬೇರು, ಭಸ್ಮ ಸೇರಿದಂತೆ ಇನ್ನಿತರ ಕೆಲವು ಅಂಶಗಳನ್ನು ಸಹ ಸೇರಿಸಬಹುದು. ಆಗ ಆ ನೀರು ಆಲ್ಕಲೈನ್‌ ಆಗುತ್ತದೆ. ಯಾವುದೇ ರೀತಿಯ ಫಿಲ್ಟರ್‌ ನೀರಿಗೂ ಸಹ ಹೀಗೆಯೇ ಮಾಡಬಹುದು. 

ಹಿಂಬದಿಯಲ್ಲಿ ಆಗೋ ಮೊಡವೆಯಿಂದ ಯಮ ಯಾತನೆ, ಇಲ್ಲಿದೆ ಇದಕ್ಕೆ ಈಸಿ ಪರಿಹಾರ!

ಆಲ್ಕಲೈನ್‌ ನೀರಿನ ಪ್ರಯೋಜನ (Benefits)
ತಜ್ಞರು ಹೇಳುವ ಪ್ರಕಾರ, ಆಲ್ಕಲೈನ್‌ ನೀರು ದೇಹದ ಪಿಎಚ್‌ ಅಂದರೆ ಆಮ್ಲೀಯತೆಯ (Acidic) ಮಟ್ಟವನ್ನು ಕಾಪಾಡಲು ಸಹಕಾರಿ. ಹೀಗಾಗಿ, ಈ ನೀರಿನಿಂದ ಬಹಳಷ್ಟು ಲಾಭಗಳಿವೆ. ದೀರ್ಘಕಾಲದ ಸಮಸ್ಯೆಗಳ ನಿವಾರಣೆಗೆ ಆಲ್ಕಲೈನ್‌ ನೀರು ಉತ್ತಮ. ಅಷ್ಟೇ ಅಲ್ಲ, ಇದು ಕ್ಯಾನ್ಸರ್‌ ಬಾರದಂತೆಯೂ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಲಿವರ್‌, ಕಿಡ್ನಿ, ಸ್ಲ್ಪೀನ್‌, ಪ್ಯಾಂಕ್ರಿಯಾಸ್‌ ಗೆ ಆರೋಗ್ಯಕ್ಕೆ (Health) ಈ ನೀರು ಒಳ್ಳೆಯದು. ವಯಸ್ಸಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಕೆಲವರು ಬೆಳ್ಳಿ ಲೋಟ, ತಾಮ್ರದ ಚೊಂಬುಗಳಲ್ಲಿ ನೀರು ಕುಡಿಯುತ್ತಾರೆ. ಇವೆಲ್ಲ ಆಲ್ಕಲೈನ್‌ ಆಗಿರುತ್ತವೆ ಎನ್ನುವುದು ವಿಶೇಷ. 

 

click me!